Victoria Doctor Suicide: ಅಪಾರ್ಟ್‌ಮೆಂಟ್‌ನಿಂದ ಜಿಗಿದು ವಿಕ್ಟೋರಿಯಾ ಆಸ್ಪತ್ರೆ ವೈದ್ಯ ಆತ್ಮಹತ್ಯೆ

Victoria hospital doctor committed suicide: ವಿಕ್ಟೋರಿಯಾ ಆಸ್ಪತ್ರೆಯಲ್ಲಿ ವೈದ್ಯರಾಗಿ ಸೇವೆ ಸಲ್ಲಿಸುತ್ತಿದ್ದ ಪೃಥ್ವಿಕಾಂತ ರೆಡ್ಡಿ ಆತ್ಮಹತ್ಯೆಗೆ ಶರಣಾಗಿದ್ದಾರೆ. ತೆಲುಗು ಭಾಷೆಯಲ್ಲಿ ಡೆತ್‌ ನೋಟ್‌ ಬರೆದಿಟ್ಟು ಅಪಾರ್ಟ್‌ಮೆಂಟ್‌ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. 

victoria hospital doctor commits suicide by jumping from his apartment

ಬೆಂಗಳೂರು: ನಗರದ ಪ್ರತಿಷ್ಟಿತ ಆಸ್ಪತ್ರೆಯ ವೈದ್ಯ ಪೃಥ್ವಿಕಾಂತ ರೆಡ್ಡಿ ಎಂಬುವವರು ಅಮೃತಹಳ್ಳಿಯ ತಮ್ಮ ಅಪಾರ್ಟ್‌ಮೆಂಟಿನ ಮೇಲಿಂದ ಜಿಗಿದು ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಈ ಸಂಬಂಧ ಅಮೃತಹಳ್ಳಿ ಠಾಣೆಯ ಪೊಲೀಸರು ತನಿಖೆ ಮಾಡುತ್ತಿದ್ದಾರೆ. ಪ್ರಾಥಮಿಕ ತನಿಖೆಯ ಪ್ರಕಾರ ಹೃದಯಸಂಬಂಧಿ ಖಾಯಿಲೆಯಿಂದ ಬಳಲುತ್ತಿದ್ದರು. ಇದೇ ಕಾರಣಕ್ಕೆ ಮನನೊಂದು ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆಯಿದೆ ಎನ್ನಲಾಗಿದೆ. 

ಪೃಥ್ವಿಕಾಂತ ರೆಡ್ಡಿ ಫ್ಲಾಟ್‌ನಲ್ಲಿ ಮೊಬೈಲ್‌ ಸಿಕ್ಕಿದ್ದು, ಮೊಬೈಲಿನಲ್ಲಿ ತೆಲುಗು ಭಾಷೆಯಲ್ಲಿ ಡೆತ್‌ ನೋಟ್‌ ಬರೆದಿಟ್ಟಿದ್ದಾರೆ. ಅಮೃತಹಳ್ಳಿ ಪೊಲೀಸರು ವೈದ್ಯನ ಮೊಬೈಲ್‌ ವಶಕ್ಕೆ ಪಡೆದು ತನಿಖೆ ನಡೆಸುತ್ತಿದ್ದಾರೆ. ಮೃತದೇಹವನ್ನು ಮರಣೋತ್ತರ ಪರೀಕ್ಷೆಗೆ ಕಳಿಸಲಾಗಿದೆ ಎಂದು ಆಗ್ನೇಯ ವಿಭಾಗದ ಡಿಸಿಪಿ ಅನೂಪ್‌ ಶೆಟ್ಟಿ ಮಾಹಿತಿ ನೀಡಿದ್ದಾರೆ. ಪೃಥ್ವಿಕಾಂತ ರೆಡ್ಡಿ ಮೂರು ತಿಂಗಳ ಹಿಂದಷ್ಟೇ ಮದುವೆಯಾಗಿದ್ದರು. ಮದುವೆಯಾದ ನಂತರ ಅವರಿಗೆ ಹೃದಯ ಸಂಬಂಧಿ ಖಾಯಿಲೆ ಇರುವುದು ಬೆಳಕಿಗೆ ಬಂದಿತ್ತು. 

ಇದನ್ನೂ ಓದಿ: Davanagere; ಪತಿಯ ಕಿರುಕುಳಕ್ಕೆ ಬೇಸತ್ತು 11 ತಿಂಗಳ ಮಗು ಸಹಿತ ಅಮ್ಮ ಆತ್ಮಹತ್ಯೆ!

