Suicide attempt: ಹಾಲ್ ಟಿಕೆಟ್ ಸಿಗದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
- ಹಾಲ್ ಟಿಕೆಟ್ ಸಿಗದಿದ್ದಕ್ಕೆ ಆತ್ಮಹತ್ಯೆಗೆ ಯತ್ನಿಸಿದ ವಿದ್ಯಾರ್ಥಿನಿ
- ಮೈಸೂರಿನ ಸೆಂಟ್ ಜೋಸೆಫ್ ಕಾಲೇಜ್ ವಿದ್ಯಾರ್ಥಿನಿ
- ತನ್ನ ಸಾವಿಗೆ ಪ್ರಾಂಶುಪಾಲರು, ಸಿಬ್ಬಂದಿ ಕಾರಣ ಎಂದು ಡೆತ್ ನೋಟ್
ಮೈಸೂರು (ಸೆ.5) : ನಗರದ ಪ್ರತಿಷ್ಠಿತ ಕಾಲೇಜಿನ ವಿದ್ಯಾರ್ಥಿಯೊಬ್ಬಳು ಹಾಲ್ ಟಿಕೆಟ್ ನೀಡುತ್ತಿಲ್ಲ, ತಾರತಮ್ಯ ಮಾಡುತ್ತಿದ್ದಾರೆಂದು ಮನನೊಂದು ಆತ್ಮಹತ್ಯೆಗೆ ಯತ್ನಿಸಿದ ಘಟನೆ ಮೈಸೂರಿನ ಜಯಲಕ್ಷ್ಮೀಪುರಂನಲ್ಲಿ ನಡೆದಿದೆ. ಜೋಸೆಫ್ ಕಾಲೇಜಿನ ತನ್ಮಯಾ ಬ್ಲೇಡ್‌ನಿಂದ ಕೈ ಕುಯ್ದುಕೊಂಡು ನಿದ್ರೆ ಮಾತ್ರೆ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ಯುವತಿ. ಕಾಲೇಜಿನಲ್ಲಿ ಕಿರುಕುಳ ನೀಡುತ್ತಿದ್ದಾರೆ. ತರಗತಿಗಳಿಗೆ ಹಾಜರಿಯಾಗುತ್ತಿದ್ದರೂ ಹಾಜರಾತಿ ನೀಡುತ್ತಿಲ್ಲ. ಹಾಲ್‌ಟಿಕೆಟ್ ಹಣ ಕೊಡುವಮತೆ ಪೀಡಿಸುತ್ತಾರೆ. ಕೊಟ್ಟ ಹಣಕ್ಕೆ ಯಾವುದೇ ರಶೀದಿ ಕೊಡುತ್ತಿಲ್ಲ ಎಂದು ವಿದ್ಯಾರ್ಥಿನಿ ವಿಡಿಯೋ ಸಾವಿಗೆ ಕಾರಣ ತಿಳಿಸಿದ್ದಾಳೆ.
Student Suicide: ಪುಣೆ ಫಿಲಂ ಇನ್ಸ್ಟಿಟ್ಯೂಟ್‌ನಲ್ಲಿ ಮತ್ತೊಬ್ಬ ವಿದ್ಯಾರ್ಥಿನಿ ಆತ್ಮಹತ್ಯೆ
ವಿಡಿಯೋದಲ್ಲಿ ಏನಿದೆ?:
ಕಾಲೇಜಿನ ಪ್ರಾಂಶುಪಾಲರು ನಮ್ಮ ಕಷ್ಟಗಳಿಗೆ ಸ್ಪಂದಿಸುತ್ತಿಲ್ಲಾ, ನಮ್ಮ ಭವಿಷ್ಯ ಹಾಳಾಗುತ್ತೆ ಅಂದ್ರು ಡಿಟೇನ್ ಮಾಡಿದ್ದಾರೆ. ದಿನಾಲು ತರಗತಿಗಳಿಗೆ ಹಾಜರಾಗುತ್ತಿದ್ದರೂ, ಹಾಜರಾತಿ ನೀಡುತ್ತಿಲ್ಲಾ.