ಬೆಳ್ತಂಗಡಿ ಪೊಲೀಸ್‌ ಠಾಣೆಗೆ ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ ಒಬ್ಬ ಅಪ್ರಾಪ್ತ ಬಾಲಕ, ಮಹಮ್ಮದ್ ಇಟ್ಬಾಲ್ , ಫಾರೂಕ್ ರನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ. 

ಬೆಳ್ತಂಗಡಿ(ಜೂ.02): ಬಾಲಕಿ ಮೇಲೆ ಮೂವರು ಯುವಕರು ಅತ್ಯಾಚಾರ ಮಾಡಿದ್ದು, ಇದೀಗ ಆಕೆ ಆರು ತಿಂಗಳ ಗರ್ಭಿಣಿ ಆಗಿರುವ ಪ್ರಕರಣ ತಡವಾಗಿ ಬೆಳಕಿಗೆ ಬಂದಿದೆ. 

ಈ ಕುರಿತು ಬೆಳ್ತಂಗಡಿ ಪೊಲೀಸ್ ಠಾಣೆಯಲ್ಲಿ ಗ್ಯಾಂಗ್ ರೇಪ್ ಹಾಗೂ ಪೋಕೋ ಕಾಯ್ದೆ ಅಡಿ ಮೂವರ ವಿರುದ್ಧ ಪ್ರಕರಣ ದಾಖಲಾಗಿದೆ. 

ನ್ಯಾಯಕ್ಕಾಗಿ ಹೋರಾಡುತ್ತಿರುವ ಗ್ಯಾಂಗ್ ರೇಪ್ ಸಂತ್ರಸ್ತೆಗೆ ಬಟ್ಟೆ ಬಿಚ್ಚಲು ಹೇಳಿದ ಜಡ್ಜ್!

ಬೆಳ್ತಂಗಡಿ ಪೊಲೀಸ್‌ ಠಾಣೆಗೆ ನೊಂದ ಬಾಲಕಿ ನೀಡಿದ ದೂರಿನ ಮೇರೆಗೆ ಒಬ್ಬ ಅಪ್ರಾಪ್ತ ಬಾಲಕ, ಮಹಮ್ಮದ್ ಇಟ್ಬಾಲ್ (26), ಫಾರೂಕ್ (19) ರನ್ನು ಬಂಧಿಸಲಾಗಿದೆ. ಆರೋಪಿಗಳಿಗೆ ಕೋರ್ಟ್ ನ್ಯಾಯಾಂಗ ಬಂಧನ ವಿಧಿಸಿದೆ.