ಮಾಂಟ್ರಿಯಲ್(ಜು. 27)  ವಿಡಿಯೋ ಗೇಮಿಂಗ್ ಕಂಪನಿಯ ಒಳಗಿನ ಸೆಕ್ಸ್ ಅವತಾರಗಳು, ಗೇ ಅವತಾರಗಳು, ಸಲಿಂಗ ಕಾಮ, ಗೇಮ್ ಹೆಸರಿನಲ್ಲಿ ಲೈಂಗಿಕ ದೌರ್ಜನ್ಯ.. ಹೀಗೆ ನಾನಾ ವಿಚಾರಗಳು ಇದೀಗ ಟಾಕ್ ಆಫ್ ದಿ ಟೌನ್ ಆಗಿದೆ.  ಯೂಬಿಸಾಫ್ಟ್ ವಿಡಿಯೋ ಗೇಮಿಂಗ್ ಕಂಪನಿ ಸುತ್ತ ಎಲ್ಲ ಸುದ್ದಿಗಳು ಗಿರಕಿ ಹೊಡೆಯುತ್ತವೆ.

2016 ರಲ್ಲಿ ಮಾಂಟ್ರಿಯಲ್ ನಲ್ಲಿ ನಡೆದ ಕಂಪನಿಯ ಬಿಜಿನಸ್ ಮೀಟ್ ನಿಂದ ಕತೆ ಆರಂಭವಾಗುತ್ತದೆ. ಪುರುಷ ಮತ್ತು ಮಹಿಳಾ ಸಿಬ್ಬಂದಿ ಊಟದ   ಟೇಬಲ್ ಸುತ್ತಲೂ ಕುಳಿತುಕೊಂಡಿದ್ದರು.  ನಾನು ಇಡೀ ರಾತ್ರಿಯನ್ನು ಹಸ್ತಮೈಥುನ ಮಾಡಿಕೊಳ್ಳುವುದರಲ್ಲೇ ಕಳೆದಿದ್ದೆ. ಇಬ್ಬರು  ಬೆಳಗಿನ ಜಾವದವರೆಗೂ ನನ್ನ ಜತೆ ಕೂತೆ ಇದ್ದರು ಎಂದು    ಕಂಪನಿಯ ಕ್ರಿಯೇಟಿವ್ ಹೆಡ್ ಗಳಲ್ಲಿ ಒಬ್ಬರಾಗಿದ್ದ ಟಾಮಿ ಫ್ರಾನ್ಸಿಸ್  ಆರೋಪ ಮಾಡಿದ್ದಾರೆ.

ಸೆಕ್ಸ್ ಇಲ್ಲದೆ ಗರ್ಭಿಣಿಯಾದಳು, ಇದು ಹೇಗೆ ಸಾಧ್ಯ?

ಟಾಮಿ ಫ್ರಾನ್ಸಿಸ್ ಕೆಲಸ ಮಾಡುತ್ತಿದ್ದ ಆಫೀಸ್ ನಲ್ಲಿಯೇ ವರ್ಕ್ ಮಾಡುತ್ತಿದ್ದ ಮತ್ತೆ ಐದು ಜನ ಮಾಧ್ಯಮವೊಂದಕ್ಕೆ ಹೇಳಿಕೆ ನೀಡುತ್ತಾರೆ.  ಮಹಿಳಾ ಸಿಬ್ಬಂದಿಯ ದೇಹದ ಬಗ್ಗೆ ಸದಾ ಮಾತನಾಡಲಾಗುತ್ತಿತ್ತು.  ಯಾವುದೇ ಅನುಮತಿ ಪಡೆದುಕೊಳ್ಳದೇ ಮಸಾಜ್ ಮಾಡಲಾಗುತ್ತಿತ್ತು. ಫ್ರೆಂಚ್ ಆಟ ಚಾಟ್ ಬೈಟ್ ಹೆಸರಿನಲ್ಲಿ ಪುರುಷರ ಜನನಾಂಗ ಸ್ಪರ್ಶಿಸಲಾಗುತ್ತಿತ್ತು ಎಂದು ಹೇಳಿದ್ದಾರೆ.

