Asianet Suvarna News Asianet Suvarna News

ಕಣ್ಣಿಗೆ ಆಸಿಡ್‌ ಹಾಕಿದ್ದ ಪಾಪಿಗಳು, ನಿರ್ಭಯಾ ರೀತಿಯ ರೇಪ್‌ ಕೇಸ್‌.. ಆದ್ರೂ ಆರೋಪಿಗಳು ಖುಲಾಸೆ!

ದೇಶದಲ್ಲಿ ಸಾಕಷ್ಟು ರೇಪ್‌ ಆಂಡ್‌ ಮರ್ಡರ್‌ ಕೇಸ್‌ಗಳಾಗುತ್ತವೆ. ಪ್ರತಿ ರೇಪ್‌ ಘಟನೆ ಆದಾಗಲೂ ಅದಕ್ಕೊಂದು ಪ್ರತಿಭಟನೆ, ತನಿಖೆ ಬಳಿಕ ವಿಚಾರಣೆ ಇಷ್ಟರಲ್ಲೇ ಮುಗಿದು ಹೋಗುತ್ತದೆ. ಆದರೆ, 2012ರ ನಿರ್ಭಯಾ ರೇಪ್‌ ಆಂಡ್‌ ಮರ್ಡರ್‌ ಕೇಸ್‌ ಬಹುಶಃ ಭಾರತೀಯರನ್ನು ಜಾಗೃತಿ ಮಾಡಿದ ಪ್ರಕರಣ. ಆ ಪ್ರಕರಣದಲ್ಲಿ ತಪ್ಪಿತಸ್ಥರಿಗೆ ಈಗಾಗಲೇ ಗಲ್ಲು ಶಿಕ್ಷೆಯಾಗಿದ್ದರೆ, ಅದೇ ವರ್ಷ ನಡೆದ ಇನ್ನೊಂದು ಭಯಾಯಕ ರೇಪ್‌ ಆಂಡ್‌ ಮರ್ಡರ್‌ ಕೇಸ್‌ನಲ್ಲಿ ಭಾಗಿಯಾದ ಮೂರು ಆರೋಪಿಗಳನ್ನು ಸುಪ್ರೀಂ ಕೋರ್ಟ್‌ ಸೋಮವಾರ ಖುಲಾಸೆ ಮಾಡಿದೆ.

2012 Chhawla rape case  Supreme Court acquits 3 men Inside Stroy Of heinous Rape and Murder case san
Author
First Published Nov 7, 2022, 5:38 PM IST

