ಪ್ರಿಯಕರನೊಂದಿಗೆ ಏಕಾಂತದಲ್ಲಿದ್ದಾಗ ಸಿಕ್ಕಿಬಿದ್ದ ಪತ್ನಿ: ರುಬ್ಬುವ ಕಲ್ಲು ಎತ್ತಿ ಹಾಕಿ ಗಂಡನ ಕೊಲೆಗೈದ ಹೆಂಡ್ತಿ..!

ನಂದಿನಿ ಜ.9 ರಂದು ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ಏಕಾಂತದಲ್ಲಿದ್ದರು. ಈ ವೇಳೆ ಏಕಾಏಕಿ ಮನೆಗೆ ಬಂದ ಪತಿ ವೆಂಕಟರಮಣನ ಕೈಗೆ ಇಬ್ಬರೂ ಸಿಕ್ಕಿಬಿದ್ದಿದ್ದು, ಜೋರು ಜಗಳವಾಗಿದೆ. ಮದ್ಯ ಸೇವಿಸಿ ಬಂದಿದ್ದ ವೆಂಕಟರಮಣನ ಮೇಲೆ ನಿತೀಶ್ ಕುಮಾರ್ ಹಲ್ಲೆ ಮಾಡಿದ್ದಾನೆ. ಕೆಳಗೆ ಬಿದ್ದಾಗ ರುಬ್ಬುವ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾರೆ. 

Wife Killed Husband With Her Boyfriend in Bengaluru grg

ಬೆಂಗಳೂರು(ಜ.14): ಪ್ರಿಯಕರನ ಜತೆಗೆ ಇರುವಾಗ ವತಿಗೆ ಸಿಕ್ಕಿ ಬಿದ್ದಾಗ ನಡೆದ ಜಗಳದ ವೇಳೆ ಪ್ರಿಯಕರನ ಜತೆ ಸೇರಿ ವತಿಯ ತಲೆ ಮೇಲೆ ರುಬ್ಬುವ ಕಲ್ಲು ಎತ್ತಿ ಹಾಕಿ ಕೊಲೆ ಗೈದು ಬಳಿಕ ಮದ್ಯದ ಅಮಲಿನಲ್ಲಿ ಬಿದ್ದು ಮೃತಟ್ಟಿದ್ದಾರೆ ಎಂದು ನಾಟಕವಾಡಿದ್ದ ಪತ್ನಿ. ಹಾಗೂ ಆಕೆಯ ಪ್ರಿಯಕರನನ್ನು ಎಚ್‌ಎಸ್‌ಆರ್‌ ಲೇಔಟ್‌ ಠಾಣೆ ಪೊಲೀಸರು ಬಂಧಿಸಿದ್ದಾರೆ.

ಎಚ್‌ಎಸ್‌ಆರ್‌ ಲೇಔಟ್‌ ಠಾಣೆ 2ನೇ ಸೆಕ್ಟರ್‌ನ ನಂದಿನಿ ಬಾಯಿ(22) ಮತ್ತು ಆಕೆಯ ಪ್ರಿಯಕರ ನಿತೀಶ್ ಕುಮಾರ್ (22) ಬಂಧಿ ತರು. ಆರೋಪಿಗಳು ಜ.9ರಂದು ರಾತ್ರಿ ವೆಂಕಟರಮಣ ನಾಯಕ್ (30) ಎಂಬಾತನ ಮೇಲೆ ರುಬ್ಬುವ ಕಲ್ಲು ಎತ್ತಿ ಹಾಕಿ ಕೊಲೆಗೈದಿದ್ದರು. ಮೃತನ ತಂದೆ ಲಕ್ಷ್ಮೀನಾಯಕ್ ನೀಡಿದ ದೂರಿನ ಮೇರೆಗೆ ತನಿಖೆ ನಡೆಸಿ ಇಬ್ಬರು ಆರೋಪಿಗಳನ್ನು ಬಂಧಿಸಲಾಗಿದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.

Kalaburagi: ಮಂಚಕ್ಕೆ ಕರೆದ ಅಕ್ಕನ ಗಂಡನನ್ನು ಮರ್ಡರ್ ಮಾಡಿಸಿದ ಕಿರಾತಕಿ ನಾದಿನಿ

ಪ್ರಕರಣದ ವಿವರ: 

