Asianet Suvarna News Asianet Suvarna News

ಮಗನಿಗಿಂತ ಹೆಚ್ಚು ಮಾರ್ಕ್ಸ್‌ ಯಾಕೆ ತೆಗ್ದೆ, ಬಾಲಕನಿಗೆ ವಿಷ ನೀಡಿ ಸಾಯಿಸಿದ ಮಹಿಳೆ !

ಮಕ್ಕಳು ಹೆಚ್ಚು ಅಂಕ ಗಳಿಸ್ಬೇಕು ಅಂತ ಎಲ್ಲಾ ತಾಯಂದಿರಿಗೂ ಇರುತ್ತೆ. ಹಾಗಂತ ಹೆಚ್ಚು ಅಂಕ ಗಳಿಸಿದ ಇತರ ಮಕ್ಕಳ ಬಗ್ಗೆ ಸಿಟ್ಟು ಮಾಡ್ಕೊಂಡ್ರೆ ಆಗುತ್ತಾ ? ಆದ್ರೆ ಈ ಮಹಿಳೆ ಹೆಚ್ಚು ಅಂಕ ಗಳಿಸಿದ ಮಗನ ಸಹಪಾಠಿಯ ಮೇಲೆ ಸಿಟ್ಟು ತೋರಿಸಿರೋದು ಮಾತ್ರವಲ್ಲ, ಜ್ಯೂಸ್‌ನಲ್ಲಿ ಬೆರೆಸಿ ಕೊಂದಿದ್ದಾಳೆ. ಆ ಬಗ್ಗೆ ಹೆಚ್ಚಿನ ಮಾಹಿತಿ ಇಲ್ಲಿದೆ. 

Woman Arrested For Poisoning Her Sons Classmate For Securing Better Marks Vin
Author
First Published Sep 5, 2022, 10:51 AM IST

ಉತ್ತಮ ಅಂಕ ಗಳಿಸಿದ್ದಕ್ಕಾಗಿ ತನ್ನ ಮಗನ ಸಹಪಾಠಿಗೇ ಮಹಿಳೆಯೊಬ್ಬಳು ವಿಷ ನೀಡಿದ್ದಾಳೆ. ಬಾಲಕ ಮೃತಪಟ್ಟಿದ್ದು, ಮಹಿಳೆಯನ್ನು ಬಂಧಿಸಲಾಗಿದೆ. ನಂಬಲು ಕಷ್ಟವೆನಿಸಿದರೂ ಇದು ನಿಜ. ಪುದುಚೇರಿಯಲ್ಲಿ ಇಂಥಹದ್ದೊಂದು ದುಷ್ಕೃತ್ಯ ನಡೆದಿದೆ. ಪೊಲೀಸರ ಪ್ರಕಾರ, ಮಹಿಳೆಯ ಮಗ ಮತ್ತು ಬಾಲಕನ ನಡುವೆ ಯಾವಾಗಲೂ ಅಂಕಗಳನ್ನು ಗಳಿಸುವ ಮತ್ತು ತರಗತಿಯಲ್ಲಿ ರ್ಯಾಂಕ್ ಗಳಿಸುವ ವಿಷಯದಲ್ಲಿ ಕಠಿಣ ಪೈಪೋಟಿ ನಡೆಯುತ್ತಿತ್ತು. ಪರೀಕ್ಷೆಯೊಂದರಲ್ಲಿ ಬಾಲಕ ಮಹಿಳೆಯು ಮಗನಿಗಿಂತ ಹೆಚ್ಚು ಅಂಕ ಗಳಿಸಿದ್ದು, ಸಿಟ್ಟಿಗೆದ್ದ ಮಹಿಳೆ ಹುಡುಗನಿಗೆ ವಿಷ ನೀಡಿದ್ದಾಳೆ. ತನ್ನ ಸಹಪಾಠಿಯ ತಾಯಿಯ ಕೃತ್ಯದಿಂದ ವಿಷ ಸೇವಿಸಿದ 13 ವರ್ಷದ ಬಾಲಕ ಮೃತಪಟ್ಟಿದ್ದಾನೆ. 

