ಉಡುಪಿ(ಜೂ.05):  ಪತಿಗೆ ಕೊರೋನಾ ದೃಢಪಟ್ಟ ಹಿನ್ನೆಲೆಯಲ್ಲಿ ಪತ್ನಿ ಆತ್ಮಹತ್ಯೆಗೆ ಶರಣಾದ ಘಟನೆ ನಗರದ ಬಿಗ್ ಬಜಾರ್ ಕಟ್ಟಡದ ಬಳಿ ಇಂದು(ಶನಿವಾರ) ನಡೆದಿದೆ. ಚಿತ್ರದುರ್ಗ ಮೂಲದ ಗಂಗಮ್ಮ(70) ಎಂಬುವರೇ ಏಳನೇ ಮಹಡಿಯಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

ಗಂಗಮ್ಮ ಅವರಿಗೂ ಇತ್ತೀಚೆಗೆ ಕೊರೋನಾ ಸೋಂಕು ತಗುಲಿತ್ತು. ಆದರೆ, ಚಿಕಿತ್ಸೆ ಪಡೆದುಕೊಂಡಿದ್ದ ಗಂಗಮ್ಮ  ಕೋವಿಡ್‌ ಸೋಂಕಿನಿಂದ ಗುಣಮುಖರಾಗಿದ್ದರು ಎಂದು ತಿಳಿದು ಬಂದಿದೆ. 

ಶಿವಮೊಗ್ಗ: ನೇಣಿಗೆ ಶರಣಾದ ಮಹಿಳೆ, ಕಾರಣ ನಿಗೂಢ..?

ಮೃತ ಗಂಗಮ್ಮ ಅವರ ಪತಿ ನಗರದ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ಪತಿ ಅನಾರೋಗ್ಯದಿಂದ ಮನನೊಂದು ಗಂಗಮ್ಮ ಆತ್ಮಹತ್ಯೆ ಮಾಡಿಕೊಂಡಿರಬಹುದು ಎಂದು ಶಂಕೆ ವ್ಯಕ್ತವಾಗಿದೆ. ಈ ಸಂಬಂಧ ಉಡುಪಿ ನಗರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.