Bengaluru: ಪತಿ ಜೈಲು ಸೇರಿದ ಬಳಿಕ ತನ್ನ ಪುಟ್ಟ ಮಕ್ಕಳನ್ನೇ ಅಸ್ತ್ರವಾಗಿಸಿ ಗಾಂಜಾ ದಂಧೆ ಮುಂದುವರೆಸಿದ ಪತ್ನಿ!
ಬೆಂಗಳೂರಿನಲ್ಲಿ ಓರ್ವ ಮಹಿಳೆ ಸಹಿತ 13 ಲಕ್ಷ ಮೌಲ್ಯದ 26 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಈಕೆ ತನ್ನ ಗಂಡ ಜೈಲು ಸೇರಿದ ಬಳಿಕ ತನ್ನ 1,3,7 ವರ್ಷದ ಮೂವರು ಮಕ್ಕಳನ್ನು ಬಳಸಿ ಗಾಂಜಾ ದಂಧೆ ನಡೆಸುತ್ತಿದ್ದಳು.
ಬೆಂಗಳೂರು (ಮಾ.28): ಬೆಂಗಳೂರಿನಲ್ಲಿ ಓರ್ವ ಮಹಿಳೆ ಸಹಿತ 13 ಲಕ್ಷ ಮೌಲ್ಯದ 26 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದೆ. ಮಹಿಳೆಯನ್ನು ನಗ್ಮಾ (27) ಎಂದು ಗುರುತಿಲಾಗಿದ್ದು, ಕಲಾಸಿಪಾಳ್ಯ ಪೊಲೀಸರು ಪ್ರಕರಣ ಭೇದಿಸುವಲ್ಲಿ ಯಶಸ್ವಿಯಾಗಿದ್ದಾರೆ. ಗಾಂಜಾ ಮಾರಾಟ ಪ್ರಕರಣದಲ್ಲಿ ಕಳೆದ ತಿಂಗಳು ಈಕೆಯ ಗಂಡನನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದರು. ಜೆಜೆ ನಗರ ಪೊಲೀಸರಿಂದ ಪತಿ ಮುಜ್ಜು ಅರೆಸ್ಟ್ ಆಗಿದ್ದನು. ಗಂಡ ಜೈಲು ಸೇರಿದ ಬಳಿಕ ಈ ಕಸುಬನ್ನು ಪತ್ನಿ ನಗ್ಮಾ ಮುಂದುವರೆಸಿದ್ದಳು. ಮಾತ್ರವಲ್ಲ ಈ ದಂಧೆಗೆ ತನ್ನ ಮೂವರು ಮಕ್ಕಳನ್ನೇ ಈ ಮಹಿಳೆ ಬಳಸಿಕೊಂಡಿದ್ದಳು.
ಗಾಂಜಾ ತರಲು ತನ್ನ 1,3,7 ವರ್ಷದ ಮೂವರು ಮಕ್ಕಳೇ ಈಕೆಗೆ ಅಸ್ತ್ರವಾಗಿದ್ದವು. ಮಕ್ಕಳು,ತಾಯಿ ಜೊತೆ ಹೋಗ್ತಿದ್ಳು ಮೂರು ಬ್ಯಾಗ್ ನಲ್ಲಿ ಗಾಂಜಾ ತರ್ತಿದ್ಳು. ಆದರೆ ಈಗ ಗ್ರಹಚಾರ ಕೆಟ್ಟು ಕಲಾಸಿಪಾಳ್ಯ ಪೊಲೀಸರ ಕೈಗೆ ಸಿಕ್ಕಿಬಿದ್ದಿದ್ದಾಳೆ. ಸದ್ಯ 26 ಕೆಜಿ ಗಾಂಜಾ ಜೊತೆಗೆ ಮಹಿಳೆಯನ್ನು ಕಲಾಸಿಪಾಳ್ಯ ಪೊಲೀಸರು ಜೈಲಿಗಟ್ಟಿದ್ದಾರೆ. ಹೀಗಾಗಿ ಸದ್ಯ ಗಾಂಜಾ ದಂದೆ ಮಾಡಿ ಪರಪ್ಪನ ಅಗ್ರಹಾರದಲ್ಲಿ ಪತಿ, ಪತ್ನಿ ಇಬ್ಬರೂ ಕಂಬಿ ಎಣಿಸುತ್ತಿದ್ದಾರೆ.