ಆಂಧ್ರಪ್ರದೇಶದ ಅನಂತಪುರ ಮೂಲದ ವೆಂಕಟರಮಣ ನಾಯಕ 4 ವರ್ಷದ ಹಿಂದೆ ಸಂಬಂಧಿ ನಂದಿನಿ ಬಾಯಿ ಯನ್ನು ಮದುವೆಯಾಗಿದ್ದರು. ದಂಪತಿಗೆ 3 ಮತ್ತು 9 ತಿಂಗಳ ಎರಡು ಹೆಣ್ಣು ಮಕ್ಕಳಿವೆ. ಕಳೆದ 3 ವರ್ಷಗಳಿಂದ ದಂಪತಿ ಮಕ್ಕಳೊಂದಿಗೆ ಎಚ್‌ಎಸ್‌ಆರ್ ಲೇಔಟ್‌ನ 2ನೇ ಸೆಕ್ಟರ್‌ನ ಬನಶಂಕರಿ ಎಂಬ ವಸತಿ ಕಟ್ಟಡದಲ್ಲಿ ನೆಲೆಸಿದ್ದರು.

ವೆಂಕಟರಮಣ ಬೆಳಗ್ಗೆ ಇಂದಿರಾನಗರದ ಅಂಗಡಿಯೊಂದರಲ್ಲಿ ಸೇಲ್ಸ್ ಮ್ಯಾನ್ ಕೆಲಸ, ರಾತ್ರಿ ತಾನು ವಾಸವಿರುವ ಬನಶಂಕರಿ ಕಟ್ಟಡದಲ್ಲೇ ವಾಚ್‌ಮನ್ ಕೆಲಸ ಮಾಡಿಕೊಂಡಿದ್ದರು. ಮದುವೆಯ ಆರಂಭದಲ್ಲಿ ದಂಪತಿ ಅನೋನ್ಯವಾಗಿದ್ದರು. ಬಳಿಕ ಪತ್ನಿ ನಂದಿನಿ ಸಣ್ಣ ವಿಚಾರಗಳಿಗೆ ಜಗಳ ಮಾಡಿಕೊಂಡು ತವರಿಗೆ ಹೋಗುತ್ತಿದ್ದಳು. ಬಳಿಕ ಹಿರಿಯರ ಸಮ್ಮುಖದಲ್ಲಿ ಆಕೆಗೆ ಬುದ್ದಿ ಹೇಳಿ ಗಂಡನ ಜತೆಗೆ ಕಳುಹಿಸಿದರು.
ಇತ್ತೀಚೆಗೆ ನಂದಿನಿ ಮೊಬೈಲ್‌ನಲ್ಲಿ ವ್ಯಕ್ತಿ ಯೊಬ್ಬನ ಜತೆಗೆ ತುಂಬಾ ಮಾತನಾಡುತ್ತಿದ್ದಳು. ಈ ವಿಚಾರ ಪತಿ ವೆಂಕಟರಮಣನಿಗೆ ಗೊತ್ತಾಗಿ ಜಗಳ ಮಾಡಿದ್ದ. ಬಳಿಕ ಇಬ್ಬರ ಕುಟುಂಬದವರು ರಾಜಿ ಮಾಡಿಸಿ, ಮುಂದೆ ಹೀಗೆ ಮಾಡದಂತೆ ಬುದ್ದಿ ಹೇಳಿದ್ದರು.

ರುಬ್ಬುವ ಕಲ್ಲಿನಿಂದ ಹೊಡೆದು ಕೊಲೆ:

ನಂದಿನಿ ಜ.9ರ ರಾತ್ರಿ ೫ರ ಸುಮಾರಿಗೆ ತನ್ನ ಪ್ರಿಯಕರನನ್ನು ಮನೆಗೆ ಕರೆಸಿಕೊಂಡು ಏಕಾಂತದಲ್ಲಿದ್ದರು. ಈ ವೇಳೆ ಏಕಾಏಕಿ ಮನೆಗೆ ಬಂದ ಪತಿ ವೆಂಕಟರಮಣನ ಕೈಗೆ ಇಬ್ಬರೂ ಸಿಕ್ಕಿಬಿದ್ದಿದ್ದು, ಜೋರು ಜಗಳವಾಗಿದೆ. ಮದ್ಯ ಸೇವಿಸಿ ಬಂದಿದ್ದ ವೆಂಕಟರಮಣನ ಮೇಲೆ ನಿತೀಶ್ ಕುಮಾರ್ ಹಲ್ಲೆ ಮಾಡಿದ್ದಾನೆ. ಕೆಳಗೆ ಬಿದ್ದಾಗ ರುಬ್ಬುವ ಕಲ್ಲಿನಿಂದ ಹೊಡೆದು ಕೊಲೆ ಮಾಡಿದ್ದಾರೆ. ಬಳಿಕ ಮೃತದೇಹವನ್ನು ವಾಚ್ ಮನ್ ಕೊಠಡಿ ಬಳಿಯ ಶೌಚಾಲಯದ ಸಮೀಪಕ್ಕೆ ಎಳೆದೊಯ್ದು ಇರಿಸಿದ್ದಾರೆ. ನಂತರ ನಿತೀಶ್ ಕುಮಾ‌ರ್ ಆಂಧ್ರಕ್ಕೆ ಹಾರಿದ್ದಾನೆ.

