ವಶಿಷ್ಠ ಕ್ರೆಡಿಟ್ ಸೌಹಾರ್ದದಿಂದಲೂ ಮಹಾವಂಚನೆ : 5 ಸಾವಿರ ಠೇವಣಿದಾರರ ಬದುಕು ಅಯೋಮಯ!
ಹೆಚ್ಚಿನ ಬಡ್ಡಿ ಆಸೆ ತೋರಿಸಿ ಸಾವಿರಾರು ಕೋಟಿ ರೂಪಾಯಿ ನುಂಗುವ ಕಂಪನಿಗಳಿಗೆ ಮಾತ್ರ ರಾಜ್ಯದಲ್ಲಿ ಬ್ರೇಕ್ ಬೀಳ್ತಾನೆ ಇಲ್ಲ. ವಶಿಷ್ಠ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಹೆಸರಲ್ಲಿ ಸುಮಾರು 5 ಸಾವಿರ ಜನರಿಗೆ 300 ಕೋಟಿ ರೂಪಾಯಿ ಟೋಪಿ ಹಾಕಿದ್ದು, ಹಣ ಕಳೆದುಕೊಂಡವರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ.
ವರದಿ: ರಮೇಶ್ ಕೆ.ಹೆಚ್. ಏಷ್ಯಾನೆಟ್ ಸುವರ್ಣನ್ಯೂಸ್
ಬೆಂಗಳೂರು (ಆ.24) : ಹೆಚ್ಚಿನ ಬಡ್ಡಿ ಆಸೆ ತೋರಿಸಿ ಸಾವಿರಾರು ಕೋಟಿ ರೂಪಾಯಿ ನುಂಗುವ ಕಂಪನಿಗಳಿಗೆ ಮಾತ್ರ ರಾಜ್ಯದಲ್ಲಿ ಬ್ರೇಕ್ ಬೀಳ್ತಾನೆ ಇಲ್ಲ. ವಶಿಷ್ಠ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಹೆಸರಲ್ಲಿ ಸುಮಾರು 5 ಸಾವಿರ ಜನರಿಗೆ 300 ಕೋಟಿ ರೂಪಾಯಿ ಟೋಪಿ ಹಾಕಿದ್ದು, ಹಣ ಕಳೆದುಕೊಂಡವರು ಬೀದಿಗೆ ಬೀಳುವ ಪರಿಸ್ಥಿತಿ ನಿರ್ಮಾಣವಾಗಿದೆ. ಬಹುತೇಕ ಬ್ರಾಹ್ಮಣ ಸಮುದಾಯದ ಹಿರಿಯ ನಾಗರಿಕರನ್ನೇ ಗುರಿಯಾಗಿಸಿಕೊಂಡು ಠೇವಣಿ ಪಡೆಯಲಾಗಿತ್ತು.
ಹಣ ದ್ವಿಗುಣಗೊಳಿ ಕೊಡ್ತೇವೆ ಎಂದ ಪರ್ಲ್ಸ್, ನಂಬಿ ಪರದೇಶಿಗಳಾದ ಏಜೆಂಟರು
ಬ್ರಾಹ್ಮಣ ಸಮುದಾಯದ ಸಂಘ-ಸಂಸ್ಥೆಗಳಲ್ಲಿ ಉನ್ನತ ಸ್ಥಾನದಲ್ಲಿ ಕೆ.ಎನ್.ವೆಂಕಟನಾರಾಯಣ ವಶಿಷ್ಠ ಕ್ರೆಡಿಟ್ ಸೌಹಾರ್ದ ಸಹಕಾರಿ ನಿಯಮಿತ ಆರಂಭಿಸಿದ್ರು. 2019ರ ನವೆಂಬರ್ ವರೆಗೂ ಸರಿಯಾಗಿಯೇ ಬಡ್ಡಿ ನೀಡ್ತಾ ಇದ್ದ ಕೆ.ಎನ್.ವೆಂಕಟನಾರಾಯಣ, ಇದ್ದಕ್ಕಿದ್ದಂತೆ ಬಡ್ಡಿ ನೀಡುವುದನ್ನ ನಿಲ್ಲಿಸಿದ್ರು. ಅಲ್ಲದೆ, ಠೇವಣಿ ಇಟ್ಟ ಹಣವನ್ನು ಹಿಂದಿರುಗಿಸಿಲ್ಲ. ಅಲ್ಲದೆ, ಠೇವಣಿ ಬದಲಾಗಿ ಸೈಟ್ ನೀಡುವ ಸ್ಕೀಮ್ ಆರಂಭಿಸಿದ್ದ ಕೆ.ಎನ್.ವೆಂಕಟನಾರಾಯಣ ಅದರಲ್ಲಿಯೂ ವಂಚನೆ ಮಾಡಲು ಮುಂದಾಗಿದ್ರು.
