Asianet Suvarna News Asianet Suvarna News

ಹೆಂಡ್ತಿ ಜೊತೆ ಬದುಕೋಕಾಗ್ತಿಲ್ಲ ಎಂದು ಠಾಣೆಯಲ್ಲೇ ಕತ್ತು ಕುಯ್ದುಕೊಂಡ ವ್ಯಕ್ತಿ

  • ಈತನದ್ದು ದಾಂಪತ್ಯ ಸಮಸ್ಯೆ, ಹೆಂಡ್ತಿ(Wife) ಜೊತೆ ಬದುಕೋಕೆ ಆಗೋದೆ ಇಲ್ಲ
  • ಪತ್ನಿ ಜೊತೆ ಇರೋಕಾಗ್ತಿಲ್ಲ ಎಂದು ಠಾಣೆಯಲ್ಲಿ ಕತ್ತು ಕುಯ್ದುಕೊಂಡ ಪತಿ(Husband)
Unwilling to live with wife man slits his wrist throat at police station in Ghaziabad dpl
Author
Bangalore, First Published Nov 28, 2021, 1:31 PM IST
  • Facebook
  • Twitter
  • Whatsapp

ಗಾಝಿಯಾಬಾದ್(ನ.28): ಅಕ್ರಮ ಸಂಬಂಧಗಳು ಸಾವಿನಲ್ಲಿ ಕೊನೆಯಾಗುವುದು ಸಾಮಾನ್ಯ. ಇಂತಹ ಘಟನೆಗಳು ದೇಶದ ಹಲವು ಭಾಗಗಳಲ್ಲಿ ನಡೆಯುತ್ತಲೇ ಇರುತ್ತವೆ. ದಂಪತಿಗಳ ಮಧ್ಯೆ ಕಲಹ ನಡೆದರೂ ಸಮಾಲೋಚನೆ, ಅರ್ಥ ಮಾಡಿಕೊಳ್ಳುವ ಮೂಲಕ ಕೆಲವೊಮ್ಮೆ ಸರಿಹೋಗುವ ಸಾಧ್ಯತೆಗಳಿರುತ್ತವೆ. ಆದರೆ ಈ ಜೋಡಿಯ ದಾಂಪತ್ಯದಲ್ಲಿ ಅಂತಹ ಘಟನೆ ಏನಿತ್ತೋ, ಆದರೆ ಆತನದ್ದು ಹೆಂಡತಿ ಜೊತೆ ಬದುಕೋಕೆ ಆಗಲ್ಲ ಎನ್ನುವ ಒಂದೇ ಮಾತು. ಅಷ್ಟಕ್ಕೂ ಆಕೆ ಮಾಡಿದ್ದೇನು ? ಬದುಕೋಕಾಗಲ್ಲ ಎಂದು ಕತ್ತು ಕುಯ್ದುಕೊಂಡ ಪತಿಗೆ ಬೇರೆ ದಾರಿಯೇ ಇರಲಿಲ್ವಾ ? ಗಾಝಿಯಾಬಾದ್‌ನಲ್ಲಿ ನಡೆದ ಘಟನೆ ಇದು.

ದೆಹಲಿ ಸಮೀಪದ ಉತ್ತರ ಪ್ರದೇಶದ ಗಾಜಿಯಾಬಾದ್‌ನ ಪೊಲೀಸ್ ಠಾಣೆಯೊಂದರಲ್ಲಿ ವ್ಯಕ್ತಿಯೊಬ್ಬರು ಬುಧವಾರ ತನ್ನ ಕತ್ತು ಮತ್ತು ಮಣಿಕಟ್ಟನ್ನು ಕತ್ತರಿಸಿಕೊಂಡಿದ್ದಾರೆ. ವರದಿಗಳ ಪ್ರಕಾರ ಮೂರು ದಿನಗಳಿಂದ ಮನೆಗೆ ಬಾರದಿದ್ದಾಗ ವ್ಯಕ್ತಿಯ ಪತ್ನಿ ಪೊಲೀಸರಿಗೆ ವ್ಯಕ್ತಿ ಕಾಣೆಯಾದ ಬಗ್ಗೆ ದೂರು ನೀಡಿದ ನಂತರ ಈ ಘಟನೆ ಸಂಭವಿಸಿದೆ.

