ಹುಬ್ಬಳ್ಳಿ(ಜ.29):  ಅನುಮತಿ ಇಲ್ಲದೆ ಪತ್ನಿಯ ಇ-ಮೇಲ್‌ ಪಾಸ್ವರ್ಡ್‌ ಬದಲಿಸಿದ್ದೂ ಅಲ್ಲದೆ ಪತ್ನಿ ಮತ್ತೆ ಲಾಗಿನ್‌ ಆಗಲು ಸಾಧ್ಯವಾಗದಂತೆ ಮಾಡಿದ ಪತಿರಾಯನ ಮೇಲೆ ಇಲ್ಲಿನ ಸೈಬರ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. 

ರಾಜಬೀ ಮನಿಯಾರ್‌ ಎಂಬಾಕೆ ತನ್ನ ಪತಿ ದಾನಿಶ್‌ ಮನಿಯಾರ್‌ ವಿರುದ್ಧ ದೂರು ದಾಖಲಿಸಿದ್ದಾರೆ. ಪತಿ ದಾನಿಶ್‌ ತನ್ನ ಅನುಮತಿ ಇಲ್ಲದೆ ಇ ಮೇಲ್‌ ಐಡಿಗೆ ನೀಡಿದ್ದ ಗೌಪ್ಯ ಸಂಖ್ಯೆಯನ್ನು ತನ್ನ ಅನುಕೂಲಕ್ಕೆ ತಕ್ಕಂತೆ ಬದಲಾವಣೆ ಮಾಡಿದ್ದಾನೆ. ಅಲ್ಲದೆ ಇ-ಮೇಲ್‌ ರಿಕವರಿಗೆ ತನ್ನ ಮೊಬೈಲ್‌ ಸಂಖ್ಯೆ ಹಾಗೂ ಇ ಮೇಲ್‌ ನೀಡಿದ್ದಾನೆ. 

ಸಿನಿಮಿಯ ಸ್ಟೈಲ್‌: ಗುಂಡು ಹಾರಿಸಿ ದರೋಡೆಗೆ ಯತ್ನ

ಈ ಮೂಲಕ ಪುನಃ ನಾನು ಇ ಮೇಲ್‌ ಲಾಗಿನ್‌ ಆಗದಂತೆ ಮಾಡಿದ್ದಾನೆ ಎಂದು ರಾಜಬೀ ದೂರು ದಾಖಲಿಸಿದ್ದಾರೆ.