ನವದೆಹಲಿ (ನ.7): ಇಡೀ ದೇಶದ ಗಮನಸೆಳೆದಿದ್ದ ನಿರ್ಭಯಾ ರೇಪ್‌ ಆಂಡ್‌ ಮರ್ಡರ್‌ ಕೇಸ್‌ ನಡೆದ ವರ್ಷವೇ ಘಟಿಸಿದ್ದ ಪ್ರಕರಣ ಇದು. ನಿರ್ಭಯಾ ಪ್ರಕರಣ ಡಿಸೆಂಬರ್‌ನಲ್ಲಿ ನಡೆದಿದ್ದರೆ ಈ ರೇಪ್‌ ಆಂಡ್‌ ಮರ್ಡರ್‌ ಕೇಸ್‌ ನಡೆದಿದ್ದ ಫೆಬ್ರವರಿ 9 ರಂದು. ಉತ್ತರಾಖಂಡದ ಛಾವಲಾದಲ್ಲಿ ನಡೆದಿದ್ದ ರೇಪ್‌ ಕೇಸ್‌ ಹೇಗಿತ್ತು ಎಂದರೆ, ಘಟನೆಯ ವಿವರಣೆ ಕೇಳುವಾಗ ಪೊಲೀಸರೇ ಕಣ್ಣೀರಾಗಿದ್ದರು. ಇದರ ವಿಚಾರಣೆ ನಡೆಸಿದ್ದ ದೆಹಲಿ ಹೈಕೋರ್ಟ್‌ ಮೂವರು ಪಾಪಿಗಳನ್ನು 'ನರಭಕ್ಷಕರು' ಎಂದು ಕರೆದಿದ್ದು ಮಾತ್ರವಲ್ಲದೆ, ಮರಣದಂಡನೆ ಶಿಕ್ಷೆ ವಿಧಿಸಿತ್ತು. ಆದರೆ, ಹೈಕೋರ್ಟ್‌ ತೀರ್ಪಿನ ವಿರುದ್ಧ ಸುಪ್ರೀಂ ಕೋರ್ಟ್‌ಗೆ ಆರೋಪಿಗಳು ಮೇಲ್ಮನವಿ ಸಲ್ಲಿಸಿದ್ದರು. ಇದರ ಸುದೀರ್ಘ ವಿಚಾರಣೆ ನಡೆಸಿದ ಕೋರ್ಟ್‌, ಗಲ್ಲು ಶಿಕ್ಷೆ ರದ್ದು ಮಾಡಿದ್ದಲ್ಲದೆ, ಆರೋಪಿಗಳನ್ನು ಖುಲಾಸೆ ಮಾಡಿದೆ. ಇವರನ್ನು ಬಿಡುಗಡೆ ಮಾಡಲಾಗಿದೆ ಎಂದಾದಲ್ಲಿ, ನಿರ್ಭಯಾ ರೀತಿಯ ಕೇಸ್‌ನಲ್ಲಿ ಈ ಅಪರಾಧ ಎಸಗಿದವರು ಯಾರು ಎನ್ನುವ ಪ್ರಶ್ನೆ ಏಳಲಾರಂಭಿಸಿದೆ. ಛಾವಲಾ ರೇಪ್‌ ಕೇಸ್‌ಗಳ ವಿವರಗಳು ಹೇಗಿತ್ತವೆಂದರೆ, ಒಬ್ಬ ಮನುಷ್ಯನಿಗೆ ಮನುಷ್ಯನೊಬ್ಬ ಈ ರೀತಿಯಲ್ಲೂ ಹಿಂಸೆ ನೀಡಬಹುದಾ ಎಂದು ಅಚ್ಚರಿಯಾಗಿತ್ತು. ನಿರ್ಭಯಾ ಘಟನೆಗೂ ಮುನ್ನ ದೇಶದ ಗಮನಸೆಳೆದ ಛಾವಲಾ ರೇಪ್‌ ಆಂಡ್‌ ಮರ್ಡರ್‌ ಕೇಸ್‌ನ ವಿವರಗಳು ಇಲ್ಲಿವೆ.

2012ರ ಫೆಬ್ರವರಿ 9ರಂದು ನಡೆದ ಈ ಘಟನೆ, ಇಡೀ ರಾಜ್ಯವನ್ನು ದಿಗ್ಭ್ರಮೆಗೊಳಿಸಿತ್ತು. ಎಂದಿನಂತೆ ಸಂಜೆಯ ವೇಳೆ ಛಾವಲಾದ 19 ವರ್ಷದ ಹುಡುಗಿ ಸಂಜನಾ (ಹೆಸರು ಬದಲಿಸಲಾಗಿದೆ) ಗುರುಗ್ರಾಮದಲ್ಲಿ ತನ್ನ ಕೆಲಸವನ್ನು ಮುಗಿಸಿ ಮನೆಗೆ ತೆರಳಲು ಬಸ್‌ಸ್ಟಾಪ್‌ಗೆ ಹೋಗುತ್ತಿದ್ದಳು. ಆಕೆಯೊಂದಿಗೆ ಆಕೆಯ ಸ್ನೇಹಿತರೂ ಕೂಡ ಇದ್ದರು. ಆದರೆ, ತನ್ನ ಜೀವನವೇ ಮುಕ್ತಾಯ ಕಾಣುವ ಘಟನೆ ನಡೆಯಲಿದೆ ಎನ್ನುವ ಸಣ್ಣ ಸೂಚನೆಯೂ ಆಕೆಗೆ ಇದ್ದಿರಲಿಲ್ಲ. ಬಸ್‌ ಏರಿ ಕೆಲ ಸಮಯದ ಪ್ರಯಾಣದ ಬಳಿಕ, ತಾನು ಇಳಿಯಬೇಕಾದ ನಿಲ್ದಾಣದಲ್ಲಿ ಇಳಿದು, ಮನೆಯ ಕಡೆ ಹೆಜ್ಜೆ ಹಾಕಿದ್ದಳು. ಈ ಹಂತದಲ್ಲಿ ಕೆಂಪು ಬಣ್ಣದ ಇಂಡಿಕಾ ಕಾರು ಈಕೆಯ ದಾರಿಯನ್ನು ತಡೆದಿತ್ತು. ಮೂವರು ಆರೋಪಿಗಳಾದ ರವಿ ಕುಮಾರ್‌, ರಾಹುಲ್‌ ಹಾಗೂ ವಿನೋದ್‌, ಸಂಜನಾಳನ್ನು ಬಲವಂತವಾಗಿ ಹಿಡಿದು ಕಾರಿನೊಳಗೆ ಹಾಕಿಕೊಂಡು ಅಪಹರಣ ಮಾಡಿದ್ದರು.

