ದಿನ ಬೆಳಗಾದರೆ ಅಶ್ಲೀಲ ವಿಡಿಯೋ ನೋಡುವುದೆ ಪತಿ ಡ್ಯೂಟಿ. ಇಷ್ಟಕ್ಕೆ ಸಾಲದು ಎಂಬಂತೆ ಪತ್ನಿಯನ್ನೂ ಪೋರ್ನ್ ವಿಡಿಯೋ ನೋಡುವಂತೆ ಒತ್ತಾಯ, ಜೊತೆ ಪೋರ್ನ್ ಸ್ಟಾರ್ ಡ್ರೆಸ್ ರೀತಿಯಲ್ಲೇ ಉಡುಗೆ ಧರಿಸುವಂತೆ, ನೀಲಿ ಚಿತ್ರದಲ್ಲಿನ ಭಂಗಿ, ಅದೇ ರೀತಿ ಸಹಕರಿಸುವಂತೆ ಪತ್ನಿಗೆ ಕಿರುಕುಳ ನೀಡಿದ್ದಾರೆ. ಪತಿಯ ಕಿರುಕುಳಕ್ಕೆ ಬೇಸತ್ತ ಪತ್ನಿ ದೂರು ದಾಖಲಿಸಿದ್ದಾಳೆ. 

ನವದೆಹಲಿ(ಜು.05) ಪತಿ ಪೋನ್ ವಿಡಿಯೋ ದಾಸನಾಗಿದ್ದ. ಪ್ರತಿ ದಿನ ಅಶ್ಲೀಲ ವಿಡಿಯೋ ನೋಡುವುದೇ ಈತನ ಖಯಾಲಿಯಾಗಿತ್ತು. ಕೊನೆಗೆ ಪತ್ನಿಯನ್ನೂ ಬ್ಲೂಫಿಲಂ ನೋಡುವಂತೆ ಒತ್ತಾಯಿಸಲು ಆರಂಭಿಸಿದ್ದಾನೆ. ನೀಲಿ ಚಿತ್ರದ ಭಂಗಿ, ನೀಲಿ ಚಿತ್ರದ ತಾರೆಯರು ಹಾಕುವ ಡ್ರೆಸ್ ಹಾಕಲು ಪತ್ನಿಗೆ ಕಿರುಕುಳು ನೀಡಲು ಆರಂಭಿಸಿದ್ದಾನೆ. ಕೆಲದಿನಗಳ ಕಾಲ ಸಹಿಸಿಕೊಂಡ ಪತ್ನಿ ಕೊನೆಗೆ ಸಹನೆಯ ಕಟ್ಟೆ ಒಡೆದಿದೆ. ಕೊನೆಗೆ ದೆಹಲಿ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿದ್ದಾಳೆ. ಇದೀಗ ಪ್ರಕರಣ ದಾಖಿಲಿಸಿಕೊಂಡ ಪೊಲೀಸರು ವಿಚಾರಣೆ ಆರಂಭಿಸಿದ್ದಾರೆ. ಪತ್ನಿಯ ಆರೋಪಕ್ಕೆ ಕೆಲ ಸಾಕ್ಷ್ಯಗಳು ಲಭ್ಯವಾಗಿದ್ದು, ಪತಿಯ ಬಂಧನಕ್ಕೆ ಪೊಲೀಸರು ಮುಂದಾಗಿದ್ದಾರೆ.