ಮಗನಿಗಿಂತ ಹೆಚ್ಚು ಮಾರ್ಕ್ಸ್‌ ತೆಗೆದ ಸಹಪಾಠಿ ಬಗ್ಗೆ ತಾಯಿಗೆ ಸಿಟ್ಟು
ವರದಿಗಳ ಪ್ರಕಾರ, ಆರೋಪಿ (Accused)ಯನ್ನು ಸಹಾಯರಾಣಿ ವಿಕ್ಟೋರಿಯಾ ಎಂದು ಗುರುತಿಸಲಾಗಿದ್ದು, ಅವರ ಮಗ ಕಾರೈಕಲ್‌ನ ಖಾಸಗಿ ಶಾಲೆಯಲ್ಲಿ ಎಂಟನೇ ತರಗತಿ ಓದುತ್ತಿದ್ದಾನೆ. ಮಹಿಳೆ (Woman) ವಿಷ (Poison) ಬೆರೆಸಿದ ಜ್ಯೂಸ್ ಅನ್ನು ವಾಚ್‌ಮ್ಯಾನ್‌ಗೆ ನೀಡಿದ್ದು, ಆತ ಇದನ್ನು ಬಾಲಕನಿಗೆ ನೀಡಿದ್ದಾನೆ. ಜ್ಯೂಸ್ ಕುಡಿದ ಬಾಲಕ ತಕ್ಷಣ ಪ್ರಜ್ಞೆ ತಪ್ಪಿ ಬಿದ್ದಿದ್ದಾನೆ. ಇದನ್ನು ನೋಡಿದ ಇತರ ವಿದ್ಯಾರ್ಥಿಗಳು ತಕ್ಷಣ ಶಾಲಾ ಸಿಬ್ಬಂದಿಗೆ ಎಚ್ಚರಿಕೆ ನೀಡಿದ್ದು, ಮಣಿಕಂಠನ್ ಅವರನ್ನು ಹತ್ತಿರದ ಕಾರೈಕಲ್ ಸರ್ಕಾರಿ ಆಸ್ಪತ್ರೆಗೆ ಸ್ಥಳಾಂತರಿಸಿದರು. ಅಲ್ಲಿ ವೈದ್ಯರು ಅವರ ಜೀವ ಉಳಿಸಲು ಪ್ರಯತ್ನಿಸಿದರು ಆದರೆ ಚಿಕಿತ್ಸೆ (Treatment) ಫಲಕಾರಿಯಾಗದೆ ಬಾಲಕ ಮೃತಪಟ್ಟಿದ್ದಾನೆ.

Suicide attempt: ಹಾಲ್ ಟಿಕೆಟ್ ಸಿಗದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ

ಕಳೆದ ವಾರ, ಖಾಸಗಿ ಶಾಲೆಯ 8 ನೇ ತರಗತಿಯ ವಿದ್ಯಾರ್ಥಿ (Student) ಬಾಲಾ ಮಣಿಕಂಠನ್ ತನ್ನ ಶಾಲೆಯ ವಾರ್ಷಿಕ ದಿನದ ಪೂರ್ವಾಭ್ಯಾಸದಿಂದ ಹಿಂದಿರುಗಿದ ನಂತರ ತೂಕಡಿಸುತ್ತಿದ್ದನು. ಶಾಲೆಯಲ್ಲಿ ಏನಾದರೂ ಸೇವಿಸಿದ್ದೀರಾ ಎಂದು ಅವನ ತಾಯಿ ಕೇಳಿದಾಗ, ವಾಚ್‌ಮ್ಯಾನ್ ನೀಡಿದ್ದ ಜ್ಯೂಸ್ ಕುಡಿದು ಕುಸಿದು ಬಿದ್ದಿರುವುದಾಗಿ ಹೇಳಿದ್ದಾನೆ.ನೆ. 

ಸಿಸಿಟಿವಿಯಲ್ಲಿ ಮಹಿಳೆಯ ಕೃತ್ಯ ಬಯಲು
ಮೃತಪಟ್ಟ ಬಾಲಕನ ಪೋಷಕರು (Parents) ಯಾಕಾಗಿ ಮಗನಿಗೆ ಜ್ಯೂಸ್ ಕೊಟ್ಟಿದ್ದೆಯೆಂದು ವಾಚ್‌ಮ್ಯಾನ್‌ ಬಳಿ ವಿಚಾರಿಸಿದ್ದಾರೆ. ಆಗ ವ್ಯಾಚ್‌ಮ್ಯಾನ್‌ ಮಹಿಳೆಯೊಬ್ಬರು ತನ್ನ ಬಳಿಗೆ ಬಂದು ಎರಡು ಜ್ಯೂಸ್ ಬಾಟಲ್‌ಗಳನ್ನು ನೀಡಿದ್ದು, ಅದು ಬಾಲಕನ ಮನೆಯಿಂದ ಕೊಟ್ಟಿರುವುದಾಗಿ ಹೇಳಿದರು ಎಂದು ತಿಳಿಸಿದ್ದಾನೆ. ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿದಾಗ, ಮಹಿಳೆಯೊಬ್ಬರು ಜ್ಯೂಸ್ ಅನ್ನು ವಾಚ್‌ಮ್ಯಾನ್‌ಗೆ ಹಸ್ತಾಂತರಿಸುತ್ತಿರುವುದು ಕಂಡುಬಂದಿದೆ. ನಂತರ, ಆಕೆಯನ್ನು ಬಾಲನ ಸಹಪಾಠಿ ಅರುಲ್ ಮೇರಿಯ ತಾಯಿ ಸಗಾಯರಾಣಿ ವಿಕ್ಟೋರಿಯಾ ಎಂದು ಗುರುತಿಸಲಾಯಿತು.

