ಬೆಂಗಳೂರು(ಜ.06): ಪತಿ ಗಲ್‌ರ್‍ಫ್ರೆಂಡ್‌ ಮನೆಯಲ್ಲಿ ಹೊಸ ವರ್ಷದ ಪಾರ್ಟಿ ಮಾಡಿದ್ದನ್ನು ಕಣ್ಣಾರೆ ನೋಡಿ ಬೇಸರಗೊಂಡಿದ್ದ, ಗೃಹಿಣಿಯೊಬ್ಬರು ನೇಣು ಬಿಗಿದುಕೊಂಡು ಆತ್ಮಹತ್ಯೆಗೆ ಶರಣಾಗಿರುವ ಘಟನೆ ಶ್ರೀರಾಮಪುರದಲ್ಲಿ ನಡೆದಿದೆ.

ಶ್ರೀರಾಮಪುರದ ನಿವಾಸಿ ಅಭಿಲಾಷ ತ್ರಿವೇಣಿ (30) ಮೃತ ದುರ್ದೈವಿ. ಜ.3ರಂದು ಮನೆಯಲ್ಲಿ ನೇಣು ಬಿಗಿದುಕೊಂಡು ಅಭಿಲಾಷ ಆತ್ಮಹತ್ಯೆ ಮಾಡಿಕೊಂಡಿದ್ದು, ಮೃತಳ ಪತಿ ಮನೆಗೆ ಮರಳಿದಾಗ ಘಟನೆ ಬೆಳಕಿಗೆ ಬಂದಿದೆ ಎಂದು ಪೊಲೀಸರು ಹೇಳಿದ್ದಾರೆ.

ಮುರುಡೇಶ್ವರ ಬೀಚ್‌ನಲ್ಲಿ ಸ್ವಚ್ಛತೆ, ಸುರಕ್ಷತೆ ಕೇಳಲೇ ಬೇಡಿ!

ರಾಮನಗರ ತಾಲೂಕಿನ ಅಭಿಲಾಷ ಹಾಗೂ ಶಶಿಕುಮಾರ್‌ ಎರಡನೇ ವಿವಾಹವಾಗಿದ್ದು, ಶ್ರೀರಾಮಪುರದಲ್ಲಿ ನೆಲೆಸಿದ್ದರು. ಖಾಸಗಿ ಕಂಪನಿ ಉದ್ಯೋಗದಲ್ಲಿದ್ದ ಶಶಿಕುಮಾರ್‌, ರಾತ್ರಿ ಪಾಳಿಯ ಕೆಲಸದ ನೆಪದಲ್ಲಿ ಮನೆಯಿಂದ ಹೊರ ಹೋಗುತ್ತಿದ್ದರು. ಈ ವಿಚಾರವಾಗಿ ದಂಪತಿ ಮಧ್ಯೆ ಮನಸ್ತಾಪವಾಗಿತ್ತು. ಪತಿ ಬೇರೊಂದು ಯುವತಿ ಜತೆ ಅನೈತಿಕ ಸಂಬಂಧ ಹೊಂದಿದ್ದಾನೆ ಎಂದು ಶಂಕಿಸಿ ಅಭಿಲಾಷ ಗಲಾಟೆ ಮಾಡುತ್ತಿದ್ದಳು. ಇದಕ್ಕೆ ಪುಷ್ಟಿನೀಡುವಂತೆ ಪ್ರತಿದಿನ ರಾತ್ರಿ 10 ಗಂಟೆಗೆ ಶಶಿಕುಮಾರ್‌ಗೆ ಯುವತಿಯೊಬ್ಬಳು ಕರೆ ಮಾಡುತ್ತಿದ್ದಳು. ಆಗ ಆಫೀಸ್‌ನಿಂದ ಕರೆ ಇದೆ ಎಂದು ಸುಳ್ಳು ಹೇಳಿ ಆತ ಮನೆಯಿಂದ ಹೊರ ಹೋಗಿ ಮಾತನಾಡುತ್ತಿದ್ದ. ಒಂದು ಬಾರಿ ವಾಟ್ಸಾಪ್‌ ವಿಡಿಯೋ ಕಾಲ್‌ನಲ್ಲಿ ಗೆಳತಿ ಜತೆ ಲಲ್ಲೆ ಹೊಡೆಯುವಾಗ ಆತ ಪತ್ನಿ ಕೈಗೆ ಸಿಕ್ಕಿಬಿದ್ದಿದ್ದ. ಆಗ ಇಬ್ಬರ ಮಧ್ಯೆ ಜಗಳವಾಗಿತ್ತು ಎಂದು ಪೊಲೀಸರು ತಿಳಿಸಿದ್ದಾರೆ.

ರೆಂಡ್‌ಹ್ಯಾಂಡ್‌ ಆಗಿ ಸಿಕ್ಕಿ ಬಿದ್ದಿದ್ದ

ಜ.1ರಂದು ಗೆಳತಿ ಮನೆಯಲ್ಲಿ ಹೊಸ ವರ್ಷಾಚರಣೆ ಪಾರ್ಟಿಯಲ್ಲಿ ಅಭಿಲಾಷ ಪತಿ ಪಾಲ್ಗೊಂಡಿದ್ದ. ಆಗ ಪತಿಯನ್ನು ಹಿಂಬಾಲಿಸಿ ಹೋಗಿದ್ದ ಅಭಿಲಾಷ, ಗೆಳತಿ ಮನೆಯಲ್ಲೇ ಪತಿ ಮೇಲೆ ಗಲಾಟೆ ಮಾಡಿದ್ದಳು. ಈ ಘಟನೆ ಬಳಿಕ ಸತಿ-ಪತಿ ಮಧ್ಯೆ ವಿರಸ ಹೆಚ್ಚಾಯಿತು. ಕೊನೆಗೆ ಇದರಿಂದ ಬೇಸತ್ತ ಅಭಿಲಾಷ ಮನೆಯಲ್ಲಿ ನೇಣು ಬಿಗಿದುಕೊಂಡು ಜ.3ರಂದು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.

ಎಂಜಿನಿಯರಿಂಗ್‌ ಸೀಟು ಪಡೆಯಲು ಕೊನೆಯ ಅವಕಾಶ

ಮೃತರ ಕುಟುಂಬದವರು ನೀಡಿದ ದೂರಿನ ಮೇರೆ ವರದಕ್ಷಿಣೆ ಕಿರುಕಳ ಆರೋಪದಡಿ ಪ್ರಕರಣ ದಾಖಲಿಸಿಕೊಳ್ಳಲಾಗಿದೆ. ಆರೋಪಿಯನ್ನು ವಶಕ್ಕೆ ಪಡೆಯಲಾಗಿದೆ ಎಂದು ಶ್ರೀರಾಮಪುರ ಠಾಣೆ ಪೊಲೀಸರು ತಿಳಿಸಿದ್ದಾರೆ.