ಚಲಿಸುತ್ತಿದ್ದ ಆಟೋ ಮೇಲೆ ಮರ ಬಿದ್ದು ಮಹಿಳೆ ಸಾವು, 5 ಜನರಿಗೆ ಗಾಯ..!

⦁ ವಿಜಯಪುರದಲ್ಲಿ ಮರ ಬಿದ್ದು ಮಹಿಳೆ ಸಾವು, 5 ಜನರಿಗೆ ಗಾಯ..!
⦁ ಪೊಲೀಸ್‌ ತರಬೇತಿ ಕೇಂದ್ರದ ಬಳಿಯೇ ಘಟನೆ..!
⦁ ರಸ್ತೆ ಮೇಲೆ ಉರುಳುಬಿದ್ದ ಮರ, ಆಟೋ ನುಜ್ಜುಗುಜ್ಜು..!
⦁ ಮೂವರ ಸ್ಥಿತಿ ಗಂಭೀರ, ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ..!
⦁ ನಾಮಕರಣ ಮುಗಿಸಿಕೊಂಡು ಬರ್ತಿದ್ದಾಗ ಆಟೋ ಮೇಲೆ ಬಿದ್ದ ಮರ..!

woman dies and 5 inquired after tree falls on running auto rickshaw at vijayapura rbj

ವರದಿ: ಷಡಕ್ಷರಿ ಕಂಪೂನವರ್‌, ಏಷ್ಯಾನೆಟ್‌ ಸುವರ್ಣ ನ್ಯೂಸ್‌ ವಿಜಯಪುರ


ವಿಜಯಪುರ (ಏ 05) : ಚಲಿಸುತ್ತಿದ್ದ ಅಟೋ ಮೇಲೆ ಬೃಹತ್ ಮರ ಮುರಿದು ಬಿದ್ದು  ಅಟೋದಲ್ಲಿದ್ದ ಓರ್ವ ಮಹಿಳೆ ಸಾವನ್ನಪ್ಪಿ, ಐವರು ಗಾಯಗೊಂಡು ಆಸ್ಪತ್ರೆ ಪಾಲಾದ ಘಟನೆ. ವಿಜಯಪುರ ನಗರದ ಪೊಲೀಸ್ ತರಬೇತಿ ಕೇಂದ್ರದ ಬಳಿ ನಡೆದಿದೆ. ಪೊಲೀಸ್ ತರಬೇತಿ‌ ಕೇಂದ್ರದ ಆವರಣದ ಬಳಿ ಘಟನೆ ನಡೆದಿದ್ದು, ಸ್ಥಳದಲ್ಲಿ ಕೆಲಕಾಲ ಭಯದ ವಾತಾವರಣ ಉಂಟಾಗಿತ್ತು.

ಮರದ ಅಡಿಯಲ್ಲಿ ಸಿಕ್ಕು ಮಹಿಳೆ ಸಾವು..!
ಬಿಎಲ್ಡಿ ರಸ್ತೆಯಿಂದ ಎಸ್ಪಿ ಕಚೇರಿ ಕಡೆಗೆ ಹೊರಟಿದ್ದ ಆಟೋ ಮೇಲೆ ಮರ ಉರುಳಿ ಬಿದ್ದ ಪರಿಣಾಮ ವಿಜಯಪುರ ‌ನಗರದ ಸಿದ್ದಾರೂಢ ಕಾಲೋನಿಯ ನಿವಾಸಿ ಯಲ್ಲಮ್ಮಾ ಕೊಂಡಗೂಳಿ (45) ಸಾವನ್ನಪ್ಪಿದ್ದಾಳೆ. ಆಟೋದ ಮುಂಭಾಗದಲ್ಲಿ ಯಲ್ಲಮ್ಮ ಕುಳತಿದ್ದಳು. ರಸ್ತೆ ಬದಿಯಲ್ಲಿ ಉರುಳಿದ ಮರ ಆಟೋದ ಮುಂಭಾಗದ ಮೇಲೆ ಬಿದ್ದಿದೆ. ಮರ ಬಿದ್ದ ರಭಸಕ್ಕೆ ಇಡೀ ಆಟೋ ನುಜ್ಜುಗುಜ್ಜಾಗಿದೆ. ಆಟೋ ಮುಂಭಾಗದಲ್ಲಿ ಕುಳಿತಿದ್ದ ಯಲ್ಲಮ್ಮ ಮರದ ಹಾಗೂ ಆಟೋದ ನಡುವೆ ಸಿಲುಕಿಕೊಂಡಿದ್ದಾಳೆ. ರಭಸವಾಗಿ ಬಿದ್ದ ಬೃಹತ್‌ ಮರದ ಕೆಳಗೆ ಸಿಕ್ಕ ಮಹಿಳೆ ಸ್ಥಳದಲ್ಲೆ ಸಾವನ್ನಪ್ಪಿದ್ದಾಳೆ. ಇನ್ನು ಆಟೋ ಹಿಂಬದಿಯಲ್ಲಿ ಸಿಲುಕಿಕೊಂಡವರನ್ನ ಪೊಲೀಸ್‌ ತರಬೇತಿ ಕೇಂದ್ರದ ಬಳಿ ಇದ್ದ ಪೊಲೀಸರು, ಸಾರ್ವಜನಿಕರು ರಕ್ಷಣೆ ಮಾಡಿದ್ದಾರೆ..

ವಿಜಯಪುರದಲ್ಲಿ ಆಲಿಕಲ್ಲು ಮಳೆ ತಂದ ಆಪತ್ತು: 'ಕೈಗೆ ಬಂದ ತುತ್ತು ಬಾಯಿಗೆ ಬಾರದೆ' ಕಂಗಾಲಾದ ಅನ್ನದಾತ..!

