Asianet Suvarna News Asianet Suvarna News

ಹೆಂಗೆಳೆಯರು ಹೆಮ್ಮಾರಿಗಳಾದರ: ಗರ್ಲ್ಸ್‌ ಗ್ಯಾಂಗ್‌ನಿಂದ ಯುವತಿ ಮೇಲೆ ನಡುರಸ್ತೆಯಲ್ಲೇ ಹಲ್ಲೆ

ಉತ್ತರಾಖಂಡ್‌ನ ರೂರ್ಕಿಯಲ್ಲಿ ಹುಡುಗಿಯರ ಗುಂಪೊಂದು ಒಂದು ಹುಡುಗಿ ಮೇಲೆ ಅಟ್ಯಾಕ್ ಮಾಡಿದೆ. ಎಲ್ಲಾ ಹುಡುಗಿಯರು ಜೀನ್ಸ್‌ಧಾರಿಗಳಾಗಿದ್ದು, ಒಬ್ಬ ಹುಡುಗಿಯ ಮೇಲೆ ಎಲ್ಲರೂ ಸೇರಿ ದೊಣ್ಣೆಯಿಂದ ರಸ್ತೆಯಲ್ಲೇ ಹಲ್ಲೆ ಮಾಡುತ್ತಿದ್ದಾರೆ. 

Uttarakhand girls gang beating another girl in public road video goes viral akb
Author
First Published Dec 26, 2022, 6:19 PM IST

ಇತ್ತೀಚೆಗೆ ಯುವತಿಯರು ಕೂಡ ಯುವಕರಿಗಿಂತ ನಾವೇನೂ ಕಮ್ಮಿ ಇಲ್ಲ ಎಂಬಂತೆ ರಸ್ತೆಯಲ್ಲಿ ಸಾರ್ವಜನಿಕ ಸ್ಥಳದಲ್ಲಿ ಕಾಲೇಜುಗಳಲ್ಲಿ ಜುಟ್ಟು ಜುಟ್ಟು ಹಿಡಿದುಕೊಂಡು ಗಲಾಟೆ ಮಾಡುವುದು ಸಾಮಾನ್ಯ ಎನಿಸಿದೆ. ಹುಡುಗಿಯರು ಗ್ಯಾಂಗ್ ಕಟ್ಟಿಕೊಂಡು ಕಲ್ಲು ದೊಣ್ಣೆ ಹಿಡಿದುಕೊಂಡು ಹೊಡೆದಾಡುವ ಅನೇಕ ವಿಡಿಯೋಗಳು ಈ ಮೊದಲು ಕೂಡ ವೈರಲ್ ಆಗಿವೆ. ಅದೇ ರೀತಿ ಈಗ ಉತ್ತರಾಖಂಡ್‌ನ ರೂರ್ಕಿಯಲ್ಲಿ ಹುಡುಗಿಯರ ಗುಂಪೊಂದು ಒಂದು ಹುಡುಗಿ ಮೇಲೆ ಅಟ್ಯಾಕ್ ಮಾಡಿದೆ. ಎಲ್ಲಾ ಹುಡುಗಿಯರು ಜೀನ್ಸ್‌ಧಾರಿಗಳಾಗಿದ್ದು, ಒಬ್ಬ ಹುಡುಗಿಯ ಮೇಲೆ ಎಲ್ಲರೂ ಸೇರಿ ದೊಣ್ಣೆಯಿಂದ ರಸ್ತೆಯಲ್ಲೇ ಹಲ್ಲೆ ಮಾಡುತ್ತಿದ್ದಾರೆ. 