ದೆಹಲಿಯ 30 ವರ್ಷದ ವಿವಾಹಿತ ಮಹಿಳೆ ಇದೀಗ ನ್ಯಾ ಕೊಡಿಸಲು ಪೊಲೀಸರಿಗೆ ಮನವಿ ಮಾಡಿದ್ದಾಳೆ. 2020ರಲ್ಲಿ ಇವರ ಮದುವೆಯಾಗಿದೆ. ಬಳಿಕ ಒಂದಲ್ಲಾ ಒಂದು ಕಾರಣ ನೀಡಿ ಪತಿ ಕಿರುಕುಳ ನೀಡಿದ್ದಾನೆ ಎಂದು ಮಹಿಳೆ ದೂರಿನಲ್ಲಿ ಉಲ್ಲೇಖಿಸಿದ್ದಾಳೆ. ಕಳೆದ ಒಂದು ವರ್ಷದಿಂದ ಪತಿ ವಿಪರೀತವಾಗಿ ಪೊರ್ನ್ ವಿಡಿಯೋ ಚಟಕ್ಕೆ ಬಿದ್ದಿದ್ದಾರೆ. ಮೊಬೈಲ್, ಲ್ಯಾಪ್‌ಟಾಪ್ , ಹಾರ್ಡ್ ಡಿಸ್ಕ್‌ಗಳಲ್ಲಿ ಪೋರ್ನ್ ವಿಡಿಯೋ ತುಂಬಿಟ್ಟಿದ್ದಾರೆ. ಅಶ್ಲೀಲ ಚಿತ್ರ ವೀಕ್ಷಿಸುವುದು ಮಾತ್ರವಲ್ಲ, ನನ್ನನ್ನು ಪೋರ್ನ್ ವಿಡಿಯೋ ನೋಡುವಂತೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ಹೇಳಿದ್ದಾರೆ.

ಪೋರ್ನ್​ ವಿಡಿಯೋ ಹೆಚ್ಚು ನೋಡಿದ್ರೆ ಏನಾಗುತ್ತೆ? ಸದ್ಗುರು ಹೇಳ್ತಾರೆ ಕೇಳಿ

ಪೋರ್ನ್ ವಿಡಿಯೋ ನೋಡಿ ಅದೇ ರೀತಿ ಸಹಕರಿಸಲು ಕಿರುಕುಳು ನೀಡುತ್ತಿದ್ದಾರೆ. ನೀಲಿಚಿತ್ರದಲ್ಲಿರುವ ಭಂಗಿಯಲ್ಲೇ ಲೈಂಗಿಕತೆಗೆ ಸಹಕರಿಸಲು ಪತಿ ಒತ್ತಾಯಿಸುತ್ತಿದ್ದಾರೆ. ಪೋರ್ನ್ ತಾರೆಯಂತೆ ಡ್ರೆಸ್ ಹಾಕುವಂತೆ ಸೂಚಿಸಿದ್ದಾರೆ. ಒಂದೆಡೆ ಪತಿಯಿಂದ ಮಾನಸಿಕ ಕಿರುಕುಳವಾದರೆ, ಪತಿಯ ಕುಟುಂಬಸ್ಥರಿಂದಲೂ ಕಿರುಕುಳ ಅನುಭವಿಸುತ್ತಿದ್ದೇನೆ ಎಂದು ದೂರಿನಲ್ಲಿ ಹೇಳಿದ್ದಾರೆ.

ಪತಿ ಕುಟುಂಬಸ್ಥರು ವರದಕ್ಷಿಣೆ ತರುವಂತೆ ಪೀಡಿಸುತ್ತಿದ್ದಾರೆ. ಮಾನಿಸಿಕವಾಗಿ ದೈಹಿಕವಾಗಿ ಹಿಂಸೆ ನೀಡುತ್ತಿದ್ದಾರೆ. ಪತಿಯಿಂದಲೂ, ಅವರ ಕುಟುಂಬಸ್ಥರಿಂದಲೂ ನೆಮ್ಮದಿ ಇಲ್ಲದಾಗಿದೆ ಎಂದು ದೂರಿನಲ್ಲಿ ಹೇಳಿದ್ದಾರೆ. ಸೆಕ್ಷನ್ 498 A, 406, 377 ಹಾಗೂ 34ರ ಅಡಿಯಲ್ಲಿ ಪ್ರಕರಣ ದಾಖಲಿಸಲಾಗಿದೆ.