ಪತಿ ಮಜ್ಜು ವಿಶಾಖಪಟ್ಟದಿಂದ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡ್ತಿದ್ದ ಪತಿ ಜೈಲು ಸೇರಿದ ಬಳಿಕ ಪತ್ನಿ ನಗ್ಮಾ ಕೂಡ ವಿಶಾಖಪಟ್ಟಣದಿಂದ ಗಾಂಜಾ ತಂದು ಬೆಂಗಳೂರಿನಲ್ಲಿ ಮಾರಾಟಕ್ಕೆ ಇಳಿದಿದ್ದಳು.
ಗಾಂಜಾ ವ್ಯವಹಾರಕ್ಕೆ ಮಕ್ಕಳನ್ನು ಹೇಗೆ ಬಳಸಿಕೊಳ್ತಿದ್ಳು?
ವಿಶಾಖಪಟ್ಟಣದಿಂದ ಗಾಂಜಾ ತರುತ್ತಿದ್ದ ಆರೋಪಿ ನಗ್ಮಾ ತನ್ನ ತಾಯಿಯ ಜೊತೆಗೆ ಮಕ್ಕಳನ್ನು ವಿಶಾಖಪಟ್ಟಣಂಗೆ ಕರೆದುಕೊಂಡು ಹೋಗ್ತಿದ್ಳು. ಒಂದು ದಿನ ಅಲ್ಲೇ ರೂಂ ಮಾಡಿಕೊಂಡು ಇರುತ್ತಿದ್ದಳು. ಮರುದಿನ ಚೀಲದಲ್ಲಿ ಗಾಂಜಾ ಸಮೇತ ಬೆಂಗಳೂರಿಗೆ ಬರುತ್ತಿದ್ದಳು. ಮಕ್ಕಳು, ಬ್ಯಾಗ್ ಇದ್ದರೆ ಯಾರು ಚೆಕ್ ಮಾಡೋದಿಲ್ಲ ಅನ್ನೋದು ಆಕೆಯ ಯೋಚನೆ ಆಗಿತ್ತು. ಕುಟುಂಬಸ್ಥರು ಹೋಗ್ತಿದ್ದಾರೆ ಅಂತಾ ಪೊಲೀಸರು ಸುಮ್ಮನಾಗುತ್ತಿದ್ದರು. ಇದನ್ನೇ ಬಂಡವಾಳ ಮಾಡಿಕೊಂಡ ನಗ್ಮಾ ಬಸ್ಸಿನಲ್ಲೇ ಗಾಂಜಾವನ್ನು ಬೆಂಗಳೂರಿಗೆ ತರುತ್ತಿದ್ದಳು. ಬೆಂಗಳೂರಿಗೆ ಗಾಂಜಾ ತಂದು ಪರಿಚಯಸ್ಥರಿಗೆ ಮಾರಾಟ ಮಾಡುತ್ತಿದ್ದಳು.
ಇದೇ ರೀತಿ ವಿಶಾಖಪಟ್ಟಣದಿಂದ ಮಾರ್ಚ್ 20 ರಂದು ಗಾಂಜಾ ತಂದಿದ್ದ ನಗ್ಮಾ ಕಲಾಸಿಪಾಳ್ಯ ಕಾರ್ನೇಷಲ್ ಸರ್ಕಲ್ ನಲ್ಲಿ ನಿಂತಿದ್ದಾಗ ಬ್ಯಾಗ್ ಜೊತೆಗೆ ಸಿಕ್ಕಿಬಿದ್ದಿದ್ದಾಳೆ. ಬಂಧಿತಳಿಂದ 13 ಲಕ್ಷ ಮೌಲ್ಯದ 26 ಕೆಜಿ ಗಾಂಜಾ ವಶಕ್ಕೆ ಪಡೆಯಲಾಗಿದ್ದು, ಕಲಾಸಿಪಾಳ್ಯ ಪೊಲೀಸ್ ಠಾಣೆಯಲ್ಲಿ ಎಫ್ಐಆರ್ ದಾಖಲಾಗಿದೆ.
