ಅಯ್ಯೋ ಪಾಪಿಗಳಾ! ಮದ್ಯ ಸೇವನೆಗೆ 6 ತಿಂಗಳ ಕಂದಮ್ಮನನ್ನೇ ಮಾರಿದ ತಂದೆ - ತಾಯಿ
ಮಗುವನ್ನು ಮಾರಾಟ ಮಾಡಿ ಮದ್ಯ ಖರೀದಿಸಲು ಹಣದ ವ್ಯವಸ್ಥೆ ಮಾಡಿದ್ದಕ್ಕಾಗಿ ಪಶ್ಚಿಮ ಬಂಗಾಳ ಪೊಲೀಸರು ದಂಪತಿಯನ್ನು ಬಂಧಿಸಿದ್ದಾರೆ. ಈ ಪ್ರಕರಣದಲ್ಲಿ ಮಧ್ಯವರ್ತಿಯಾಗಿ ವರ್ತಿಸಿದ ಮಗುವಿನ ಅಜ್ಜನನ್ನೂ ಅರೆಸ್ಟ್ ಮಾಡಿದ್ದಾರೆ.
ಕೋಲ್ಕತ್ತಾ (ಜುಲೈ 24, 2023) : ಪಶ್ಚಿಮ ಬಂಗಾಳದ ಉತ್ತರ 24 ಪರಗಣ ಜಿಲ್ಲೆಯ ಪಾನಿಹತಿ ಮೂಲದ ದಂಪತಿ ಮದ್ಯ ಖರೀದಿಗೆ ತಮ್ಮ 6 ತಿಂಗಳ ಮಗುವನ್ನೇ ಮಾರಾಟ ಮಾಡಿರುವ ಘನಘೋರ ಘಟನೆ ನಡೆದಿದೆ. ಮಗುವನ್ನು ಮಾರಾಟ ಮಾಡಿ ಮದ್ಯ ಖರೀದಿಸಲು ಹಣದ ವ್ಯವಸ್ಥೆ ಮಾಡಿದ್ದಕ್ಕಾಗಿ ಪಶ್ಚಿಮ ಬಂಗಾಳ ಪೊಲೀಸರು ಈ ಪಾಪಿ ದಂಪತಿಯನ್ನು ಬಂಧಿಸಿದ್ದಾರೆ.
ಈ ಪ್ರಕರಣದಲ್ಲಿ ಮಧ್ಯವರ್ತಿಯಾಗಿ ವರ್ತಿಸಿದ ಮಗುವಿನ ಅಜ್ಜನನ್ನೂ ಅವರು ಅರೆಸ್ಟ್ ಮಾಡಿದ್ದಾರೆ. ಇಡೀ ಪ್ರಕರಣದಲ್ಲಿ ಮಕ್ಕಳ ಕಳ್ಳಸಾಗಣೆ ದಂಧೆಯ ಕೈವಾಡ ಇರಬಹುದೆಂದೂ ಶಂಕಿಸಿದ್ದಾರೆ.
ಆದರೆ, ಪೊಲೀಸರು ಮಾರಾಟವಾದ ಮಗುವನ್ನು ಇನ್ನೂ ರಕ್ಷಣೆ ಮಾಡಿಲ್ಲ ಎಂದೂ ತಿಳಿದುಬಂದಿದೆ. ಬಂಧಿತರನ್ನು ಜೈದೇಬ್ ಚೌಧರಿ (ತಂದೆ), ಸತಿ ಚೌಧರಿ (ತಾಯಿ) ಮತ್ತು ಕನೈ ಚೌಧರಿ (ತಾತ) ಎಂದು ಗುರುತಿಸಲಾಗಿದೆ. ಇನ್ನು, ಪೊಲೀಸರು ಆ ಮಗುವನ್ನು ಮಾರಾಟ ಮಾಡಿದ ವ್ಯಕ್ತಿಯ ಬಗ್ಗೆ ತಿಳಿಯಲು ಪ್ರಸ್ತುತ ಬಂಧಿತರನ್ನು ವಿಚಾರಣೆ ನಡೆಸಲಾಗುತ್ತಿದೆ.
