ಆನ್ಲೈನ್ ಮೂಲಕವೇ ಗ್ರಾಮ ಲೆಕ್ಕಿಗನ ಲಂಚ ವ್ಯವಹಾರ, 66 ಸಾವಿರ ಪಡೆದು ಮಹಿಳೆಗೆ ಮೋಸ!

ಮಂಡ್ಯದ ಸರ್ಕಾರಿ ಕಚೇರಿಗಳಲ್ಲಿ ನಿಲ್ಲದ ಬ್ರಹ್ಮಾಂಡ ಭ್ರಷ್ಟಾಚಾರ. ಕೆಲ ದಿನಗಳ ಹಿಂದೆ ಸಬ್ ರಿಜಸ್ಟಾರ್ ಲಂಚ ಸ್ವೀಕಾರ ಸುದ್ದಿ ಆಯ್ತು, ಇದೀಗ ಗ್ರಾಮ ಲೆಕ್ಕಿಗನ ಲಂಚಾವತಾರದ ಸ್ಟೋರಿ ಬಯಲಾಗಿದೆ.

Village accountant online bribe in mandya karnataka news gow

ಮಂಡ್ಯ (ಜು.2): ಮಂಡ್ಯದ ಸರ್ಕಾರಿ ಕಚೇರಿಗಳಲ್ಲಿ ನಿಲ್ಲದ ಬ್ರಹ್ಮಾಂಡ ಭ್ರಷ್ಟಾಚಾರ. ಕೆಲ ದಿನಗಳ ಹಿಂದೆ ಸಬ್ ರಿಜಸ್ಟಾರ್ ಲಂಚ ಸ್ವೀಕಾರ ಸುದ್ದಿ ಆಯ್ತು, ಇದೀಗ ಗ್ರಾಮ ಲೆಕ್ಕಿಗನ ಲಂಚಾವತಾರದ ಸ್ಟೋರಿ ಬಯಲಾಗಿದೆ. ಆನ್ಲೈನ್ ಮೂಲಕವೇ ಗ್ರಾಮ ಲೆಕ್ಕಿಗ ಲಂಚ ಪಡೆದಿದ್ದು, ಇ-ಸ್ವತ್ತು ಮಾಡಿಕೊಡಲು ಪೋನ್ ಪೇ ಮೂಲಕ ಮಹಿಳೆಯಿಂದ ಲಂಚ ಸ್ವೀಕರಿಸಿದ್ದಾನೆ. ಗ್ರಾಮಲೆಕ್ಕಿಗ ನಿಂಗಪ್ಪ ಸುರಪುರ ಮಹಿಳೆಯಿಂದ ಬರೋಬ್ಬರಿ 66 ಸಾವಿರ ಲಂಚ ಪಡೆದಿದ್ದಾನೆ. ಮಂಡ್ಯ ಜಿಲ್ಲೆ  ನಾಗಮಂಗಲ ತಾಲೂಕಿನ ಲಾಳನಕೆರೆ ವೃತ್ತದ ಗ್ರಾಮಲೆಕ್ಕಿಗನಾಗಿದ್ದಾನೆ. ಇದೀಗ ಹಣ ಕಳೆದುಕೊಂಡ ಮಹಿಳೆ ದಾಖಲೆ ಸಮೇತ ಜಿಲ್ಲಾಧಿಕಾರಿಗೆ ದೂರು ಕೊಟ್ಟಿದ್ದಾರೆ. ಮೀನಾಕ್ಷಿ ಎಂಬ ಮಹಿಳೆಯಿಂದ 66 ಸಾವಿರ ಲಂಚ ಪಡೆದ ವಿಎ ನಿಂಗಪ್ಪ ಸುರಪುರ, ಹಣ ಪಡೆದು ವರ್ಷವಾದರೂ ಖಾತೆ ಮಾಡಿಕೊಡದೆ ಸತಾಯಿಸುತ್ತಿದ್ದ, ಹೀಗಾಗಿ ಬೇಸತ್ತ ಮಹಿಳೆ ಗ್ರಾಮ ಲೆಕ್ಕಿಗ ನಿಂಗಪ್ಪ ವಿರುದ್ಧ ದಾಖಲೆ ಸಹಿತ  ದೂರು ನೀಡಿದ್ದಾಳೆ. ನಾಗಮಂಗಲ ತಹಶೀಲ್ದಾರ್ ಗೆ ದೂರು ಕೊಟ್ಟು ನ್ಯಾಯಕೊಡಿಸುವಂತೆ ಮನವಿ ಮಾಡಿದ್ದಾಳೆ. ದೂರು ಕೊಡುತ್ತಿದ್ದಂತೆ ಭೂಪ ಕಚೇರಿಗೆ ಗೈರಾಗುತ್ತಿದ್ದಾನಂತೆ.