ಈಗಷ್ಟೇ ಮದುವೆಯಾಗಿದ್ದ ಹಿನ್ನೆಲೆ ಹೆಂಡತಿಗೆ ಹೇಳಿಕೊಳ್ಳು ಆಗದೇ ಮಾನಸಿಕವಾಗಿ ಖಿನ್ನತೆಗೆ ಒಳಗಾಗಿದ್ದರು ಎನ್ನಲಾಗಿದೆ. ಮದುವೆಗೂ ಮುನ್ನ ವಿಚಾರ ತಿಳಿದಿದ್ದರೆ, ಮದುವೆಯೇ ಆಗುತ್ತಿರಲಿಲ್ಲ, ಆದರೆ ಈಗ ಪತ್ತೆಯಾಗಿರುವುದರಿಂದ ಪತ್ನಿ ಬಾಳು ಹಾಳಾಗುತ್ತದೆ ಎಂಬ ಕಾರಣದಿಂದ ತೀವ್ರವಾಗಿ ಚಿಂತೆಗೊಳಗಾಗಿದ್ದರು ಎನ್ನಲಾಗಿದೆ. ಪೃಥ್ವಿಕಾಂತ ರೆಡ್ಡಿಯವರ ಹೆಂಡತಿ ಕೂಡ ವೈದ್ಯರೇ ಆಗಿದ್ದಾರೆ. ಪೃಥ್ವಿಕಾಂತ ರೆಡ್ಡಿ ಮೂಲತಃ ಆಂಧ್ರಪ್ರದೇಶದ ಕಡಪ ಜಿಲ್ಲೆಯವರು. ಬಹಳ ಹಿಂದೆಯೇ ಬೆಂಗಳೂರಿಗೆ ಬಂದು ನೆಲೆಸಿದ್ದರು ಎನ್ನಲಾಗಿದೆ. 

ಡೆತ್‌ ನೋಟ್‌ನಲ್ಲಿ ಏನಿದೆ?:

ನನಗೆ ಹೃದಯ ಸಂಬಂದಿ ಕಾಯಿಲೆ ಇದ್ದು ಕಾಯಿಲೆಯಿಂದ ಬಳಲುತ್ತಿದ್ದೇನೆ. ನಾನು ಬದುಕಿದ್ದರೆ  ಮದುವೆಯಾಗಿರೋ ನನ್ನ ಪತ್ನಿಗೆ ಅನ್ಯಾಯವಾಗುತ್ತೆ. ನನ್ನಿಂದ ಅವಳಿಗೆ ನ್ಯಾಯಕೊಡೊದಕ್ಕೆ ಕಷ್ಟ ಸಾದ್ಯ. ನಾನು ಆತ್ಮಹತ್ಯೆ ಮಾಡಿಕೊಂಡ್ರೆ ನನ್ನವಳಿಗೆ ಬೇರೆಯದೇ ಲೈಪ್ ಸಿಗುತ್ತೆ.ನನ್ನ ಮಾವ ಮನೆಯವರು ತುಂಬಾ ಚೆನ್ನಾಗಿ ನೋಡಿಕೊಂಡಿದ್ದಾರೆ.ನನ್ನ ಪತ್ನಿಗೆ ಅನ್ಯಾಯವಾಗಬಾರದು ಅನ್ನೋ ಒಂದೇ ಕಾರಣಕ್ಕೆ ಆತ್ಮಹತ್ಯೆ ಮಾಡಿಕೊಂಡಿದ್ದೇನೆಂದು ಬರೆದು ಸಂಬಂದಿಕರಿಗೆ ಮೇಸೆಜ್ ಸೆಂಡ್ ಮಾಡಿ ಡಿಲೀಟ್ ಮಾಡಿರೋದು ಬೆಳಕಿಗೆ ಬಂದಿದೆ.

ಇದನ್ನೂ ಓದಿ: BREAKING NEWS: ಮತ್ತೊಬ್ಬ ಜನಪ್ರತಿನಿಧಿ ಹತ್ಯೆ, ತುಮಕೂರಿನಲ್ಲಿ ಘಟನೆ

ಆತ್ಮಹತ್ಯೆ ಮಾಡಿಕೊಂಡಿರೋ ಡಾ ಪೃಥ್ವಿ ಕಾಂತ್ ರೆಡ್ಡಿ ಮೊಬೈಲ್ ವಶಕ್ಕೆ ಪಡೆದು ತನಿಖೆ ಆರಂಭಿಸಿದ್ದಾರೆ.ಘಟನೆ ಸಂಬಂದ ಸದ್ಯ ಪೋಷಕರು ಯಾರು ಕೂಡ ಅಮೃತಹಳ್ಳಿ ಪೊಲೀಸರಿಗೆ ದೂರು ಕೊಟ್ಟಿಲ್ಲ.ಘಟನ ಸ್ಥಳಕ್ಕೆ ಹೋಗಿದ್ದ ಪೊಲೀಸರು ವೈದ್ಯ ಆತ್ಮಹತ್ಯೆ ಮಾಡಿಕೊಂಡಿರೋ ಸಿಸಿಟಿವಿ ಪಡೆದು ತನಿಖೆ ಆರಂಭಿಸಿದ್ದು ,ಪತ್ನಿಯ ಹೇಳಿಕೆ ಪಡೆದ ಬಳಿಕ ಘಟನೆಗೆ ನೈಜ ಕಾರಣ ಏನು ಅನ್ನೋದು ಬೆಳಕಿ ಬರಬೇಕಿದೆ.ಸದ್ಯ ಅಮೃತಹಳ್ಳಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ

"

Latest Videos
Follow Us:
Download App:
  • android
  • ios