ಉತ್ತರಾಖಂಡ್‌ನ(Uttarakhand) ರೂರ್ಕಿಯಲ್ಲಿ (Roorkee) ನಡೆದ ಘಟನೆ ಇದು ಎನ್ನಲಾಗಿದ್ದು, ಸಣ್ಣದೊಂದು ವಿಚಾರಕ್ಕೆ ವಾದ ವಿವಾದವೇರ್ಪಟ್ಟು, ಅದು ವಿಕೋಪಕ್ಕೆ ಹೋಗಿದ್ದು, ರಸ್ತೆಯಲ್ಲೇ ಹೊಡೆದಾಡಿಕೊಂಡಿದ್ದಾರೆ. ಯುವತಿಯನ್ನು ರಸ್ತೆಗೆ ತಳ್ಳಿದ ಹುಡುಗಿಯರ ಗುಂಪು ಆಕೆಯ ಮೇಲೆ ದೊಣ್ಣೆಯಿಂದ ಹಲ್ಲೆ ಮಾಡಿದ್ದಾರೆ. ಇದೇ ವೇಳೆ ಆ ದಾರಿಯಲ್ಲಿ ಸಾಗುತ್ತಿದ್ದ ಕೆಲವರು ಜಗಳ ನಿಲ್ಲಿಸಿ ಇವರೆಲ್ಲರೂ ಶಾಲೆಗೆ ಹೋಗುವ ಹುಡುಗಿಯರು ಎಂದು ಹೇಳುತ್ತಿರುವುದು ವಿಡಿಯೋದ ಹಿನ್ನೆಲೆಯಲ್ಲಿ ಕೇಳಿಸುತ್ತಿದೆ. ಅಲ್ಲದೇ ಆ ವ್ಯಕ್ತಿ ಹುಡುಗಿಯರ ಜಗಳದ ಮಧ್ಯಪ್ರವೇಶಿಸಿ ಜಗಳ ನಿಲ್ಲಿಸುವಂತೆ ಅಲ್ಲಿದ್ದ ಜನರಿಗೆ ಹೇಳುತ್ತಾನೆ. ಅಲ್ಲದೇ ಅನೇಕರು ಈ ಜಗಳ ನಿಲ್ಲಿಸಲು ಮುಂದಾಗಿ ಹುಡುಗಿಯರನ್ನು ಬೇರೆ ಬೇರೆ ಮಾಡಿ ಕಳುಹಿಸಲು ಪ್ರಯತ್ನಿಸುತ್ತಾರೆ. 

ಅಲ್ಲಿ ಜಿಮ್, ಇಲ್ಲಿ ಕಾಲೇಜ್ ಕ್ಯಾಂಟೀನ್‌: ಎಲ್ಲೆಲ್ಲೂ ಈಗ ಹುಡುಗಿರ್ದೇ ಗಲಾಟೆ

ಆದರೆ ಈ ಘಟನೆ ಯಾವಾಗ ನಡೆದಿರುವುದು ಎಂಬ ಉಲ್ಲೇಖವಿಲ್ಲ. ವಿಜಯ್ ಪುಂಡಿರ್ ಎಂಬುವವರು ಈ ವಿಡಿಯೋವನ್ನು ಸಾಮಾಜಿಕ ಜಾಲತಾಣದಲ್ಲಿ (Social Media)ಪೋಸ್ಟ್ ಮಾಡಿದ್ದು, ಸ್ಥಳೀಯ ಪೊಲೀಸರಿಗೆ ಈ ವಿಡಿಯೋ ವೈರಲ್ ಆಗುವವರೆಗೂ ಇದರ ಬಗ್ಗೆ ಯಾವುದೇ ಮಾಹಿತಿ ಇಲ್ಲ. ಜಾಗರಣ್ ವರದಿ ಪ್ರಕಾರ, ಘಟನೆಯ ವಿಡಿಯೋ ಪೊಲೀಸರ ಕೈಗೆ ಸಿಕ್ಕಿದ್ದು ತನಿಖೆ ನಡೆಸಿ ಆರೋಪಿಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳಲಾಗುವುದು ಎಂದು ಪೊಲೀಸ್ ಅಧಿಕಾರಿ ದೇವೇಂದ್ರ ಚೌಹಾಣ್ (Devendra Chauhan) ಹೇಳಿದ್ದಾರೆ. ಇದಕ್ಕೂ ಮೊದಲು ಉತ್ತರಪ್ರದೇಶ (Uttar Pradesh) ಹಾಪುರ್‌ದಲ್ಲಿ (Hapur) ಇಂತಹದೇ ಒಂದು ಘಟನೆ ನಡೆದಿತ್ತು. ವಿದ್ಯಾರ್ಥಿನಿಯರು ಪರಸ್ಪರ ಹೊಡೆದಾಡಿಕೊಂಡಿದ್ದರು. ಪರಸ್ಪರ ಕೂದಲನ್ನು ಹಿಡಿದು ಎಳೆದಾಡಿಕೊಂಡ ಹುಡುಗಿಯರು ನಂತರ ಒಬ್ಬರಿಗೊಬ್ಬರು ಕೈಯಲ್ಲೇ ಥಳಿಸುತ್ತಾ ಹೊಡೆದಾಡಿಕೊಂಡಿದ್ದರು. 

ನಡುರಸ್ತೆಯಲ್ಲಿ ಕೂದಲು ಎಳೆದುಕೊಂಡು ಕಿತ್ತಾಡಿದ ಯುವತಿಯರು, ವಿಡಿಯೋ ವೈರಲ್


 

Follow Us:
Download App:
  • android
  • ios