ಕೋಟ್ಯಂತರ ರೂಪಾಯಿ ಕಳೆದುಕೊಂಡ ಠೇವಣಿದಾರರು ಹನುಮಂತನಗರ ಪೊಲೀಸ್ ಠಾಣೆಗೆ ದೂರು ನೀಡಿದ್ರು. ಈ ಪ್ರಕರಣವನ್ನು ಸರ್ಕಾರ ತನಿಖೆ ನಡೆಸಲು ಸಿಐಡಿಗೆ ವರ್ಗಾವಣೆ ಮಾಡಿದೆ. ಸಿಐಡಿ ಮಾತ್ರ ಆಮೆ ವೇಗದಲ್ಲಿ ತನಿಖೆ ನಡೆಸುತ್ತಿದ್ದು, ಹಣ ಕಳೆದುಕೊಂಡ ಠೇವಣಿದಾರರು ಜೀವ ಕಳೆದುಕೊಳ್ಳುವ ಪರಿಸ್ಥಿತಿಗೆ ಬಂದಿದ್ದಾರೆ.
ಕೆ.ಎನ್.ವೆಂಕಟನಾರಾಯಣ ಹಾಗೂ ಅವರ ಪುತ್ರ ಕೃಷ್ಣಪ್ರಸಾದ್ ಯಾವುದೇ ಭದ್ರತೆ ಇಲ್ಲದೆ ದೊಡ್ಡ ಪ್ರಮಾಣದ ಸಾಲ ಮಂಜೂರು ಮಾಡಿದ್ದಾರೆ. ಅಲ್ಲದೆ, ತಪ್ಪು ಲೆಕ್ಕಾ ತೋರಿಸಿ ನೂರಾರು ಕೋಟಿ ರೂಪಾಯಿ ವಂಚಿಸಿದ್ದಲ್ಲದೇ, ಹಲವು ವ್ಯಕ್ತಿಗಳ ಹೆಸರಲ್ಲಿ ಸುಳ್ಳು ಖಾತೆ ಸೃಷ್ಟಿಸಿ ಸಾಲ ಮಂಜೂರು ಮಾಡಲಾಗಿದೆ ಎಂಬ ಆರೋಪವೂ ಇದೆ. ವಂಚಕ ಕೆ.ಎನ್.ವೆಂಕಟನಾರಾಯಣ ವಂಚನೆ ಹಣದಿಂದ ಬೇನಾಮಿ ಆಸ್ತಿ ಗಳಿಕೆಯ ಬಗ್ಗೆ ಠೇವಣಿದಾರರಿಗೆ ಅನುಮಾನ ಇದೆ. ಅಲ್ಲದೆ, ಇಡಿ ಕೂಡ ಮಧ್ಯಪ್ರವೇಶಿಸಿ ವಂಚಕರ ಬೇನಾಮಿ ಆಸ್ತಿ ವಶಕ್ಕೆ ಪಡೆಯಬೇಕು ಎಂಬುದು ಠೇವಣಿದಾರರ ಒತ್ತಾಯ.
Gadag News: ಅಧಿಕ ಬಡ್ಡಿ, ಸೈಟ್ ಹೆಸರಲ್ಲಿ ಜನರಿಗೆ ಕಲರ್ ಕಲರ್ ಟೋಪಿ ಹಾಕಿದ್ದ ಆರೋಪಿ ಅರೆಸ್ಟ್!
5 ಸಾವಿರ ಠೇವಣಿದಾರರಲ್ಲಿ ಬಹುತೇಕರು ನಿವೃತ್ತ ವೃದ್ಧರೇ ಇದ್ದಾರೆ. ಜೀವನ ಪೂರ್ತಿ ಗಳಿಕೆ ಮಾಡಿದ್ದ ಎಲ್ಲಾ ಹಣವನ್ನ ಹೂಡಿಕೆ ಮಾಡಿದ್ದು, ದಿನ ನಿತ್ಯದ ಖರ್ಚಿಗೂ ಹಣ ಇಲ್ಲದಂತಾಗಿ ಅಲವರು ಬೀದಿಗೆ ಬಂದಿದ್ದಾರೆ ಎಂದು ವಶಿಷ್ಠ ಠೇವಣಿದಾರರ ಸಂಘದ ಅಧ್ಯಕ್ಷ ಪದಾಧಿಕಾರಿಗಳು ಸುವರ್ಣ ನ್ಯೂಸ್ಗೆ ಮಾಹಿತಿ ಹಂಚಿಕೊಂಡಿದ್ದಾರೆ. ಅಲ್ಲದೆ, ಇದೇ ವೇಳೆ ಸರ್ಕಾರ ಈ ಬಗ್ಗೆ ಗಮನ ಹರಿಸಿ ನೊಂದವರಿಗೆ ನ್ಯಾಯಕೊಡಿಸುವಂತೆ ಸುವರ್ಣ ನ್ಯೂಸ್ ಮೂಲಕ ಸರ್ಕಾರಕ್ಕೆ ಮನವಿ ಮಾಡಿಕೊಂಡಿದ್ದಾರೆ