ಆತಂಕಕ್ಕೆ ಒಳಗಾಗಿದ್ದ ಕುಟುಂಬ: ಒಂದೆಡೆ ಸಂಜನಾಳನ್ನು ಅಪಹರಣ ಮಾಡಿದ್ದರೆ, ಇನ್ನೊಂಡೆ ಅವರ ಮನೆಯಲ್ಲಿ ಮಗಳು ಮನೆಗೆ ಇನ್ನೂ ಬಂದಿಲ್ಲವಲ್ಲ ಎನ್ನುವ ಆತಂಕ ಶುರುವಾಗಿತ್ತು. ಸೂರ್ಯ ಮುಳುಗಿ ಕತ್ತಲಾಗುವ ವೇಳೆ ಮನೆಯಲ್ಲಿ ಆತಂಕ ಹೆಚ್ಚಾಗತೊಡಗಿತ್ತು. ಆಕೆಯನ್ನು ಹುಡುಕಲು ಆರಂಭ ಮಾಡಿದ್ದರು. ಸಾಕಷ್ಟು ಕಡೆಗಳಲ್ಲಿ, ಸ್ನೇಹಿತರ ಮನೆಯಲ್ಲಿ ಎಲ್ಲಾ ಕಡೆ ವಿಚಾರಿಸಿದರೂ ಪತ್ತೆಯೇ ಇಲ್ಲ. ಆಕೆ ಕೆಲಸ ಮಾಡುವ ಸ್ಥಳದಲ್ಲಿ, ಆಕೆ ಆಗಲೇ ಮನೆಗೆ ಹೋಗಿದ್ದಾಳೆ ಎನ್ನುವ ಮಾಹಿತಿ ಸಿಕ್ಕಿತ್ತು.ಎಲ್ಲಿಯೂ ಸಂಜನಾರ ಮಾಹಿತಿ ಸಿಕ್ಕಿರಲಿಲ್ಲ. ಸಾಕಷ್ಟು ಹುಡುಕಾಟದ ಬಳಿಕ, ಕೆಲವು ವ್ಯಕ್ತಿಗಳು ದುಷ್ಕರ್ಮಿಗಳು ಹುಡುಗಿಯೊಬ್ಬಳನ್ನು ಕಾರಿನಲ್ಲಿ ಅಪಹರಣ ಮಾಡಿ, ದೆಹಲಿಯ ಹೊರಗಡೆ ಕರೆದುಕೊಂಡು ಹೋಗುತ್ತಿರುವುದನ್ನು ನೋಡಿದ್ದಾಗಿ ತಿಳಿಸಿದರು.

ಅವರ ಕಾರು ಹಿಡಿಯಲು ನಮ್ಮಲ್ಲಿ ವಾಹನ ಇಲ್ಲ ಎಂದಿದ್ದ ಪೊಲೀಸ್‌: ಸಂಜನಾಗೆ ಏನೋ ಆಗಿದೆ ಎನ್ನುವ ಅತಂಕ ಮನೆಯವರಿಗೆ ಕಾಡಿದ್ದರೆ, ದೆಹಲಿ ಪೊಲೀಸ್‌ ಹೆಚ್ಚಿನ ಗಮನ ನೀಡಿರಲಿಲ್ಲ. ಖಾಸಗಿ ಕಂಪನಿಯಲ್ಲಿ ಗಾರ್ಡ್‌ ಆಗಿ ಕೆಲಸ ಮಾಡುತ್ತಿದ್ದ ಸಂಜನಾಳ ತಂದೆ ಆತಂಕಿತರಾಗಿದ್ದರು.  ಇದಾದ ನಂತರ ದೆಹಲಿ ಪೊಲೀಸರ ಸಹಾಯ ಪಡೆಯಲು ನಿರ್ಧರಿಸಿದರು. ಪೊಲೀಸರಿಗೆ ಕರೆ ಮಾಡಿದಾಗ ಪೊಲೀಸರು ಒಂದು ಗಂಟೆಗೂ ಹೆಚ್ಚು ಕಾಲ ತಡವಾಗಿ ಸ್ಥಳಕ್ಕೆ ತಲುಪಿದರು. ಅಲ್ಲಿ ಸಂಜನಾ ಮನೆಯವರು ಇಡೀ ಘಟನೆಯ ಬಗ್ಗೆ ಪೊಲೀಸರಿಗೆ ತಿಳಿಸಿದ್ದಾರೆ. ಆದರೆ ಶಂಕಿತ ದುಷ್ಕರ್ಮಿಗಳನ್ನು ಪತ್ತೆಹಚ್ಚಲು ತಮ್ಮ ಬಳಿ ವಾಹನವಿಲ್ಲ ಎಂದು ಅವರು ಅಸಡ್ಡೆ ತೋರಿದ್ದರು.

