ಬೆಂಗಳೂರು(ಆ.  03) ವಿವಾದಕ್ಕೆ ಕಾರಣವಾಗಿದ್ದ ಡ್ರೋಣ್ ಪ್ರತಾಪ್ ವಿರುದ್ಧ  ತಲಘಟ್ಟಪುರ ಪೊಲೀಸ್ ಠಾಣೆಯಲ್ಲಿ ಕೇಸ್ ಪ್ರಕರಣ ದಾಖಲಾಗಿತ್ತು. ಖಾಸಗಿ ಹೊಟೆಲ್ ನಲ್ಲಿ ಕ್ವಾರಂಟೈನ್ ನಲ್ಲಿದ್ದ ಡ್ರೋಣ್ ಪ್ರತಾಪ್ ಅವಧಿ ಮುಗಿದಿದ್ದು ಪ್ರತಾಪ್‌ ನನ್ನು ವಶಕ್ಕೆ ಪಡೆಯಲು ಪೊಲೀಸರು ಮುಂದಾಗಿದ್ದಾರೆ.

ಪ್ರತಾಪನ ವಿರುದ್ಧ ಕ್ವಾರಂಟೈನ್ ನಿಯಮ ಉಲ್ಲಂಘನೆ ಆರೋಪದಲ್ಲಿ ಎಮ್ ಡಿಎಮ್ ಎ ಆಕ್ಟ್ ಆಡಿ ಕೇಸ್ ದಾಖಲಾಗಿತ್ತು. ಸೋಮವಾರಕ್ಕೆ ಕ್ವಾರಂಟೈನ್ ಅವಧಿ ಮುಗಿದ ಹಿನ್ನೆಲೆಯಲ್ಲಿ ವಶಕ್ಕೆ ಪಡೆಯಲು  ಪೊಲೀಸರು ಮುಂದಾಗಿದ್ದಾರೆ.

ಡ್ರೋಣ್ ಪ್ರತಾಪ್ ಸಂಪೂರ್ಣ ಚರಿತ್ರೆ

ವಶಕ್ಕೆ ಪಡೆಯುವ ಮುನ್ನ ಡ್ರೋನ್ ಪ್ರತಾಪನಿಗೆ ಮತ್ತೊಮ್ಮೆ ಕೊರೋನಾ ಟೆಸ್ಟ್ ಮಾಡಿಸಲಿದ್ದಾರೆ. ಕೊರೋನಾ ಟೆಸ್ಟ್ ಫಲಿತಾಂಶ ಬಂದ ನಂತರ ಬಂಧಿಸುವ ಸಾಧ್ಯತೆ ಇದೆ.

ವಿಶ್ವದಲ್ಲೇ ಯಾರೂ ಕಂಡುಹಿಡಿಯದ ಡ್ರೋಣ್ ಕಂಡುಹಿಡಿದಿದ್ದೇನೆ ನಾನು ಯುವ ವಿಜ್ಞಾನಿ ದೇಶ ವಿದೇಶಗಳ್ಲಲಿ ಚಿನ್ನದ ಪದಕ ಸಿಕ್ಕಿದೆ ಎಂದು ಪ್ರತಾಪ್  ಹೇಳಿದ್ದ.  ಮೈಸೂರಿನಲ್ಲಿ ಪ್ರತಾಪ್ ಬಂಧನವಾಗಿದೆ ಎಂದು ವರದಿಗಳಾಗಿದ್ದವು.