ಸಗಾಯರಾಣಿ ಅವರು ವಾಚ್‌ಮನ್‌ಗೆ ವಿಷ ಬೆರೆಸಿದ ರಸವನ್ನು ನೀಡಿದ್ದು, ಅದು ಬಾಲಾ ಅವರ ಸಂಬಂಧಿ ಎಂದು ಹೇಳಿದ್ದರಿಂದ ಆತ ಅದನ್ನು ಮಗುವಿಗೆ ನೀಡಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ. ಪ್ರಕರಣದ ಹೆಚ್ಚಿನ ತನಿಖೆ (Enquiry) ನಡೆಯುತ್ತಿದೆ. ಆಸ್ಪತ್ರೆಯಲ್ಲಿ ಶನಿವಾರ ರಾತ್ರಿ ಬಾಲ ಮೃತಪಟ್ಟಿದ್ದಾರೆ. ಆತನ ಪೋಷಕರು ಹಾಗೂ ಸಂಬಂಧಿಕರು ನ್ಯಾಯಕ್ಕಾಗಿ ಆಗ್ರಹಿಸಿ ಪ್ರತಿಭಟನೆ ನಡೆಸಿದ್ದು, ಪೊಲೀಸರು ಸಗಾಯರಾಣಿ ವಿಕ್ಟೋರಿಯಾಳನ್ನು ಬಂಧಿಸಿದ್ದಾರೆ.

Tamil Nadu: ಮಗುವಿಗೆ ಜನ್ಮ ನೀಡಿ ಪೊದೆಯಲ್ಲಿ ಬಿಸಾಡಿದ 11ನೇ ಕ್ಲಾಸ್‌ ಬಾಲಕಿ: 10ನೇ ತರಗತಿ ಬಾಲಕ ಸೆರೆ

ತಪ್ಪೊಪ್ಪಿಕೊಂಡ ಮಹಿಳೆ
ಆರೋಪಿ ಅಪರಾಧವನ್ನು ಒಪ್ಪಿಕೊಂಡಿದ್ದಾಳೆ. ಮಣಿಕಂಠನ್ ತನ್ನ ಮಗನಿಗಿಂತ ನಿರಂತರವಾಗಿ ಶಾಲೆಯಲ್ಲಿ ಶೈಕ್ಷಣಿಕವಾಗಿ ಉತ್ತಮವಾಗಿ ಕಾರ್ಯನಿರ್ವಹಿಸುತ್ತಿರುವುದನ್ನು ಸಹಿಸಲಾಗಲಿಲ್ಲ. ಆದ್ದರಿಂದ ಅಸೂಯೆಯಿಂದ ಅವನಿಗೆ ವಿಷವನ್ನು ನೀಡಲು ನಿರ್ಧರಿಸಿದ್ದಾಗಿ ತಿಳಿಸಿದ್ದಾಳೆ. ಪೊಲೀಸರು ಪ್ರಕರಣ ದಾಖಲಿಸಿಕೊಂಡು ಶಾಲೆಯ ಸಮೀಪದಲ್ಲಿದ್ದ ಸಿಸಿಟಿವಿ ದೃಶ್ಯಾವಳಿಗಳನ್ನು ಪರಿಶೀಲಿಸಿ ಆರೋಪಿಗಳನ್ನು ಬಂಧಿಸಿದ್ದಾರೆ. ಆರೋಪಿ ಮಹಿಳೆ ಏಕಾಂಗಿಯಾಗಿ ವರ್ತಿಸಿದ್ದಾಳೆಯೇ ಅಥವಾ ಪಿತೂರಿಯಲ್ಲಿ ಇತರ ವ್ಯಕ್ತಿಗಳು ಭಾಗಿಯಾಗಿದ್ದಾರೆಯೇ ಎಂದು ಖಚಿತಪಡಿಸಿಕೊಳ್ಳಲು ಪೊಲೀಸರು ಪ್ರಯತ್ನಿಸುತ್ತಿದ್ದಾರೆ.

Follow Us:
Download App:
  • android
  • ios