PSI Scam: ಹೆಂಡತಿನ ತವರಿಗೆ ಕಳುಹಿಸಿ ತಲೆಮರೆಸಿಕೊಂಡು ಗರ್ಲ್ ಫ್ರೆಂಡ್ ಜತೆ ಸುತ್ತುತ್ತಿದ್ದ
ಮಾದಕ ವಸ್ತು ಮಾರಾಟ ಯತ್ನ, ಬೆಂಗಳೂರಿನಲ್ಲಿ ನೈಜಿರಿಯಾ ಪ್ರಜೆ ಬಂಧನ
ಮಾದಕ ವಸ್ತು ಮಾರಾಟ ಮಾಡಲು ಬಂದಿದ್ದ ನೈಜಿರಿಯಾ ಪ್ರಜೆಯನ್ನು ಜಯನಗರ ಪೊಲೀಸರು ಕಾರ್ಯಾಚರಣೆ ನಡೆಸಿ ಬಂಧಿಸಿದ್ದಾರೆ. ನೈಜಿರಿಯಾ ಪ್ರಜೆ ಇನಾಜಿ ಎಮುಲ್ಲಾ ಲೂಟಾಚ್ಕೂ ಬಂಧಿತ ಆರೋಪಿಯಾಗಿದ್ದಾನೆ. ಜಯನಗರದ ಧನ್ವಂತ್ರಿ ಪಾರ್ಕ್ ಬಳಿ ಡಿಯೋ ಬೈಕ್ ನಲ್ಲಿ ಎಂಡಿಎಂಎ ಡ್ರಗ್ಸ್ ಮಾರಾಟಕ್ಕೆ ಈತ ಯತ್ನಿಸುತ್ತಿದ್ದ. ಖಚಿತ ಮಾಹಿತಿ ಮೇರೆಗೆ ಆರೋಪಿ ವಿದೇಶಿ ಪ್ರಜೆಯ ಬಂಧನವಾಗಿದೆ.
ಬೆಂಗಳೂರಿನಲ್ಲಿ ಸಾರ್ವಜನಿಕರ ಎದುರೇ ರೌಡಿಶೀಟರ್ ಮೇಲೆ ಅಟ್ಯಾಕ್, ಸಿಸಿಟಿವಿಯಲ್ಲಿ ದೃಶ್ಯ ಸೆರೆ!
ಜಯನಗರ ಪಿಎಸ್ ಐ ರೋಹಿಣಿ ರೆಡ್ಡಿ ನೇತೃತ್ವದಲ್ಲಿ ಆರೋಪಿಯನ್ನು ಬಂಧಿಸಲಾಗಿದೆ. ಈತ ಪಾಸ್ ಪೋರ್ಟ್ ವೀಸಾ ಅವಧಿ ಮುಗಿದ್ರೂ ಬೆಂಗಳೂರಿನಲ್ಲೇ ನೆಲೆಸಿದ್ದಾನೆ ಎಂದು ತನಿಖೆಯಿಂದ ತಿಳಿದುಬಂದಿದೆ. ಆರೋಪಿಯಿಂದ 300 ಗ್ರಾಂ ಎಂಡಿಎಂಎ ವಶಕ್ಕೆ ಪಡೆಯಲಾಗಿದೆ. ಜಯನಗರ ಪೊಲೀಸ್ ಠಾಣೆಯಲ್ಲಿ ಎನ್ ಡಿಪಿಎಸ್ ಕಾಯ್ದೆ ಅಡಿ ಪ್ರಕರಣ ದಾಖಲಾಗಿದೆ.