ತಂಗಿ ಮದ್ವೆಗೆ ಅದ್ದೂರಿ ಗಿಫ್ಟ್ ನೀಡಲು ಮುಂದಾದ ಅಣ್ಣನ ಕೊಂದೇ ಬಿಟ್ಟ ಅತ್ತಿಗೆ
ತಂಗಿ ಮದ್ವೆಯನ್ನು ಬಹಳ ಅದ್ದೂರಿಯಾಗಿ ಮಾಡಿಕೊಡಬೇಕು ಎಂದು ಅಂದುಕೊಂಡಿದ್ದ ಅಣ್ಣನ ಕತೆಯನ್ನೇ ಅತ್ತಿಗೆ ಮುಗಿಸಿ ಬಿಟ್ಟಿದ್ದಾಳೆ. ಇಂತಹ ಅಮಾನವೀಯ ಆಘಾತಕಾರಿ ಘಟನೆ ನಡೆದಿರುವುದು ಉತ್ತರ ಪ್ರದೇಶ ರಾಜ್ಯದ ಬಾರಬಂಕಿಯಲ್ಲಿ.
ಬಾರಬಂಕಿ: ಭಾರತೀಯ ಸಂಪ್ರದಾಯದ ಪ್ರಕಾರ ತಂಗಿಯ ಅಥವಾ ಅಕ್ಕನ ಮದ್ವೆ ಮಾಡ್ಸೋದು ಒಡಹುಟ್ಟಿದ ಅಣ್ಣ ತಮ್ಮನ ಜವಾಬ್ದಾರಿ ಎಂಬ ಭಾವನೆ ಇದೆ. ಹೋದ ಮನೆಯಲ್ಲಿ ಅಕ್ಕ/ತಂಗಿ ಚೆನ್ನಾಗಿರಲಿ ಎಂಬ ಕಾರಣಕ್ಕೆ ತನಗೆ ಕಷ್ಟವಾದರೂ ಉಡುಗೊರೆ ಚಿನ್ನ ಬಣ್ಣ ನಗ ನಾಣ್ಯ ಹಣ ವಾಹನ ಕೊಟ್ಟು ಬಹಳ ಅದ್ದೂರಿಯಾಗಿ ಮದ್ವೆ ಮಾಡಿಕೊಡುವ ಬಗ್ಗೆ ಯೋಚನೆ ಮಾಡ್ತಾರೆ. ಆದರೆ ಹೀಗೆ ತಂಗಿ ಮದ್ವೆಯನ್ನು ಬಹಳ ಅದ್ದೂರಿಯಾಗಿ ಮಾಡಿಕೊಡಬೇಕು ಎಂದು ಅಂದುಕೊಂಡಿದ್ದ ಅಣ್ಣನ ಕತೆಯನ್ನೇ ಅತ್ತಿಗೆ ಮುಗಿಸಿ ಬಿಟ್ಟಿದ್ದಾಳೆ. ಇಂತಹ ಅಮಾನವೀಯ ಆಘಾತಕಾರಿ ಘಟನೆ ನಡೆದಿರುವುದು ಉತ್ತರ ಪ್ರದೇಶ ರಾಜ್ಯದ ಬಾರಬಂಕಿಯಲ್ಲಿ.
35 ವರ್ಷದ ಚಂದ್ರ ಪ್ರಕಾಶ್ ಮಿಶ್ರಾ ಎಂಬುವವರೇ ಪತ್ನಿಯಿಂದಲೇ ಹತ್ಯೆಯಾದ ನತದೃಷ್ಟ. ಇವರು ತಮ್ಮ ಸೋದರಿಗೆ ಮದುವೆಯಲ್ಲಿ ಚಿನ್ನದ ಚೈನು ಉಂಗುರ ಹಾಗೂ ಎಲ್‌ಸಿಡಿ ಟೀವಿಯನ್ನು ಉಡುಗೊರೆಯಾಗಿ ನೀಡಬೇಕು ಎಂದು ಯೋಚನೆ ಮಾಡಿದ್ದರು. ಆದರ ಗಂಡನ ಈ ತೀರ್ಮಾನ ಹೆಂಡತಿ ಶಮಾಗೆ ಸರಿ ಎನಿಸಿಲ್ಲ. ಅಲ್ಲದೇ ಗಂಡನ ಯೋಚನೆಯಿಂದಲೇ ಕ್ರೋಧಗೊಂಡಿದ್ದ ಆಕೆ ಗಂಡನ ತಲೆಗೆ ಇಟ್ಟಿಗೆಯಿಂದ ಹೊಡೆದು ಕೊಲೆ ಮಾಡಿದ್ದಾಳೆ.
