Asianet Suvarna News Asianet Suvarna News

ರಾಷ್ಟ್ರ ರಾಜಧಾನಿಯಲ್ಲಿ ಹಾಡ ಹಗಲೇ ಶಾಲಾ ಬಾಲಕಿ ಮೇಲೆ ಆಸಿಡ್ ದಾಳಿ: ಸಿಸಿ ಕ್ಯಾಮೆರಾದಲ್ಲಿ ಸೆರೆ

ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಆಕೆಯ ಮೇಲೆ ಆಸಿಡ್ ದಾಳಿ ಮಾಡಿದ್ದರಿಂದ 17 ವರ್ಷದ ಬಾಲಕಿ ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾಳೆ ಎಂದು ತಿಳಿದುಬಂದಿದೆ.

video shows acid attack on delhi school girl cctv camera ash
Author
First Published Dec 14, 2022, 2:30 PM IST

ರಾಷ್ಟ್ರ ರಾಜಧಾನಿ (National Capital) ದೆಹಲಿಯಲ್ಲಿ (Delhi) ಮತ್ತೊಂದು ಅಪರಾಧ ಪ್ರಕರಣ ಬೆಳಕಿಗೆ ಬಂದಿದೆ. ಇಂದು ನೈರುತ್ಯ ದೆಹಲಿಯ ದ್ವಾರಕಾ (Dwarka) ಪ್ರದೇಶದಲ್ಲಿ ಬೈಕ್‌ನಲ್ಲಿ ಬಂದ ಇಬ್ಬರು ವ್ಯಕ್ತಿಗಳು ಆಕೆಯ ಮೇಲೆ ಆಸಿಡ್ ದಾಳಿ (Acid Attack) ಮಾಡಿದ್ದರಿಂದ 17 ವರ್ಷದ ಬಾಲಕಿ (Girl) ಗಂಭೀರವಾಗಿ ಗಾಯಗೊಂಡು ಆಸ್ಪತ್ರೆಗೆ ದಾಖಲಾಗಿದ್ದಾಳೆ (Hospitalised) ಎಂದು ತಿಳಿದುಬಂದಿದೆ. ಯುವತಿಯ ಸ್ಥಿತಿ ಚಿಂತಾಜನಕವಾಗಿದ್ದು, ರಾಸಾಯನಿಕವು (Chemical) ಆಕೆಯ ಮುಖಕ್ಕೆ ಚಿಮ್ಮಿ ಆಕೆಯ ಕಣ್ಣಿಗೂ ಬಿದ್ದಿದೆ ಎಂದು ಬಾಲಕಿಯ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. 

ಈ ಘಟನೆ ಸಂಬಂಧ ಬಾಲಕಿ, ಇಬ್ಬರು ಶಂಕಿತರನ್ನು ಗುರುತಿಸಿದ್ದು, ಅವರಲ್ಲಿ ಒಬ್ಬನನ್ನು ಬಂಧಿಸಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಆ ಪ್ರದೇಶದಲ್ಲಿನ ಸಿಸಿಟಿವಿ ಕ್ಯಾಮೆರಾದಲ್ಲಿ ಸೆರೆಹಿಡಿಯಲಾದ ಘಟನೆಯ ಆಘಾತಕಾರಿ ದೃಶ್ಯಗಳಲ್ಲಿ ಇಬ್ಬರು ಹುಡುಗಿಯರು ರಸ್ತೆಬದಿಯಲ್ಲಿ ನಡೆದುಕೊಂಡು ಹೋಗುತ್ತಿರುವಾಗ ಬೈಕ್ ವೇಗ ಕಡಿಮೆಯಾದಾಗ ಮತ್ತು ಸವಾರರಲ್ಲಿ ಒಬ್ಬರು 17 ವರ್ಷದ ಯುವತಿಯ ಮೇಲೆ ದ್ರವ ಪದಾರ್ಥವನ್ನು ಎಸೆದಿದ್ದಾರೆ. ನಂತರ ಅವಳು ತನ್ನ ಮುಖವನ್ನು ಹಿಡಿದುಕೊಂಡು ಓಡುತ್ತಿರುವುದನ್ನು ಸಿಸಿ ಕ್ಯಾಮೆರಾ ದೃಶ್ಯಗಳಲ್ಲಿ ಕಾಣಬಹುದು. ಈ ವೇಳೆ ಅವಳು ಸ್ಪಷ್ಟವಾಗಿ ತೀವ್ರವಾದ ನೋವಿನಲ್ಲಿದ್ದಳು ಎಂಬುದೂ ತಿಳಿದುಬಂದಿದೆ. 

