ಹೈದರಾಬಾದ್, [ಮಾ.14]: ಅಮ್ಮ, ಅವ್ವ, ತಾಯಿ, ಜನನಿ, ಮಾತೆ, ದೇವರೊಬ್ಬ ನಾಮ ಹಲವೆಂಬಂತೆ ತಾಯಿಯ ನೂರಾರು ನಾಮಗಳು. ಅಷ್ಟೇ ಅಲ್ಲ ತಾಯಿಗೆ ಮಗಳೇ ಜೀವ..ಆ ಮಗಳಿಗೆ ತಾಯೇ ದೈವ.

ಹೀಗಿರುವಾಗ ಇಲ್ಲೋಬ್ಬ ಮಾಹಾತಾಯಿಯೊಬ್ಬಳು ತನ್ನ ತೀಟೆಗಾಗಿ ಸ್ವಂತ ಮಗಳನ್ನೇ ಬಲಿಕೊಟ್ಟಿರುವ ದಾರುಣ ಘಟನೆ ಹೈದರಬಾದ್ ನ ಮೀರ್ ಪೇಟೆಯಲ್ಲಿ ನಡೆದಿದೆ. ಅಳಿಯನ ಜೊತೆಯೇ ತಾಯಿಯೊಬ್ಬಳು ಅಕ್ರಮ ಸಂಬಂಧ ಇಟ್ಟುಕೊಂಡಿದ್ದು, ಇದನ್ನು ಸಹಿಸಲಾಗದೆ ಮದುವೆಯಾದ ಮೂರು ತಿಂಗಳಿನಲ್ಲೇ ವಿವಾಹಿತೆ ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ನಗರದ ಮೀರ್ ಪೇಟೆಯಲ್ಲಿ ನಡೆದಿದೆ.

ಸ್ನೇಹಿತರೊಂದಿಗೆ ರಾಸಲೀಲೆ ವಿಡಿಯೋ ಹಂಚಿಕೊಂಡ ಪ್ರಿಯಕರ, ಪ್ರೇಯಸಿ ನೇಣಿಗೆ ಶರಣು

 ಮಗಳ ಗಂಡ ಅಂದ್ರೆ ಅಳಿಯನ ಜೊತೆಯೇ ತಾಯಿಯೊಬ್ಬಳು ಅಕ್ರಮ ಸಂಬಂಧ ಇಟ್ಟುಕೊಂಡಿದ್ದಾಳೆ. ನಡೆತೆಗೆಟ್ಟ ತಾಯಿಯ ಕೆಲವನ್ನ ಸಹಿಸಲಾಗದೆ ಮಗಳು ಮದುವೆಯಾದ ಮೂರು ತಿಂಗಳಿನಲ್ಲೇ  ಆತ್ಮಹತ್ಯೆ ಮಾಡಿಕೊಂಡಿದ್ದಾಳೆ. 

ವಂದನಾ (19) ಆತ್ಮಹತ್ಯೆ ಮಾಡಿಕೊಂಡ ನವವಿವಾಹಿತೆ. ಆರೋಪಿ ತಾಯಿ ಅನಿತಾಳ ಕಿರಿಯ ಮಗಳು ನೀಡಿದ ದೂರಿನ ಆಧಾರದ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ.

ಘಟನೆ ವಿವರ
ಆರೋಪಿ ಅನಿತಾ ತನ್ನ ಪತಿಯಿಂದ ದೂರವಾಗಿ ಪ್ರತ್ಯೇಕವಾಗಿ ವಾಸಿಸುತ್ತಿದ್ದಳು. ಈಕೆಗೆ ವಂದನಾ (19) ಮತ್ತು ಸಂಜನಾ ಇಬ್ಬರು ಹೆಣ್ಣು ಮಕ್ಕಳಿದ್ದರು. ಅನಿತಾಗೆ ಒಂದು ವರ್ಷದ ಹಿಂದೆ ಪ್ರೇಮ್ ನವೀನ್ ಕುಮಾರ್ ಪರಿಚಯವಾಗಿದೆ. ಪರಿಚಯ ಸ್ನೇಹವಾಗಿ ಇಬ್ಬರು ಅನೈತಿಕ ಸಂಬಂಧ ಹೊಂದಿದ್ದರು. 

