ಲಾಕ್‌ಡೌನ್‌ನಿಂದ ನಷ್ಟ: ಕಳೆದ ವರ್ಷ ಪತಿ, ಈ ಬಾರಿ ಪತ್ನಿ ಆತ್ಮಹತ್ಯೆ

* ಕಳೆದ ಲಾಕ್‌ಡೌನ್‌ ಸಂದರ್ಭದಲ್ಲಿ ರವಿ ಶೆಟ್ಟಿ ಆತ್ಮಹತ್ಯೆ 
* ಈ ಬಾರಿ ಆತ್ಮಹತ್ಯೆಗೆ ಶರಣಾದ ರೇಖಾ ಶೆಟ್ಟಿ
* ಈ ಸಂಬಂಧ ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲು

Woman Committed Suicide at Karkala in Udupi grg

ಕಾರ್ಕಳ(ಮೇ.30): ಕಳೆದ ವರ್ಷ ಲಾಕ್‌ಡೌನ್‌ ಸಂದರ್ಭ ಪತಿ ಮುಂಬೈಯಲ್ಲಿ ಆತ್ಮಹತ್ಯೆ ಮಾಡಿಕೊಂಡಿದ್ದರೆ, ಈ ವರ್ಷ ಲಾಕ್‌ಡೌನ್‌ ಸಂದರ್ಭದಲ್ಲಿ ಪತ್ನಿ ಊರಿನಲ್ಲಿ ಆತ್ಮಹತ್ಯೆ ಮಾಡಿಕೊಂಡ ಘಟನೆ ಉಡುಪಿ ಜಿಲ್ಲೆ ಕಾರ್ಕಳ ತಾಲೂಕಿನ ದುರ್ಗಾ ಗ್ರಾಮದಲ್ಲಿ ನಡೆದಿದೆ. 

ರೇಖಾ ಶೆಟ್ಟಿ(35) ಮೃತಪಟ್ಟವರು. ಅವರಿಗೆ 3 ವರ್ಷಗಳ ಹಿಂದೆ ಮುಂಬೈಯಲ್ಲಿ ಹೊಟೇಲ್‌ ಉದ್ಯಮಿ ರವಿ ಶೆಟ್ಟಿ ಅವರೊಂದಿಗೆ ಮದುವೆಯಾಗಿತ್ತು. ಆದರೆ ಕಳೆದ ಲಾಕ್‌ಡೌನ್‌ ಸಂದರ್ಭದಲ್ಲಿ ಹೊಟೇಲ್‌ ಉದ್ಯಮದಲ್ಲಿ ನಷ್ಟವಾಗಿ ರವಿ ಶೆಟ್ಟಿ ಅವರು ಆತ್ಮಹತ್ಯೆ ಮಾಡಿಕೊಂಡಿದ್ದರು. ನಂತರ ರೇಖಾ ಅವರು ತಾಯಿ ಮನೆಯಲ್ಲಿ ವಾಸಿಸುತ್ತಿದ್ದರು. 

ಗದಗ: ಡೆಡ್ಲಿ ಕೊರೋನಾಗೆ ಹೆದರಿ ಮಹಿಳೆ ಆತ್ಮಹತ್ಯೆ

ಪತಿಯ ಮರಣದಿಂದ ಮಾನಸಿಕವಾಗಿ ನೊಂದಿದ್ದ ರೇಖಾ ಅವರು ಶುಕ್ರವಾರ ಮನೆಯಲ್ಲಿ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಕಾರ್ಕಳ ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Latest Videos
Follow Us:
Download App:
  • android
  • ios