ಕರ್ನಾಟಕಕ್ಕೂ ಕಾಲಿಟ್ಟ ಯುಪಿ ಮೇಡ್‌ ಗಾಂಜಾ ಚಾಕ್ಲೆಟ್‌: ಬೆಂಗಳೂರಿನಲ್ಲಿ ಮಾರಾಟ

ಉತ್ತರ ಪ್ರದೇಶದಲ್ಲಿ ತಯಾರಿಸುತ್ತಿದ್ದ ಗಾಂಜಾ ಚಾಕೋಲೇಟ್‌ಗಳನ್ನು ಬೆಂಗಳೂರಿಗೆ ತಂದು ಮಾರಾಟ ಮಾಡುವ ಜಾಲವನ್ನು ಪೊಲೀಸರು ಬೇಧಿಸಿದ್ದಾರೆ. ಕಳ್ಳರ ಕರಾಮತ್ತು ರೋಚಕವಾಗಿತ್ತು.

Uttar Pradesh Made Ganja Chocolate Entry to Karnataka this chocolate sold in Bengaluru sat

ಬೆಂಗಳೂರು (ಆ.24): ರಾಜ್ಯದಲ್ಲಿ ಮಾದಕ ವಸ್ತುಗಳ ಜಾಲ ನಿಯಂತ್ರಣಕ್ಕೆ ಬರುತ್ತಿಲ್ಲ. ಪೊಲೀಸರು ಭೇದಿಸಿದಷ್ಟೂ ಹೊಸ ಮಾರ್ಗಗಳನ್ನು ಖದೀಮರು ಹುಡುಕಿಕೊಳ್ಳುತ್ತಿದ್ದಾರೆ. ಈಗ ಕರ್ನಾಟಕ, ಆಂಧ್ರ ಪ್ರದೇಶ, ಮಹಾರಾಷ್ಟ್ರ ಎಲ್ಲವನ್ನೂ ಬಿಟ್ಟು ದೂರದ ಉತ್ತರ ಪ್ರದೇಶ ರಾಜ್ಯದಲ್ಲಿ ತಯಾರಿಸಲಾಗುವ ಗಾಂಜಾ ಚಾಕೋಲೇಟ್‌ಗಳನ್ನು ತಂದು ಬೆಂಗಳೂರಿನಲ್ಲಿ ಮಾರಾಟ ಮಾಡಲಾಗುತ್ತಿತ್ತು. ಪೊಲೀಸರ ಕಣ್ತಪ್ಪಿಸಿ ಮಾರಾಟ ಮಾಡುತ್ತಿದ್ದ ಖದೀಮರನ್ನು ಪೊಲೀಸರು ಬಂಧಿಸಿ ಜೈಲಿಗಟ್ಟಿದ್ದಾರೆ.

ಹೌದು, ಉತ್ತರ ಪ್ರದೇಶದಿಂದ ಬೆಂಗಳೂರಿಗೂ ಕಾಲಿಟ್ಟ ಗಾಂಜಾ ಚಾಕ್ಲೇಟ್ ಮಾರಾಟ ಜಾಲ. ಉತ್ತರ ಪ್ರದೇಶದಿಂದ ತಂದು ಬೆಂಗಳೂರಿನಲ್ಲಿ ಮಾರಾಟ ಮಾಡಲಾಗುತ್ತಿದೆ. ಇನ್ನು ಚಾಕೋಲೇಟ್‌ಗಳನ್ನು ಮುನಾಕ್ಕಾ, ಮಹಾಕಾಲ, ಆನಂದ, ಚಾರ್ ಮಿನಾರ್ ಗೊಲ್ಕ್ ಹೆಸರಿನ‌ಲ್ಲಿ ಮಾರಾಟ ಮಾಡುತ್ತಿರುವ ಜಾಲಬವು ಪತ್ತೆಯಾಗಿದೆ. ಇವುಗಳನ್ನು ಉತ್ತರ ಪ್ರದೇಶದಿಂದ ವಾರಕ್ಕೆರಡು ವಾರಿ ರೈಲಿನಲ್ಲಿ ತಂದು, ಬೆಂಗಳೂರಿನ ವಿವಿಧ ಪೆಟ್ಟಿ ಅಂಗಡಿಗಳಲ್ಲಿ ಇಟ್ಟು ಮಾರಾಟ ಮಾಡಲಾಗುತ್ತಿತ್ತು. ಹೀಗೆ, ಉತ್ತರ ಪ್ರದೇಶದಿಂದ ತೆಗೆದುಕೊಂಡು ಬಂದಿದ್ದ 300 ಕೆ.ಜಿ. ಚಾಕೋಲೇಟ್‌ಗಳನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ.