ಆಗಾಗ ನವೀನ್ ಕುಮಾರ್, ಅನಿತಾ ಮನೆಗೆ ಬಂದು ಹೋಗುತ್ತಿದ್ದ. ತನ್ನ ಅನೈತಿಕ ಸಂಬಂಧ ಮುಂದುವರಿಸಲು ಅನಿತಾ ತನ್ನ ಹಿರಿಯ ಪುತ್ರಿ ಹೈದರಾಬಾದ್‍ನಲ್ಲಿ ಪದವಿ ವ್ಯಾಸಂಗ ವಂದನಾ ಜೊತೆ ಅನಿಲ್ ಕುಮಾರ್ ಮದುವೆ ಮಾಡಿಸಲು ಪ್ಲಾನ್ ಮಾಡಿದ್ದಳು. ಪ್ಲಾನ್ ನಂತೆಯೇ ಕಳೆದ ವರ್ಷ ಡಿಸೆಂಬರ್ ನಲ್ಲಿ ವಂದನಾಗೆ ತಾನು ಅನೈತಿಕ ಸಂಬಂಧ ಹೊಂದಿದ್ದವನ ಜೊತೆ ಮದುವೆ ಮಾಡಿಸಿದ್ದಾಳೆ.  ತಾಯಿ ಮಗಳ ವಿವಾಹದ ನಂತರವೂ ನವೀನ್ ಕುಮಾರ್ ಜೊತೆ ಅನೈತಿಕ ಸಂಬಂಧವನ್ನು ಮುಂದುವರಿಸಿದ್ದಳು. 

ಮಗಳನ್ನೇ ಬಯಸಿದ ಪ್ರಿಯಕರ : ಕತ್ತು ಹಿಸುಕಿ ಪುತ್ರಿಯನ್ನೇ ಕೊಂದ ತಾಯಿ!

ಇದೇ ವಿಚಾರವಾಗಿ ವಂದನಾ ಮತ್ತು ಪತಿ ನವೀನ್ ಕುಮಾರ್ ನಡುವೆ ಪದೇ ಪದೇ ಜಗಳ ನಡೆಯುತ್ತಿತ್ತು. ಕೊನೆಗೆ ತಾಯಿ ಮತ್ತು ಪತಿ ವರ್ತನೆಯಿಂದ ಬೇಸರಗೊಂಡಿದ್ದ ವಂದನಾ ಬೆಡ್‍ರೂಮಿನಲ್ಲಿ ಫ್ಯಾನಿಗೆ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿದ್ದಾಳೆ.  ಈ ಕುರಿತು ಮೃತ ವಂದನಾ ಸಹೋದರಿ ಸಂಜನಾ ಪೊಲೀಸ್ ಠಾಣೆಗೆ ದೂರು ನೀಡಿದ್ದಾಳೆ.

ದೂರಿನ ಮೇರೆಗೆ ಪೊಲೀಸರು ಸ್ಥಳಕ್ಕೆ ಹೋಗಿ ಪರಿಶೀಲನೆ ನಡೆಸಿದ್ದು, ಆರೋಪಿ ಅನಿತಾ ವಿರುದ್ಧ ಐಪಿಸಿ ಸೆಕ್ಷನ್ ಕಾಯ್ದೆಯಡಿಯಲ್ಲಿ ಪ್ರಕರಣ ದಾಖಲಿಸಿಕೊಂಡಿದ್ದಾರೆ . ಅಲ್ಲದೇ  ವಂದನಾ ತಾಯಿ ಮತ್ತು ನವೀನ್ ಕುಮಾರ್ ನನ್ನು ಪೊಲೀಸರು ವಶಕ್ಕೆ ಪಡೆದು ವಿಚಾರಣೆ ನಡೆಸುತ್ತಿದ್ದಾರೆ.