ಇದನ್ನು ಓದಿ: ಹುಮನಾಬಾದ್‌: ಆ್ಯಸಿಡ್‌ ವಾಸನೆಗೆ ಜಾರ್ಖಾಂಡ್‌ ಮೂಲದ ವ್ಯಕ್ತಿ ಸಾವು

"ನನ್ನ ಹೆಣ್ಣುಮಕ್ಕಳು, ಒಬ್ಬರು 17 ವರ್ಷ ಮತ್ತು ಇನ್ನೊಬ್ಬಳು 13 ವರ್ಷದವಳು, ಇಂದು ಬೆಳಗ್ಗೆ ಒಟ್ಟಿಗೆ ಹೋಗಿದ್ದರು. ಇದ್ದಕ್ಕಿದ್ದಂತೆ, ಬೈಕ್‌ನಲ್ಲಿ ಬಂದ ಇಬ್ಬರು ಪುರುಷರು ನನ್ನ ಹಿರಿಯ ಮಗಳ ಮೇಲೆ ಆಸಿಡ್ ಎಸೆದು ಎಸ್ಕೇಪ್‌ ಆಗಿದ್ದಾರೆ. ಅವರು ತಮ್ಮ ಮುಖವನ್ನು ಮುಚ್ಚಿಕೊಂಡಿದ್ದರು" ಎಂದು ಹುಡುಗಿಯ ತಂದೆ ಮಾಧ್ಯಮಗಳಿಗೆ ತಿಳಿಸಿದ್ದಾರೆ. ಇನ್ನು,
ನಿಮ್ಮ ಮಗಳು ಯಾರಿಂದಾದರೂ ಕಿರುಕುಳದ ಬಗ್ಗೆ ದೂರು ನೀಡಿದ್ದಾಳಾ ಎಂದು ಕೇಳಿದಾಗ, ಆಕೆಯ ತಂದೆ "ಇಲ್ಲ, ಆ ರೀತಿ ದೂರು ನೀಡಿಲ್ಲ. ಹಾಗೆ ಇದ್ದಲ್ಲಿ, ನಾನು ಅವಳೊಂದಿಗೆ ಎಲ್ಲ ಕೆಯೂ ಹೋಗುತ್ತಿದ್ದೆ. ಇಬ್ಬರೂ ಸಹೋದರಿಯರು ಮೆಟ್ರೋದಲ್ಲಿ ಒಟ್ಟಿಗೆ ಶಾಲೆಗೆ ಹೋಗುತ್ತಾರೆ" ಎಂದೂ ಆಸಿಡ್‌ ದಾಳಿಗೊಳಗಾಗಿರುವ ಬಾಲಕಿಯ ತಂದೆ ಹೇಳಿದರು.

ಇನ್ನು, ಬಾಲಕಿಯ ತಾಯಿ ಸಹ ತನಗೆ ಯಾವುದೇ ವ್ಯಕ್ತಿ ತೊಂದರೆ ಕೊಡುತ್ತಿರುವ ಬಗ್ಗೆ ತನ್ನ ಹಿರಿಯ ಮಗಳು ಮನೆಯಲ್ಲಿ ಮಾತನಾಡಿಲ್ಲ ಎಂದು ಮಾಧ್ಯಮವೊಂದಕ್ಕೆ ಹೇಳಿದ್ದಾರೆ. 