ವಿಪಕ್ಷಗಳ ವಿರುದ್ಧ ಸುಳ್ಳು ಪ್ರಚಾರಕ್ಕೆ ಮೋದಿ ಸರ್ಕಾರದ ಆಡಳಿತ ಯಂತ್ರ ಬಳಕೆ:

ಲೋಕಾಯುಕ್ತ ಬಲೆಗೆ ಕಾರ್ಮಿಕ ನಿರೀಕ್ಷಕಿ
ರಾಣಿಬೆನ್ನೂರು : ಇಲ್ಲಿನ ಕಾರ್ಮಿಕ ಇಲಾಖೆ ಕಚೇರಿಯಲ್ಲಿ ಕಾರ್ಮಿಕ ನಿರೀಕ್ಷಕರಾಗಿ ಕಾರ್ಯ ನಿರ್ವಹಿಸುತ್ತಿರುವ ಮಮ್ತಾಜ್‌ ಬೇಗಂ ಶನಿವಾರ ಮಧ್ಯಾಹ್ನ ಲಂಚ ಸ್ವೀಕರಿಸುತ್ತಿರುವಾಗ ಲೋಕಾಯುಕ್ತ ಬಲೆಗೆ ಬಿದ್ದಿದ್ದಾರೆ.

ನಾನು ಕಾಂಗ್ರೆಸ್‌ಗೆ ಹೋಗ್ತಿನಿ ಅಂತಾ ಯಾವನೋ ಮಠ್ಠಾಳ ಟಿ.ವಿ.ಗೆ ಹಾಕಿಸ್ತಾನೆ: ಮಾಧುಸ್ವಾಮಿ ಗರಂ

ತಾಲೂಕಿನ ಯಕ್ಲಾಸಪುರ ಗ್ರಾಮದ ನಾರಾಯಣ ಅಂತರವಳ್ಳಿ ಎಂಬವರು ಸರ್ಕಾರದಿಂದ ತಮ್ಮ ಆಸ್ಪತ್ರೆ ವೆಚ್ಚ ಪಡೆದುಕೊಳ್ಳಲು ಕಾರ್ಮಿಕ ನಿರೀಕ್ಷಕರನ್ನು ಭೇಟಿಯಾಗಿದ್ದರು. ಆಗ ಕಾರ್ಮಿಕ ನಿರೀಕ್ಷಕರು ಕೆಲಸ ಮಾಡಿಕೊಡಲು .5 ಸಾವಿರಕ್ಕೆ ಬೇಡಿಕೆ ಇಟ್ಟಿದ್ದರು. ಹೀಗಾಗಿ ನಾರಾಯಣ ಅಂತರವಳ್ಳಿ ಲೋಕಾಯುಕ್ತ ಕಚೇರಿಗೆ ತೆರಳಿ ದೂರು ನೀಡಿದ್ದರು. ಲೋಕಾಯುಕ್ತ ಅಧಿಕಾರಿಗಳ ಮಾರ್ಗದರ್ಶನದಂತೆ ದೂರುದಾರರು ಇಂದು ಕಾರ್ಮಿಕ ನಿರೀಕ್ಷಕರಿಗೆ .3 ಸಾವಿರ ನೀಡುವಾಗ ದಾಳಿ ನಡೆಸಿ ಆರೋಪಿ ಅಧಿಕಾರಿಯನ್ನು ವಶಕ್ಕೆ ಪಡೆದಿದ್ದಾರೆ. ಲೋಕಾಯುಕ್ತ ಡಿವೈಎಸ್‌ಪಿ ಬಿ.ಪಿ. ಚಂದ್ರಶೇಖರ, ಸಿಪಿಐ ಎಚ್‌.ಆಂಜನೇಯ, ಪಿಐ ಮುಸ್ತಾಕ್‌ ದಾಳಿಯಲ್ಲಿ ಪಾಲ್ಗೊಂಡಿದ್ದರು.

Latest Videos
Follow Us:
Download App:
  • android
  • ios