Asianet Suvarna News Asianet Suvarna News

ಸಂಸತ್‌ ಭವನದಲ್ಲಿ ತಮ್ಮನ್ನು ತಾವೇ ಬೆಂಕಿ ಹಚ್ಚಿಕೊಳ್ಳಲು ಮುಂದಾಗಿದ್ದ ದಾಳಿಕೋರರು!

ಸ್ಮೋಕ್‌ ಕ್ಯಾನಿಸ್ಟರ್‌ಗಳೊಂದಿಗೆ ಲೋಕಸಭೆಯ ಚೇಂಬರ್‌ಗೆ ಜಿಗಿಯುವ ಪ್ಲ್ಯಾನ್‌ಗೂ ಮೊದಲು ಸಂಸತ್‌ ಭವನದ ಒಳಗೆ ಹಾಗೂ ಹೊರಗೆ ತಮ್ಮನ್ನು ತಾವೇ ಬೆಂಕಿ ಹಚ್ಚಿಕೊಳ್ಳುವ ಪ್ಲ್ಯಾನ್‌ ಮಾಡಿದ್ದರು ಎಂದೂ ಹೇಳಲಾಗಿದೆ. 

parliament breach accused considered self immolation as an option report ash
Author
First Published Dec 16, 2023, 2:57 PM IST

ನವದೆಹಲಿ (ಡಿಸೆಂಬರ್ 16, 2023): ಡಿಸೆಂಬರ್ 13 ರಂದು ಸಂಸತ್‌ ಭವನದಲ್ಲಿ ದೊಡ್ಡ ಮಟ್ಟದ ಭದ್ರತಾ ಉಲ್ಲಂಘನೆ ಸಂಭವಿಸಿತ್ತು. ಈ ಪ್ರಕರಣದಲ್ಲಿ ಈಗಾಗಲೇ ಐವರು ಆರೋಪಿಗಳನ್ನು ಪೊಲೀಸರು ಬಂಧಿಸಿದ್ದಾರೆ. ಆದರೆ, ಇವರು ಹೊಗೆ ಡಬ್ಬಿಗಳನ್ನು ಲೋಕಸಭೆಯಲ್ಲಿ ಎಸೆಯುವ ಬದಲು ಮತ್ತೊಂದು ಭಯಾನಕ ಪ್ಲ್ಯಾನ್‌ಗೆ ಮುಂದಾಗಿದ್ದರು ಎಂದೂ ತಿಳಿದುಬಂದಿದೆ.

ಹೌದು, ಸ್ಮೋಕ್‌ ಕ್ಯಾನಿಸ್ಟರ್‌ಗಳೊಂದಿಗೆ ಲೋಕಸಭೆಯ ಚೇಂಬರ್‌ಗೆ ಜಿಗಿಯುವ ಪ್ಲ್ಯಾನ್‌ ಅನ್ನು ಇಬ್ಬರು ಆರೋಪಿಗಳು ಮಾಡಿದ್ದಾರೆ. ಹಾಗೆ, ಮತ್ತಿಬ್ಬರು ಸಂಸತ್‌ ಭವನದ ಹೊರಗೆ ಹೀಗೆ ಮಾಡಿದ್ದಾರೆ. ಆದರೆ, ಈ ಪ್ಲ್ಯಾನ್‌ ಅಂತಮಗೊಳಿಸೋ ಮೊದಲು ಅವರು ಸಂಸತ್‌ ಭವನದ ಒಳಗೆ ಮತ್ತು ಹೊರಗೆ ತಮ್ಮನ್ನು ತಾವೇ ಬೆಂಕಿ ಹಚ್ಚಿಕೊಳ್ಳಲು ಹಾಗೂ ಕರಪತ್ರಗಳ ಹಂಚುವಿಕೆಯ ಪ್ಲ್ಯಾನ್‌ ಅನ್ನೂ ಮಾಡಿದ್ದರು ಎಂದು ದೆಹಲಿ ಪೊಲೀಸ್ ಅಧಿಕಾರಿಗಳು ಶನಿವಾರ ತಿಳಿಸಿದ್ದಾರೆ.

