Asianet Suvarna News Asianet Suvarna News

ನಿಮ್ಮ ವಾಹನಕ್ಕೆ ಇನ್ಶುರೆನ್ಸ್‌ ಮಾಡಿಸುವ ಮುನ್ನ ಎಚ್ಚರ: ಸ್ವಲ್ಪ ಯಾಮಾರಿದ್ರೂ ದಂಡ ಕಟ್ಟಿಟ್ಟ ಬುತ್ತಿ..!

*  ಇನ್ಶುರೆನ್ಸ್‌ ಇದೆ ಎಂದು ಬಿಂದಾಸ್ಸಾಗಿ ರೋಡಿಗಿಳಿದ್ರೆ ದಂಡ ಗ್ಯಾರಂಟಿ
*  ನ್ಯೂ ಇಂಡಿಯಾ ಕಂಪನಿಯಲ್ಲಿ ಇನ್ಶುರೆನ್ಸ್‌ ಪಡೆವರು ಕ್ರಾಸ್‌ ಚೆಕ್‌ ಮಾಡಿಕೊಳ್ಳಿ
*  ಗ್ರಾಹಕರಲ್ಲಿ ಮೋಸದ ಸಂಶಯ

Customers Faces Problems For Cheating of New India Assurance Company in Vijayapura grg
Author
Bengaluru, First Published Jun 16, 2022, 10:08 PM IST | Last Updated Jun 16, 2022, 10:08 PM IST

ವರದಿ: ಷಡಕ್ಷರಿ ಕಂಪೂನವರ್, ಏಷ್ಯಾನೆಟ್ ಸುವರ್ಣ ನ್ಯೂಸ್, ವಿಜಯಪುರ

ವಿಜಯಪುರ(ಜೂ.16): ನೀವು ನಿಮ್ಮ ವಾಹನಗಳಿಗೆ ಇನ್ಶುರೆನ್ಸ್‌ ಮಾಡಿಸಿದ್ದಲ್ಲಿ ಒಂದು ಬಾರಿ ಕ್ರಾಸ್‌ ಚೆಕ್‌ ಮಾಡಿಕೊಳ್ಳಿ. ಇಲ್ಲವಾದ್ರೆ ಪೊಲೀಸರ ಕೈಗೆ ತಗಲಾಕಿಕೊಂಡು ದಂಡ ಕಟ್ಟೊದು ಪಿಕ್ಸ್.‌ ಯಾಕಂದ್ರೆ ವಿಜಯಪುರ ನಗರದ ಇನ್ಶುರೆನ್ಸ್‌ ಕಂಪನಿಯೊಂದು ಗ್ರಾಹಕರಿಗೆ ಹಣ ಪಡೆದು ವಿಮೆ ದಾಖಲಾತಿ ನೀಡಿದೆ. ಆದ್ರೆ ಪೊಲೀಸರು ದಾಖಲಾತಿ ತಪಾಸಣೆ ಮಾಡುವ ವೇಳೆ ಇನ್ಶೂರೆನ್ಸ್‌ ಡ್ಯೂ ಅಂತಾ ಬಂದಿದ್ದು, ಗ್ರಾಹಕರು ಪದಾಡುವಂತಾಗಿದೆ.

ನ್ಯೂ ಇಂಡಿಯಾ ಅಶ್ಯೂರೆನ್ಸ್‌ನಿಂದ ದೋಖಾ?

