3 ತಿಂಗಳ ವಯಸ್ಸಿನ ತನ್ನ ಮೊಮ್ಮಗನ್ನೇ ಕೊಂದು ಪರಾರಿಯಾದ ಅಜ್ಜಿ!

-3 ತಿಂಗಳ ವಯಸ್ಸಿನ ತನ್ನ ಮೊಮ್ಮಗನ್ನೇ ಕೊಂದ ಆರೋಪ   
-45 ವರ್ಷದ ಮಹಿಳಾ ಅರೋಪಿ ಮನೆಯಿಂದ ಪರಾರಿ
-ಮೊಮ್ಮಗಳ ಮೇಲೂ ಹಲ್ಲೆ ಮಾಡಿರುವ ಆರೋಪಿ ಶಾಂತಿ!

Woman allegedly murders 3 month old grandson injures granddaughter in Coimbatore

ಕೊಯಂಬತ್ತೂರು (ಅ. 23 ) : 45 ವರ್ಷದ ಮಹಿಳೆಯೊಬ್ಬರು  3 ತಿಂಗಳ ವಯಸ್ಸಿನ ತನ್ನ ಮೊಮ್ಮಗನ್ನೇ ಕೊಂದು, ಮೊಮ್ಮಗಳ ಕೊಲೆಗೆ ಪ್ರಯತ್ನಿಸಿ ಪರಾರಿಯಾದ ಆರೋಪ  ಕೊಯಂಬತ್ತುರಿನ ಕವುಂದಂಪಾಲಯಮ್‌ನಲ್ಲಿ (Coimbatore's Kavundampalayam)  ಕೇಳಿ ಬಂದಿದೆ. ಮಹಿಳೆಗಾಗಿ ಪೋಲಿಸರು ಬಲೆ ಬೀಸಿದ್ದಾರೆ. ಪರಾರಿಯಾದ ಮಹಿಳೆ ಮಾನಸಿಕ ಅಸ್ವಸ್ಥೆ ಎಂದು (Mentally unstable) ತಿಳಿದುಬಂದಿದೆ.

ಮೈಸೂರು;  ಶ್ರೀಮಂತನ ಇನ್ನೊಂದು ಸಂಸಾರ... ಮಗನೇ ತಂದೆ ಮತ್ತು ಆಕೆಯ ಕೊಚ್ಚಿದ!

ಅಶ್ವರ್ಯಾ (Aishwarya) ಮತ್ತು ಭಾಸ್ಕರನ್‌ (Bhaskar) ದಂಪತಿಗಳ  ಮಗಳು  ಬಿ ಆರಿಕಾಶ್ರೀ (B Aarika shri) ಮೇಲೆ ಹಲ್ಲೆ ಮಾಡಲಾಗಿದ್ದು, 3 ತಿಂಗಳ ಮಗ ಬಿ ಆರ್ಯನ್‌ (B Aryan) ಮೃತ ದುರ್ದೈವಿ. ಪರಾರಿಯಾಗಿರುವ ಆರೋಪಿಯನ್ನು ಶಾಂತಿ (Shanti) ಎಂದು ಗುರುತಿಸಲಾಗಿದ್ದು, ಇವರ ಪತಿ ಮಧುರೈನ ಮಥಿಚಿಯಂ ಪೊಲೀಸ್ ಠಾಣೆಯಲ್ಲಿ ಸ್ಪೇಷಲ್ ಸಬ್ ಇನ್ಸ್‌ಪೆಕ್ಟರ್ (SSI) ಆಗಿ ಕೆಲಸ  ನಿರ್ವಹಿಸುತ್ತಿದ್ದಾರೆ. ಪ್ರಾಥಮಿಕ ವರದಿಯ ಪ್ರಕಾರ, ಐಶ್ವರ್ಯ ಮತ್ತು ಬಾಸ್ಕರನ್ ಗುರುವಾರ (ಅ. 21)  ಮನೆಯಲ್ಲಿ ಇರಲಿಲ್ಲ. ಈ ವೇಳೆ ಇಬ್ಬರೂ ಮಕ್ಕಳು ತಮ್ಮ ಅಜ್ಜಿಯೊಂದಿಗೆ ಇದ್ದರು. ತಾಯಿ ಮನೆಗೆ ಹಿಂದಿರುಗಿದಾಗ, ಆರ್ಯನ್‌ನ ದೇಹದಲ್ಲಿ ಅವನ ಖಾಸಗಿ ಭಾಗಗಳು ಸೇರಿದಂತೆ ದೇಹದಲ್ಲಿ ಹಲವಾರು ಗಾಯಗಳಿರುವುದನ್ನು ಕಂಡು ಆಘಾತಕ್ಕೊಳಗಾದರು ಎಂದು ಪೊಲೀಸರು ತಿಳಿಸಿದ್ದಾರೆ. ಅವರ ಮಗಳು ಆರಿಕಾ ಶ್ರೀ ಅವರ ಕೈಗೂ ಗಂಭೀರ ಗಾಯಗಳಾಗಿವೆ. 