ಬೆಂಗಳೂರಿನ ಪೊಲಮ್ಮಾಸ್‌ ಹೋಟೆಲ್‌ನಲ್ಲಿ ಸಿಲಿಂಡರ್‌ ಸ್ಪೋಟ: ವೃದ್ಧನ ದೇಹ ಛಿದ್ರ ಛಿದ್ರ

50 ರೂಪಾಯಿಗೆ 3 ಗಾಂಜಾ ಚಾಕೋಲೇಟ್ ಮಾರಾಟ: ಗಾಂಜಾ ಚಾಕೋಲೇಟ್‌ ಮಾರಾಟ ಮಾಡುತ್ತಿದ್ದ ವ್ಯಕ್ತಿ ಬೆಂಗಳೂರಿನ ಹಳೇ ಗುಡ್ಡದಹಳ್ಳಿ ನಿವಾಸಿ ಶಮೀಮ್‌ ಅಖ್ತರ್‌ನನ್ನು ಪೊಲೀಸರು ವಶಕ್ಕೆ ಪಡೆದಿದ್ದಾರೆ. ಈ ಬಗ್ಗೆ ಖಚಿತ ಮಾಹಿತಿ ಪಡೆದುಕೊಂಡ ಆರ್.ಎಂ.ಸಿ. ಯಾರ್ಡ್ ಪೊಲೀಸರಿಂದ ಆರೋಪಿ ಬಂಧನವಾಗಿದೆ. ಒಟ್ಟು 6 ಲಕ್ಷ ರೂಪಾಯಿ ಮೌಲ್ಯದ ಚಾಕಲೇಟ್ ಗಳ ವಶಕ್ಕೆ ಪಡೆಯಲಾಗಿದೆ. ಇನ್ನು ಆರೋಪಿಗಳು ಪೆಟ್ಟಿಗೆ ಅಂಗಡಿಗಳಲ್ಲಿ ಇಟ್ಟುಕೊಂಡು, ಒಂದಕ್ಕೆ 20 ರೂ. ಹಾಗೂ 50 ರೂಪಾಯಿಗೆ 3 ಚಾಕಲೇಟ್‌ಗಳನ್ನು ಮಾರಾಟ ಮಾಡಲಾಗುತ್ತಿತ್ತು. ಪೊಲೀಸರ ಕಾರ್ಯಾಚರಣೆ ಆರಂಭವಾಗುತ್ತಿದ್ದಂತೆ ಹಲವರು ಪರಾರಿ ಆಗಿದ್ದಾರೆ. 