ಇದನ್ನು ಓದಿ: ದೇಸಿ ವಿಸ್ಕಿ ಮೇಲೆ ಪ್ರೇಮ ಮೆರೆದ ಭಾರತೀಯರು: ಹುಡ್ಗೀರ ಬ್ರ್ಯಾಂಡ್ ವೋಡ್ಕಾ ಸೇವನೆಯಲ್ಲೂ ಹೆಚ್ಚಳ!
ಕೆಲ ಸಮಯದಿಂದ ಮಗು ಕಾಣೆಯಾಗಿರುವುದನ್ನು ಕಂಡು ಸ್ಥಳೀಯರು ಪೊಲೀಸರಿಗೆ ವಿಷಯ ತಿಳಿಸಿದ್ದಾರೆ. ಅಕ್ಕಪಕ್ಕದ ಮನೆಯವರು ಮಗುವಿನ ಬಗ್ಗೆ ವಿಚಾರಿಸಿದಾಗಲೆಲ್ಲ ಮಗು ಸಂಬಂಧಿಕರ ಮನೆಯಲ್ಲಿದೆ ಎಂದು ದಂಪತಿ ಉತ್ತರಿಸುತ್ತಿದ್ದರು. ಆದರೂ, ನೆರೆಮನೆಯವರು ಈ ಬಗ್ಗೆ ಅನುಮಾನ ಪಟ್ಟು ಸ್ಥಳೀಯ ಕೌನ್ಸಿಲರ್ ಗಮನಕ್ಕೆ ತಂದಿದ್ದು, ಅವರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ.
ಪೊಲೀಸರು ಭಾನುವಾರವಷ್ಟೇ ಬಂಧಿತ ಮೂವರನ್ನು ಜಿಲ್ಲಾ ನ್ಯಾಯಾಲಯಕ್ಕೆ ಹಾಜರುಪಡಿಸಲಿದ್ದು, ಪೊಲೀಸ್ ಕಸ್ಟಡಿಗೆ ಕೋರಲಿದ್ದಾರೆ. "ಈ ವಿಷಯದಲ್ಲಿ ಅವರಿಂದ ಮಾಹಿತಿಯನ್ನು ಹೊರತೆಗೆಯುವುದು ನಮ್ಮ ಪ್ರಮುಖ ಗುರಿಯಾಗಿದೆ. ಇದರಿಂದ ನಾವು ನಮ್ಮ ತನಿಖೆಯನ್ನು ಮುಂದುವರಿಸಬಹುದು ಮತ್ತು ಮಗುವನ್ನು ರಕ್ಷಿಸಬಹುದು" ಎಂದು ತನಿಖಾಧಿಕಾರಿಯೊಬ್ಬರು ತಿಳಿಸಿದ್ದಾರೆ.
ಇದನ್ನೂ ಓದಿ: ಇವ್ರು ಏನು ಕುಡಿದಿದ್ರೋ ಏನೋ! ಸ್ಮಶಾನಕ್ಕೆ ಹೋಗಿ ಮೃತ ಯುವತಿಯ ಮಾಂಸವನ್ನೇ ತಿಂದ ಕುಡುಕರು
ದಂಪತಿ ದಿನವಿಡೀ ಮದ್ಯದ ಅಮಲಿನಲ್ಲಿ ಇರುತ್ತಾರೆ ಮತ್ತು ಆಗಾಗ್ಗೆ ಕುಟುಂಬದಲ್ಲಿ ಮತ್ತು ಕೆಲವೊಮ್ಮೆ ನೆರೆಹೊರೆಯವರೊಂದಿಗೆ ತೀವ್ರ ಜಗಳವಾಡುತ್ತಿದ್ದರು ಎಂದು ಸ್ಥಳೀಯರು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಆದರೆ ಮದ್ಯದ ಪ್ರಚೋದನೆಯು ತಮ್ಮ ಸ್ವಂತ ಮಗುವನ್ನು ಮಾರಾಟ ಮಾಡುವ ಇಂತಹ ಅಸಹ್ಯವಾದ ಹೆಜ್ಜೆಗೆ ಅವರನ್ನು ತಳ್ಳುತ್ತದೆ ಎಂದು ಯಾರೂ ಊಹಿಸಿರಲಿಲ್ಲ.