ನಗರದ ಗುರುಕುಲ ರಸ್ತೆಯಲ್ಲಿನ ನ್ಯೂ ಇಂಡಿಯಾ ಅಶ್ಯೂರನ್ಸ್ ನಲ್ಲಿ ಯಾವುದೇ ವಿಧದ ವಿಮೆ ಮಾಡಿಸಿದ್ದರೆ ಗ್ರಾಹಕರು ಒಮ್ಮೆ ಕ್ರಾಸ್ ಚೆಕ್ ಮಾಡೋದು ಒಳ್ಳೆಯದು. ಕಾರಣ ಇಲ್ಲಿ ಇನ್ಸುರೆನ್ಸ್ ಮಾಡಿಸಲು ಹಣ ಪಾವತಿ ಮಾಡಿದ್ದರೂ ಸಹ ಆನ್ ಲೈನ್ ನಲ್ಲಿ ಹಣ ಭರಿಸಿಲ್ಲ. ಇನ್ಸುರೆನ್ಸ್ ಡ್ಯೂ ಅಥವಾ ಎಕ್ಸಪೈರ್ ಎಂದು ಬರುತ್ತಿದೆ. ನ್ಯೂ ಇಂಡಿಯಾ ಅಶ್ಯೂರನ್ಸ್ ಕಂಪನಿಂದ ಗ್ರಾಹಕರಿಕೆ ದೋಖಾ ಆಗಿದೆ ಎಂಬ ಆರೋಪ ಕೇಳಿಬಂದಿದೆ.

Customers Faces Problems For Cheating of New India Assurance Company in Vijayapura grg

ಇಟ್ಟುಕೊಂಡವನಿಗಾಗಿ ಗಂಡನನ್ನೇ ಮುಗಿಸಿಬಿಟ್ಳು ಹೆಂಡ್ತಿ, ಕಥೆ ಕಟ್ಟಿದವಳ ಕಳ್ಳಾಟ ಬಯಲು

ಇನ್ಶುರೆನ್ಸ್‌ ಮಾಡಿಸಿದ್ದರೂ ದಂಡ ಕಟ್ಟಿದ ಗ್ರಾಹಕ

ವಿಜಯಪುರ ತಾಲೂಕಿನ ಹಿಟ್ಟಿನಹಳ್ಳಿ ಗ್ರಾಮದ ಶ್ರೀಶೈಲ ಗೆಣ್ಣೂರ ತಮ್ಮ ಕ್ರೂಸರ್ ವಾಹನದ ವಿಮೆಗಾಗಿ ಇದೇ ನ್ಯೂ ಇಂಡಿಯಾ ಅಶ್ಯೂರೆನ್ಸ್ ನಲ್ಲಿ ಒಂದು ವರ್ಷದ ವಿಮೆಗಾಗಿ 13055 ರೂಪಾಯಿ ಭರಿಸಿ ಅದಕ್ಕೆ ಸಂಬಂಧಿಸಿದ ರಸೀದಿಯನ್ನೂ ಪಡೆದುಕೊಂಡು ಹೋಗಿದ್ಧಾರೆ. ಬಳಿಕ ಕ್ರೂಸರ್ ವಾಹನದಲ್ಲಿ ನೆರೆಯ ಮಹಾರಾಷ್ಟ್ರಕ್ಕೆ ಹೋದಾಗ ಅಲ್ಲಿನ ಪೊಲೀಸರು ವಾಹನದ ದಾಖಲಾತಿ ಪರಿಶೀಲನೆ ಮಾಡೋ ವೇಳೆ ಆನ್ ಲೈನ್ ನಲ್ಲಿ ಇವರ ಕ್ರೂಸರ್ ವಾಹನದ ವಿಮೆಯನ್ನು ಚೆಕ್ ಮಾಡಿದ್ದಾರೆ. ಆಗ ಎಕ್ಸಪೈರ್ ಎಂದು ಬಂದಿದೆ. ಅದಕ್ಕಾಗಿ ದಂಡವನ್ನೂ ಹಾಕಿದಾಗಲೇ ಇವರಿಗೆ ತಮ್ಮ ವಾಹನದ ಇನ್ಸುರೆನ್ಸ್ ಎಕ್ಸಪೈರ್ ಆಗಿದ್ದರ ಮಾಹಿತಿ ತಿಳಿದು ಬಂದಿದೆ.

