ದೇಸಿ ವಿಸ್ಕಿ ಮೇಲೆ ಪ್ರೇಮ ಮೆರೆದ ಭಾರತೀಯರು: ಹುಡ್ಗೀರ ಬ್ರ್ಯಾಂಡ್ ವೋಡ್ಕಾ ಸೇವನೆಯಲ್ಲೂ ಹೆಚ್ಚಳ!
ಜಾಗತಿಕ ಏಜೆನ್ಸಿ IWSR ನಲ್ಲಿ ಲಭ್ಯವಿರುವ ಇತ್ತೀಚಿನ ಮಾಹಿತಿಯು ಭಾರತದಲ್ಲಿ ಸುಮಾರು ಮೂರನೇ ಎರಡರಷ್ಟು ಸ್ಪಿರಿಟ್ ಮಾರಾಟವನ್ನು ವಿಸ್ಕಿಯಿಂದ ಹೊಂದಿದೆ ಎಂದು ತೋರಿಸುತ್ತದೆ. ಈ ಪೈಕಿ, 85% ಮಾರುಕಟ್ಟೆಯನ್ನು 10 ಸ್ವದೇಶಿ ಬ್ರ್ಯಾಂಡ್‌ಗಳು, ಕಡಿಮೆ ಬೆಲೆಯ ವಿಸ್ಕಿ ನಿಯಂತ್ರಿಸುತ್ತದೆ ಎಂದೂ ತಿಳಿದುಬಂದಿದೆ.
ಹೊಸದಿಲ್ಲಿ (ಜುಲೈ 24, 2023): ಕೋವಿಡ್ - 19 ಸಮಯದಲ್ಲಿ ದೇಶದಲ್ಲಿ ಮದ್ಯ ಮಾರಾಟ ಮೇಲೆ ಸ್ವಲ್ಪ ಪರಿಣಾಮ ಬೀರಿತ್ತು. ಆದರೀಗ, ಮದ್ಯದ ಮಾರುಕಟ್ಟೆ ವಿಸ್ತರಿಸುತ್ತಲೇ ಇದೆ. ಅದ್ರಲ್ಲೂ, ಇತ್ತೀಚಿನ ವರ್ಷಗಳಲ್ಲಿ ವೈನ್ ಮತ್ತು ಜಿನ್ ಸೇವನೆಯ ಹೆಚ್ಚಳದ ಹೊರತಾಗಿಯೂ, ಭಾರತದಲ್ಲಿನ ಮದ್ಯದ ಮಾರುಕಟ್ಟೆಯಲ್ಲಿ ವಿಸ್ಕಿ ಪ್ರಾಬಲ್ಯ ಹೊಂದಿದೆ ಎಂದು ತಿಳಿದುಬಂದಿದೆ. ವಿಸ್ಕಿಯ ಪೈಕಿ ಒಂದು ಬಾಟಲ್‌ಗೆ 750 ರೂ. ಗಿಂತ ಕಡಿಮೆ ಮೌಲ್ಯದ ವಿಸ್ಕಿಗೆ ಹೆಚ್ಚು ಡಿಮ್ಯಾಂಡ್ ಇದೆ.
ಆಮದು ಮಾಡಲಾದ ವಿಸ್ಕಿಯ ಪಾಲು 3.3% ಎಂದು ಅಂದಾಜಿಸಲಾಗಿದೆ ಮತ್ತು 2027 ರಲ್ಲಿ ಈ ವಿಸ್ಕಿ ಮಾರುಕಟ್ಟೆ 3.7% ಕ್ಕೆ ಏರಲಿದೆ ಎಂದು ಅಂದಾಜಿಸಲಾಗಿದೆ. ಮುಂದಿನ ಐದು ವರ್ಷಗಳಲ್ಲಿ ಆಮದು ಮಾಡಲಾದ ವಿಸ್ಕಿಗೆ 3.8% ರಷ್ಟು ಬೆಳವಣಿಗೆಯನ್ನು ನಿರೀಕ್ಷಿಸಲಾಗಿದೆಯಾದರೂ, ಭಾರತೀಯ ನಿರ್ಮಿತ ವಿಸ್ಕಿಯು ಮಾರುಕಟ್ಟೆಯ 96% ಅನ್ನು ನಿಯಂತ್ರಿಸುತ್ತದೆ ಎಂದು ಸಂಖ್ಯೆಗಳು ಸೂಚಿಸುತ್ತವೆ.
ಇದನ್ನು ಓದಿ: ಅಬಕಾರಿ ಸುಂಕ ಹೆಚ್ಚಳ; ಇಂದಿನಿಂದ ಮದ್ಯದ ಬೆಲೆ ಶೇ.20ರಷ್ಟುಏರಿಕೆ
ಇತ್ತೀಚಿನ ಅಂಕಿಅಂಶಗಳು ಕೋವಿಡ್-19 ಆಘಾತದಿಂದ ಹೊರಬಂದು ವ್ಯಾಪಾರವು ಮತ್ತೆ ಸರಿಯಾದ ದಾರಿಯಲ್ಲಿದೆ ಎಂದು ಸೂಚಿಸುತ್ತದೆ. ವೋಡ್ಕಾ ಮಾರಾಟದಲ್ಲಿ 34% ಜಿಗಿತದೊಂದಿಗೆ ಬಲವಾದ ಪುನರಾಗಮನವನ್ನು ಮಾಡುತ್ತಿದೆ. ಭಾರತವು ಆಲ್ಕೋಹಾಲ್ ಪಾನೀಯಗಳಿಗೆ ವಿಶ್ವದ ಐದನೇ ಅತಿದೊಡ್ಡ ಮಾರುಕಟ್ಟೆಯಾಗಿದ್ದು, ಒಟ್ಟಾರೆ ಗಾತ್ರವು ಸುಮಾರು 53 ಶತಕೋಟಿ ಡಾಲರ್‌ನಷ್ಟಿದೆ ಮತ್ತು ಮನೆಯಲ್ಲಿ ಮದ್ಯ ಸೇವನೆಯು ಮುಂದಿನ ಐದು ವರ್ಷಗಳಲ್ಲಿ ಪರಿಮಾಣವನ್ನು ಹೆಚ್ಚಿಸುವ ನಿರೀಕ್ಷೆಯಿದೆ.
