Asianet Suvarna News Asianet Suvarna News

shocking case of suicide: ತನ್ನಿಷ್ಟದಂತೆ ರವಿಕೆ ಹೊಲಿದಿಲ್ಲವೆಂದು ಪತಿಯೊಂದಿಗೆ ಕಿತ್ತಾಡಿ ಪತ್ನಿ ಆತ್ಮಹತ್ಯೆ

ಪತಿಯೊಂದಿಗೆ ಜಗಳವಾಡಿ ಸಾವಿಗೆ ಶರಣಾದ ಪತ್ನಿ
ತನ್ನಿಷ್ಟದಂತೆ ರವಿಕೆ ಹೊಲಿದಿಲ್ಲ ಎಂದು ಕಿತ್ತಾಟ
ಹೈದರಾಬಾದ್‌ನ ತಿರುಮಲ ನಗರದಲ್ಲಿ ಘಟನೆ

Wife commits suicide after quarrel with husband over stitching of blouse akb
Author
Bangalore, First Published Dec 6, 2021, 2:22 PM IST
  • Facebook
  • Twitter
  • Whatsapp

ಹೈದರಾಬಾದ್‌(ಡಿ.6): ಕ್ಷುಲ್ಲಕ ಕಾರಣಕ್ಕೆ  36 ವರ್ಷದ ಮಹಿಳೆಯೊಬ್ಬಳು ತನ್ನ ಪತಿಯೊಂದಿಗೆ ಜಗಳವಾಡಿ ನಂತರ ಆತ್ಮಹತ್ಯೆ ಮಾಡಿಕೊಂಡ ಆಘಾತಕಾರಿ ಘಟನೆ ಹೈದರಾಬಾದ್‌ನಲ್ಲಿ ನಡೆದಿದೆ.  ಪತ್ನಿ ತನ್ನ ಇಚ್ಛೆಯಂತೆ ರವಿಕೆಯನ್ನು ಹೊಲಿದಿಲ್ಲ ಎಂಬ ಕಾರಣಕ್ಕೆ ಗಂಡನ ಮೇಲೆ ಕೋಪಗೊಂಡಿದ್ದ ಮಹಿಳೆ ನಂತರ ಸಾವಿಗೆ ಶರಣಾಗಿದ್ದಾಳೆ ಎಂದು ಪೊಲೀಸರು ತಿಳಿಸಿದ್ದಾರೆ.

ಶನಿವಾರ ಈ ಘಟನೆ ನಡೆದಿದ್ದು,ಆತ್ಮಹತ್ಯೆಗೆ ಶರಣಾದ ಮಹಿಳೆಯನ್ನು ವಿಜಯಲಕ್ಷ್ಮಿ(Vijayalakshmi) ಎಂದು ಗುರುತಿಸಲಾಗಿದೆ. ಹೈದರಾಬಾದ್‌ನ ತಿರುಮಲ ನಗರ (Thirumala Nagar) ನಿವಾಸಿಯಾಗಿರುವ ಈಕೆ ಗಂಡ ಹಾಗೂ ಇಬ್ಬರು ಮಕ್ಕಳೊಂದಿಗೆ ನಗರದಲ್ಲಿ ವಾಸ ಮಾಡುತ್ತಿದ್ದರು. ಈಕೆಯ ಪತಿ ಟೈಲರಿಂಗ್‌  ವೃತ್ತಿಯನ್ನು ಮಾಡುತ್ತಿದ್ದು, ಸೀರೆ ಹಾಗೂ  ರವಿಕೆಗಳನ್ನು ಹೊಲಿದು ಮಾರಾಟ ಮಾಡಿ ಅದರಲ್ಲೇ ಜೀವನ ನಿರ್ವಹಣೆ ಮಾಡುತ್ತಿದ್ದರು.

