BREAKING NEWS: ಮತ್ತೊಬ್ಬ ಜನಪ್ರತಿನಿಧಿ ಹತ್ಯೆ, ತುಮಕೂರಿನಲ್ಲಿ ಘಟನೆ
Tumkur Crime News: ಗುಬ್ಬಿ ಪಟ್ಟಣ ಪಂಚಾಯ್ತಿ ಸದಸ್ಯ ನರಸಿಂಹಮೂರ್ತಿಯವರನ್ನು ಹತ್ಯೆ ಮಾಡಲಾಗಿದೆ. ಜಮೀನು ಸಂಬಂಧಿತ ವಿವಾದವೇ ಈ ಕೊಲೆಗೆ ಕಾರಣ ಎನ್ನಲಾಗುತ್ತಿದೆ. ಈ ಸಂಬಂಧ ಪ್ರಕರಣ ದಾಖಲಾಗಿದ್ದು, ಪೊಲೀಸರು ತನಿಖೆ ಆರಂಭಿಸಿದ್ದಾರೆ. ಜೆಡಿಎಸ್ ಶಾಸಕ ಶ್ರೀನಿವಾಸ್ ಆಪ್ತವಲಯದಲ್ಲಿ ನರಸಿಂಹಮೂರ್ತಿ ಗುರುತಿಸಿ ಕೊಂಡಿದ್ದರು.
ತುಮಕೂರು: ತುಮಕೂರು ಜಿಲ್ಲೆಯ ಗುಬ್ಬಿ ತಾಲೂಕಿನ ಪಟ್ಟಣ ಪಂಚಾಯ್ತಿ ಸದಸ್ಯ ನರಸಿಂಹಮೂರ್ತಿ ಅವರನ್ನು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಹತ್ಯೆಗೈಯ್ಯಲಾಗಿದೆ (Pattana Panchayat member Narasimhamurthy hacked to death). ಜೆಡಿಎಸ್ ಶಾಸಕ ಶ್ರೀನಿವಾಸ್ ಜೊತೆಯಲ್ಲಿ ನರಸಿಂಹಮೂರ್ತಿ ಗುರುತಿಸಿಕೊಂಡಿದ್ದರು. ಇಂದು ಮಧ್ಯಾಹ್ನ ಒಂದು ಗಂಟೆ ಸುಮಾರಿಗೆ ಗುಬ್ಬರಿ ಪಟ್ಟಣದ ಟೀ ಅಂಗಡಿಯೊಂದರ ಬಳಿ ಕುಳಿತಿದ್ದಾಗ ಕಾರಿನಲ್ಲಿ ಬಂದ ದುಷ್ಕರ್ಮಿಗಳು ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿ ಕೊಲೆ ಮಾಡಿದ್ದಾರೆ. ಇದು ಇತ್ತೀಚಿನ ದಿನಗಳಲ್ಲಿ ನಡೆಯುತ್ತಿರುವ ಮೂರನೇ ಜನಪ್ರತಿನಿಧಿಯ ಹತ್ಯೆಯಾಗಿದೆ. ಇದಕ್ಕೂ ಮುನ್ನ ಹಾಸನ ಮತ್ತು ಕೋಲಾರದಲ್ಲೂ ಜನಪ್ರತಿನಿಧಿಗಳ ಕೊಲೆ ಮಾಡಲಾಗಿತ್ತು.
ನರಸಿಂಹಮೂರ್ತಿ ಗುಬ್ಬಿ ಪಟ್ಟಣ ಪಂಚಾಯ್ತಿಯ 9ನೇ ವಾರ್ಡ್ ಸದಸ್ಯರಾಗಿದ್ದರು. ಮಧ್ಯಾಹ್ನ ಭೀಕರವಾಗಿ ಹಲ್ಲೆ ಮಾಡಿದ ಬಳಿಕ ಕಾರಿನಲ್ಲಿ ಆರೋಪಿಗಳು ಹೊರಟುಹೋಗಿದ್ದಾರೆ. ಝೈಲೋ ಕಾರು ಹಾಗೂ ಬೈಕ್ ನಲ್ಲಿ ಪಾತಕಿಗಳು ಬಂದಿದ್ದರು ಎಂದು ಪ್ರತ್ಯಕ್ಷದರ್ಶಿಗಳು ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಎಲ್ಲ ಆರೋಪಿಗಳ ಕೈಯಲ್ಲೂ ಕತ್ತಿಗಳಿತ್ತು, ನರಸಿಂಹ ಮೂರ್ತಿಯವರ ಮೇಲೆ ಮನಸೋ ಇಚ್ಚೆ ಕತ್ತಿ ಬೀಸಿದ್ದಾರೆ ಎನ್ನಲಾಗಿದೆ.
