Asianet Suvarna News Asianet Suvarna News

ಪತ್ನಿಯ ಜೊತೆ ಚಾಟ್‌ ಮಾಡ್ತಿದ್ದ ನೆರೆಮನೆಯ ಯುವಕನನ್ನು ಚಾಕು ಇರಿದು ಕೊಂದ ಗಂಡ!

ಪತ್ನಿಗೆ ಮೊಬೈಲ್‌ ಮೂಲಕ ಸಂದೇಶ ಕಳುಹಿಸಿದ್ದಕ್ಕಾಗಿ ಗಂಡ, ನೆರೆಮನೆಯ ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿ, ಚೂರಿ ಇರಿದು ಸಾಯಿಸಿರುವ  ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ನೆರೆಮನೆಯವ ವ್ಯಕ್ತಿ ಹೆಂಡತಿಗೆ ಮೆಸೇಜ್ ಮಾಡಿದ್ದನ್ನು ನೋಡಿ, ಇಬ್ಬರ ಮಧ್ಯೆ ಅನೈತಿಕ ಸಂಬಂಧವಿದೆ ಎಂದು ವ್ಯಕ್ತಿ ಶಂಕಿಸಿದ್ದಾನೆ.

Uttarpradesh Man stabs neighbour to death for sending message to wife over phone Vin
Author
First Published Jun 4, 2024, 9:25 AM IST

ನವದೆಹಲಿ: ಪತ್ನಿಗೆ ಮೊಬೈಲ್‌ ಮೂಲಕ ಸಂದೇಶ ಕಳುಹಿಸಿದ್ದಕ್ಕಾಗಿ ಗಂಡ, ನೆರೆಮನೆಯ ವ್ಯಕ್ತಿಯನ್ನು ಹಿಗ್ಗಾಮುಗ್ಗಾ ಥಳಿಸಿ, ಚೂರಿ ಇರಿದು ಸಾಯಿಸಿರುವ  ಘಟನೆ ಉತ್ತರಪ್ರದೇಶದಲ್ಲಿ ನಡೆದಿದೆ. ನೆರೆಮನೆಯವ ವ್ಯಕ್ತಿ ಹೆಂಡತಿಗೆ ಮೆಸೇಜ್ ಮಾಡಿದ್ದನ್ನು ನೋಡಿ, ಈತ ನಿರಂತರವಾಗಿ ನನ್ನ ಪತ್ನಿಯೊಂದಿಗೆ ಚಾಟ್ ಮಾಡುತ್ತಿದ್ದಾನೆ ಎಂದು ವ್ಯಕ್ತಿ ಶಂಕಿಸಿದ್ದಾನೆ. ಆತನ ಮನೆಗೆ ಹೋಗಿ ಚೆನ್ನಾಗಿ ಥಳಿಸಿ ಚಾಕುವಿನಿಂದ ಇರಿದಿದ್ದಾನೆ. ಚಿಕಿತ್ಸೆ ಫಲಕಾರಿಯಾಗದೆ ವ್ಯಕ್ತಿ ಆಸ್ಪತ್ರೆಯಲ್ಲಿ ಮೃತಪಟ್ಟಿದ್ದಾನೆ.

ಮಾಹಿತಿ ಪ್ರಕಾರ, ದಿಲ್ದಾರ್‌ನಗರ ಪೊಲೀಸ್ ಠಾಣೆ ವ್ಯಾಪ್ತಿಯ ಖಜೂರಿ ಗ್ರಾಮದ ನಿವಾಸಿ ಜುನೈದ್ ಖಾನ್ ಮತ್ತು ಅವರ ಪತ್ನಿ ಮಹಾರಾಷ್ಟ್ರದಲ್ಲಿ ವಾಸವಾಗಿದ್ದರು. ಇಲ್ಲಿಗೆ ಅಬ್ಬಾಸ್ ಖಾನ್ ಕೂಡಾ ಯಾವುದೋ ಕೆಲಸದ ನಿಮಿತ್ತ ಹೋಗಿದ್ದು, ಅಲ್ಲಿ ದಂಪತಿಯ ಮನೆಯಲ್ಲಿ ವಾಸವಾಗಿದ್ದರು. ಈ ಸಮಯದಲ್ಲಿ, ಅಬ್ಬಾಸ್ ಮತ್ತು ಜುನೈದ್ ಅವರ ಪತ್ನಿ ಪರಸ್ಪರ ಮಾತನಾಡುತ್ತಿದ್ದರು. ಇದು ಜುನೈದ್‌ಗೆ ಇಷ್ಟವಾಗಿರಲ್ಲಿಲ್ಲ. ಈ ವಿಷಯದ ಬಗ್ಗೆ ಅಬ್ಬಾಸ್‌ನೊಂದಿಗೆ ಜಗಳವಾಡಿದ್ದ. ಸ್ವಲ್ಪ ಸಮಯದ ನಂತರ, ಅಬ್ಬಾಸ್ ತನ್ನ ಮನೆಗೆ ಮರಳಿದ್ದ. ಜುನೈದ್ ಮತ್ತು ಆತನ ಪತ್ನಿ ಕೂಡ ಎರಡು ತಿಂಗಳ ಹಿಂದೆ ತಮ್ಮ ಗ್ರಾಮಕ್ಕೆ ಬಂದಿದ್ದರು.