ಚೈಲ್ಡ್ ಪೋರ್ನೋಗ್ರಫಿ ವೆಬ್‌ಸೈಟ್ ದಂಧೆ, ನಿಮಾನ್ಸ್‌ನಲ್ಲಿ ಕೆಲಸ ಮಾಡಿದ್ದ ವೈದ್ಯನಿಗೆ 6 ವರ್ಷ ಶಿಕ್ಷೆ ನೀಡಿದ ಇಂಗ್ಲೆಂಡ್‌

ಬಸ್‌ನಲ್ಲಿ ಮಹಿಳೆ ಜನತೆ ಅನುಚಿತ ವರ್ತನೆ: ವ್ಯಕ್ತಿ ಬಂಧನ
ಬಸ್ಸಿನಲ್ಲಿ ಪ್ರಯಾಣಿಸುತ್ತಿದ್ದ ವಿವಾಹಿತ ಮಹಿಳೆಯೊಬ್ಬರೊಂದಿಗೆ ಸಹ ಪ್ರಯಾಣಿಕನೊಬ್ಬ ಅಶ್ಲೀಲವಾಗಿ ವರ್ತಿಸಿದ ಘಟನೆಗೆ ಸಂಬಂಧಿಸಿ ಕರ್ನಾಟಕದ ಪುತ್ತೂರಿನ ಮಹಿಳಾ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾದ ಹಿನ್ನೆಲೆ ಆರೋಪಿಯನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿತ್ತು. ಇದೀಗ ನ್ಯಾಯಾಲಯ ಆರೋಪಿಯನ್ನು ಜಾಮೀನಿನ ಮೇಲೆ ಬಿಡುಗಡೆಗೊಳಿಸಿದೆ. ಕೆಮ್ಮಿಂಜೆ ಗ್ರಾಮದ ಸುಬ್ರಹ್ಮಣ್ಯ ಭಟ್‌ ಎಂಬಾತನೇ ಬಂಧಿತನಾಗಿದ್ದ ಆರೋಪಿ. ಬಂಟ್ವಾಳ ತಾಲೂಕಿನ ಕರೋಪಾಡಿ ಗ್ರಾಮದ ಕನ್ಯಾನ ಕುಕ್ಕಾಜೆ ನಿವಾಸಿ ದೂರು ನೀಡಿರುವ ಮಹಿಳೆ. ಉಪ್ಪಳದಿಂದ ಪುತ್ತೂರು ಕಡೆಗೆ ಬರುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಪುತ್ತೂರು ನಗರದ ಹೊರವಲಯದ ಕಬಕ ಗ್ರಾಮದ ಮುರ ಎಂಬಲ್ಲಿ ಈತ ಅಶ್ಲೀಲ ವರ್ತನೆ ತೋರಿ, ಕಿರುಕುಳ ನೀಡಿದ್ದ ಎನ್ನಲಾಗಿದೆ.

ತಾನು ಗುರುವಾರ ತನ್ನ ತಾಯಿಯೊಂದಿಗೆ ಉಪ್ಪಳದಿಂದ ಪುತ್ತೂರಿಗೆ ತೆರಳುತ್ತಿದ್ದ ಕೆಎಸ್ಸಾರ್ಟಿಸಿ ಬಸ್ಸಿನಲ್ಲಿ ಪುತ್ತೂರಿಗೆ ಪ್ರಯಾಣಿಸುತ್ತಿದ್ದ ವೇಳೆ ಹಿಂದಿನ ಸೀಟಿನಲ್ಲಿ ಕುಳಿತಿದ್ದ ಆರೋಪಿ ಅಶ್ಲೀಲವಾಗಿ ವರ್ತಿಸಿದ್ದಾನೆ. ಅದನ್ನು ಪ್ರತಿರೋಧಿಸಿ ಪ್ರಶ್ನಿಸುತ್ತಿದ್ದಂತೆಯೇ ಆತ ಬೊಳುವಾರಿನಲ್ಲಿ ಬಸ್ಸಿನಿಂದ ಇಳಿದು ಹೋಗಿದ್ದಾನೆ ಎಂದು ದೂರುದಾರೆ ಆರೋಪಿಸಿದ್ದಾರೆ.