Asianet Suvarna News Asianet Suvarna News

ಸಂಸತ್‌ ಕಟ್ಟಡದಲ್ಲಿಯೇ ದೋಷವಿದೆ ಎಂದಿದ್ದ ವಾಸ್ತುತಜ್ಞ ಕುಶದೀಪ್‌ ಬನ್ಸಾಲ್‌ನಿಂದ 65 ಕೋಟಿ ಮೋಸ!

1997ರಲ್ಲಿ ಕೇಂದ್ರದಲ್ಲಿ ಸರ್ಕಾರಗಳು ಉರುಳುತ್ತಿದ್ದ ಕಾಲ. ಯಾವ ಸರ್ಕಾರ ಬಂದರೂ ಅಧಿಕಾರ ನಡೆಸಲು ಸಾಧ್ಯವಾಗುತ್ತಿರಲಿಲ್ಲ. ಇದರ ಬೆನ್ನಲ್ಲಿಯೇ ವಾಸ್ತುತಜ್ಞ ಕುಶ್‌ದೀಪ್‌ ಬನ್ಸಾಲ್‌ ಆಡಿದ್ದ ಮಾತುಗಳು ಸಾಕಷ್ಟು ಸುದ್ದಿ ಮಾಡಿದ್ದವು. ಈಗ ಇದೇ ವ್ಯಕ್ತಿ 65 ಕೋಟಿ ರೂಪಾಯಿ ಮೋಸ ಮಾಡಿ ಪೊಲೀಸ್‌ ಬಲೆಗೆ ಬಿದ್ದಿದ್ದಾರೆ.

Vastu expert Khushdeep Bansal Who Claimed Faults In Parliament Building Caught For 65 Crore Fraud san
Author
First Published Feb 7, 2024, 9:26 PM IST | Last Updated Feb 7, 2024, 9:26 PM IST

ನವದೆಹಲಿ (ಫೆ.6): ವಾಸ್ತುತಜ್ಞ ಕುಶ್‌ದೀಪ್‌ ಬನ್ಸಾಲ್‌ 1997ರ ಸಮಯದಲ್ಲಿ ಮಾಡಿದಷ್ಟು ಸುದ್ದಿ ಮತ್ಯಾವ ವ್ಯಕ್ತಿಗಳೂ ಮಾಡಿರಲಿಕ್ಕಿಲ್ಲ. ಕೇಂದ್ರದಲ್ಲಿ ಯಾವುದೇ ಸರ್ಕಾರ ಬಂದರೂ ಅಧಿಕಾರದಲ್ಲಿ ಉಳಿಯುತ್ತಿರಲಿಲ್ಲ. ಇದೇ ಸಮಯದಲ್ಲಿ ವಾಸ್ತುತಜ್ಞನಾಗಿದ್ದ ಕುಶ್‌ದೀಪ್‌ ಬನ್ಸಾಲ್‌, ಪಾರ್ಲಿಮೆಂಟ್‌ ಹೌಸ್‌ನಲ್ಲಿರುವ ಗ್ರಂಥಾಲಯದ ವಾಸ್ತು ಸರಿ ಇಲ್ಲ. ವಾಸ್ತುವಿನ ಸಾಕಷ್ಟು ಸಮಸ್ಯೆ ಅದರಲ್ಲಿದೆ. ಇದೇ ಕಾರಣಕ್ಕಾಗಿ ಯಾವ ಸರ್ಕಾರ ಕೂಡ ಅಧಿಕಾರ ಹಿಡಿಯಲು ಸಾಧ್ಯವಾಗುತ್ತಿಲ್ಲ ಎಂದಿದ್ದರು. ಅಂದು ಈಗನ ಕಾಲದ ರೀತಿ ಇಂಟರ್ನೆಟ್‌ ಯುಗವಲ್ಲ. ಹಾಗಿದ್ದರೂ ಕುಶ್‌ದೀಪ್‌ ಬನ್ಸಾಲ್‌ ದೇಶಾದ್ಯಂತ ಸುದ್ದಿಯಾಗಿದ್ದರು. ಇದೇ ವ್ಯಕ್ಯಿ ಈಗ ಮತ್ತೊಮ್ಮೆ ಸುದ್ದಿಯಲ್ಲಿದ್ದಾರೆ. ಅವರು ಈ ಬಾರಿ 65 ಕೋಟಿ ರೂಪಾಯಿಯ ಮೋಸದಲ್ಲಿ ಭಾಗಿಯಾಗಿ ಪೊಲೀಸರ ಅತಿಥಿಯಾಗಿದ್ದಾರೆ. ಕುಶ್‌ದೀಪ್‌ ಬನ್ಸಾಲ್ ಮತ್ತು ಅವರ ಸಹೋದರನನ್ನು ಅಸ್ಸಾಂ ಪೊಲೀಸರು ಮತ್ತು ದೆಹಲಿ ಪೊಲೀಸರ ಜಂಟಿ ತಂಡ ಸೋಮವಾರ ದೆಹಲಿಯಲ್ಲಿ ಬಂಧಿಸಿದೆ. ದೆಹಲಿ ಪೊಲೀಸ್ ಸ್ಪೆಷಲ್‌ ಸೆಲ್‌ನ ಕೌಂಟರ್ ಇಂಟೆಲಿಜೆನ್ಸ್ ಯುನಿಟ್ (ಸಿಐ) ಬಂಧನದಲ್ಲಿ ಭಾಗಿಯಾಗಿದೆ.