ಹರಿಯಾಣಕ್ಕೆ ಕರೆದುಕೊಂಡು ಹೋಗಿದ್ದರು: ಸಂಜನಾಳನ್ನು ಕಿಡ್ನಾಪ್‌ ಮಾಡಿದ್ದ ಆರೋಪಿಗಳು ಆಕೆಯನ್ನು ಹರಿಯಾಣಕ್ಕೆ ಕರೆದುಕೊಂಡು ಹೋಗಿದ್ದರು. ಹಾಗಂತ ಅವರು ಎಲ್ಲಿಯೂ ಹೆದ್ದಾರ ಮಾರ್ಗವನ್ನು ಬಳಸಿರಲಿಲ್ಲ. ಹರಿಯಾಣದವರೆಗೂ ಒಳಮಾರ್ಗದಲ್ಲಿ ಕಾರು ಚಲಾಯಿಸಿದ್ದರು. ಆರೋಪಿಗಳು ಹರಿಯಾಣದವರೇ ಆಗಿದ್ದ ಕಾರಣ ಅವರಿಗೆ ಈ ಎಲ್ಲಾ ಮಾರ್ಗಗಳ ಅರಿವಿತ್ತು. ಹರಿಯಾಣಕ್ಕೆ ತೆರಳಿದ ಬಳಿ, ಮದ್ಯದ ಅಂಗಡಿಯಲ್ಲಿ ಮದ್ಯ ಖರೀದಿ ಕಾರ್‌ಅನ್ನು ಏಕಾಂತ ಸ್ಥಳದಲ್ಲಿ ನಿಲ್ಲಿಸಿದ್ದರು. ಅಲ್ಲಿಯೇ ಮದ್ಯ ಸೇವನೆ ಮಾಡಿದ್ದರು. ಮೊದಲಿಗೆ ಆಕೆಯ ಬಟ್ಟೆಗಳನ್ನು ಹರಿದು ಹಾಕಿದ್ದ ಆರೋಪಿಗಳು, ಒಬ್ಬೊಬ್ಬರಾಗಿ ರೇಪ್‌ ಮಾಡಿದ್ದರು. ಆಕೆಯ ದೇಹದ ಯಾವ ಭಾಗವನ್ನೂ ಪಾಪಿಗಳು ಬಿಟ್ಟಿರಲಿಲ್ಲ. ಆಕೆಯ ದೇಹದ ಬಹುತೇಕ ಭಾಗಗಳನ್ನು ಕಚ್ಚಿ ಹಿಂಸೆ ಮಾಡಿದ್ದರು. ಬಿಟ್ಟುಬುಡುವಂತೆ ಎಷ್ಟೇ ಕೇಳಿದರೂ, ಅವರ ಮನಸ್ಸು ಕರಗಿರಲಿಲ್ಲ. ಆಕೆಯನ್ನು ಹಿಂಸೆ ಮಾಡಿ ಕೊಲ್ಲಲೇಬೇಕು ಎನ್ನುವಷ್ಟು ಕಾಮ ಅವರಲ್ಲಿತ್ತು.  ಒಂದೆಡೆ ಮದ್ಯದ ಅಮಲು, ಇನ್ನೊಂದಡೆ ಕಾಮದಾಸೆಗೆ ಬಿದ್ದ ರಾಕ್ಷಸರ ರೀತಿ ವರ್ತನೆ ಮಾಡಿದ್ದರು.