ಗಾಂಜಾ ಖರೀದಿಗೆ ಬಂದವರು ನಾಪತ್ತೆ: ಇನ್ನು ಪೊಲೀಸರ ವಶಕ್ಕೆ ಸಿಕ್ಕ ಶಮೀಮ್ ಅಖ್ತರ್‌ನಿಂದ ಚಾಕಲೇಟ್ ಪಡೆಯುತ್ತಿದ್ದ ಮೂವರು ನಾಪತ್ತೆಯಾಗಿದ್ದಾರೆ. ನಾಪತ್ತೆಯಾದವರನ್ನು ಸಂಜಯ್, ಗೋವಿಂದ ಮತ್ತು ವಿನೋದ್ ಎಂದು ಆರೋಪಿ ಬಾಯಿಬಿಟ್ಟಿದ್ದಾನೆ. ಈಗ ನಾಪತ್ತೆಯಾದ ಆರೋಪಿಗಳಿಗೆ ಪೊಲೀಸರ ಹುಡುಕಾಟ ಆರಂಭಿಸಿದ್ದಾರೆ. ಜೊತೆಗೆ, ಇಂತಹ ಗಾಂಜಾ ಚಾಕೋಲೇಟ್‌ಗಳು ಬೆಂಗಳೂರಿನ ವಿವಿಧ ಪ್ರದೇಶಗಳಿಗೆ ಮಾರಾಟಕ್ಕಾಗಿ ಸರಬರಾಜು ಆಗಿರುವ ಸಾಧ್ಯತೆಗಳಿದ್ದು, ಆರೋಪಿಗಳನ್ನು ವಿಚಾರಣೆ ಮಾಡಿದ ಬಳಿಕ ಇನ್ನಷ್ಟು ಗಾಂಜಾ ಚಾಕೋಲೇಟ್‌ ಲಭ್ಯವಾಗುವ ಸಾಧ್ಯತೆಗಳಿವೆ.

ಚಂದ್ರಯಾನ-3ರ ಇಸ್ರೋ ವಿಜ್ಞಾನಿಗಳನ್ನು ವಿಧಾನಸೌಧಕ್ಕೆ ಆಹ್ವಾನಿಸಿದ ಸಿಎಂ ಸಿದ್ದರಾಮಯ್ಯ

300 ಕೆ.ಜಿ. ಗಾಂಜಾ ಚಾಕೋಲೇಟ್‌ ಜಪ್ತಿ: ಈ ಬಗ್ಗೆ ಉತ್ತರ ವಿಭಾಗ ಡಿಸಿಪಿ ಶಿವಪ್ರಕಾಶ್ ದೇವರಾಜ್ ಮಾತನಾಡಿ, ಬೆಂಗಳೂರಿನ ಪೀಣ್ಯ ಹಾಗೂ ಸುತ್ತಲಿನ ಪ್ರದೇಶಗಳಲ್ಲಿ ಗಾಂಜಾ ಚಾಕಲೇಟ್ ಮಾರಾಟ ಮಾಡುತ್ತಿದ್ದ ಬಗ್ಗೆ ಮಾಹಿತಿ ಲಭ್ಯವಾಗಿತ್ತು. ಈ ಬಗ್ಗೆ ಹಲವು ದಿನಗಳ ಕಾರ್ಯಾಚರಣೆ ನಂತರ ಖಚಿತ ಮಾಹಿತಿ ಮೇರೆಗೆ ದಾಳಿ ಮಾಡಿ ಆರೋಪಿಯನ್ನು ಬಂಧಿಸಲಾಗಿದೆ. ಈ ವೇಳೆ 6 ಲಕ್ಷ ರೂ. ಮೌಲ್ಯದ 300 ಕೆಜೆ ಚಾಕಲೇಟ್ ಗಾಂಜಾ ವಶಕ್ಕೆ ಪಡೆಯಲಾಗಿದೆ. ಉತ್ತರ ಪ್ರದೇಶ ರಾಜ್ಯದಿಂದ ರೈಲಿನ ಮೂಲಕ ಗಾಂಜಾ ಚಾಕೋಲೇಟ್‌  ತಂದು ಮಾರಾಟ ಮಾಡಲಾಗುತ್ತಿತ್ತು. ಪ್ರಕರಣದಲ್ಲಿ ಭಾಗಿ ಆಗಿರುವ ಇತರೆ ಆರೋಪಿಗಳಿಗೆ ಹುಡುಕಾಟ ಮಾಡ್ತಾ ಇದ್ದೇವೆ. ಈ ಬಗ್ಗೆ ಆರ್ ಎಂ‌ ಸಿ ಯಾರ್ಡ್ ಪೊಲೀಸರಿಂದ ಪ್ರಕರಣ ದಾಖಲಾಗಿದೆ ಎಂದು ಮಾಹಿತಿ ನೀಡಿದರು.

Latest Videos
Follow Us:
Download App:
  • android
  • ios