Asianet Suvarna News Asianet Suvarna News

ಬೀದಿ ಬದಿ ಅಂಗಡಿಯಿಂದ ಗಂಡ ಪಾನಿಪುರಿ ತಂದ, ಪತ್ನಿ ಸುಸೈಡ್

* ಬೀದಿ ಬದಿ ಪಾನಿಪುರಿ ತಂದಿದ್ದಕ್ಕೆ ಗಂಡ-ಹೆಂಡತಿ ನಡುವೆ ಜಗಳ
* ವಿಷ ಸೇವಿಸಿ ಆತ್ಮಹತ್ಯೆಗೆ ಶರಣಾದ ಪತ್ನಿ
* ಗಂಡನಿಂದ ನಿತ್ಯ ಲಿರುಕುಳವಾಗುತ್ತಿತ್ತು ಎಂದು ಆರೋಪ

Upset with husband for buying Pani Puri for dinner woman ends her life Pune mah
Author
Bengaluru, First Published Sep 1, 2021, 4:02 PM IST
  • Facebook
  • Twitter
  • Whatsapp

ಪುಣೆ(ಸೆ. 01) ಪಾನಿಪುರಿ ಸಾಮಾನ್ಯವಾಗಿ ಎಲ್ಲರಿಗೂ ಇಷ್ಟ..  ಉಪ್ಪು-ಹುಳಿ-ಖಾರ ಮಿಶ್ರಿತವಾದ ಇದನ್ನು ತಿನ್ನೋದೆ ಒಂದು ಸವಿ.. ಹೆಣ್ಣು ಮಕ್ಕಳಿಗೂ ಇದು ಪಂಚ ಪ್ರಾಣ.. ಆದರೆ ಇಲ್ಲೊಬ್ಬಳು ಮಹಿಳೆ ಗಂಡ ಪಾನಿಪುರಿ ತಂದ ಎಂಬ ಕಾರಣಕ್ಕೆ ಸುಸೈಡ್ ಮಾಡಿಕೊಂಡಿದ್ದಾಳೆ.

ಪಾನಿಪುರಿ ವಿಚಾರದಲ್ಲಿ ಗಂಡ- ಹೆಂಡತಿ ನಡುವೆ ಉಂಟಾದ ಜಗಳ ಪತ್ನಿಯ ಆತ್ಮಹತ್ಯೆಯಲ್ಲಿ ಕೊನೆಯಾಗಿದೆ. ಪೂಣಾದ ಅಂಬೆಗಾಂವ್ ನಿವಾಸಿ ಗಹಿನಿನಾಥ್ ಸವವಡೆ ಅವರ ಪತ್ನಿ ಪ್ರತಿಕ್ಷಾ ಆತ್ಮಹತ್ಯೆಗೆ ಶರಣಾಗಿದ್ದಾರೆ. 

ಗಂಡ ಗಹಿನಿನಾಥ್ ಪತ್ನಿಗೆ ತಿಳಿಸದೆ ಬೀದಿ ಬದಿ ಪಾನಿಪುರಿಯನ್ನು ಮನಗೆ ತಂದಿದ್ದ.   ಈಗಾಗಲೇ ನಾನು ಅಡುಗೆ ಮಾಡಿರುವುದರಿಂದ ಬೀದಿ ಬದಿ ಪಾನಿಪುರಿ ತರುವ ಅವಶ್ಯಕತೆ ಏನಿತ್ತು ಎಂದು ಪ್ರತಿಕ್ಷಾ ಪ್ರಶ್ನೆ ಮಾಡಿದ್ದಾರೆ.

ವರ ದಕ್ಷಿಣೆಯಲ್ಲ..ವಧು ದಕ್ಷಿಣೆ..ಕಿರುಕುಳಕ್ಕೆ ಬೇಸತ್ತ ವ್ಯಕ್ತಿ ಆತ್ಮಹತ್ಯೆ

 ಇದೇ ವಿಚಾರದಲ್ಲಿ ಪತಿ-ಪತ್ನಿ ನಡುವೆ ಜಗಳವಾಗಿದೆ. ಇಬ್ಬರು ಊಟ ಮಾಡದೆ ಮಲಗಿದ್ದಾರೆ. ಮರುದಿನ ಬೆಳಗ್ಗೆ ಪತ್ನಿ ಪ್ರತಿಕ್ಷಾ ವಿಷ ಸೇವಿಸಿದ್ದಾಳೆ. ತಕ್ಷಣ ಆಕೆಯನ್ನು ಆಸ್ಪತ್ರೆಗೆ ದಾಖಲಿಸಿದರೂ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾಳೆ.

ಫೆಬ್ರವರಿ  1, 2019 ರಂದು ಜೋಡಿ ಮದುವೆಯಾಗಿದ್ದರು. ಇವರಿಗೆ ಗಂಡು ಮಗುವಿದೆ.  ಸೊಲ್ಲಾಪುರದಲ್ಲಿ ದಂಪತಿ ಮೊದಲು ವಾಸವಿದ್ದರು. ಪ್ರತೀಕ್ಷಾಗೆ ಕೆಲಸ ಮಾಡುವ ಆಸೆ ಇದ್ದುದರಿಂದ ಪುಣೆಗೆ ಶಿಫ್ಟ್ ಆಗಿದ್ದರು. ಪತ್ನಿ ಕೆಲಸಕ್ಕೆ ಹೋಗುವ ವಿಚಾರಕ್ಕೆ ಸಂಬಂಧಿಸಿ ಪ್ರತಿದಿನ ಗಲಾಟೆ  ನಡೆಯುತ್ತಿತ್ತು.

ಆತ್ಮಹತ್ಯೆ  ಮಾಡಿಕೊಂಡ ಮಹಿಳೆಯ ತಂದೆ ದೂರು ದಾಖಲಿಸಿದ್ದು, ಗಂಡ ಆಕೆಗೆ ನಿತ್ಯ ಕಿರುಕುಳ ನೀಡುತ್ತಿದ್ದ ಎಂದು ಆರೋಪಿಸಿದ್ದಾರೆ. ಪತಿಯ ಮೇಲೆ ಪೊಲೀಸರು ಪ್ರಕರಣ ದಾಖಲಿಸಿಕೊಂಡಿದ್ದಾರೆ. 

 

Follow Us:
Download App:
  • android
  • ios