ಹಾಲ್ ಟಿಕೆಟ್ ಕೊಡೋದಕ್ಕೆ ದುಡ್ಡು ಕೇಳ್ತಿದ್ದಾರೆ. ದುಡ್ಡು ಕೊಟ್ಟರೆ ಯಾವುದೇ ರಶೀದಿ ಕೊಡುತ್ತಿಲ್ಲ. \ಡಿಟೇನ್ ಮಾಡಿದ್ರೆ ಒಂದು ವರ್ಷ ಹಾಳಾಗುತ್ತೆ ಅಂದ್ರೂ ನನ್ನ ಕಷ್ಟ ಪ್ರಾಂಶುಪಾಲರು ಅರ್ಥ ಮಾಡಿಕೊಳ್ಳುತ್ತಿಲ್ಲ. ಒಂದು ವಾರದಿಂದ ಪ್ರಾಂಶುಪಾಲರ ಬಳಿ ಅಂಗಾಲಾಚಿ ಬೇಡಿಕೊಂಡರೂ ಅವರು ಸರಿಯಾಗಿ ಸ್ಪಂದಿಸುತ್ತಿಲ್ಲಾ. ಹೀಗಾಗಿ ನಾನು ತುಂಬಾ ನೊಂದಿದ್ದೇನೆ ನನ್ನ ಜೀವನವನ್ನ ಎಂಡ್ ಮಾಡಲು ನಿರ್ಧರಿಸಿದ್ದೇನೆ. ನನ್ನ ಸಾವಿಗೆ ಸೆಂಟ್ ಜೋಸೆಫ್ ಕಾಲೇಜಿನ ಪ್ರಾಂಶುಪಾಲರು ಹಾಗೂ ಸಿಬ್ಬಂದಿ ಕಾರಣ ಎಂದು ವಿದ್ಯಾರ್ಥಿನಿ ತನ್ಮಯಾ ವಿಡಿಯೋ ಜತೆಗೆ ಡೆತ್ ನೋಟ್ ಬರೆದಿಟ್ಟು ಆತ್ಮಹತ್ಯೆಗೆ ಯತ್ನಿಸಿದ್ದಾಳೆ.
ಶಿಕ್ಷಕರ ಕಿರುಕುಳ ಆರೋಪ, ವಿದ್ಯಾರ್ಥಿನಿ ಆತ್ಮಹತ್ಯೆಗೆ ಭಾರಿ ಪ್ರತಿಭಟನೆ, 13 ಬಸ್‌ಗೆ ಬೆಂಕಿ!
ಸ್ಕೂಟರ್- ಕಾರು ಡಿಕ್ಕಿ: ಸವಾರನಿಗೆ ಗಾಯ
ಸ್ಕೂಟರ್ ಮತ್ತು ಕಾರೊಂದರ ನಡುವೆ ಡಿಕ್ಕಿ ಸಂಭವಿಸಿ ಸ್ಕೂಟರ್ ಸವಾರ ಗಂಭೀರ ಗಾಯಗೊಂಡ ಘಟನೆ ಶನಿವಾರ ತಡರಾತ್ರಿ ಮಾಣಿ ಮೈಸೂರು ರಾಷ್ಟ್ರೀಯ ಹೆದ್ದಾರಿಯ ಮುಕ್ರಂಪಾಡಿ ಎಂಬಲ್ಲಿ ನಡೆದಿದೆ. ಮಂಗಳೂರು ಕಡೆಯಿಂದ ಈಶ್ವರಮಂಗಲಕ್ಕೆ ಹೋಗುತ್ತಿದ್ದ ಕಾರು ಹಾಗೂ ಮುಂಡೂರಿನಿಂದ ಪುತ್ತೂರಿಗೆ ಆಗಮಿಸುತ್ತಿದ್ದ ಸ್ಕೂಟರ್ ಪರಸ್ಪರ ಡಿಕ್ಕಿಯಾಗಿತ್ತು. ಈ ಸಂದರ್ಭದಲ್ಲಿ ಸ್ಕೂಟರ್‌ನಲ್ಲಿ ಪ್ರಯಾಣಿಸುತ್ತಿದ್ದ ಪುತ್ತೂರು ತಾಲೂಕಿನ ಮುಂಡೂರು ಗ್ರಾಮದ ಕಂಪ ನಿವಾಸಿ ದೀಕ್ಷಿತ್ ಮತ್ತು ವಿನೋದ್ ಎಂಬವರು ರಸ್ತೆಗೆಸೆಯಲ್ಪಟ್ಟಿದ್ದರು. ಈ ಪೈಕಿ ದೀಕ್ಷಿತ್ ಅವರಿಗೆ ಗಂಭೀರ ಗಾಯಗಳಾಗಿದೆ. ಗಾಯಾಳುವನ್ನು ಮಂಗಳೂರಿನ ಆಸ್ಪತ್ರೆಗೆ ದಾಖಲಿಸಲಾಗಿದೆ. ಪುತ್ತೂರು ಸಂಚಾರಿ ಪೊಲೀಸರು ಕೇಸು ದಾಖಲಿಸಿಕೊಂಡಿದ್ದಾರೆ.