ಕೊಲೆ ಮಾಡಿ ಪತ್ನಿ ಶವವನ್ನು ಶೌಚಗುಂಡಿ ಒಳಗೆ ಹಾಕಿದ್ದ ಪತಿ: 3 ವರ್ಷಗಳ ಬಳಿಕ ಪ್ರಕರಣ ಬೆಳಕಿಗೆ
ಸಿಐಡಿ ತನಿಖೆ ಕೈಗೆತ್ತಿಕೊಂಡು ಭೋಂಬಲ್‌ನನ್ನು ತೀವ್ರ ವಿಚಾರಣೆ ನಡೆಸಿದ ವೇಳೆ ಆತ ‘ದಿಂಬಿನಿಂದ ಉಸಿರುಗಟ್ಟಿಸಿ ನನ್ನ ಹೆಂಡತಿಯನ್ನು ನಾನೇ ಕೊಲೆ ಮಾಡಿ ಶೌಚಗುಂಡಿಯಲ್ಲಿ ಮರೆಮಾಚಿದ್ದೆ’ ಎಂದು ಒಪ್ಪಿಕೊಂಡಿದ್ದಾನೆ.
ಕೋಲ್ಕತಾ (ಜೂನ್ 26, 2023): ಮೂರು ವರ್ಷಗಳಿಂದ ಕಾಣೆಯಾಗಿದ್ದ ಮಹಿಳೆಯನ್ನು ಆಕೆಯ ಗಂಡನೇ ಕೊಲೆ ಮಾಡಿ ಶವವನ್ನು ಶೌಚಗುಂಡಿಯಲ್ಲಿರಿಸಿದ್ದ ಘಟನೆ ಇದೀಗ ಪಶ್ಚಿಮ ಬಂಗಾಳದ ಸೋನಾರ್ಪುರದಲ್ಲಿ ಬೆಳಕಿಗೆ ಬಂದಿದೆ. ಪ್ರಕರಣದ ತನಿಖೆ ನಡೆಸಿದ ಸಿಐಡಿ ಅಧಿಕಾರಿಗಳ ತಂಡವು ಶೌಚಗುಂಡಿಯಿಂದ ಮಹಿಳೆಯ ಅಸ್ಥಿಪಂಜರವನ್ನು ಹೊರತೆಗೆದಿದೆ. ಅಲ್ಲದೇ ಪತ್ನಿಯನ್ನು ಕೊಲೆ ಮಾಡಿದ್ದ ಪತಿ ಭೋಂಬಲ್ ಮಂಡಲ್ ಅವರನ್ನು ಬಂಧಿಸಿದೆ.
ಕೊಲೆಯಾದ ತುಂಪಾ ಮಂಡಲ್ ಎಂಬ ಮಹಿಳೆ 2020ರಲ್ಲಿ ಕಾಣೆಯಾಗಿದ್ದರು. ಬಳಿಕ ಆಕೆಯ ತಂದೆ, ಮಗಳು ಕಾಣೆಯಾಗಿದ್ದರ ಬಗ್ಗೆ ದೂರು ದಾಖಲಿಸಿದ್ದರು. ಬಳಿಕ ಈ ಪ್ರಕರಣವನ್ನು ಕೋಲ್ಕತಾ ನ್ಯಾಯಾಲಯ ಸಿಐಡಿಗೆ ಹಸ್ತಾಂತರಿಸಿತ್ತು. ಸಿಐಡಿ ತನಿಖೆ ಕೈಗೆತ್ತಿಕೊಂಡು ಭೋಂಬಲ್‌ನನ್ನು ತೀವ್ರ ವಿಚಾರಣೆ ನಡೆಸಿದ ವೇಳೆ ಆತ ‘ದಿಂಬಿನಿಂದ ಉಸಿರುಗಟ್ಟಿಸಿ ನನ್ನ ಹೆಂಡತಿಯನ್ನು ನಾನೇ ಕೊಲೆ ಮಾಡಿ ಶೌಚಗುಂಡಿಯಲ್ಲಿ ಮರೆಮಾಚಿದ್ದೆ’ ಎಂದು ಒಪ್ಪಿಕೊಂಡಿದ್ದಾನೆ.
ಇದನ್ನು ಓದಿ: ತೃತೀಯಲಿಂಗಿಗಳ ಬರ್ಬರ ಹತ್ಯೆ: ಡಬ್ಬಲ್ ಮರ್ಡರ್‌ಗೆ ಕಾರಣ ಹೀಗಿದೆ..
ಕೊಲೆಗೆ ನಿಖರ ಕಾರಣ ತಿಳಿದು ಬಂದಿಲ್ಲವಾದರೂ ಪತ್ನಿಯ ಅಕ್ರಮ ಸಂಬಂಧದ ಕಾರಣ ಆಕೆಯನ್ನು ಭೋಂಬಲ್ ಕೊಲೆ ಮಾಡಿದ್ದಾನೆ ಎನ್ನಲಾಗಿದೆ.