ಸಿಂಧನೂರು: ಗಂಡ ಇದ್ರೂ ಮತ್ತೊಬ್ಬನ ಜತೆ ಅನೈತಿಕ ಸಂಬಂಧ, ಕೊಲೆಗೈದು ಪೊಲೀಸ್ ಠಾಣೆಗೆ ಪತಿ ಶರಣು
ಕೆಲ ಮೂಲಗಳ ಪ್ರಕಾರ ಕೌಟುಂಬಿಕ ಕಲಹದ ಹಿನ್ನೆಲೆಯಲ್ಲಿ ಚಂದ್ರ ಪ್ರಕಾಶ್ ಮಿಶ್ರಾ ಪತ್ನಿ ಶಮಾಳಿಂದ ದೂರವಾಗಿ ಬೇರೆಯೇ ವಾಸ ಮಾಡ್ತಿದ್ದ. ಈ ಮಧ್ಯೆ ಆತ ತನ್ನ ಸೋದರಿಯ ಮದುವೆಗೆ ಅದ್ದೂರಿ ಗಿಫ್ಟ್ ನೀಡುತ್ತಾನೆ ಎಂಬ ವಿಚಾರ ಆತನ ಪತ್ನಿಗೆ ತಿಳಿದಿದೆ. ಇದರಿಂದ ಕ್ರೋಧಗೊಂಡ ಆಕೆ ಗಂಡನಿಗೆ ಬುದ್ಧಿ ಕಲಿಸಬೇಕು ಎಂದು ತನ್ನ ಸೋದರರು ಹಾಗೂ ಚಿಕ್ಕಪ್ಪ ದೊಡ್ಡಪ್ಪನ ಮಕ್ಕಳಿಗೆ ಕರೆ ಮಾಡಿ ಕರೆಸಿಕೊಂಡಿದ್ದಾಳೆ.
ನಂತರ ಜಗಳ ಶುರು ಮಾಡಿದ್ದು, ಒಂದು ಗಂಟೆಕಾಲ ವಾಗ್ವಾದ ನಡೆದು ಚಂದ್ರ ಪ್ರಕಾಶ್ ಕೊಲೆಯಲ್ಲಿ ಅಂತ್ಯವಾಗಿದೆ. ಇಟ್ಟಿಗೆಯಿಂದ ತಲೆಗೆ ಹೊಡೆದಿದ್ದರಿಂದ ಚಂದ್ರ ಪ್ರಕಾಶ್ ಗಂಭೀರವಾಗಿ ಗಾಯಗೊಂಡಿದ್ದಾರೆ. ಕೂಡಲೇ ಅವರನ್ನು ಆಸ್ಪತ್ರೆಗೆ ಕರೆದೊಯ್ಯಲಾಯಿತಾದರೂ ಚಿಕಿತ್ಸೆ ವೇಳೆ ಅವರು ಸಾವನ್ನಪ್ಪಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಪತ್ನಿ ಶಮಾ ಸೇರಿದಂತೆ ಐವರನ್ನು ಪೊಲೀಸರು ಬಂಧಿಸಿದ್ದಾರೆ. ಒಟ್ಟು 8 ಜನರ ವಿರುದ್ಧ ಪ್ರಕರಣ ದಾಖಲಾಗಿದೆ.
ಪೊಲೀಸರ ಮೇಲೆಯೇ ಲಾಂಗ್ ಬೀಸಿ ತಪ್ಪಿಸಿಕೊಳ್ಳಲೆತ್ನಿಸಿದ ಶಿವಾಜಿನಗರದ ರೌಡಿಶೀಟರ್