ಐದು ಜನರಿಗೆ ಗಾಯ, ಮೂವರ ಸ್ಥಿತಿ ಗಂಭೀರ..!
ಇನ್ನು ಆಟೋದಲ್ಲಿದ್ದ ಉಳಿದವರಿಗು ಗಂಭೀರವಾದ ಗಾಯಗಳಾಗಿವೆ. 45 ವರ್ಷದ ಇಂದುತಾಯಿ ಕುಲಕರ್ಣಿ, 25 ವರ್ಷದ ಚಂದ್ರಕಲಾ ವಾಲೀಕಾರ, 51 ವರ್ಷದ ಮಂದಾಕಿನಿ ಬಡಿಗೇರ, 42 ವರ್ಷದ ಸುವರ್ಣಾ ಮಜ್ಜಿಗಿ,  ಅಟೋ ಚಾಲಕ 19 ವರ್ಷದ ಸಚಿನ ರಾಠೋಡ್ ಗೆ ಗಾಯಗಳಾಗಿವೆ. ಈ ಪೈಕಿ ಮೂವರಿಗೆ ಗಂಭೀರ ಗಾಯಗಳಾಗಿದ್ದು, ರಕ್ತಸ್ರಾವದಿಂದಾಗಿ ಪರಿಸ್ಥಿತಿ ಚಿಂತಾಜನಕ ಎನ್ನಲಾಗಿದೆ.. ಎಲ್ಲ ಗಾಯಾಳುಗಳಿವು ಜಿಲ್ಲಾಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗ್ತಿದೆ..

ನಾಮಕರಣ ಮುಗಿಸಿ ವಾಪಾಸ್‌ ಬರ್ತಿದ್ದರು..!
ಸಚಿನ್‌ ರಾಠೋಡ್‌ ವಿಜಯಪುರ ತಾಲೂಕಿನ ಮದಬಾವಿ ತಾಂಡಾದ ಅಟೋ‌ ಚಾಲಕ. ಈತನ ಸಂಬಂಧಿಕರ  ಮನೆಯಲ್ಲಿನ  ನಾಮಕರಣ ಕಾರ್ಯಕ್ರಮದಲ್ಲಿ ಭಾಗಿಯಾಗಿ ವಾಪಸ್ ಹೋಗುತ್ತಿದ್ದ ವೇಳೆ  ಅವಘಡ  ಸಂಭವಿಸಿದೆ. ಮರ ಮುಂಭಾಗದಲ್ಲೆ ಬಿದ್ದ ಪರಿಣಾಮ ಚಾಲಕನ ಸ್ಥಿತಿ‌ ಚಿಂತಾಜನಕವಾಗಿದೆ ಎನ್ನಲಾಗ್ತಿದೆ. ಘಟನೆಯಿಂದ  ರಸ್ತೆ ಸಂಚಾರ ಬಂದ್ ಆಗಿದೆ. ಅರಣ್ಯ‌ ಇಲಾಖೆ ಸಿಬ್ಬಂದಿ ಮುರಿದು ಬಿದ್ದ ಮರದ ತೆರವು ಕಾರ್ಯ ನಡೆಸಿದ್ದಾರೆ.. ಗಾಂಧಿಚೌಕ್ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಘಟನೆ ನಡೆದಿದೆ.

ನಿನ್ನೆ ಬೀಸಿದ್ದ ಗಾಳಿ, ಟೊಳ್ಳಾಗಿತ್ತು ಮರ..!
ಇಷ್ಟೆಲ್ಲ ಅವಘಡದಕ್ಕೆ ಕಾರಣವಾಗಿರೋದು ನಿನ್ನೆ ಬೀಸಿದ್ದ ಗಾಳಿ. ನಿನ್ನೆ ಸಂಜೆ ವಿಜಯಪುರ ಜಿಲ್ಲೆಯ ಕೆಲವೆಡೆ ಮಳೆಯಾಗಿತ್ತು. ಆದ್ರೆ ವಿಜಯಪುರ ನಗರದಲ್ಲಿ ಯಾವುದೇ ಮಳೆಯಾಗಿರಲಿಲ್ಲವಾದ್ರು ಜೋರಾದ ಗಾಳಿ ಬೀಸಿತ್ತು. ಘಟನೆ ನಡೆದ ಸ್ಥಳದಲ್ಲಿ ಹತ್ತಾರು ಬೃಹತ್‌ ಗಾತ್ರದ ಮರಗಳಿದ್ದು, ಇಂದು ಬಿದ್ದಿರುವ ಮರ ನಿನ್ನೆ ಬೀಸಿದ್ದ ಜೋರಾದ ಗಾಳಿಯಿಂದ ಮುರಿದು ಬೀಳುವ ಸ್ಥಿತಿಯಲ್ಲಿತ್ತು ಎನ್ನಲಾಗಿದೆ. ಇಂದು ಮಧ್ಯಾಹ್ನದ ಸುಮಾರಿಗೆ ಆಟೋ ಬರ್ತಿದ್ದ ಟೈಂನಲ್ಲೆ ಮುರಿದುಕೊಂಡು ಬಿದ್ದಿದ್ದೆ..! ಇನ್ನು ಕೆಲ ಮರಗಳು ಟೊಳ್ಳಾಗಿದ್ದು ಅವುಗಳನ್ನ ಟ್ರೀಮ್‌ ಮಾಡಬೇಕು ಎಂದು ಸ್ಥಳೀಯರು ಒತ್ತಾಯಿಸಿದ್ದಾರೆ..

Latest Videos
Follow Us:
Download App:
  • android
  • ios