ಡಿಎಸ್ಎಸ್ ಮುಖಂಡ ನರಸಿಂಹಮೂರ್ತಿ ರಾಜಕೀಯವಾಗಿ ಗುರುತಿಸಿಕೊಂಡಿದ್ದರು. ದಲಿತ ಸಮುದಾಯದ ಹಲವು ರಾಜಿ ಪಂಚಾಯ್ತಿ ನರಸಿಂಹಮೂರ್ತಿ ನಡೆಸುತ್ತಿದ್ದರು. ಗುಬ್ಬಿ ಪಟ್ಟಣದಲ್ಲಿ ಕಾರ್ ಡಿಲೀರ್ ಅಂಗಡಿ ಹೊಂದಿದ್ದರು.ಪ್ರತಿದಿನ ಅಂಗಡಿಗೆ ಹೋಗಿ ಟೀ ಕುಡಿಯುವ ಹವ್ಯಾಸ ಹೊಂದಿದ್ದ ನರಸಿಂಹಮೂರ್ತಿ.
ಜಮೀನು ವ್ಯಾಜ್ಯವೇ ಕೊಲೆಗೆ ಕಾರಣ?:
ದಲಿತ ಮುಖಂಡ ನರಸಿಂಹಮೂರ್ತಿ ಕೊಲೆ ಹಿಂದೆ ಜಮೀನು ವ್ಯವಹಾರ ಕಾರಣ ಎಂದು ಪೊಲೀಸ್ ಮೂಲಗಳು ಅನುಮಾನ ವ್ಯಕ್ತಪಡಿಸುತ್ತಿವೆ. ಜಮೀನು ವ್ಯವಹಾರಕ್ಕೆ ಸಂಬಂಧಿಸಿದ್ದಂತೆ ಸ್ಥಳೀಯರೊಂದಿಗೆ ನರಸಿಂಹಮೂರ್ತಿ ಮನಸ್ತಾಪ ಮಾಡಿಕೊಂಡಿದ್ದರು. ಜಮೀನು ವಿವಾದವೇ ಕೊಲೆಗೆ ಕಾರಣವಾಯ್ತು ಎಂಬ ಅನುಮಾನದ ಸುತ್ತವೇ ಈಗ ತನಿಖೆ ನಡೆಸಲಾಗುತ್ತಿದೆ.
ಇದನ್ನೂ ಓದಿ: ಬಿಜೆಪಿ ಶಾಸಕ ನೆಹರು ಓಲೇಕಾರ ಕುಟುಂಬದ ದಬ್ಬಾಳಿಕೆಯಿಂದ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ ರೈತರು
ಹಾಸನದಲ್ಲಿ ನಡೆದಿದ್ದ ಹತ್ಯೆ:
ಆಟೋದಲ್ಲಿ ಬಂದ ಹಂತಕರು ಹಾಡಹಗಲೇ ನಗರಸಭಾ ಸದಸ್ಯರೊಬ್ಬರನ್ನು ಬರ್ಬರವಾಗಿ ಲಾಂಗು, ಮಚ್ಚುಗಳಿಂದ ಹಲ್ಲೆ ನಡೆಸಿ ಬರ್ಬರವಾಗಿ ಹತ್ಯೆ ಮಾಡಿದ ಘಟನೆ ಜೂನ್ 2ರಂದು ನಡೆದಿತ್ತು. ಘಟನೆಯಿಂದ ಇಡೀ ಹಾಸನ ಬೆಚ್ಚಿಬಿದ್ದಿತ್ತು. ನಗರದ 16ನೇ ವಾರ್ಡ್ ಶಾಂತಿನಗರದ ಜೆಡಿಎಸ್ ನಗರಸಭಾ ಸದಸ್ಯ ಪ್ರಶಾಂತ್ ಹತ್ಯೆಗೊಳಗಾದವರು. ಪ್ರಶಾಂತ್ ತಮ್ಮ ತಮ್ಮ ಮನೆಗೆ ದ್ವಿಚಕ್ರವಾಹನದಲ್ಲಿ ಹೋಗುತ್ತಿದ್ದಾಗ ನಗರದ ಜವೇನಹಳ್ಳಿ ಮಠದ ಸಮೀಪ ಆಟೋದಲ್ಲಿ ಹಿಂಬಾಲಿಸಿಕೊಂಡು ಬಂದ ಹಂತಕರು ಅಡ್ಡಗಟ್ಟಿ ಮನಸೋಯಿಚ್ಛೆ ಮಾರಕಾಸ್ತ್ರಗಳಿಂದ ಹಲ್ಲೆ ಮಾಡಿದ್ದಾರೆ. ಇದರಿಂದ ಅವರ ಎರಡೂ ಮುಂಗೈಗಳು ತುಂಡಾಗಿದ್ದು, ಸ್ಥಳದಲ್ಲೇ ಮೃತಪಟ್ಟಿದ್ದಾರೆ. ಹಳೇ ದ್ವೇಷದ ಹಿನ್ನೆಲೆಯಲ್ಲಿ ಈ ಕೊಲೆ ನಡೆದಿದೆ ಎನ್ನಲಾಗಿದೆ. ಹತ್ಯೆಗೀಡಾಗಿರುವ ಪ್ರಶಾಂತ್ ತಂದೆ ಹಾ.