ಬಂಧಿಸಿದ ತಕ್ಷಣವೇ ಇಬ್ಬರನ್ನೂ ಅಸ್ಸಾಂಗೆ ಕರೆದುಕೊಂಡು ಹೋಗಲಾಗಿದೆ. ಅಲ್ಲಿ ಇವರಿಬ್ಬರ ವಿರುದ್ಧ 65 ಕೋಟಿ ಸ್ವಾಯತ್ತ ಮಂಡಳಿಯ ಹಗರಣ ಎಂದು ಕರೆಯಲ್ಪಡುವ ಆರೋಪಗಳನ್ನು ಎದುರಿಸಲಿದ್ದಾರೆ. ಹಗರಣದಲ್ಲಿ ಮಧ್ಯಪ್ರದೇಶದ ಕಾಂಗ್ರೆಸ್ ಮುಖಂಡರೊಬ್ಬರ ಪುತ್ರ ಕೂಡ ಭಾಗಿಯಾಗಿದ್ದಾರೆ.

ದೆಹಲಿ ಮೂಲದ ಸಬರ್ವಾಲ್ ಟ್ರೇಡಿಂಗ್ ಕಂಪನಿಯ ಮಾಲೀಕನಾಗಿರುವ ಕಮಲ್ ಸಬರ್ವಾಲ್ ಅವರು ಬನ್ಸಾಲ್ ವಿರುದ್ಧ ದೂರು ದಾಖಲಿಸಿದ್ದಾರೆ. ಕಮಲ್ ಸಬರ್ವಾಲ್‌ಗೆ ಒಬ್ಬ ವ್ಯಕ್ತಿಯನ್ನು ಪರಿಚಯಿಸಲು ತಾನು ಸಹಾಯ ಮಾಡಿದ್ದೆ ಎಂದಷ್ಟೇ ಬನ್ಸಾಲ್ ದೆಹಲಿ ಪೊಲೀಸರಿಗೆ ತಿಳಿಸಿದ್ದಾರೆ. ಅದೇ ಸಮಯದಲ್ಲಿ, ಎಲ್ಲಾ ಆರೋಪಿಗಳು ಈಗ ಗೊತ್ತಾಗಿರುವ ದೊಡ್ಡ ಹಗರಣವನ್ನು ಸಂಘಟಿಸುವಲ್ಲಿ ಸಹಕರಿಸಿದ್ದಾರೆ ಎಂದು ಅಸ್ಸಾಂ ಪೊಲೀಸರು ಹೇಳಿದ್ದಾರೆ.

 ವಾಸ್ತು ಸಮಾಲೋಚನೆಯ ಜೊತೆಗೆ, ಬನ್ಸಾಲ್ ಅವರು ವಿವಿಧ ರಾಜ್ಯ ಸರ್ಕಾರದ ಯೋಜನೆಗಳ ಸಲಹೆಗಾರರಾಗಿದ್ದಾರೆ ಮತ್ತು ಪ್ರಖ್ಯಾತ ಉದ್ಯಮಿಗಳು ಮತ್ತು ಕೈಗಾರಿಕೋದ್ಯಮಿಗಳಿಗೆ ಕಾರ್ಯತಂತ್ರದ ಸಲಹೆಗಾರರಾಗಿದ್ದಾರೆ.

ಸಂಸತ್ ಭದ್ರತೆಯಲ್ಲಿ ದೊಡ್ಡ ಬದಲಾವಣೆ: ದೆಹಲಿ ಪೊಲೀಸರ ಬದಲು ಇನ್ಮುಂದೆ ಸಿಐಎಸ್‌ಎಫ್‌ ರಕ್ಷಣೆ

1997ರಲ್ಲಿ ಕುಶ್‌ದೀಪ್‌ ಬನ್ಸಾಲ್‌, ಸಂಸತ್‌ ಭವನದ ಗ್ರಂಥಾಲಯದ ವಾಸ್ತು ದೋಷಗಳು ಸರ್ಕಾರದ ಅಸ್ಥಿರತೆಗೆ ಕಾರಣವಾಗಿದೆ ಎಂದು ಹೇಳುವ ಮೂಲಕ ಕುಖ್ಯಾತಿ ಪಡೆದಿದ್ದರು. ಅವರ ಪ್ರಕಾರ, ಈ ವಾಸ್ತುದೋಷವನ್ನು ಪರಿಹರಿಸಲು ಸಂಸತ್‌ ಭವನ ಹಾಗೂ ಗ್ರಂಥಾಲಯದ ನೆಲೆದ ಕೆಳಗಡೆ ತಾಮ್ರದ  ತಂತಿಗಳನ್ನು ಇಡಬೇಕು. ಆ ಮೂಲಕ ಸಮತೋಲನ ಮರುಸ್ಥಾಪಿಸಲು ಸಾಧ್ಯವಾಗಲಿದೆ. ಇದರಿಂದಾ ಯಾವುದೇ ಸರ್ಕಾರ ಬಂದರೂ ಕುಸಿದ ಎದುರಿಸದೇ ಸರ್ಕಾರಗಳು ತಮ್ಮ ಅವಧಿಯನ್ನು ಪೂರ್ಣಗೊಳಿಸಲು ಸಹಾಯ ಮಾಡಲಿದೆ ಎಂದಿದ್ದರು.

ಸಂಸತ್‌ ಭವನದಲ್ಲಿ ತಮ್ಮನ್ನು ತಾವೇ ಬೆಂಕಿ ಹಚ್ಚಿಕೊಳ್ಳಲು ಮುಂದಾಗಿದ್ದ ದಾಳಿಕೋರರು!

Latest Videos
Follow Us:
Download App:
  • android
  • ios