ಇದನ್ನೂ ಓದಿ: ರೈಲಲ್ಲಿ ಈ ಮೂರು ವಸ್ತು ಕೊಂಡೊಯ್ದರೆ ಜೈಲು ಗ್ಯಾರಂಟಿ
 
ಸ್ವಾತಿ ಮಲಿವಾಲ್ ಖಂಡನೆ
ಇನ್ನು, ಈ ಘಟನೆಯ ಬಗ್ಗೆ ದೆಹಲಿ ಮಹಿಳಾ ಸಮಿತಿ ಮುಖ್ಯಸ್ಥೆ ಸ್ವಾತಿ ಮಲಿವಾಲ್ ಕಳವಳ ವ್ಯಕ್ತಪಡಿಸಿದ್ದು, ಇಂತಹ ಘೋರ ಅಪರಾಧಗಳನ್ನು ತಡೆಯಲು ಆಸಿಡ್ ಮಾರಾಟವನ್ನು ಏಕೆ ನಿರ್ಬಂಧಿಸಲು ಸಾಧ್ಯವಿಲ್ಲ ಎಂದು ಪ್ರಶ್ನಿಸಿದ್ದಾರೆ. "ದೇಶದ ರಾಜಧಾನಿಯಲ್ಲಿ ಹಗಲು ಹೊತ್ತಿನಲ್ಲಿ ಇಬ್ಬರು ಗೂಂಡಾಗಳು ಶಾಲಾ ಬಾಲಕಿಯ ಮೇಲೆ ಆ್ಯಸಿಡ್ ಎರಚಿದ್ದಾರೆ. ಇನ್ನೂ ಯಾರಿಗಾದರೂ ಕಾನೂನಿನ ಮೇಲೆ ಭಯವಿದೆಯೇ? ಆಸಿಡ್ ಮಾರಾಟವನ್ನು ಏಕೆ ನಿಷೇಧಿಸಬಾರದು..? ನಾಚಿಕೆಗೇಡು" ಎಂದು ಟ್ವೀಟ್ ಮಾಡಿದ್ದಾರೆ.

ಹಾಗೆ, ಮತ್ತೊಂದು ಪೋಸ್ಟ್‌ನಲ್ಲಿ ಅವರು ತರಕಾರಿಗಳಂತೆ ಸುಲಭವಾಗಿ ಮಾರುಕಟ್ಟೆಯಲ್ಲಿ ಆಸಿಡ್ ಲಭ್ಯವಿದೆ ಎಂದು ಹೇಳಿದರು ಹಾಗೂ ಸರ್ಕಾರವು ಅದರ ಚಿಲ್ಲರೆ ಮಾರಾಟವನ್ನು ಏಕೆ ನಿಷೇಧಿಸುತ್ತಿಲ್ಲ ಎಂದೂ ಪ್ರಶ್ನಿಸಿದರು. ಅಲ್ಲದೆ, ದೆಹಲಿಯ ಮಹಿಳಾ ಸಮಿತಿಯು ಆಸಿಡ್‌ ನಿಷೇಧಕ್ಕೆ ಹಲವು ವರ್ಷಗಳಿಂದ ಒತ್ತಾಯಿಸುತ್ತಿದೆ. ಆದರೆ, ಸರ್ಕಾರಗಳು ಎಚ್ಚೆತ್ತುಕೊಳ್ಳೋದು ಯಾವಾಗ ಎಂದೂ ಅವರು ಟ್ವಿಟ್ಟರ್‌ನಲ್ಲಿ ಪ್ರಶ್ನೆ ಮಾಡಿದ್ದಾರೆ. 

ಇದನ್ನೂ ಓದಿ: ಕಣ್ಣಿಗೆ ಆಸಿಡ್‌ ಹಾಕಿದ್ದ ಪಾಪಿಗಳು, ನಿರ್ಭಯಾ ರೀತಿಯ ರೇಪ್‌ ಕೇಸ್‌.. ಆದ್ರೂ ಆರೋಪಿಗಳು ಖುಲಾಸೆ!

Follow Us:
Download App:
  • android
  • ios