ಇದನ್ನು ಓದಿ: ‘ಹೊಗೆಬಾಂಬ್‌’ ಬಚ್ಚಿಡಲು ಶೂನಲ್ಲಿ ಕುಳಿ ಮಾಡಿಸಿದ್ದ ದಾಳಿಕೋರರು! ಲಲಿತ್, ಟಿಎಂಸಿ ಮಧ್ಯೆ ನಂಟು: ಬಿಜೆಪಿ ಆರೋಪ

ಈ ಮಧ್ಯೆ, ಪ್ರಕರಣದ ತನಿಖೆ ನಡೆಸುತ್ತಿರುವ ದೆಹಲಿ ಪೊಲೀಸರ ಸ್ಪೆಷಲ್‌ ಸೆಲ್‌, , ಭದ್ರತೆಯನ್ನು ಉಲ್ಲಂಘಿಸಿದ ಇಬ್ಬರು ವ್ಯಕ್ತಿಗಳಿಗೆ ಸದನದೊಳಗೆ ಪ್ರವೇಶಿಸಲು ಸಂದರ್ಶಕರ ಪಾಸ್‌ಗಳನ್ನು ಅಧಿಕೃತಗೊಳಿಸಿದ ಬಿಜೆಪಿ ಸಂಸದ ಪ್ರತಾಪ್ ಸಿಂಹ ಅವರ ಹೇಳಿಕೆಯನ್ನು ದಾಖಲಿಸಲು ಸಹ ಪ್ಲ್ಯಾನ್‌ ಮಾಡಿದೆ. 

ಮೈಸೂರಿನ ಮನೋರಂಜನ್ ಡಿ ಮತ್ತು ಸಾಗರ್ ಶರ್ಮಾ ಎಂಬ ಇಬ್ಬರು ಆರೋಪಿಗಳು  ಶೂನ್ಯ ವೇಳೆಯಲ್ಲಿ ಸಾರ್ವಜನಿಕ ಗ್ಯಾಲರಿಯಿಂದ ಲೋಕಸಭೆಯ ಚೇಂಬರ್‌ಗೆ ಜಿಗಿದಿದ್ದರು, ಅಲ್ಲದೆ, ಅವರು ಸ್ಮೋಕ್‌ ಕ್ಯಾನಿಸ್ಟರ್‌ಗಳಿಂದ ಹಳದಿ ಹೊಗೆಯನ್ನು ಬಿಡುಗಡೆ ಮಾಡಿದರು ಮತ್ತು ಘೋಷಣೆಗಳನ್ನು ಕೂಗಿದರು. ನಂತರ, ಸಂಸದರೇ ಅವರನ್ನು ತಡೆದು ಹೊಡೆದಿದ್ದಾರೆ.

ಇದನ್ನು ಓದಿ: ‘ಹೊಗೆಬಾಂಬ್’ ಹಿಂದೆ ಬೇರೆ ಮಾಸ್ಟರ್‌ಮೈಂಡ್‌? ಸಂಸತ್‌ ದಾಳಿಗೆ ಪ್ಲ್ಯಾನ್‌ ಬಿ ಸಹ ಯೋಜಿಸಿದ್ದ ದಾಳಿಕೋರರು!

