ಚಾಮರಾಜನಗರ(ಜ.08): ತಮಿಳುನಾಡಿನ‌‌ ತಿರುಪೂರಿನಿಂದ ಮೈಸೂರಿನ‌ ಚಾಮುಂಡಿ ಬೆಟ್ಟಕ್ಕೆ ಬರುತ್ತಿದ್ದ ಟೆಂಪೋ‌ ಟ್ರಾವೆಲ್ಲರ್ ಪಲ್ಟಿಯಾಗಿ ಮೂವರು ಮೃತಪಟ್ಟಿರುವ ಘಟನೆ ಚಾಮರಾಜನಗರ ತಾಲೂಕಿನ ಸುವರ್ಣಾವತಿ ಜಲಾಶಯ ಸಮೀಪ ಗುಡಿಬೋರೆ ಎಂಬಲ್ಲಿ ನಡೆದಿದೆ.

ಪತಿ ಸುಬ್ರಮಣ್ಯ (65), ಪತ್ನಿ ಅಮರವತಿ (55) ಹಾಗೂ ಈಕೆಯ  ಮಗಳು ಸಾವನ್ನಪ್ಪಿದ ದುರ್ದೈವಿಗಳಾಗಿದ್ದು 4 ಮಕ್ಕಳು ಸೇರಿದಂತೆ 14 ಮಂದಿ ಗಾಯಗೊಂಡು ಚಾಮರಾಜನಗರ ಜಿಲ್ಲಾಸ್ಪತ್ರೆಗೆ ದಾಖಲಾಗಿದ್ದಾರೆ.

ನಗರದ 8 ವಲಯಗಳ 8 ಕಡೆ ಡ್ರೈರನ್

ಘಟನೆ ಬೆಳಗಿನ ಜಾವ 4 ರ ಸುಮಾರಿಗೆ ನಡೆದಿದೆ. ದೇವರ ದರ್ಶನ ಪಡೆಯಲು ಚಾಮುಂಡಿ ಬೆಟ್ಟಕ್ಕೆ ಇಡೀ ಕುಟುಂಬ ಬರುತ್ತಿತ್ತು ಎನ್ನಲಾಗಿದ್ದು ಚಾಮರಾಜನಗರ ಪೂರ್ವ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.