ಪತ್ನಿಯಿಂದ ಜಾರಿ ಬಿದ್ದು ಪತಿ ಸಾವು ನಾಟಕ: 

ಮದ್ಯದ ಅಮಲಿನಲ್ಲಿ ಶೌಚಾಲಯಕ್ಕೆ ತೆರಳುವಾಗ ಪತಿ ವೆಂಕಟರಮಣ ಮೃತಪಟ್ಟಿದ್ದಾನೆ ಎಂದು ನಂದಿನಿ ನಾಟಕವಾಡಲು ಸಂಚು ಮಾಡಿದ್ದಾಳೆ. ಬಳಿಕ 112 ಪೊಲೀಸ್‌ ವಾಣಿಗೆ ಕರೆ ಮಾಡಿ ವಿಚಾರ ತಿಳಿಸಿದ್ದಾಳೆ. ಪೊಲೀಸರು ಘಟನಾ ಸ್ಥಳಕ್ಕೆ ತೆರಳಿ ಪರಿಶೀಲಿಸಿ ದಾಗ, ಪತಿ ಮದ್ಯದ ಅಮಲಿನಲ್ಲಿ ಶೌಚಾಲಯಕ್ಕೆ ತೆರಳುವಾಗ ಜಾರಿ ಬಿದ್ದು ಮೃತಪಟ್ಟಿ ದ್ದಾರೆ ಎಂದು ಹೇಳಿದ್ದಾಳೆ. ವೆಂಕಟರಮಣನ ಮೈ ಹಾಗೂ ತಲೆಯ ಗಾಯ ಪರಿಶೀಲಿಸಿದಾಗ ಪೊಲೀಸರಿಗೆ ಅನುಮಾನ ಬಂದಿದೆ.

ನನ್ನಮ್ಮನ ಜೊತೆಯೇ ಗಂಡನ ರಾಸಲೀಲೆ, ಏನ್ಮಾಡೋದು ಕೇಳ್ತಿದ್ದಾಳೆ ಹೆಂಡತಿ?

ವಿಚಾರಣೆ ವೇಳೆ ಸಾವಿನ ರಹಸ್ಯ ಬಯಲು:

ಕೊಲೆಯಾದ ವೆಂಕಟರಮಣನ ತಂದೆ ಲಕ್ಷ್ಮೀ ನಾಯಕ್, ಕೊಲೆ ಎಂದು ಸೊಸೆ ನಂದಿನಿ ಮೇಲೆ ಅನುಮಾನಿಸಿ ದೂರು ನೀಡಿದ್ದರು. ಈ ನಡುವೆ ಮರಣೋತ್ತರ ಪರೀಕ್ಷೆ ವರದಿಯಲ್ಲಿ ಇದು ಅಸಹಜ ಸಾವೆಂಬ ವರದಿ ಬಂದಿದೆ. ಬಳಿಕ ನಂದಿನಿಯನ್ನು ವಶಕ್ಕೆ ಪಡೆದು ತೀವ್ರ ವಿಚಾರಿಸಿದಾಗ ರಹಸ್ಯ ಬಯಲಾಗಿದೆ.

ಕಾಲೇಜು ದಿನಗಳಿಂದಲೇ ಲವ್!

ಆರೋಪಿಗಳಾದ ನಂದಿನಿ ಮತ್ತು ನಿತೀಶ್ ಆಂಧ್ರಪ್ರದೇಶದಲ್ಲಿ ಒಂದೇ ಕಾಲೇಜಿನಲ್ಲಿ ಓದುತ್ತಿದ್ದಾಗ ಪ್ರೀತಿಸುತ್ತಿದ್ದರು. ಇಬ್ಬರ ಬೇರೆ ಜಾತಿ ಕಾರಣಕ್ಕೆ ಎರಡೂ ಕುಟುಂಬ ಮದು ವೆಗೆ ನಿರಾಕರಿಸಿದ್ದವು. ನಂದಿನಿಗೆ ಸಂಬಂಧಿ ವೆಂಕಟರಮಣನ ಜತೆ ಮದುವೆ ಮಾಡಿಸಿತ್ತು. ಮದುವೆಯಾದರೂ ನಂದಿನಿ-ನಿತೀಶ್ ಅನೈತಿಕ ಸಂಬಂಧ ಮುಂದುವರೆಸಿದ್ದರು.

Latest Videos
Follow Us:
Download App:
  • android
  • ios