ಗಂಡನನ್ನೆ ಕೊಂದ ಪತ್ನಿ, 2 ತಿಂಗ್ಳು ಬಳಿಕ ಗೊತ್ತಾಯ್ತು ಆಕೆಯ ಪಲ್ಲಂಗ ಪುರಾಣ

ತಕ್ಷಣ ಮಕ್ಕಳನ್ನು ಆಸ್ಪತ್ರೆಗೆ ಸೇರಿಸಿದ್ದರೂ ಚಿಕಿತ್ಸೆ ಫಲಿಸದೆ ಆರ್ಯನ್ ಮೃತಪಟ್ಟಿರುವುದಾಗಿ ವೈದ್ಯರು ಘೋಷಿಸಿದರು. ಆರಿಕಾ ಶ್ರೀ ಅವರನ್ನು ಬೇರೆ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಚಿಕಿತ್ಸೆ ನೀಡಲಾಗುತ್ತಿದೆ. ಘಟನೆಯ ನಂತರ ಆರೋಪಿ ಶಾಂತಿ ನಾಪತ್ತೆಯಾಗಿದ್ದು, ಪೊಲೀಸರು ಆಕೆಯ ಪತ್ತೆಗೆ ಮುಂದಾಗಿದ್ದಾರೆ. ಆರೋಪಿ ಮಹಿಳೆ ಮನೆಯಿಂದ ಹೊರಹೋಗುತ್ತಿರುವುದು  ಸಿಸಿಟಿವಿಯಲ್ಲಿ ಸೆರೆಯಾಗಿದೆ  ಪೊಲೀಸರು ತಿಳಿಸಿದ್ದಾರೆ. ಆರೋಪಿಯನ್ನು ಬಂಧಿಸಲು ವಿಶೇಷ ತಂಡವನ್ನು ರಚಿಸಲಾಗಿದ್ದು, ಭಾರತೀಯ ದಂಡ ಸಂಹಿತೆ (ಐಪಿಸಿ) ಸೆಕ್ಷನ್ 302 ರ ಅಡಿಯಲ್ಲಿ ಪ್ರಕರಣವನ್ನೂ ದಾಖಲಿಸಲಾಗಿದೆ ಎಂದು ತುಡಿಯಲೂರ್ (Thudiyalur) ಪೊಲೀಸ್ ಇನ್ಸ್‌ಪೆಕ್ಟರ್ ಜ್ಞಾನಶೇಖರನ್ (Gnanasekaran) ತಿಳಿಸಿದ್ದಾರೆ. 
  
7 ವರ್ಷದ ಮಗುವಿನ ಅತ್ಯಾಚಾರ, ಕೊಲೆ ಆರೋಪಿಗೆ ತಿಂಗಳೊಳಗೆ ಮರಣದಂಡನೆ

7 ವರ್ಷದ ಮಗುವಿನ ಅತ್ಯಾಚಾರ ಹಾಗೂ ಕೊಲೆ ಆರೋಪದ ಹಿನ್ನೆಲೆಯಲ್ಲಿ 25 ವರ್ಷದ ಆರೋಪಿಗೆ ಘಟನೆ ನಡೆದು ತಿಂಗಳೊಳಗೆ ಗಲ್ಲು ಶಿಕ್ಷೆ ವಿಧಿಸಲಾಗಿದೆ. ರಾಜಸ್ಥಾನದ ವಿಶೇಷ ನ್ಯಾಯಾಲಯ ಘಟನೆ ನಡೆದು ತಿಂಗಳೊಳಗೆ ಈ ತೀರ್ಪು ಪ್ರಕಟಿಸಿದೆ. ನಾಗ್‌ಪುರದ ಮೆರ್ಟಾ ನಗರದಲ್ಲಿ ವಿಶೇಷ ಪೋಸ್ಕೋ ನ್ಯಾಯಾಲಯ ಸೆ.20ರಂದು 7 ವರ್ಷದ ಹೆಣ್ಣುಮಗುವನ್ನು ಅತ್ಯಾಚಾರ ಮಾಡಿ ಕೊಲೆ ಮಾಡಿದ ಯುವಕನಿಗೆ ಮರಣದಂಡನೆ ವಿಧಿಸಿದೆ. ಜಿಲ್ಲೆಯ ಪಡುಕಾಲನ್ ಪೊಲೀಸ್ ಠಾಣೆ ವ್ಯಾಪ್ತಿಯಲ್ಲಿ ಈ ಘಟನೆ ನಡೆದಿತ್ತು.

7 ವರ್ಷದ ಮಗುವಿನ ಅತ್ಯಾಚಾರ, ಕೊಲೆ ಆರೋಪಿಗೆ ತಿಂಗಳೊಳಗೆ ಮರಣದಂಡನೆ

Latest Videos
Follow Us:
Download App:
  • android
  • ios