ಪತಿ ಜೊತೆ ಕಲಹ : 5 ಹೆಣ್ಣು ಮಕ್ಕಳೊಂದಿಗೆ ರೈಲಿಗೆ ತಲೆಕೊಟ್ಟ ತಾಯಿ

ಪತ್ನಿ ವಿಜಯಲಕ್ಷ್ಮಿಯ  ರವಿಕೆಯೊಂದನ್ನು ಗಂಡ ಹೊಲಿದಿದ್ದು, ಇದು ವಿಜಯಲಕ್ಷ್ಮಿಗೆ ಇಷ್ಟವಾಗಿಲ್ಲ. ಹೀಗಾಗಿ ಆಕೆ ಅದನ್ನು ಮತ್ತೆ ಹೊಲಿಗೆ ಬಿಚ್ಚಿ ಮರು ಹೊಲಿಗೆ ಹಾಕುವಂತೆ ಮನವಿ ಮಾಡಿದ್ದಾಳೆ. ಆದರೆ ಟೈಲರ್‌ ಗಂಡ ಈಕೆಯ ಮನವಿಯನ್ನು ತಿರಸ್ಕರಿಸಿದ್ದು, ಮತ್ತೆ ಪತ್ನಿಯ ಇಷ್ಟದಂತೆ ಸ್ಟಿಚ್‌ ಹಾಕುವ ಬದಲು ಹಾಕಿದ ಸ್ಟಿಚ್‌ಗಳನ್ನೆಲ್ಲ ಬಿಚ್ಚಿ ಆಕೆಯತ್ತ ಬಿಸಾಕಿದ್ದಾನೆ. ಇದರಿಂದ ತೀವ್ರವಾಗಿ ನೊಂದ ಆಕೆ ಬೆಡ್‌ರೂಮ್‌ಗೆ ತೆರಳಿ  ರೂಮ್‌ಗೆ ಒಳಗಿನಿಂದ ಚಿಲಕ ಹಾಕಿಕೊಂಡು ನೇಣಿಗೆ ಶರಣಾಗಿದ್ದಾರೆ. 

ವಿಜಯಲಕ್ಷ್ಮಿಯ ಮಕ್ಕಳು ಈ ವೇಳೆ ಶಾಲೆಗೆ ತೆರಳಿದ್ದು, ಮರಳಿ ಬಂದು ಅಮ್ಮನಿಗಾಗಿ ಹುಡುಕಾಟ ನಡೆಸಿದಾಗ ಆಕೆ ಎಲ್ಲೂ ಕಾಣಿಸಿಲ್ಲ. ನಂತರ ಬೆಡ್‌ರೂಮ್‌ ಲಾಕ್‌ ಆಗಿದ್ದನ್ನು ಕಂಡ ಮಕ್ಕಳು ಹಲವು ಬಾರಿ ಬಾಗಿಲನ್ನು ಬೊಟ್ಟಿದ್ದಾರೆ. ಆದರೆ ಒಳಗಿನಿಂದ ಯಾವುದೇ ಪ್ರತಿಕ್ರಿಯೆ ಬಂದಿಲ್ಲ.  ಬಳಿಕ ತಂದೆಗೆ ಮಕ್ಕಳು ಕರೆ ಮಾಡಿದ್ದು, ಕೂಡಲೇ ಸ್ಥಳಕ್ಕೆ ಆಗಮಿಸಿದ ಮಹಿಳೆಯ ಪತಿ ಶ್ರೀನಿವಾಸ್‌ ಹಲವು ಬಾರಿ ಬಾಗಿಲನ್ನು ಬಡಿದು ತೆಗೆಯದಿದ್ದಾಗ ಬಾಗಿಲು ಮುರಿದು ಒಳ ಹೋಗಿದ್ದಾರೆ. ಈ ವೇಳೆ ಪತ್ನಿ ನೇಣಿಗೆ ಶರಣಾಗಿರುವುದು ಕಂಡು ಬಂದಿದೆ. ಘಟನೆಗೆ ಸಂಬಂಧಿಸಿದಂತೆ ಅಸಹಜ ಸಾವು ಪ್ರಕರಣ ದಾಖಲಾಗಿದ್ದು, ಘಟನಾ ಸ್ಥಳದಲ್ಲಿ ಯಾವುದೇ ಡೆತ್‌ನೋಟ್‌ ಸಿಕ್ಕಿಲ್ಲ. 