ಗ್ರಾಹಕರನ್ನ ಅಲೆದಾಡುತ್ತಿರೋ ಇನ್ಶುರೆನ್ಸ್‌ ಕಂಪನಿ

ಒಂದೂವರೆ ತಿಂಗಳ ಹಿಂದೆ ಶ್ರೀಶೈಲ್‌ ತಮ್ಮ ಕ್ರೂಜರ್‌ ವಾಹನಕ್ಕೆ ಇನ್ಶುರೆನ್ಸ್‌ ಮಾಡಿಸಿ ಹದಿಮೂರು ಸಾವಿರದ ಐವತ್ತೈದು ರೂಪಾಯಿ ವಿಮಾ ಹಣ ಭರಿಸಿದ್ದಾರೆ. ಆದರೆ ಪೊಲೀಸರ ತಪಾಸಣೆ ವೇಳೆ ಎಕ್ಸಪೈರ್ ಬಂದಿದೆ ಎಂದು ಬಂದಿದ್ದು ಗೊಂದಲಾಗಿದೆ. ನಂತರ ನ್ಯೂ ಇಂಡಿಯಾ ಅಶ್ಯೂರನ್ಸ್ ಕಚೇರಿಗೆ ಆಗಮಿಸಿದ್ದಾರೆ. ಆದ್ರೆ ಕಂಪನಿ ಮ್ಯಾನೇಜರ್‌ ಇಂದು ನಾಳೆ ಎಂದು ಕ್ರೂಜರ್‌ ಮಾಲಿಕರನ್ನ ಯಡತಾಕುವಂತೆ ಮಾಡಿದ್ದಾನೆ. ಇದರಿಂದ ಇನ್ಶುರೆನ್ಸ್‌ ಮಾಡಿಯೂ ಶ್ರೀಶೈಲ್‌ ವಿನಾಕಾರಣ ಕಿರುಕುಳ ಅನುಭವಿಸಿದ್ದಾರೆ.

ಇನ್ಶುರೆನ್ಸ್‌ ಹಣವನ್ನ ಲಫಟಾಯಿಸಿದ್ನಾ ಎಜೆಂಟ್..?

ಎರಡು ತಿಂಗಳ ಹಿಂದೆಯೆ ಶ್ರೀಶೈಲ್‌ ಎಜೆಂಟ್‌ ಮೂಲಕ ತಮ್ಮ ವಾಹನಕ್ಕೆ ಇನ್ಶುರೆನ್ಸ್‌ ಪಡೆದುಕೊಂಡಿದ್ದಾರೆ. ಈ ಬಗ್ಗೆ ತಾವೇ ಹಠ ಹಿಡಿದು ಕಚೇರಿಗೆ ಹೋಗಿ ವಿಚಾರಿಸಿದಾಗ ಶಾಕ್‌ ಆಗಿದೆ. ಅದೇನಂದ್ರೆ ಕಂಪನಿ ಖಾತೆಗೆ ಇನ್ಸುರನ್ಸ್ ಹಣ ಸಂದಾಯವಾಗಿಲ್ಲ ಎಂದು ಕಚೇರಿ ಮ್ಯಾನೇಜರ ಮಾಹಿತಿ ನೀಡಿದ್ದಾರೆ. ಕಚೇರಿಯ ಕ್ಯಾಶಿಯರ್ ನನಗೆ ಹಣ ಬಂದಿಲ್ಲಾ ಎಜೆಂಟರ್ ಬಳಿ ಕೊಟ್ಟಿದ್ದೀರಿ ಅವರನ್ನೇ ಕೇಳಿ ಎಂದಿದ್ದಾರೆ. ಹಣ ಸಂದಾಯವಾಗಿಲ್ಲವಾದರೆ ನೀವು ರಸೀದಿಯನ್ನು ಯಾಕೆ ಕೊಟ್ಟಿರೀ ಎಂದು ಪ್ರಶ್ನೆ ಮಾಡಿದರೂ ಸರಿಯಾದ ಉತ್ತರ ನೀಡಿಲ್ಲ. ನಾಳೆ ನಾಡಿದ್ದು ಸರಿ ಮಾಡುತ್ತೇವೆ ಎನ್ನುತ್ತಿದ್ದಾರೆ ನ್ಯೂ ಇಂಡಿಯಾ ಅಶ್ಯೂರನ್ಸ್ ಕಚೇರಿಯವರು.