ನೀರಾದ್ರೂ ಕೊಡಿ ಎಂದಿದ್ದಳು ಹುಡುಗಿ: ಆಕೆಯನ್ನು ರೇಪ್‌ ಮಾಡಿದ ಬಳಿಕವೂ ರಾಕ್ಷಸೀಯ ವರ್ತನೆ ನಿಂತಿರಲಿಲ್ಲ. ಸುಸ್ತಾಗಿ ಹೋಗಿದ್ದ ಆಕೆ, ಕನಿಷ್ಠ ಕುಡಿಯೋಕೆ ನೀರಾದ್ರು ಕೊಡಿ ಎಂದಿದ್ದಳು. ಮೂವರಲ್ಲಿ ಒಬ್ಬ ಆಕೆಗೆ ಒಂದು ಮಣ್ಣಿನ ಮಡಿಕೆಯಲ್ಲಿ ನೀರು ತಂದುಕೊಟ್ಟಿದ್ದ. ಆಕೆ ನೀರು ಕುಡಿಯುತ್ತಿದ್ದಂತೆ, ಅವರಲ್ಲಿ ಇಬ್ಬವನೊಬ್ಬ ಕೊಲೆ ಮಾಡುವ ಐಡಿಯಾ ಕೊಟ್ಟಿದ್ದ. ಇದರ ಬೆನ್ನಲ್ಲಿಯೇ ಅವರಲ್ಲಿನ ಕ್ರೂರತನ ಇನ್ನಷ್ಟು ಎದ್ದಿತ್ತು. ಮೊದಲಿಗೆ ಆಕೆಗೆ ನೀರು ನೀಡಿದ್ದ ಮಣ್ಣಿನ ಮಡಿಕೆಯಲ್ಲೇ ಆಕೆಯ ತಲೆಗೆ ಬಡಿದಿದ್ದರು.

2012 ಅತ್ಯಾಚಾರ, ಕೊಲೆ ಕೇಸ್‌: ಮೂವರ ಗಲ್ಲುಶಿಕ್ಷೆ ಖುಲಾಸೆಗೊಳಿಸಿದ Supreme Court

ಅದಾದ ಬಳಿಕ ಸಂಜನಾಳಿಗೆ ಏನೇನು ಮಾಡಿದರು ಎನ್ನುವ ಮಾಹಿತಿ ಕೇಳಿದರೆ, ಅಚ್ಚರಿಯಾಗದೇ ಇರದು. ಮೂವರು ಆರೋಪಿಗಳ ಪೈಕಿ ಒಬ್ಬಾತ ತಿರುಗಿ ಕಾರಿನಲ್ಲಿದ್ದ ಕಬ್ಬಿಣದ ಜಾಕ್ ಅನ್ನು ಹೊರಕ್ಕೆ ತಂದಿದ್ದಾನೆ. ಇದರಿಂದ ಆಕೆಯ ತಲೆಗೆ ಬಡಿದಿದ್ದಾರೆ. ಆಕೆಗೆ ಬಿದ್ದ ಮೊದಲ ಹೊಡೆತಕ್ಕೆ ನೋವಿನಿಂದ ನೆಲಕ್ಕೆ ಬಿದ್ದಿದ್ದಳು. ಆದರೆ, ಕನಿಕರವೇ ಇಲ್ಲದೇ ಇರುವಂತೆ ಅವರು ತೀರ್ಮಾನ ಮಾಅಡಿದ್ದರು, ಆಕೆಯನ್ನು ಕಾರ್‌ನ ಉಪಕರಣಗಳಿಂದ ಹೊಡೆದು ಸಾಯಿಸಿದ್ದು ಮಾತ್ರವಲ್ಲ, ಆಕೆಯ ಗುರುತು ಮರೆಮಾಚುವ ಪ್ರಯತ್ನ ಕೂಡ ಮಾಡಿದ್ದರು.

ರೇಪ್ ಬಗ್ಗೆ ಬೇಜವಾಬ್ದಾರಿ ಹೇಳಿಕೆ, ಮಮತಾ ಸಿಎಂ ಆಗಲು ಲಾಯಕ್ಕಲ್ಲ ಎಂದ ನಿರ್ಭಯಾ ತಾಯಿ!

