ಸೀದ ಚಪಾತಿ ಕೊಟ್ಟಿದ್ದನ್ನು ಪ್ರಶ್ನೆ ಮಾಡಿದ್ದಕ್ಕೆ ಕೊಂದೇ ಬಿಟ್ಟ!
* ಕ್ಷುಲ್ಲಕ ಕಾರಣಕ್ಕೆ ಉಂಟಾದ ಜಗಳ ಕೊಲೆಯಲ್ಲಿ ಅಂತ್ಯ
* ಚಪಾತಿ ಸೀದಿತ್ತು ಎಂದು ಅಡುಗೆಯವನಿಗೆ ಬೈದಿದ್ದೆ ತಪ್ಪಾಯಿತು
* ರಾತ್ರಿ ಮನೆಗೆ ನುಗ್ಗಿ ದೊಣ್ಣೆಯಿಂದ ಹಲ್ಲೆ ಮಾಡಿದ
ಲಕ್ನೋ(ಅ. 03) ಹೋಟೆಲ್ ಅಡುಗೆವನ ವ್ಯಕ್ತಿಯೊಬ್ಬನ ಮೇಲೆ ದಾಳಿ ಮಾಡಿದ ಪರಿಣಾಮ ಹತ್ಯೆಯಾಗಿದ್ದಾನೆ. ಚಪಾತಿ ಸೀದಿತ್ತು ಎಂಬ ಕಾರಣಕ್ಕೆ ಉಂಟಾದ ಗಲಾಟೆ ಕೊಲೆಯಲ್ಲಿ ಅಂತ್ಯವಾಗಿದೆ.
ಉತ್ತರ ಪ್ರದೇಶದ ಸಂಭಾಲ್ ನಿಂದ ಘಟನೆ ವರದಿಯಾಗಿದ್ದು ಕೆಂಪಾಲ್ ಎಂಬಾತನ ಕೊಲೆಯಾಗಿದೆ. ಟ್ರಾನ್ಸ್ ಪೋರ್ಟ್ ಒಂದರಲ್ಲಿ ಕೆಲಸ ಮಾಡುವ ಕೆಂಪಾಲ್ ಹೊಟೆಲ್ ಗೆ ತಿಂಡಿ ತಿನ್ನಲು ತೆರಳಿದ್ದ.
ಅಡುಗೆ ಮಾಡುವ ಅನಿಲ್ ಮತ್ತು ಕೆಂಪಾಲ್ ನಡುವೆ ಚಪಾತಿ ಸೀದು ಹೋದ ಕಾರಣಕ್ಕೆ ಜಗಳ ಆರಂಭವಾಗಿದೆ. ಆದರೆ ಜಗಳ ಅಲ್ಲಿಗೆ ಕೊನೆಯಾಗಿದೆ. ಅದೆ ದಿನ ರಾತ್ರಿ ಕೆಂಪಾಲ್ ಮನೆಗೆ ಹೋದ ಅನಿಲ್ ಆತನ ಮೇಲೆ ದಾಳಿ ಮಾಡಿದ್ದಾನೆ. ದೊಣ್ಣೆಯಿಂದ ಹಲ್ಲೆ ಮಾಡಿದ್ದು ಅನಿಲ್ ಗಂಭೀರ ಗಾಯಗೊಂಡಿದ್ದಾನೆ.
ಹೆಣ್ಣು ಮಕ್ಕಳ ಒಳ ಉಡುಪಿನಲ್ಲಿ ಉಮೇಶ್ ರೆಡ್ಡಿ ಮೋಜು
ಪೊಲೀಸರು ಸಿಸಿಟಿವಿ ದೃಶ್ಯಾವಳಿಗಳನ್ನು ವಶಕ್ಕೆ ಪಡೆದುಕೊಂಡಿದ್ದಾರೆ. ಕೊಲೆ ಮಾಡಿದ ಅಡುಗೆಯವ ಅಲ್ಲಿಂದ ನಾಪತ್ತೆಯಾಗಿದ್ದ. ಪೊಲೀಸರ ಕೈಗೆ ಸೆರೆ ಸಿಕ್ಕಿದ್ದು ವಿಚಾರಣೆ ವೇಳೆ ತಾನೇ ಕೊಲೆ ಮಾಡಿರುವುದನ್ನು ಒಪ್ಪಿಕೊಂಡಿದ್ದಾನೆ.
ಕ್ಷುಲ್ಲಕ ಕಾರಣಕ್ಕೆ ಕೊಲೆ ನಡೆದ ಪ್ರಕರಣ ಉತ್ತರ ಪ್ರದೇಶದಿಂದ ವರದಿಯಾಗಿತ್ತು. ಹೆಂಡತಿ ಸರಿಯಾಗಿ ಅಡುಗೆ ಮಾಡಿಲ್ಲ ಎಂಬ ಕಾರಣಕ್ಕೆ ಗಂಡ ಹತ್ಯೆ ಮಾಡಿದ್ದ. ಮನುಷ್ಯ ಒಮ್ಮೊಮ್ಮೆ ಸನ್ಣ ಸಣ್ಣ ವಿಚಾರಕ್ಕೂ ತಾಳ್ಮೆ ಕಳೆದುಕೊಂಡು ಈ ರೀತಿಯ ನಿರ್ಧಾರ ತೆಗೆದುಕೊಂಡು ಬಿಡುತ್ತಾನೆ.