* ಬ್ಯಾಗೇಜ್‌ನೊಂದಿಗೆ ಜೀವಂತ ಗುಂಡು ತಂದಿದ್ದ ಅಮೆರಿಕ ಪ್ರಜೆ* ತಪಾಸಣೆ ನಡೆಸಿದಾಗ ಜೀವಂತ ಗುಂಡು ಪತ್ತೆ* ಬೆಂಜಮಿನ್ ಡೇನಿಯಲ್ ಹ್ಯೂಸ್ ಎಂಬಾತನೇ ಬಂಧಿತ ಅಮೆರಿಕ ಪ್ರಜೆ
ಬೆಂಗಳೂರು(ಜೂ.17): ತಮ್ಮ ಬ್ಯಾಗೇಜ್‌ನೊಂದಿಗೆ ಜೀವಂತ ಗುಂಡು ತಂದಿದ್ದ ಅಮೆರಿಕ ಮೂಲದ ಪ್ರಜೆಯನ್ನು ಬೆಂಗಳೂರು ವಿಮಾನ ನಿಲ್ದಾಣದಲ್ಲಿ ಅಧಿಕಾರಿಗಳು ಬಂಧಿಸಿದ ಘಟನೆ ನಿನ್ನೆ(ಗುರುವಾರ) ನಡೆದಿದೆ.
ಅಮೆರಿಕದ ಟೆಕ್ಸಾಸ್ ಮೂಲದ ವ್ಯಕ್ತಿಯೊಬ್ಬರು ತಮ್ಮ ಸಾಮಾನು ಸರಂಜಾಮುಗಳೊಂದಿಗೆ ಕೌಬಾಯ್ ಅಸಾಲ್ಟ್ ರೈಫಲ್ ನ ಜೀವಂತ ಗುಂಡು ಸಾಗಿಸುತ್ತಿದ್ದ ಆರೋಪದ ಮೇರೆಗೆ ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದಲ್ಲಿ ಬುಧವಾರ ಅಧಿಕಾರಿಗಳು ಬಂಧಿಸಿದ್ದಾರೆ.
ನಿಮ್ಮ ವಾಹನಕ್ಕೆ ಇನ್ಶುರೆನ್ಸ್ ಮಾಡಿಸುವ ಮುನ್ನ ಎಚ್ಚರ: ಸ್ವಲ್ಪ ಯಾಮಾರಿದ್ರೂ ದಂಡ ಕಟ್ಟಿಟ್ಟ ಬುತ್ತಿ..!
ಬೆಂಗಳೂರಿನಿಂದ ಕೋಲ್ಕತ್ತಾಗೆ ಸಂಜೆ 5.55ಕ್ಕೆ ಹೊರಡುವ ಏರ್‌ಏಷ್ಯಾ ಇಂಡಿಯಾ ವಿಮಾನವನ್ನು ಹತ್ತಲು ಅಮೆರಿಕ ಪ್ರಜೆ ನಿಲ್ದಾಣಕ್ಕೆ ಬಂದಿದ್ದರು. ಈ ವೇಳೆ ಅವರ ತಪಾಸಣೆ ನಡೆಸಿದಾಗ ಜೀವಂತ ಗುಂಡು ಪತ್ತೆಯಾದ ಹಿನ್ನಲೆಯಲ್ಲಿ ಅವರಿಗೆ ನಿಲ್ದಾಣ ಪ್ರವೇಶಿಸಲು ಅವಕಾಶ ನೀಡಲಿಲ್ಲ ಎಂದು ಅಧಿಕಾರಿಗಳು ತಿಳಿಸಿದ್ದಾರೆ. ಬೆಂಜಮಿನ್ ಡೇನಿಯಲ್ ಹ್ಯೂಸ್ ಎಂಬ ಅಮೆರಿಕ ಪ್ರಜೆಯನ್ನು ಅಧಿಕಾರಿಗಳು ಬಂಧಿಸಿದ್ದು, ವಿಚಾರಣೆ ನಡೆಸಿದ್ದಾರೆ.
