Asianet Suvarna News Asianet Suvarna News

ಮಲ್ಯ ಗಡೀಪಾರು ವಿಳಂಬದ 'ರಹಸ್ಯ' ಸುಪ್ರೀಂ ತಿಳಿಸಿದ ಕೇಂದ್ರ ಸರ್ಕಾರ!

ರಹಸ್ಯ ಪ್ರಕ್ರಿಯೆಯಿಂದಾಗಿ ಮಲ್ಯ ಗಡೀಪಾರು ವಿಳಂಬ| ಸುಪ್ರೀಂಗೆ ಕೇಂದ್ರ ಸರ್ಕಾರದ ಮಾಹಿತಿ

Vijay Mallya Can not Be Extradited Until Secret Legal Process in UK Resolved Centre to SC pod
Author
Bangalore, First Published Oct 6, 2020, 8:06 AM IST

ನವ​ದೆ​ಹ​ಲಿ(ಅ.06): ಭಾರತೀಯ ಬ್ಯಾಂಕುಗಳಿಗೆ 9 ಸಾವಿರ ಕೋಟಿ ರು. ಸಾಲ ಮರುಪಾವತಿಸದೆ ಬ್ರಿಟನ್‌ಗೆ ಪರಾರಿಯಾಗಿರುವ ಉದ್ಯಮಿ ವಿಜಯ ಮಲ್ಯ ಗಡೀಪಾರು ಸಂಬಂಧ ಲಂಡನ್‌ನಲ್ಲಿ ರಹಸ್ಯ ಪ್ರಕ್ರಿಯೆಯೊಂದು ಆರಂಭವಾಗಿದೆ. ಹೀಗಾಗಿ ಮಲ್ಯ ಹಸ್ತಾಂತರ ವಿಳಂಬವಾಗಿದೆ ಎಂದು ಕೇಂದ್ರ ಸರ್ಕಾ​ರವು ಸುಪ್ರೀಂ ಕೋರ್ಟ್‌ಗೆ ತಿಳಿ​ಸಿ​ದೆ.

ಬ್ರಿಟನ್‌ನ ಪರಮೋಚ್ಚ ನ್ಯಾಯಾಲಯ ಮಲ್ಯ ಅರ್ಜಿಯನ್ನು ತಿರಸ್ಕರಿಸಿದ ಬಳಿಕ ಗಡೀಪಾರು ಪ್ರಕ್ರಿಯೆ ಪೂರ್ಣಗೊಳ್ಳಬೇಕಿತ್ತು. ಆದರೆ, ಅಲ್ಲಿ ಹೊಸದಾಗಿ ಪ್ರಕ್ರಿಯೆಗಳು ಆರಂಭವಾಗಿವೆ. ಅವು ಯಾವ ರೀತಿಯದ್ದು ಎಂಬುದು ತನಗೆ ಗೊತ್ತಿಲ್ಲ. ಅದರಲ್ಲಿ ತಾನು ಪಕ್ಷ​ಗಾ​ರ​ನಲ್ಲ. ಅಲ್ಲದೆ, ಈಗ ಈ ಪ್ರಕ್ರಿಯೆ ಯಾವ ಘಟ್ಟ​ದ​ಲ್ಲಿದೆ ಎಂಬ ಬಗ್ಗೆ ತನಗೆ ಮಾಹಿತಿ ಇಲ್ಲ ಎಂದು ಸರ್ಕಾರ ಸ್ಪಷ್ಟ​ಪ​ಡಿ​ಸಿ​ದೆ.

ಆಗ ಮಧ್ಯ​ಪ್ರ​ವೇ​ಶಿದ ನ್ಯಾ| ಉದಯ್‌ ಲಲಿತ್‌ ಹಾಗೂ ನ್ಯಾ| ಅಶೋಕ್‌ ಭೂಷಣ್‌ ಅವ​ರಿದ್ದ ಪೀಠ, ‘ಮ​ಲ್ಯ​ರನ್ನು ಕರೆ​ತ​ರಲು ಅದ್ಯಾವ ರಹಸ್ಯ ಪ್ರಕ್ರಿ​ಯೆ​ಗಳು ನಡೆ​ದಿ​ವೆ ಎಂಬು​ದನ್ನು ತಿಳಿಸಿ’ ಎಂದು ಕೋರ್ಟ​ಲ್ಲಿದ್ದ ಮಲ್ಯ ಪರ ವಕೀ​ಲ​ರಿ​ಗೆ ಸೂಚಿ​ಸಿ​ತು. ‘ಆದರೆ ಈ ಪ್ರಕ್ರಿಯೆ ಬಗ್ಗೆ ನಮಗೂ ಮಾಹಿತಿ ಇಲ್ಲ. ಗಡೀ​ಪಾರು ವಿರುದ್ಧ ನಾನು ಸಲ್ಲಿ​ಸಿದ ಕೋರಿಕೆ ತಿರ​ಸ್ಕಾ​ರ​ಗೊಂಡಿದೆ ಎಂಬ ಮಾಹಿ​ತಿ​ಯಷ್ಟೇ ನನ್ನ ಬಳಿ ಇದೆ’ ಎಂದು ಅವರು ಸ್ಪಷ್ಟ​ಪ​ಡಿ​ಸಿ​ದ​ರು. ನ್ಯಾಯಾಲಯ ವಿಚಾರಣೆಯನ್ನು ನ.2ಕ್ಕೆ ಮುಂದೂಡಿತು.

ಮಲ್ಯ ಅವರು ತಮ್ಮ ಮಕ್ಕ​ಳಿಗೆ 290 ಕೋಟಿ ರು. ಹಣವನ್ನು ಕೋರ್ಟ್‌ ಆದೇಶ ಉಲ್ಲಂಘಿಸಿ ವರ್ಗಾ​ಯಿ​ಸಿ​ದ್ದರು ಎಂಬ ಆರೋ​ಪ​ ಹೊರಿ​ಸಿ 2017ರಲ್ಲೇ ಸುಪ್ರೀಂ ಕೋರ್ಟ್‌ ಅವರು ದೋಷಿ ಎಂದು ತೀರ್ಪು ನೀಡಿತ್ತು. ಇದನ್ನು ಮರು​ಪ​ರಿ​ಶೀ​ಲಿ​ಸು​ವಂತೆ ಮಲ್ಯ ಕೋರಿದ್ದ ಅರ್ಜಿ ಇತ್ತೀ​ಚೆಗೆ ವಜಾ ಆಗಿತ್ತು ಹಾಗೂ ಅಕ್ಟೋ​ಬರ್‌ 5ರೊಳಗೆ ತನ್ನ ಮುಂದೆ ಹಾಜ​ರಾ​ಗು​ವಂತೆ ಕೋರ್ಟ್‌ ಸೂಚಿ​ಸಿತ್ತು. ಆದರೆ ಮಲ್ಯ ಸೋಮ​ವಾರ ಬರ​ಲಿಲ್ಲ. ಈ ವೇಳೆ ಈ ಮೇಲಿನಂತೆ ಕೋರ್ಟ್‌ ಸೂಚ​ನೆ​ಗ​ಳನ್ನು ನೀಡಿ ನ.2ಕ್ಕೆ ವಿಚಾ​ರಣೆ ನಿಗ​ದಿ​ಪ​ಡಿ​ಸಿ​ತು.

Follow Us:
Download App:
  • android
  • ios