ನವದೆಹಲಿ(ಡಿ. 04)  ಭಾರತದ ಹಲವು ಬ್ಯಾಂಕ್ ಗಳಿಗೆ ಕೋಟ್ಯಂತರ ರೂ. ವಂಚನೆ ಮಾಡಿ ವಿದೇಶ ಸೇರಿರುವ ಒಂದು ಕಾಲದ ಮದದ್ಯದ ರೊರೆ ವಿಜಯ್ ಮಲ್ಯಗೆ ಇಡಿ ಶಾಕ್ ನೀಡಿದೆ. ಈ ಶಾಕ್ ಕೊಟ್ಟಿರುವುದು ಫ್ರಾನ್ಸ್ ನಲ್ಲಿ.

ಅಕ್ರಮ ಹಣ ವರ್ಗಾವಣೆ ಕಾನೂನಿನಡಿಯಲ್ಲಿ ಫ್ರಾನ್ಸ್ ನಲ್ಲಿ ಉದ್ಯಮಿ ವಿಜಯ್ ಮಲ್ಯಗೆ ಸೇರಿದ 14 ಕೋಟಿ ರೂಪಾಯಿ ಮೌಲ್ಯದ ಆಸ್ತಿಯನ್ನು ಜಪ್ತಿ ಮಾಡಲಾಗಿದೆ ಎಂದು ಜಾರಿ ನಿರ್ದೇಶನಾಲಯ  ತಿಳಿಸಿದೆ.

ನಾವು ಕೊಟ್ಟ ಮನವಿ ಮೇರೆಗೆ  ಫ್ರಾನ್ಸ್ ಅಧಿಕಾರಿಗಳು ಕಾರ್ಯಾಚರಣೆ ಕೈಗೊಂಡು, 32 ಅವಿನ್ಯೂ ಪೊಚ್ ನಲ್ಲಿದ್ದ 1.6 ಮಿಲಿಯನ್ ಯುರೋ ಅಂದರೆ 14 ಕೋಟಿ ರೂ. ಮೌಲ್ಯದ ಆಸ್ತಿಯನ್ನು ವಶಕ್ಕೆ ಪಡೆದಿದ್ದಾರೆ ಎಂದು ಇಡಿ ತಿಳಿಸಿದೆ.

ಯಾವ ಕಾರಣಕ್ಕೆ ಮಲ್ಯ ಗಡೀಪಾರು ಸಾಧ್ಯವಾಗುತ್ತಿಲ್ಲ?

ಮಲ್ಯ ಲಂಡನ್ ನಲ್ಲಿ ವಾಸವಿದ್ದು ಆಗಾಗ ಕ್ರಿಕೆಟ್ ಪಂದ್ಯದ ವೇಳೆ ಕಾಣಿಸಿಕೊಂಡಿದ್ದರು.  ವಿವಿಧ ಬ್ಯಾಂಕ್ ಗಳಿಗೆ ಹತ್ತು ಸಾವಿರ ಕೋಟಿಗೂ ಅಧಿಕ ಹಣ ವಂಚನೆ ಮಾಡಿದ್ದು ಆರ್ಥಿಕ ಅಪರಾಧಿ ಎಂದು ಈಗಾಗಲೇ ಘೋಷಣೆ ಮಾಡಲಾಗಿದೆ. ಬ್ರಿಟನ್ ನೊಂದಿಗೆ ಮಾತನಾಡಿ ಮಲ್ಯರನ್ನು ಭಾರತಕ್ಕೆ ಕರೆತರುವ ಪ್ರಯತ್ನಗಳು ನಡೆಯುತ್ತಿವೆ.