ಹೈದರಾಬಾದ್‌ನಲ್ಲಿ ತೃತೀಯಲಿಂಗಿಗಳ ಬರ್ಬರ ಹತ್ಯೆ: ಡಬ್ಬಲ್ ಮರ್ಡರ್‌ಗೆ ಕಾರಣ ಹೀಗಿದೆ..
ಹೈದರಾಬಾದ್: ತೆಲಂಗಾಣ ರಾಜಧಾನಿ ಹೈದರಾಬಾದ್‌ನ ದೈಬಾಗ್ ಪ್ರದೇಶದಲ್ಲಿ ಮಂಗಳವಾರ ರಾತ್ರಿ ಇಬ್ಬರು ತೃತೀಯಲಿಂಗಿಗಳನ್ನು ಬರ್ಬರವಾಗಿ ಹತ್ಯೆ ಮಾಡಲಾಗಿದೆ ಎಂದು ಪೊಲೀಸರು ತಿಳಿಸಿದ್ದಾರೆ. ಸ್ಕೂಟರ್‌ನಲ್ಲಿ ಮನೆಗೆ ಹಿಂದಿರುಗುತ್ತಿದ್ದಾಗ ಕಲ್ಲು ಮತ್ತು ಚಾಕುವಿನಿಂದ ಹೊಡೆದು ಕೊಲೆ ಮಾಡಲಾಗಿದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಲಂಡನ್‌ನಲ್ಲಿ ವಾರದಲ್ಲಿ ಮೂವರು ಭಾರತೀಯ ಮೂಲದವರ ಹತ್ಯೆ: ಆತಂಕದಲ್ಲಿ ಅನಿವಾಸಿ ಭಾರತೀಯರು!
ಮೃತರನ್ನು ಯೂಸುಫ್ ಅಲಿಯಾಸ್ ಡಾಲಿ (25) ಮತ್ತು ರಿಯಾಜ್ ಅಲಿಯಾಸ್ ಸೋಫಿಯಾ (30) ಎಂದು ಗುರುತಿಸಲಾಗಿದೆ. ಕೊಲೆಯಾದ ಒಂದು ಗಂಟೆಯ ನಂತರ ಪೊಲೀಸರು ಸ್ಥಳಕ್ಕೆ ಧಾವಿಸಿ ಸುಳಿವುಗಳನ್ನು ಹುಡುಕಿದ್ದು, ದಾಳಿಗೆ ಬಳಸಿದ್ದ ಚಾಕು ವಶಪಡಿಸಿಕೊಳ್ಳುವಲ್ಲಿ ಯಶಸ್ವಿಯಾಗಿದ್ದಾರೆ ಎಂದು ವರದಿಯಾಗಿದೆ.
ಮಂಗಳವಾರ ರಾತ್ರಿ ಹೈದರಾಬಾದ್‌ನ ತಪ್ಪಚಬುತ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಇಬ್ಬರು ತೃತೀಯಲಿಂಗಿಗಳನ್ನು ಅಪರಿಚಿತ ವ್ಯಕ್ತಿಗಳು ಹತ್ಯೆ ಮಾಡಿದ್ದಾರೆ. ಅಪರಿಚಿತ ವ್ಯಕ್ತಿಗಳು ಚಾಕು ಮತ್ತು ಕಲ್ಲುಗಳಿಂದ ಹಲ್ಲೆ ನಡೆಸಿ ಕೊಲೆ ಮಾಡಿದ್ದಾರೆ ಎಂದು ತಿಳಿದುಬಂದಿದೆ. ತಪ್ಪಚಬುತ್ರ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಜೋಡಿ ಕೊಲೆ ನಡೆದಿದ್ದು, ಪೊಲೀಸರಿಗೆ ಮಾಹಿತಿ ತಿಳಿದ ಬಳಿಕ ಅವರು ಸ್ಥಳಕ್ಕಾಗಮಿಸಿದ್ದಾರೆ. ಈ ಸಂಬಂಧ ಮಾಹಿತಿ ನೀಡಿದ ತಪ್ಪಚಬುತ್ರ ಡಿಸಿಪಿ, ಮೃತ ತೃತೀಯಲಿಂಗಿಗಳನ್ನು ಯೂಸುಫ್ ಅಲಿಯಾಸ್ ಡಾಲಿ ಮತ್ತು ರಿಯಾಜ್ ಅಲಿಯಾಸ್ ಸೋಫಿಯಾ ಎಂದು ಗುರುತಿಸಲಾಗಿದೆ ಎಂದು ಮಾಹಿತಿ ನೀಡಿದ್ದಾರೆ.
ಇದನ್ನೂ ಓದಿ: ಮಹಿಳಾ ಜೈಲಲ್ಲಿ ಭೀಕರ ಗಲಭೆ: 41 ಕೈದಿಗಳನ್ನು ಸುಟ್ಟು, ಶೂಟ್ ಮಾಡಿ ಕೊಂದ ಗ್ಯಾಂಗ್‌ಸ್ಟರ್‌ಗಳು