ಜಮೀನಿನ ವ್ಯಾಜ್ಯಾಕ್ಕೆ ಸಂಬಂಧಿಸಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದು ಮಹಿಳೆಗೆ ರಾಡ್‌ನಿಂದ ಹಲ್ಲೆ ನಡೆಸಿ ಪರಾರಿಯಾದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೊಗ್ಯಂ ಗ್ರಾಮದಲ್ಲಿ ನಡೆದಿದೆ.

ಚಾಮರಾಜನಗರ (ಏ.14): ಜಮೀನಿನ ವ್ಯಾಜ್ಯಾಕ್ಕೆ ಸಂಬಂಧಿಸಿ ಎರಡು ಕುಟುಂಬಗಳ ನಡುವೆ ಮಾರಾಮಾರಿ ನಡೆದು ಮಹಿಳೆಗೆ ರಾಡ್‌ನಿಂದ ಹಲ್ಲೆ ನಡೆಸಿ ಪರಾರಿಯಾದ ಘಟನೆ ಚಾಮರಾಜನಗರ ಜಿಲ್ಲೆಯ ಹನೂರು ತಾಲೂಕಿನ ಹೊಗ್ಯಂ ಗ್ರಾಮದಲ್ಲಿ ನಡೆದಿದೆ.

ಸೆಲ್ವಿ, ಹಲ್ಲೆಗೊಳಗಾಗಿರುವ ವೃದ್ಧ ಮಹಿಳೆ. ತಂಗವೇಲು ಹಲ್ಲೆ ನಡೆಸಿದ ಆರೋಪಿ. ಸೆಲ್ವಿ ಹಾಗೂ ತಂಗವೇಲು ಕುಟುಂಬದ ನಡುವೆ ಜಮೀನಿನ ವಿಚಾರಕ್ಕೆ ವ್ಯಾಜ್ಯವಿತ್ತು. ನಿನ್ನೆ ಮದ್ಯಾಹ್ನ ಇದ್ದಕ್ಕಿದ್ದಂತೆ ತಂಗವೇಲು ಹಾಗೂ ಸಹಚರರಿಂದ ವೃದ್ಧೆಯ ಮೇಲೆ ದಾಳಿ ನಡೆಸಿದ್ದಾರೆ. ಆಗುಂತಕರ ದಾಳಿಯಿಂದ ಕುಸಿದುಬಿದ್ದ ಮಹಿಳೆ ನೆಲದ ಮೇಲೆ ಒದ್ದಾಟ ನಡೆಸಿದ್ದರು. ಗಾಯಾಳು ಸೆಲ್ವಿ ಚಾಮರಾಜನಗರದ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ. ಹಲ್ಲೆ ಘಟನೆ ಸಂಬಂಧ ರಾಮಾಪುರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಕಲಬುರಗಿ: ಜಗಳ ಬಿಡಿಸಲು ಹೋದ ಕಾನ್ಸ್‌ಟೇಬಲ್ ಮೇಲೆಯೇ ಹಲ್ಲೆ ನಡೆಸಿದ ಪುಂಡರು!