ವಿಜಯಪುರ: ಕೃಷಿ ಹೊಂಡಕ್ಕೆ ಹಾರಿ ಮೂವರು ಮಕ್ಕಳೊಂದಿಗೆ ತಾಯಿ ಆತ್ಮಹತ್ಯೆ

ಕಂಪನಿ ಸಿಬ್ಬಂದಿಗಳ ಯಡವಟ್ಟಿಗೆ ಗ್ರಾಹಕರ ಪೀಕಲಾಟ

ನ್ಯೂ ಇಂಡಿಯಾ ಅಶ್ಯೂರೆನ್ಸ್ ಕಚೇರಿಯ ಆಧಿಕಾರಿಗಳ ಹಾಗೂ ಇತರೆ ಸಿಬ್ಬಂದಿಗಳ ಕಾರಣದಿಂದ ಈ ಸಮಸ್ಯೆ ಉದ್ಭವವಾಗಿದೆ. ಸದ್ಯ ವಿವಿಧ ವಾಹನಗಳ ವಿಮೆ ಮಾಡಿಸಿದವರಿಗೆ ಈ ಸಮಸ್ಯೆ ಹೆಚ್ಚು ಕಂಡು ಬಂದಿದೆ. ಇಲ್ಲಿಗೆ ಬಂದ ಹಲವಾರು ವಾಹನಗಳ ಮಾಲೀಕರು ತಮ್ಮ ವಾಹನಗಳ ವಿಮೆಗಾಗಿ ಇಲ್ಲಿ ಹಣವನ್ನು ಭರಿಸಿದ್ದಾರೆ. ಅದಕ್ಕೆ ಶುಲ್ಕ ಭರಿಸಿದ ರಸೀದಿ ಹಾಗೂ ಇನ್ಸುರೆನ್ಸ್ ಕಾಪಿಯನ್ನೂ ನೀಡಿದ್ದಾರೆ. ನಂತರ ಆನ್ ಲೈನ್ ನಲ್ಲಿ ವಿಮೆ ಜಾರಿಯಲ್ಲಿದೆ ಎಂದು ಆರಂಭದಲ್ಲಿ ತೋರಿಸಿದೆ.

ಗ್ರಾಹಕರಲ್ಲಿ ಮೋಸದ ಸಂಶಯ

ವಿಜಯಪುರ ನಗರದಲ್ಲಿನ ನ್ಯೂ ಇಂಡಿಯಾ ಆಶ್ಯೂರನ್ಸ್ ನಲ್ಲಿ ಒಂದು ವರ್ಷಕ್ಕೆ ಸರಾಸರಿ 20 ರಿಂದ 25 ಸಾವಿರ ಗ್ರಾಹಕರು ವಿವಿಧ ವಿಮೆಗಳನ್ನು ಮಾಡಿಸುತ್ತಾರೆ. ಇಷ್ಟು ಪ್ರಮಾಣದ ಗ್ರಾಹಕರಿಗೆ ನ್ಯೂ ಇಂಡಿಯಾ ಆಶ್ಯೂರನ್ಸ್ ಕಂಪನಿ ಇದೇ ರೀತಿ ಮೋಸ ಮಾಡುತ್ತಿದೆಯಾ ಎಂಬ ಸಂಶಯ ಇದೀಗ ಗ್ರಾಹಕರಲ್ಲಿ ಹಾಗೂ ಜನರಲ್ಲಿ ಮೂಡಿದೆ.
 

Latest Videos
Follow Us:
Download App:
  • android
  • ios