ರಾ.ನಾಗರಾಜ್ ಕೂಡ ನಗರಸಭೆ ಸದಸ್ಯರಾಗಿದ್ದರು.\
ಇದನ್ನೂ ಓದಿ: Kodaguನಲ್ಲಿ ಗಾಂಜಾ ಮಾರಾಟಕ್ಕೆ ಯತ್ನಿಸುತಿದ್ದ ಐವರ ಬಂಧನ
ಕೋಲಾರದಲ್ಲೂ ನಡೆದಿತ್ತು ಜನಪ್ರತಿನಿಧಿ ಹತ್ಯೆ:
ಕೋಲಾರ ಜಿಲ್ಲೆಯ ಮುಳಬಾಗಿಲು ಕ್ಷೇತ್ರದ ಮಾಜಿ ಶಾಸಕ ಕೊತ್ತೂರು ಮಂಜುನಾಥ್ ಆಪ್ತ ಹಾಗೂ ಮುಳಬಾಗಿಲು ನಗರಸಭೆ ಸ್ಥಾಯಿ ಸಮಿತಿ ಅಧ್ಯಕ್ಷನನ್ನ ಲಾಂಗು ಮಚ್ಚಿನಿಂದ ದುಷ್ಕರ್ಮಿಗಳು ಕೊಚ್ಚಿ ಕೊಲೆ ಮಾಡಿರುವ ಘಟನೆ ಜೂನ್ 7ರ ಬೆಳಗಿನ ಜಾವ 5.30ರಲ್ಲಿ ಕೋಲಾರ ಜಿಲ್ಲೆ ಮುಳಬಾಗಿಲು ನಗರದ ಮುತ್ಯಾಲಪೇಟೆಯ ಗಂಗಮ್ಮ ಗುಡಿ ದೇವಾಲಯದ ಬಳಿ ಈ ದುರ್ಘಟನೆ ಜರುಗಿತ್ತು.
ಇದನ್ನೂ ಓದಿ: Victoria Doctor Suicide: ಅಪಾರ್ಟ್‌ಮೆಂಟ್‌ನಿಂದ ಜಿಗಿದು ವಿಕ್ಟೋರಿಯಾ ಆಸ್ಪತ್ರೆ ವೈದ್ಯ ಆತ್ಮಹತ್ಯೆ
ಜಗನ್ ಮೋಹನ್ ರೆಡ್ಡಿ (50) ಸಾವನ್ನಪ್ಪಿರುವ ಮೃತ ದುರ್ದೈವಿಯಾಗಿದ್ದು ಕಳೆದ ಎರಡು ದಿನಗಳ ಹಿಂದಷ್ಟೇ ಅದ್ದೂರಿಯಾಗಿ ಹುಟ್ಟು ಹಬ್ಬ ಆಚರಣೆ ಮಾಡಿಕೊಂಡಿದ್ದ. ಕೊಲೆಯಾದ ಜಗನ್ ಮೋಹನ್ ರೆಡ್ಡಿ, ಗಂಗಮ್ಮ ಗುಡಿ ದೇವಾಲಯದ ದೇವಸ್ಥಾನದ ಗಂಟೆ ಬಾರಿಸಿ ಮನೆಯಲ್ಲಿದ್ದ ಜಗನ್ ಮೋಹನ್ ರೆಡ್ಡಿಯನ್ನ ಹೊರ ಕರೆಸಿಕೊಂಡು ಕಿಡಿಗೇಡಿಗಳು ರೆಡ್ಡಿ ಅವರನ್ನು ಹತ್ಯೆ ಮಾಡಿದ್ದರು. ಅಕ್ಕಪಕ್ಕದಲ್ಲಿ ಅಡಗಿ ಕುಳಿತಿದ್ದ ಮೂವರು ದುಷ್ಕರ್ಮಿಗಳು ಸೇರಿ ಒಟ್ಟು ನಾಲ್ವರು ಜಗನ್ ಮೋಹನ್ ರೆಡ್ಡಿಗೆ ಚಾಕು, ಲಾಂಗ್ ಗಳಿಂದ ಮನಬಂದಂತೆ ಕುತ್ತಿಗೆ ತಿವಿದು ಕೊಲೆ ಮಾಡಿದ್ದಾರೆ.
"