ಮಸೀದಿಗೆ ಕುರಾನ್ ಓದಲು ಬರುತ್ತಿದ್ದ ಅಪ್ರಾಪ್ತ ಬಾಲಕಿ ಮೇಲೆ ಲೈಂಗಿಕ ದೌರ್ಜನ್ಯ; ಮೌಲ್ವಿ ಬಂಧನ

ಒಂದು ದಿನದ ಹಿಂದೆ ಅಬ್ಬಾಸ್ ಜುನೈದ್ ಪತ್ನಿಯ ಮೊಬೈಲ್ ಫೋನ್‌ಗೆ ಸಂದೇಶ ಕಳುಹಿಸಿದ್ದ. ಇದನ್ನು ನೋಡಿದ ಜುನೈದ್ ಕೋಪಗೊಂಡು ಮರುದಿನ ಬೆಳಗ್ಗೆ ಯಾವುದೋ ಕೆಲಸದ ನಿಮಿತ್ತ ಅಬ್ಬಾಸ್ ಹೊರಗೆ ಹೋಗುತ್ತಿದ್ದಾಗ ಚಾಕುವಿನಿಂದ ಇರಿದು ಗಂಭೀರವಾಗಿ ಗಾಯಗೊಳಿಸಿದ್ದಾನೆ. ಅಬ್ಬಾಸ್‌ ಚಿಕಿತ್ಸೆ ಫಲಕಾರಿಯಾಗದೆ ಸಾವನ್ನಪ್ಪಿದ್ದಾರೆ. ಚೂರಿ ಇರಿತದ ವಿಷಯ ತಿಳಿದ ಗ್ರಾಮಸ್ಥರು ಜುನೈದ್‌ಗೆ ಥಳಿಸಿದ್ದಾರೆ.

ಜುನೈದ್ ಮತ್ತು ಅಬ್ಬಾಸ್ ನಡುವೆ ಹಣದ ವ್ಯವಹಾರವೂ ನಡೆದಿದ್ದು, ಇದರಲ್ಲಿ ಉಂಟಾದ ಭಿನ್ನಾಭಿಪ್ರಾಯವೂ ಜಗಳಕ್ಕೆ ಕಾರಣ ಎಂದು ಹೇಳಲಾಗ್ತಿದೆ.. ಘಟನೆಯ ಕುರಿತು ಸ್ಥಳೀಯ ಪೊಲೀಸರು ತನಿಖೆ ಆರಂಭಿಸಿದ್ದಾರೆ. ಆರೋಪಿಗಳು ಮತ್ತು ಮೃತರ ಮನೆಗಳು ಪರಸ್ಪರ ಎದುರುಬದುರಾಗಿವೆ ಎಂದು ಪ್ರಾಥಮಿಕ ತನಿಖೆಯಿಂದ ತಿಳಿದುಬಂದಿದೆ. ಆರು ತಿಂಗಳ ಹಿಂದೆ ಆರೋಪಿ ಜುನೈದ್ ಅಬ್ಬಾಸ್ ಬಳಿ 45 ಸಾವಿರ ಸಾಲ ಪಡೆದಿದ್ದ. ಹಣವನ್ನು ಹಿಂದಿರುಗಿಸುವಂತೆ ಅಬ್ಬಾಸ್ ಅನೇಕ ಬಾರಿ ಕೇಳಿದ್ದನು ಆದರೆ ಜುನೈದ್ ಹಣವನ್ನು ಹಿಂತಿರುಗಿಸಿರಲ್ಲಿಲ್ಲ.

ಬೆಳ್ತಂಗಡಿ: ಬಾಲಕಿ ಮೇಲೆ ಗ್ಯಾಂಗ್ ರೇಪ್, ಮೂವರು ಕಾಮುಕರ ಹೆಡೆಮುರಿ ಕಟ್ಟಿದ ಪೊಲೀಸರು

ಅಬ್ಬಾಸ್ ಜಾತ್ರೆಯಲ್ಲಿ ಮೇಕೆ ಮಾರಲು ಬೆಳಗ್ಗೆ 6 ಗಂಟೆಗೆ ಬೈಕ್ ನಲ್ಲಿ ಹೋಗುತ್ತಿದ್ದ ಎಂದು ಮೃತ ಅಬ್ಬಾಸ್ ಸಹೋದರಿಯರು ತಿಳಿಸಿದ್ದಾರೆ. ಜುನೈದ್ ತನ್ನ ಈ ಸಂದರ್ಭದಲ್ಲಿ ಅಬ್ಬಾಸ್‌ಗೆ ಚಾಕುವಿನಿಂದ ಕುತ್ತಿಗೆ ಸೇರಿದಂತೆ ದೇಹದ ಅನೇಕ ಸ್ಥಳಗಳಲ್ಲಿ ಇರಿದಿದ್ದಾನೆ. ಮೃತ ಅಬ್ಬಾಸ್ ಸೋದರ ಸಂಬಂಧಿ ಸೈಫ್ ಖಾನ್ ದೂರಿನ ಮೇರೆಗೆ ಜುನೈದ್ ವಿರುದ್ಧ ಪ್ರಕರಣ ದಾಖಲಾಗಿದೆ.

Latest Videos
Follow Us:
Download App:
  • android
  • ios