ಅಗಾಧವಾದ ನೋವು ಮತ್ತು ಸಂಕಟದಿಂದ ಸಂಜನಾ ಮೂರ್ಛೆ ಹೋಗಿದ್ದಳು. ಆಕೆಯ ಇಡೀ ದೇಹ ರಕ್ತಮಯವಾಗಿತ್ತು. ಆದರೆ, ಆರೋಪಿಗಳು ವಾಹನದ ಸೈಲೆನ್ಸರ್‌ ಮೂಲಕ ಇತರ ಉಪಕರಣಗಳನ್ನು ಬಿಸಿ ಮಾಡುವ ಮೂಲಕ ಆಕೆಯ ದೇಹವನ್ನು ಸುಟ್ಟಿದ್ದರು. ಆಕೆಯ ಗುಪ್ತಾಂಗವನ್ನು ಅವರು ಸುಟ್ಟುಹಾಕಿದ್ದರು. ಬಿಯರ್‌ ಬಾಟಲಿಯನ್ನು ಒಡೆದ ಆರೋಪಿಗಳಲ್ಲಿ ಒಬ್ಬ, ಆಕೆಯ ಇಡೀ ದೇಹವನ್ನು ಅದರ ಮೊನಚಿನಿಂದ ಕತ್ತರಿಸಿದ್ದ. ಮುರಿದ ಬಿಯರ್‌ ಬಾಟಲಿ ಗ್ಲಾಸ್‌ಅನ್ನು ಆಕೆಯ ಗುಪ್ತಾಂಗಕ್ಕೆ ಹಾಕಿದ್ದ. ಆಕೆಯ ಕಣ್ಣನ್ನು ತೆರೆದು ಅದಕ್ಕೆ ಕಾರಿನ ಬ್ಯಾಟರಿಯಲ್ಲಿದ್ದ ಆಸಿಡ್‌ ಹಾಕಿದ್ದರು. ಆಕೆಯ ಮೇಲೆ ಹಲವು ಬಾರಿ ಹಲ್ಲೆ ಮಾಡಿದ ಬಳಿಕ ನಾವು ಆ ಸ್ಥಳದಿಂದ ಪರಾರಿಯಾಗಿದ್ದೆವು ಎಂದು ಸ್ವತಃ ಆರೋಪಿಗಳಲ್ಲಿ ಒಬ್ಬ ಪೊಲೀಸರಿಗೆ ಹೇಳಿದ್ದ. ಸ್ವತಃ ಆತನೇ ಈ ಎಲ್ಲಾ ವಿವರ ಪೊಲೀಸರಿಗೆ ಹೇಳಿದ್ದ. 

ಹರಿಯಾಣದ ರೆವಾರಿಯಲ್ಲಿ ಮೂವರು ಕ್ರಿಮಿನಲ್‌ಗಳು ಈ ಘಟನೆ ನಡೆಸಿದ್ದರು. ಸಂಜನಾಳ ಶವ ಕೂಡ ಪೊಲೀಸರಿಗೆ ಇದೇ ಪ್ರದೇಶಲ್ಲಿ ಸಿಕ್ಕಿತ್ತು. ಮೃತದೇಹದ ಮರಣೋತ್ತರ ಪರೀಕ್ಷೆ ನಡೆಸಿದಾಗ ಅದರ ವರದಿಯೂ ಆಕೆಯ ಮೇಲೆ ನಡೆದ ಕ್ರೌರ್ಯಕ್ಕೆ ಸಾಕ್ಷಿಯಾಗಿತ್ತು. ಆಕೆಯ ದೇಹ ಪೂರ್ತಿ ಸುಟ್ಟ ಗಾಯ, ಕೊಯ್ದ ಗಾಯಗಳಾಗಿದ್ದವು. ಒಡೆದ ಬಿಯರ್ ಬಾಟಲಿಯಿಂದ ಆಕೆಯ ದೇಹವನ್ನು ಕತ್ತರಿಸಲಾಗಿತ್ತು. ಕಣ್ಣುಗಳನ್ನು ತೆರೆದು ಆಸಿಡ್ ಸುರಿಯಲಾಗಿತ್ತು. ಗುಪ್ತಾಂಗವನ್ನು ಬಿಸಿ ಉಪಕರಣಗಳಿಂದ ಸುಟ್ಟು ಅದರಲ್ಲಿ ವೈನ್ ಬಾಟಲಿಯನ್ನು ಹಾಕಲಾಗಿತ್ತು.  ಅದಾದ ಕೆಲವೇ ದಿನಗಳಲ್ಲಿ ಪೊಲೀಸರು ಕಾರ್‌ ಡ್ರೈವರ್‌ ಆಗಿದ್ದ ಮೂವರೂ ಆರೋಪಿಗಳನ್ನು ಬಂಧಿಸಿದ್ದು ಮಾತ್ರವಲ್ಲ, ತಾವು ಕಂಡ ಅತ್ಯಂತ ಭಯಾನಕ ರೇಪ್‌ ಆಂಡ್‌ ಮರ್ಡರ್‌ ಕೇಸ್‌ ಎಂದಿದ್ದರು.

Follow Us:
Download App:
  • android
  • ios