ಸ್ಮಶಾನಕ್ಕೆ ಹೋಗಿ ಮೃತ ಯುವತಿಯ ಮಾಂಸವನ್ನೇ ತಿಂದ ಕುಡುಕರು
ಒಡಿಶಾದಲ್ಲಿ ಇತ್ತೀಚೆಗೆ ಸ್ಮಶಾನದಿಂದ ಸಂಗ್ರಹಿಸಲಾದ ಮೃತ ಯುವತಿಯ ಮಾಂಸವನ್ನು ಇಬ್ಬರು ಪುರುಷರು ಸೇವಿಸಿದ್ದಾರೆ ಎನ್ನಲಾದ ಘಟನೆ ವರದಿಯಾಗಿದೆ. ಒಡಿಶಾದ ಮಯೂರ್‌ಭಂಜ್ ಜಿಲ್ಲೆಯ ಬಡಸಾಹಿ ಬ್ಲಾಕ್‌ನ ದಂಟುನಿಬಿಂಧಾ ಗ್ರಾಮದಲ್ಲಿ ಆಘಾತಕಾರಿ ಘಟನೆ ವರದಿಯಾಗಿದೆ. ಬಡಸಾಹಿ ಪೊಲೀಸ್ ಠಾಣಾ ವ್ಯಾಪ್ತಿಯ ಬಂಧಸಾಹಿ ಗ್ರಾಮದ ಬಳಿ ಮಂಗಳವಾರ ಈ ಘಟನೆ ನಡೆದಿದ್ದು, ಈ ಪ್ರದೇಶದ ಜನರನ್ನು ಬೆಚ್ಚಿ ಬೀಳಿಸಿದೆ. ದಂಟುನಿ ಗ್ರಾಮದ ಸುಂದರ್ ಮೋಹನ್ ಸಿಂಗ್ (58) ಮತ್ತು ನರೇಂದ್ರ ಸಿಂಗ್ (25) ಎಂದು ಗುರುತಿಸಲಾಗಿರುವ ಇಬ್ಬರನ್ನು ಪೊಲೀಸರು ಈ ಸಂಬಂಧ ವಿಚಾರಣೆಗಾಗಿ ವಶಕ್ಕೆ ಪಡೆದಿದ್ದರು.
ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗ
ಅನಾರೋಗ್ಯದಿಂದ ಮೃತಪಟ್ಟ 25 ವರ್ಷದ ಯುವತಿಯ ಶವವನ್ನು ಗ್ರಾಮಸ್ಥರು ಅಂತ್ಯಕ್ರಿಯೆ ನಡೆಸಲು ಸ್ಮಶಾನಕ್ಕೆ ಕೊಂಡೊಯ್ದಿದ್ದಾರೆ. ಅರ್ಧ ಸುಟ್ಟ ದೇಹದ ದೊಡ್ಡ ತುಂಡನ್ನು ಇಬ್ಬರು ವ್ಯಕ್ತಿಗಳು ತೆಗೆದುಕೊಂಡು ಹೋಗಿ ಸೇವಿಸಿದ್ದಾರೆ ಎಂದು ಪ್ರಾಥಮಿಕ ವರದಿಗಳು ಹೇಳುತ್ತಿವೆ. ಈ ಘಟನೆಯ ಬಗ್ಗೆ ಗ್ರಾಮಸ್ಥರಿಗೆ ತಿಳಿದ ನಂತರ ಅವರು ಇಬ್ಬರೂ ಆರೋಪಿಗಳನ್ನು ಬರ್ಬರವಾಗಿ ಥಳಿಸಿದ್ದಾರೆ. ನಂತರ ಗ್ರಾಮಸ್ಥರು ಇಬ್ಬರನ್ನೂ ಪೊಲೀಸರಿಗೆ ಒಪ್ಪಿಸಿದ್ದಾರೆ ಎಂದೂ ತಿಳಿದುಬಂದಿದೆ.