ಚಾಮರಾಜನಗರದ ಹೊಳೆ ದಂಡೆಯಲ್ಲಿ ಕೊಳೆತ ಸ್ಥಿತಿಯಲ್ಲಿ ಮಹಿಳೆಯ ಮೃತದೇಹ ಪತ್ತೆ. ವಾಮಾಚಾರದ ಸಾಮಗ್ರಿಗಳು ಪತ್ತೆಯಾಗಿವೆ. ಪೊಲೀಸರು ತನಿಖೆ ಆರಂಭಿಸಿದ್ದಾರೆ.

ವರದಿ - ಪುಟ್ಟರಾಜು. ಆರ್. ಸಿ ಏಷಿಯಾನೆಟ್ ಸುವರ್ಣ ನ್ಯೂಸ್ , ಚಾಮರಾಜನಗರ.

ಚಾಮರಾಜನಗರ - ಅದು ಊರು ಆಚೆಗಿನ ಹೊಳೆ ದಂಡೆ.. ಆ ದಡದ ಪಕ್ಕದಲ್ಲಿ ಕೊಳೆತ ಸ್ಥಿತಿಯಲ್ಲಿ ಪತ್ತೆಯಾದ ಮಹಿಳೆಯ ಮೃತ ದೇಹ ಇದು ಕೊಲೆನಾ ಇಲ್ಲ ವಾಮಾಚಾರಕ್ಕೆ ಕೊಟ್ಟ ಬಲಿನಾ ಎಂಬ ಪ್ರಶ್ನೆ.. ಸತ್ತಾಕೆಯ ಗುರುತು ಸಹ ಇಲ್ಲ ತೀರ ತಲೆ ಕೆಡಿಸಿಕೊಂಡು ತಡಕಾಡಿದ ಖಾಕಿ ಪಡೆ ಕೊನೆಗೂ ಅಪರಿಚಿತಳ ಗುರುತು ಪತ್ತೆ ಹಚ್ಚಿದ್ದು ಕಹಾನಿ ಮೆ ಟ್ವಿಸ್ಟ್ ಸಿಕ್ಕಿದೆ..

ಊರಿನ ಆಚೆ ಇರುವ ಸುವರ್ಣಾವತಿ ಹೊಳೆ.. ಹೊಳೆ ಅಕ್ಕ ಪಕ್ಕ ಬಿದ್ದಿರುವ ಅರಶಿಣ ನಿಂಬೆ ಹಣ್ಣು ಮಾಟದ ದಾರ.. ಮತ್ತೊಂದೆಡೆ ಕುಡ್ದು ಬಿಸಾಡಿರೊ ನೈಂಟಿ ಎಣ್ಣೆ ಪ್ಯಾಕೇಟ್ ಸಿಗರೇಟ್ ತುಂಡುಗಳು.. ಇಂತ ಈ ನಿರ್ಜನ ಪ್ರದೇಶವನ್ನ ಕಾಮನ್ ಆಗಿ ಬಹಿರ್ದೆಸೆಗೆ ಇಲ್ಲ ನೈಟ್ ಕದ್ದು ಮುಚ್ಚಿ ಎಣ್ಣೆ ಹೊಡೆಯೊಕೆ ಬಳಸುವ ಸ್ಥಳ.. ಇಂತ ಈ ಸ್ಥಳದಲ್ಲಿ ಪತ್ತೆಯಾಗಿತ್ತು ಅಪರಿಚಿತ ಮಹಿಳೆಯ ಕೊಳೆತ ಶವಾ.. ಅಂದ ಹಾಗೆ ಈ ಸ್ಥಳ ಇರೋದು ಚಾಮರಾಜನಗರ ಜಿಲ್ಲೆ ಕೊಳ್ಳೇಗಾಲ ತಾಲೂಕಿನ ಹಳೆ ಹಂಪಾಪುರ ಬಳಿ.. ಹೌದು ಕೊಳ್ಳೇಗಾಲ ಟೌನ್ ಪೊಲೀಸ್ ಠಾಣೆಗೆ ಒಂದು ಅಪರಿಚಿತ ವ್ಯಕ್ತಿ ಕರೆ ಮಾಡಿದ್ದ ಸರ್ ಇಲ್ಲೊಂದು ಡೆಡ್ ಬಾಡಿ ಬಿದ್ದಿದೆ ಎಂದು ಮಾಹಿತಿ ನೀಡಿದ್ದ ಸ್ಪಾಟ್ ಗೆ ಹೋದ ಪೊಲೀಸರು ಒಂದು ಕ್ಷಣ ತಬ್ಬಿಬ್ಬಾಗಿದ್ರು ಕಾರಣ ಮೃತ ದೇಹದ ಅಕ್ಕ ಪಕ್ಕ ಬಿದ್ದಿದ್ದ ಮಾಟದ ದಾರ ಅರಶಿಣ ಲಿಂಬೆ ಹಣ್ಣನ್ನ ನೋಡಿ.. ಇದು ವಾಮಾಚಾರಕ್ಕೆ ನಡೆಕಿದ ಬಲಿನಾ ಇಲ್ಲ ಯಾರಾದ್ರು ಕೊಲೆ ಮಾಡಿ ಹೋಗಿದ್ದಾರ ಅಂತ..ಕೊನೆಗೂ ಮಹಿಳೆಯ ಗುರುತು ಪತ್ತೆ ಹಚ್ಚುವಲ್ಲಿ ಪೊಲೀಸರು ಯಶಸ್ವಿಯಾಗಿದ್ದು ಮೃತಳನ್ನ ಕೊಳ್ಳೇಗಾಲ ಮೊಳೆಯ ನೋನಾಕ್ಷಿ ಎಂದು ಗುರುತಿಸಿದ್ದಾರೆ.