ಇದರ ಜತೆಗೆ ರೆಡಿ-ಟು ಡ್ರಿಂಕ್ ಪಾನೀಯಗಳು ವೇಗವಾಗಿ ಬೆಳೆಯುತ್ತಿರುವ ವಿಭಾಗವಾಗಿ ಹೊರಹೊಮ್ಮಿವೆ. ಈ ವಿಭಾಗದಲ್ಲಿ ಕಳೆದ ವರ್ಷ 40% ಏರಿಕೆಯಾಗಿದ್ದು, ಮುಂದಿನ ಐದು ವರ್ಷಗಳಲ್ಲಿ ಎರಡು-ಅಂಕಿಯ ದರದಲ್ಲಿ ವಿಸ್ತರಿಸುವ ನಿರೀಕ್ಷೆಯಿದೆ. ವಿದೇಶದಿಂದ ಆಮದಾದ ವೈನ್ ಸೇವನೆಯೂ ಹೆಚ್ಚಿದೆ. ಯಾವುದೇ ಅಂದಾಜುಗಳು ಲಭ್ಯವಿಲ್ಲದಿದ್ದರೂ, ಆಸ್ಟ್ರೇಲಿಯಾ ಮತ್ತು ಯುರೋಪ್ ಒಕ್ಕೂಟದಂತಹ ದೇಶಗಳಿಂದ ಆಮದು ಮಾಡಿಕೊಂಡ ವೈನ್ ಮುಕ್ತ ವ್ಯಾಪಾರ ಒಪ್ಪಂದಗಳ ಕಾರಣದಿಂದಾಗಿ ಹೆಚ್ಚಿನ ಪಾಲನ್ನು ಹೊಂದಿರಬಹುದು.
ಇದನ್ನೂ ಓದಿ: ಇವ್ರು ಏನು ಕುಡಿದಿದ್ರೋ ಏನೋ! ಸ್ಮಶಾನಕ್ಕೆ ಹೋಗಿ ಮೃತ ಯುವತಿಯ ಮಾಂಸವನ್ನೇ ತಿಂದ ಕುಡುಕರು
ವಿಸ್ಕಿಗೆ ಸುಂಕ ಕಡಿತವನ್ನು ಯುಕೆ ಬಯಸಿದ್ದರೂ, ದೇಶೀಯ ಉದ್ಯಮವು ಪ್ರಮುಖ ಪಾತ್ರ ವಹಿಸುತ್ತದೆ. ಕೆಲವು ಆಮದು ಮಾಡಿದ ವಿಸ್ಕಿಗಳು ತ್ವರಿತ ಏರಿಕೆಯನ್ನು ಕಂಡರೂ ಸಹ ಆ ಪ್ರಮಾಣ ಕಡಿಮೆಯೇ ಇದೆ. ಆದರೂ, “ಭಾರತೀಯ ಗ್ರಾಹಕರು ಹೊಸ ವಿಸ್ಕಿಗಳನ್ನು ಅನ್ವೇಷಿಸುವ ಪ್ರವೃತ್ತಿ ಹೆಚ್ಚುತ್ತಿದೆ. ಸ್ಕಾಚ್ ವಿಸ್ಕಿ ಮುನ್ನಡೆಯಲ್ಲಿದ್ದರೂ, ಐರಿಶ್, ಯುಎಸ್, ಜಪಾನ್ ಮತ್ತು ಕೆನಡಾ ವಿಸ್ಕಿಗಳ ಪ್ರಮಾಣವೂ ಹೆಚ್ಚುತ್ತಿದೆ. ಮತ್ತು ಸಹಜವಾಗಿ, ಭಾರತೀಯ ಸಿಂಗಲ್ ಮಾಲ್ಟ್‌ಗಳು ಸಹ’’ ಎಂದು ಅಂತಾರಾಷ್ಟ್ರೀಯ ಸ್ಪಿರಿಟ್ಸ್ ಮತ್ತು ವೈನ್ಸ್ ಅಸೋಸಿಯೇಶನ್ ಆಫ್ ಇಂಡಿಯಾದ ಸಿಇಒ ನೀತಾ ಕಪೂರ್ ಹೇಳಿದರು.
ಇದನ್ನೂ ಓದಿ: ಕುಡಿದ ಮತ್ತಿನಲ್ಲಿ ಹೆತ್ತ ತಾಯಿಯನ್ನೇ ಕೊಂದ ಪಾಪಿ ಮಗ