ಲೈಂಗಿಕ ದೌರ್ಜನ್ಯದ ಆರೋಪ ಎದುರಿಸುತ್ತಲೇ ಬಂದಿದ್ದ ಕಂಪನಿ ಸಂಪಾದಕೀಯ ವಿಭಾಗದ ಉಪಾಧ್ಯಕ್ಷ ಮ್ಯಾಕ್ಸ್ಮೆ ಬೆಲಾಡ್ ಜುಲೈ  5  ರಂದು  ತಮ್ಮ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ.  ಮಹಿಳಾ ಸಿಬ್ಬಂದಿ ಕುತ್ತಿಗೆ ಮೇಲೆ ತನ್ನ ಕೈ ಆಡಿಸಿದ್ದ ಎನ್ನುವುದು ಈತನ ಮೇಲಿನ ಗುರುತರ ಆರೋಪ.  ಆದರೆ ಬೆಲಾಡ್ ಈ ಬಗ್ಗೆ ಯಾವುದೆ ಪ್ರತಿಕ್ರಿಯೆ ನೀಡಿಲ್ಲ. ಕಂಪನಿ ಕೇಳಿದರೆ ತನಿಖೆ ಚಾಲ್ತಿಯಲ್ಲಿದೆ ಎಂದು ಹೇಳಿದೆ. ಇದಾದ ಮೇಲೆ ಜುಲೈ  12  ರಂದು ಕಂಪನಿಯ  ಮೂವರು ಅಧಿಕಾರಿಗಳನ್ನು ಲೈಂಗಿಕ ದೌರ್ಜನ್ಯ ಆರೋಪದ ಅಡಿಯಲ್ಲಿಯೇ  ಕೆಲಸದಿಂದ ತೆಗೆದು ಹಾಕಲಾಗುತ್ತದೆ.  ಸಲಿಂಗಕಾಮಿಯಂತೆ ವರ್ತನೆ ಮಾಡುತ್ತಿದ್ದ ಸರ್ಜ್ ಹಾಸ್ಕೋಟ್ ಅವರನ್ನು ಕೆಲಸದಿಂದ ತೆಗೆದಿದ್ದೇವೆ ಎಂದು ಕಂಪನಿ ಎಚ್‌ ಆರ್ ವಿಭಾಗ ಹೇಳುತ್ತದೆ.

ಪೊದೆಯಲ್ಲಿ ಜೋಡಿ ಮುಕ್ತ ಸೆಕ್ಸ್, ಮಹಿಳೆ ಬಾರಿಸಿದ್ಲು ಪೋರು ಸಿಕ್ಸ್

ಕಂಪನಿಯಲ್ಲಿ ಸೆಕ್ಸ್ ಎನ್ನುವುದೇ ಒಂದು ರೂಢಿಯಾಗಿಹೋದಿದೆ. ಇದು ಕೆಳ ಸ್ತರದ ಸಿಬ್ಬಂದಿಯಿಂದ ಹಿಡಿದು ಟಾಪ್ ಮೋಸ್ಟ್ ಸಿಬ್ಬಂದಿತನಕ ಇದೆ ಎಂದಿ  2010 ರಲ್ಲಿ ಕಂಪನಿ ತೊರೆದವರೊಬ್ಬರು ಹೇಳುತ್ತಾರೆ. 

ಕಂಪನಿ ಇಷ್ಟೆಲ್ಲಾ ಆರೋಪಗಳನ್ನು ಎದುರಿಸುತ್ತಿರುವ ಸಂದರ್ಭ ಸಿಇಒ ಯೆವೋಸ್ ಗಿಲ್ಲೇಮೋಟ್ ಮಾತನಾಡಿ, ಆರೋಪಗಳ ಬಗ್ಗೆ ತನಿಖೆ ನಡೆಯುತ್ತಿದೆ. ಎಲ್ಲರೂ ಒಪ್ಪುವಂತಹ ವರ್ಕ್ ಪ್ಲೇಸ್ ನಿರ್ಮಾಣ ಮಾಡುತ್ತೇವೆ, ಆ ಮೂಲಕ ಕಂಪನಿಯನ್ನು ಮತ್ತಷ್ಟು ಭದ್ರ ಮಾಡುತ್ತೇವೆ ಎಂದು ತಿಳಿಸುತ್ತಾರೆ. ಒಟ್ಟಿನಲ್ಲಿ ಇಡೀ ಕಂಪನಿಯ ಮೇಲೆ ಲೈಂಗಿಕ ದೌರ್ಜನ್ಯದ ಆರೋಪ ಸುತ್ತಿಕೊಂಡಿದೆ.