ಮಾಸ್ಕೋ(ಜು. 17)  ಜೋಡಿಯೊಂದು ಪ್ರಪಂಚದ ಪರಿವೇ ಇಲ್ಲದೇ ಸೆಕ್ಸ್ ನಲ್ಲಿ ಮಗ್ನವಾಗಿತ್ತು. ಇದ್ದಕ್ಕಿದ್ದಂತೆ ಎದುರಾದ ಆಘಾತಕ್ಕೆ ಬೆಚ್ಚಿ ಬಿದ್ದಿತ್ತು. ಸಾರ್ವಜನಿಕ ಪ್ರದೇಶದಲ್ಲಿ ಸರಸದಲ್ಲಿ ತೊಡಗಿದ್ದವರಿಗೆ ಮಹಿಳೆ ಸಿಕ್ಕ ಸಿಕ್ಕಲ್ಲಿ ಬಾರಿಸಿದ್ದಾರೆ.

ರಷ್ಯಾದಲ್ಲಿ ಈ ಘಟನೆ ನಡೆದಿದೆ. ರಸ್ತೆ ಬದಿಯಲ್ಲೇ ಮುಕ್ತ ಸರಸದಲ್ಲಿದ್ದವರಿಗೆ ಗೂಸಾದ ಮೇಲೆ ಗೂಸಾ ಬಿದ್ದಿದೆ. ಜೋಡಿಯೊಂದು ರಸ್ತೆ ಬದಿಯಲ್ಲೇ ಸರಸದಲ್ಲಿ ತೊಡಗಿತ್ತು. ಇದನ್ನು ಕಂಡು ಕೆಂಡವಾದ ಲೋಕಲ್ ಲೇಡಿ ಮರದ ತುಂಡೊಂದನ್ನು ತೆಗೆದುಕೊಂಡು ದಾಳಿ ಮಾಡಿದ್ದಾರೆ.  ಬೇರೆ ಎಲ್ಲೂ ಜಾಗ ಸಿಗಲಿಲ್ಲವೇ ಎಂದು ಹೇಳುತ್ತಲೇ ದಾಳಿ ಮಾಡಿದ ಹೆಂಗಸಿನ ಹೆಸರು ಇರಿನಾ.

ವಿಶ್ವಸಂಸ್ಥೆ ಕಾರಿನಲ್ಲೇ ಕಾಮದಾಟ ಕ್ಯಾಮರಾಕ್ಕೆ ಸೆರೆ ಸಿಕ್ತು

ವಿಡಿಯೋದಲ್ಲಿ ಜೋಡಿ ಕಾಲುಗಳು ಇರುವುದು ಸ್ಪಷ್ಟವಾಗಿ ಕಂಡುಬರುತ್ತದೆ. ಇನ್ನು ಮೇಲೆ ಇತ್ತ ಕಡೆ ಮುಖ ಹಾಕಿದರೆ ನೋಡಿ ಎಂದು ಸರಿಯಾಗಿ ದಂಡಿಸಿ ಲೇಡಿ ಮನೆ ಕಡೆ ಹೆಜ್ಜೆ ಹಾಕಿದ್ದಾರೆ. ರಷ್ಯಾ ಸೋಶಿಯಲ್ ಮೀಡಿಯಾದಲ್ಲಿ ಈ ವಿಡಿಯೋದ ಬಗ್ಗೆ ಪರ ವಿರೋಧದ ಚರ್ಚೆ ಜೋರಾಗಿದೆ.