ಇನ್ನು ಮೃತ ಸೋನಾಕ್ಷಿಗೆ ಕಳೆದ 15 ವರ್ಷದ ಹಿಂದೆ ಮದ್ವೆಯಾಗಿತ್ತು.. ಸಂಬಂದಿ ವಿಜಯ್ ಕುಮಾರ್ ಜೊತೆ ಗುರು ಹಿರಿಯರು ನಿಶ್ಚಿಯಿಸಿ ಮದ್ವೆ ಮಾಡಿಸಿದ್ರು 10 ವರ್ಷದ ಒಂದು ಗಂಡು 3 ವರ್ಷದ ಒಂದು ಹೆಣ್ಣು ಮಗು ಕೂಡ ಇದೆ. ಆದ್ರೆ ಕಳೆದೊಂದು ವರ್ಷದಿಂದ ಮೃತ ಸೋನಾಕ್ಷಿಗೆ ಪರ ಪುರುಷನ ಮೇಲೆ ಪ್ರೇಮವಾಗಿತ್ತು ಮನೆ ಬಿಟ್ಟು ಹೋಗಿದ್ಲು ಆಕೆಗೆ ಬುದ್ದಿ ಹೇಳಿ ಕರೆ ತರಲಾಗಿತ್ತು.. ಆದ್ರೆ ಮತ್ತದೇ ಚಾಳಿ ಮುಂದುವರೆಸಿದ ಸೋನಾಕ್ಷಿ ಕಳೆದ ನಾಲ್ಕು ತಿಂಗಳ ಹಿಂದೆ ಮತ್ತೆ ಬೇರೊಬ್ಬನ ಜೊತೆ ಪರಾರಿಯಾಗಿದ್ಲು.. ಮನೆಯರು ಸಹ ತಲೆ ಕೆಡಿಸಿಕೊಂಡಿರಲಿಲ್ಲ ಆದ್ರೆ ಈಗ ಪರಪುರುಷನ ಜೊತೆ ಪರಾರಿಯಾದ ಸೋನಾಕ್ಷಿ ಈಗ ಕೆರೆ ದಡದಲ್ಲಿ ಶವವಾಗಿ ಪತ್ತೆಯಾಗಿದ್ದಾಳೆ.

ಸದ್ಯ ಪ್ರಕರಣ ದಾಖಲಿಸಿಕೊಂಡಿರುವ ಕೊಳ್ಳೇಗಾಲ ಟೌನ್ ಪೊಲೀಸರು ಕೊಲೆ ಪ್ರಕರಣ ದಾಖಲಿಸಿಕೊಂಡು ಆರೋಪಿಗಾಗಿ ಶೋಧ ಕಾರ್ಯ ನಡೆಸುತ್ತಿದ್ದಾರೆ.ಕೊಳೆತ ಶವವನ್ನ ಮರಣೋತ್ತರ ಪರೀಕ್ಷೆಗಾಗಿ ಚಾಮರಾಜನಗರದ ಸಿಮ್ಸ್ ಆಸ್ಪತ್ರೆಗೆ ರವಾನಿಸಿದ್ದು ಮರಣೋತ್ತರ ಪರೀಕ್ಷೆ ಬಳಿಕ ಮೃತಳ ಕುಟುಂಬಸ್ಥರಿಗೆ ಮೃತ ದೇಹ ಹಸ್ತಾಂತರಿಸಲಿದ್ದಾರೆ.