ಮಂಗಳೂರು(ಮಾ. 01)  ವಿವಾಹವಾದ ಮೊದಲ ರಾತ್ರಿಯೇ ನವವಧು ಹೃದಯಾಘಾತದಿಂದ ಸಾವನ್ನಪ್ಪಿದ್ದಾರೆ. ನಗರದ ಹೊರವಲಯದ ಅಡ್ಯಾರ್ ಕಣ್ಣೂರಿನಲ್ಲಿ ಸೋಮವಾರ ನಸುಕಿನಲ್ಲಿ ಘಟನೆ ಸಂಭವಿಸಿದೆ.

ಅಡ್ಯಾಾರ್ ಕಣ್ಣೂರು ಸಮೀಪದ ಬೀರ್ಪುಗುಡ್ಡೆ ಜಮಾಅತ್ ಅಧ್ಯಕ್ಷ ಕೆ.ಎಚ್.ಕೆ. ಅಬ್ದುಲ್ ಕರೀಂ ಹಾಜಿ ಅವರ ಪುತ್ರಿ ಲೈಲಾ ಆಫಿಯಾ (23) ಮೃತ ನವವಧು. ಭಾನುವಾರಷ್ಟೆ ಕಣ್ಣೂರಿನ ಮುಬಾರಕ್ ಎಂಬವರೊಂದಿಗೆ ಲೈಲಾ ಮದುವೆ ಅಲ್ಲಿನ ಜುಮಾ ಮಸೀದಿಯಲ್ಲಿ ನೆರವೇರಿತ್ತು.

ಪ್ಯಾನಿಕ್ ಅಟ್ಯಾಕ್ ಮತ್ತು ಹಾರ್ಟ್ ಅಟ್ಯಾಕ್ ನಡುವಿನ ವ್ಯತ್ಯಾಸ ತಿಳಿಯಿರಿ

ಅಡ್ಯಾರ್ ಗಾರ್ಡನ್‌ನಲ್ಲಿ ಔತಣಕೂಟವನ್ನೂ ಏರ್ಪಡಿಸಲಾಗಿತ್ತು. ಬಳಿಕ ರಾತ್ರಿ ಸಂಪ್ರದಾಯದಂತೆ ನವ ವಧು-ವರರು ವಧುವಿನ ಮನೆಗೆ ತೆರಳಿದ್ದರು.

ವಿವಾಹ, ಔತಣಕೂಟದುದ್ದಕ್ಕೂ ವಧು ಸಂಭ್ರಮದಲ್ಲೇ ಇದ್ದರು. ಆದರೆ ಮೊದಲ ರಾತ್ರಿ ಕಳೆದು ಸೋಮವಾರ ಮುಂಜಾನೆ 3 ಗಂಟೆ ವೇಳೆಗೆ ತೀವ್ರ ಹೃದಯಾಘಾತಕ್ಕೆ ಒಳಗಾಗಿ ಸಾವಿಗೀಡಾಗಿದ್ದಾಾರೆ. ಸಂಭ್ರಮ ಆವರಿಸಿದ್ದ ಮನೆಯಲ್ಲಿ ದಿಢೀರನೆ ಜವರಾಯ ಎರಗಿದ್ದು ಎರಡೂ ಕುಟುಂಬಸ್ಥರಿಗೆ ಆಘಾತ ನೀಡಿದೆ.