ಬೀದಿ ಬದಿ ಅಂಗಡಿಯಿಂದ ಗಂಡ ಪಾನಿಪುರಿ ತಂದ, ಪತ್ನಿ ಸುಸೈಡ್

ಗುಜರಾತ್‌ನ ಅಹ್ಮದಾಬಾದ್‌ನಲ್ಲೂ ಶನಿವಾರ ಮತ್ತೊಂದು ಆಘಾತಕಾರಿ ಆತ್ಮಹತ್ಯೆ ಪ್ರಕರಣ ನಡೆದಿದೆ. ವಾಣಿಜ್ಯ ಮಳಿಗೆಯೊಂದರ 10ನೇ ಮಹಡಿಯಿಂದ ಬಿದ್ದು ಯುವಕನೋರ್ವ ಸಾವಿಗೆ ಶರಣಾಗಿದ್ದಾನೆ. ಅಹ್ಮದಾಬಾದ್‌(Ahmedabad)ನ ಆನಂದ್‌ ನಗರದಲ್ಲಿ ಈ ಘಟನೆ ನಡೆದಿದೆ. ಮೃತ ಯುವಕನನ್ನು ಆಯುಷ್‌ ಸೋನಿ( Ayush Soni) ಎಂದು ಗುರುತಿಸಲಾಗಿದ್ದು, ಈತ  ಮೂರನೇ ವರ್ಷದ ಚಾರ್ಟೆಡ್‌ ಅಕೌಂಟೆನ್ಸಿ ಓದುತ್ತಿದ್ದ. ಆನಂದ್‌ನಗರ(Anandnagar)ದ ಚಾರ್ಟೆಡ್ ಅಕೌಂಟೆಂಟ್‌(CA)ಸಂಸ್ಥೆಯೊಂದರಲ್ಲಿ ಆತ ಇಂಟರ್ನ್‌ಶಿಪ್‌ ಮಾಡುತ್ತಿದ್ದ.  ನವರಂಗ್‌ಪುರದ ಮಲ್ಹರ್‌ ಫ್ಲಾಟ್ನಲ್ಲಿ ಈತ ವಾಸವಿದ್ದ ಶನಿವಾರ ಮುಂಜಾನೆ ಆಯುಷ್‌ ಸೋನಿ ಸಾವಿಗೆ ಶರಣಾಗಿದ್ದಾನೆ ಎಂದು ಪೊಲೀಸರು ತಿಳಿಸಿದ್ದಾರೆ.

ಇತ್ತೀಚಿನ ದಿನಗಳಲ್ಲಿ ಕ್ಷುಲ್ಲಕ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ವೃದ್ಧರು ಮಕ್ಕಳೆನ್ನದೆ ಎಲ್ಲಾ ವಯೋಮಾನದವರಲ್ಲೂ ಇತ್ತೀಚೆಗೆ ವ್ಯಾಪಕವಾಗಿ ಖಿನ್ನತೆ ಸಮಸ್ಯೆ ಕಾಡುತ್ತಿದೆ. ನಮ್ಮ ದೇಶದಲ್ಲಿ ಪ್ರತಿವರ್ಷ 1 ಲಕ್ಷದ 35 ಸಾವಿರ ಜನ ಆತ್ಮಹತ್ಯೆಗೆ ಶರಣಾಗುತ್ತಿದ್ದಾರೆ. 12 ರಿಂದ15 ಲಕ್ಷ ಜನ ಆತ್ಮಹತ್ಯೆಗೆ ಪ್ರಯತ್ನಿಸುತ್ತಾರೆ. ನಿರಾಶೆ, ಹತಾಶೆ, ದುಃಖ, ಸೋಲು, ನಿರುದ್ಯೋಗ, ದೈಹಿಕ ಮಾನಸಿಕ ಹಿಂಸೆಗೆ ಒಳಗಾಗುವುದು, ಅಪಮಾನ, ನಂಬಿದವರಿಂದಲೇ ಮೋಸಹೋಗುವುದು, ಹಣಕಾಸಿನ ಮುಗ್ಗಟ್ಟು, ಅನೇಕ ಪ್ರಕರಣಗಳಲ್ಲಿ ಆತ್ಮಹತ್ಯೆಗೆ ಕಾರಣಾಂಶಗಳಾದರೆ, ಕೋಪ, ರೋಷ, ದ್ವೇಷಗಳು, ಭಯ ಆತಂಕಗಳೂ ಆತ್ಮಹತ್ಯೆಗೆ ಪ್ರೇರಣೆ ನೀಡುತ್ತೇವೆ. ಸೆಲೆಬ್ರಿಟಿಗಳು ಆತ್ಮಹತ್ಯೆ ಮಾಡಿಕೊಂಡಾಗ ಪತ್ರಿಕೆ  ಟಿವಿಗಳಲ್ಲಿ ಅದಕ್ಕೆ ದೊರೆಯುವ ಪ್ರಚಾರ, ಅನೇಕರ ಮನಸ್ಸಿನಲ್ಲಿ ನೋವು ಅವಮಾನವಾದಾಗ ನಾವು ಆತ್ಮಹತ್ಯೆ ಮಾಡಿಕೊಳ್ಳಬೇಕೆಂಬ ಯೋಚನೆಯನ್ನು ಹುಟ್ಟುಹಾಕುತ್ತದೆ ಎನ್ನುತ್ತಾರೆ ಮನೋವೈದ್ಯರು. 

Follow Us:
Download App:
  • android
  • ios