ಅದೇ ಸಮಯದಲ್ಲಿ, ಇತರ ಇಬ್ಬರು ಆರೋಪಿಗಳಾದ ಅಮೋಲ್ ಶಿಂಧೆ ಮತ್ತು ನೀಲಂ ದೇವಿ - ಸಂಸತ್ತಿನ ಆವರಣದ ಹೊರಗೆ ಘೋಷಣೆ ಕೂಗುತ್ತಾ ಡಬ್ಬಿಗಳಿಂದ ಬಣ್ಣದ ಹೊಗೆಯನ್ನು ಬಿಡುಗಡೆ ಮಾಡಿದ್ದರು. ಇನ್ನೊಂದೆಡೆ, ಐದನೇ ಆರೋಪಿ ಲಲಿತ್ ಝಾ ಸಂಸತ್‌ ಭವನದ ಹೊರಗೆ ನಡೆದ ಪ್ರತಿಭಟನೆಯ ವಿಡಿಯೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಹರಿಬಿಟ್ಟಿದ್ದಾರೆ.

ಈ ಪ್ಲ್ಯಾನ್‌ ಅಂತಿಮಗೊಳಿಸುವ ಮೊದಲು (ಲೋಕಸಭಾ ಚೇಂಬರ್‌ಗೆ ಜಿಗಿಯಲು), ಆರೋಪಿಗಳು ಸರ್ಕಾರಕ್ಕೆ ತಮ್ಮ ಸಂದೇಶ ಕಳುಹಿಸುವಲ್ಲಿ ಪ್ರಭಾವ ಬೀರುವ ಕೆಲವು ಮಾರ್ಗಗಳನ್ನು ಅನ್ವೇಷಿಸಿದ್ದರು ಎಂದು ತನಿಖೆಯ ಬಗ್ಗೆ ತಿಳಿದ ದೆಹಲಿ ಪೊಲೀಸ್ ಅಧಿಕಾರಿಯೊಬ್ಬರು ಸುದ್ದಿಸಂಸ್ಥೆ ಪಿಟಿಐಗೆ ಹೇಳಿದ್ದಾರೆ. ಅಲ್ಲದೆ, ಮೊದಲು ತಮ್ಮ ದೇಹಕ್ಕೆ ಅಗ್ನಿ ನಿರೋಧಕ ಜೆಲ್‌ ಹಚ್ಚುವ ಮೂಲಕ ಸಂಸತ್‌ ಭವನದ ಒಳಗೆ ಮತ್ತು ಹೊರಗೆ ತಮ್ಮನ್ನು ತಾವು ಬೆಂಕಿ ಹಚ್ಚಿಕೊಳ್ಳುವ ಪ್ಲ್ಯಾನ್‌ ಮಾಡಿದ್ದರು. ಆದರೆ ನಂತರ ಈ ಪ್ಲ್ಯಾನ್‌ ಕೈಬಿಟ್ಟರು ಎಂದು ತಿಳಿದುಬಂದಿದೆ. 

ಇದನ್ನು ಓದಿ: ಸಂಸತ್ತಲ್ಲಿ ಈವರೆಗೆ 40 ಬಾರಿ ಭದ್ರತಾ ಲೋಪ: ರಾಜಕೀಯ ಬೇಡ; ಅಮಿತ್‌ ಶಾ ಮೊದಲ ಪ್ರತಿಕ್ರಿಯೆ

ಅವರು ಸಂಸತ್ತಿನ ಒಳಗೆ ಕರಪತ್ರಗಳನ್ನು ಹಂಚುವ ಬಗ್ಗೆಯೂ ಯೋಚಿಸಿದರು. ಆದರೆ ಅಂತಿಮವಾಗಿ ಬುಧವಾರ ಕಾರ್ಯಗತಗೊಳಿಸಿದ ಯೋಜನೆಯನ್ನು ಮುಂದುವರಿಸಿದರು ಎಂದು ಅಧಿಕಾರಿ ಹೇಳಿದರು.
 

ಸಂಸತ್‌ ಸ್ಮೋಕ್‌ ಬಾಂಬ್ ದಾಳಿ ಮಾಸ್ಟರ್‌ ಮೈಂಡ್‌ ಲಲಿತ್ ಝಾ ಅರೆಸ್ಟ್‌

Follow Us:
Download App:
  • android
  • ios