ನೆರೆಮನೆಯ ಮಹಿಳೆ ಸ್ನಾನ ಮಾಡುತ್ತಿರುವ ವೇಳೆ ಮೊಬೈಲ್‌ನಲ್ಲಿ ಚಿತ್ರಿಕರಿಸುತ್ತಿದ್ದ ಯುವಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪಕ್ಷಿಕೆರೆ ಹೊಸಕಾಡಿನಲ್ಲಿ ಬುಧವಾರ ರಾತ್ರಿ  ನಡೆದಿದೆ.

ದಕ್ಷಿಣ ಕನ್ನಡ (ಆ.5) ನೆರೆಮನೆಯ ಮಹಿಳೆ ಸ್ನಾನ ಮಾಡುತ್ತಿರುವ ವೇಳೆ ಮೊಬೈಲ್‌ನಲ್ಲಿ ಚಿತ್ರಿಕರಿಸುತ್ತಿದ್ದ ಯುವಕನನ್ನು ಸ್ಥಳೀಯರು ಹಿಡಿದು ಪೊಲೀಸರಿಗೆ ಒಪ್ಪಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಪಕ್ಷಿಕೆರೆ ಹೊಸಕಾಡಿನಲ್ಲಿ ಬುಧವಾರ ರಾತ್ರಿ ನಡೆದಿದೆ.

 ಸುಮಂತ್ ಪೂಜಾರಿ(22) ಬಂಧಿತ ಆರೋಪಿ. ದ.ಕ ಜಿಲ್ಲೆಯ ಮುಲ್ಕಿ ತಾಲೂಕಿನ ಪಕ್ಷಿಕೆರೆ ಹೊಸಕಾಡು ನಿವಾಸಿಯಾಗಿದ್ದಾನೆ. ಪಕ್ಕದ ಮನೆಯಾಕೆ ಸ್ನಾನ ಮಾಡುವ ಸಮಯ ಕಾದು ವಿಡಿಯೋ ಚಿತ್ರೀಕರಣ ನಡೆಸಿದ್ದ ಸುಮಂತ್. ವಿಡಿಯೋ ಚಿತ್ರೀಕರಣ ಮಾಡುವುದು ಮಹಿಳೆಯ ಗಮನಕ್ಕೆ ಬಂದಿದೆ. ಈ ವೇಳೆ ಆಕೆ ಕಿರುಚಾಡಿದ್ದಾಳೆ.

ಯುವತಿಯರ ಸ್ನಾನದ ದೃಶ್ಯ ಸೆರೆ ಹಿಡಿಯುತ್ತಿದ್ದವನಿಗೆ ಧರ್ಮದೇಟು: ಕಾಮುಕನ ಬಂಧನ

ಮಹಿಳೆಯ ಕಿರುಚಾಟಕ್ಕೆ ಮನೆಯವರು, ಸುತ್ತಮುತ್ತಲಿನ ಸ್ಥಳೀಯರು ಬಂದಿದ್ದಾರೆ. ಈ ವೇಳೆ ಸುಮಂತ್ ಚಿತ್ರೀಕರಣ ನಡೆಸುತ್ತಿರುವ ಬಗ್ಗೆ ತಿಳಿದುಬಂದಿದೆ. ಬಳಿಕ ಮಹಿಳೆ ಕುಟುಂಬದವರು ಸುಮಂತ್ ಪೂಜಾರಿಯನ್ನು ಹಿಡಿದು ಥಳಿಸಿದ್ದಾರೆ ಎನ್ನಲಾಗಿದೆ. ಥಳಿಸಿದ ಬಳಿಕ ಮೂಲ್ಕಿ ಪೊಲೀಸರಿಗೆ ಸ್ಥಳೀಯರು ಮಾಹಿತಿ ನೀಡಿದ್ದಾರೆ. 

ಸ್ಥಳಕ್ಕೆ ಬಂದ ಪೊಲೀಸರು ಮೊಬೈಲ್ ಸಹಿತ ಸುಮಂತ್ ಪೂಜಾರಿಯನ್ನ ವಶಕ್ಕೆ ಪಡೆದುಕೊಂಡಿದ್ದಾರೆ. ಮಹಿಳೆಯ ಸ್ನಾನ ಮಾಡುವ ವೇಳೆ ಚಿತ್ರೀಕರಿಸಿರುವ ಹಿನ್ನೆಲೆ ಐಪಿಸಿ 354 and 66 E IT act ನಡಿ ಪ್ರಕರಣ ದಾಖಲು ಮಾಡಿಕೊಳ್ಳಲಾಗಿದೆ. ಸದ್ಯ ಸುಮಂತ್ ಪೂಜಾರಿಗೆ ನ್ಯಾಯಾಂಗ ಬಂಧನ ವಿಧಿಸಿದ ಕೋರ್ಟ್. ಮೊಬೈಲ್ ವಶಕ್ಕೆ ಪಡೆದು ಪರಿಶೀಲನೆ ನಡೆಸಿರುವ ಪೊಲೀಸರು. ಈ ಹಿಂದೆ ಇದೇ ರೀತಿ ಮಹಿಳೆರ ವಿಡಿಯೋ ಚಿತ್ರೀಕರಿಸಿದ್ದಾನೆಯೇ ಎಂಬ ಅನುಮಾನದ ಹಿನ್ನೆಲೆ ಮೊಬೈಲ್ ವಿಡಿಯೋ ಪರಿಶೀಲನೆ ನಡೆಸಲಾಗುತ್ತಿದೆ. 

ಮಹಿಳೆ ಸ್ನಾನ ಮಾಡುವಾಗ ಇಣಕೋದು ಅಪರಾಧ: ದಿಲ್ಲಿ ಹೈಕೋರ್ಟ್