Asianet Suvarna News Asianet Suvarna News

ಗಂಡನನ್ನೆ ಕೊಂದ ಪತ್ನಿ, 2 ತಿಂಗ್ಳು ಬಳಿಕ ಗೊತ್ತಾಯ್ತು ಆಕೆಯ ಪಲ್ಲಂಗ ಪುರಾಣ

* ಪ್ರಿಯಕರನೊಂದಿಗೆ ಸೇರಿ ತನ್ನ ಗಂಡನನ್ನೆ ಕೊಂದ ಪತ್ನಿ
* ಎರಡು ತಿಂಗಳ ಬಳಿಕ ಬಟಾಬಯಲಾಯ್ತು ಮಹಿಳೆಯ ಲವ್ವಿ ಡವ್ವಿ
* ಗಂಡನನ್ನು ಕೊಂದು ಕುಡಿಸು ಸತ್ತಿದ್ದಾನೆ ಎಂದು ಹೇಳಿದ ಪತ್ನಿ

wife kills her husband Over illicit-relationship with Boyfriend at kalaburagi rbj
Author
Bengaluru, First Published Oct 22, 2021, 1:33 PM IST
  • Facebook
  • Twitter
  • Whatsapp

ಕಲಬುರಗಿ, (ಅ.22): ಪ್ರಿಯಕರನೊಂದಿಗೆ ಸೇರಿ ತನ್ನ ಗಂಡನನ್ನೆ (Husband) ಕೊಂದು ನಾಟಕವಾಡಿದ್ದವಳ ಅಸಲಿ ಕಾಮ ಪುರಾಣ ಬಟಾಬಯಲಾಗಿದೆ.

ಅನಸೂಯಾ ಎನ್ನುವಾಕೆ ಪ್ರಿಯಕರ ಶ್ರೀಶೈಲ್ ಜೊತೆ ಸೇರಿ ತನ್ನ ಪತಿ ರಾಜಪ್ಪ ರೆಡ್ಡಿ( 38) ನನ್ನು ಆಗಸ್ಟ್ 24 ರಂದು ಕೊಲೆ ಮಾಡಿದ್ದಾಳೆ.ಈ ಘಟನೆ  ಕಲಬುರಗಿ ಜಿಲ್ಲೆಯ ಸೇಡಂ ತಾಲ್ಲೂಕಿನ ಈರ್ನಾಪಲ್ಲಿಯಲ್ಲಿ  ನಡೆದಿತ್ತು. ಆದ್ರೆ,  ಕೊಲೆ ಮಾಡಿ ಕುಡಿದು ಸತ್ತಿದ್ದಾನೆ ಅಂತಾ ಹೆಂಡತಿ ಕತೆ ಕಟ್ಟಿದ್ದಳು.  ಇದೀಗ ಘಟನೆ ನಡೆದ ಎರಡು ತಿಂಗಳ ಬಳಿಕ ಪತ್ನಿ ಲವ್ವಿ ಡವ್ವಿ ಬಹಿರಂಗವಾಗಿದೆ.

ಮೈಸೂರು: ಮಗನಿಂದಲೇ ತಂದೆ, ಮಹಿಳೆಯ ಬರ್ಬರ ಕೊಲೆ

ಕುಡಿದು ಸತ್ತಿದ್ದಾನೆ ಅಂತಾ ನಂಬಿ ಅಂತ್ಯ ಸಂಸ್ಕಾರ ನೆರವೇರಿಸಿದ್ದರು. ಅಂತ್ಯ ಸಂಸ್ಕಾರ ಆಗಿ ಎರಡು ತಿಂಗಳ ಬಳಿಕ ಕೊಲೆಯ ರಹಸ್ಯ ಬಯಲಾಗಿದೆ. ಗಂಡನ ಸಾವಿನ ಬಳಿಕ ಪ್ರಿಯಕರನೊಂದಿಗೆ ಸರಸವಾಡುವಾಗ ಹೆಂಡತಿ ಸಿಕ್ಕಿಬಿದ್ದಿದ್ದಾಳೆ. ಗ್ರಾಮಸ್ಥರು ಪ್ರಿಯಕರನನ್ನ ಕಂಬಕ್ಕೆ ಕಟ್ಟಿ ಥಳಿಸಿದಾಗ ಅಸಲಿ ಕಥೆ ಬಾಯ್ಬಿಟ್ಟಿದ್ದಾನೆ.

ರಾಜಪ್ಪ ರೆಡ್ಡಿ ಕೊರೋನಾ ಲಾಕ್ ಡೌನ್ ಸಂದರ್ಭದಲ್ಲಿ ತೆಲಂಗಾಣದ ಅಂತಾವರಂಗೆ ಪತ್ನಿಯ ಮೆನೆಗೆ ತೆರಳಿದ್ದ. ಕೆಲ ತಿಂಗಳುಗಳ ಕಾಲ ಅಂತಾವರಂ ನಲ್ಲಿಯೇ ರಾಜಪ್ಪ ರೆಡ್ಡಿ ಉಳಿದಿದ್ದ. ಆಗ ಪತ್ನಿ ಅನುಸೂಯಾ ಪಕ್ಕದ ಮನೆಯ ಶ್ರೀಶೈಲ್ ಜೊತೆ ಅಕ್ರಮ ಸಂಬಂಧ ಹೊಂದಿರುವುದು ಬೆಳಕಿಗೆ ಬಂದಿದೆ. ಪತ್ನಿಯ ಅಕ್ರಮ ಸಂಬಂಧದ ಬಗ್ಗೆ ಗೊತ್ತಾದ ತಕ್ಷಣ ರಾಜಪ್ಪರೆಡ್ಡಿ ತನ್ನ ಪತ್ನಿ ಅನುಸೂಯಾಳನ್ನು ತವರು ಮನೆಯಿಂದ ಕರೆದುಕೊಂಡು ಬಂದಿದ್ದ.

ಆದರೆ ಗಂಡನ ಮನೆಗೆ ಬಂದ‌ ನಂತರವೂ ಪತ್ನಿಯ ಅನೈತಿಕ ಸಂಬಂಧ ಮುಂದುವರಿದಿತ್ತು. ಹೆಂಡತಿಯ ಲವ್ವಿ ಡವ್ವಿಯಿಂದ ರಾಜಪ್ಪ ರೆಡ್ಡಿ ಜಗಳ ಮಾಡಿದ್ದಾನೆ. ಕೊನೆಗೆ ಒಂದು ದಿನ ರಾಜಪ್ಪ ರೆಡ್ಡಿಗೆ ಪತ್ನಿ ಮತ್ತು ಪ್ರಿಯಕರ ಕಂಠ ಪೂರ್ತಿ ಕುಡಿಸಿ ಕತ್ತು ಹಿಸುಕಿ ಕೊಲೆ ಮಾಡಿದ್ದಾರೆ.

ಈ ಬಗ್ಗೆ ಮುಧೋಳ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು,  ಗಂಡನ ಕೊಲೆ ಮಾಡಿದ ಪತ್ನಿ ಅನುಸೂಯಾ ಮತ್ತು ಪ್ರಿಯಕರ ಶ್ರೀಶೈಲನನ್ನು ಪೊಲೀಸ್ ಅತಿಥಿಯಾಗಿದ್ದಾರೆ.

Follow Us:
Download App:
  • android
  • ios