ಆಂಟಿ ಬಲು ತುಂಟಿ... 17ರ ಹುಡುಗನ ಜತೆ 29ರ ವಿವಾಹಿತೆ ಕುಚ್ ಕುಚ್!

ಪ್ರಶ್ನೆಯಲ್ಲಿರುವ ವ್ಯಕ್ತಿಯನ್ನು ಓಂಪ್ರಕಾಶ್ (30) ಎಂದು ಗುರುತಿಸಲಾಗಿದ್ದು, ಈತ ವೃತ್ತಿಯಲ್ಲಿ ದಿನಗೂಲಿ ಕೆಲಸ ಮಾಡುತ್ತಿದ್ದಾನೆ. ಅವರು ಗಾಜಿಯಾಬಾದ್‌ನ ನಂದಗ್ರಾಮ್ ಪ್ರದೇಶದಲ್ಲಿ ತಮ್ಮ ಪತ್ನಿ ಮತ್ತು ಇಬ್ಬರು ಮಕ್ಕಳನ್ನು ಒಳಗೊಂಡು ತಮ್ಮ ಕುಟುಂಬ ಸದಸ್ಯರೊಂದಿಗೆ ಬದುಕುತ್ತಿದ್ದರು. ಹಿರಿಯ ಪೊಲೀಸ್ ಅಧಿಕಾರಿಯೊಬ್ಬರ ಪ್ರಕಾರ ಕಳೆದ ಮೂರು ವರ್ಷಗಳಿಂದ ತನ್ನ ಪತ್ನಿಯಲ್ಲದೆ ಬೇರೊಬ್ಬಳ ಜೊತೆ ವಿವಾಹೇತರ ಸಂಬಂಧ ಹೊಂದಿದ್ದ. ಆತನ ಸಂಬಂಧದ ವಿಚಾರವಾಗಿ ಆತನಿಗೂ ಆತನ ಪತ್ನಿಗೂ ಆಗಾಗ ಜಗಳ ನಡೆಯುತ್ತಿತ್ತು.

ಓಂಪ್ರಕಾಶ್ ಮತ್ತು ಅವರ ಪತ್ನಿ ನಡುವೆ ಶನಿವಾರ ವಾಗ್ವಾದ ನಡೆದಿದೆ. ನಂತರ ಅವರು ಕೆಲಸಕ್ಕೆ ಹೋಗಿದ್ದರು. ಮೂರು ದಿನಗಳಾದರೂ ಆತ ಹಿಂತಿರುಗಲಿಲ್ಲ, ಆತನ ಪತ್ನಿ ಪೊಲೀಸರನ್ನು ಸಂಪರ್ಕಿಸಿ ಈ ಬಗ್ಗೆ ಮಾಹಿತಿ ನಿಡಿದ್ದಾರೆ. ಓಂಪ್ರಕಾಶ್ ಅನೈತಿಕ ಸಂಬಂಧ ಹೊಂದಿದ್ದ ಮಹಿಳೆಯೊಂದಿಗೆ ಇರಲು ಆರಂಭಿಸಿರುವ ಶಂಕೆ ವ್ಯಕ್ತವಾಗಿತ್ತು.

ಬೆಂಗಳೂರು; ತನ್ನ ರಂಗಿನಾಟಕ್ಕೆ ಅಡ್ಡಿಯಾದ ಪುತ್ರನನ್ನೇ ಹತ್ಯೆ ಮಾಡಿಸಿದ 'ಮಹಾತಾಯಿ'

ಪೊಲೀಸರು ಓಂಪ್ರಕಾಶ್ ಅವರನ್ನು ಸಂಪರ್ಕಿಸಿ ನಂದಗ್ರಾಮ ಪೊಲೀಸ್ ಠಾಣೆಗೆ ವರದಿ ಮಾಡುವಂತೆ ತಿಳಿಸಿದ್ದರು. ಓಂಪ್ರಕಾಶ್ ಅವರು ಅದೇ ನೆರೆಹೊರೆಯಲ್ಲಿ ವಾಸಿಸುವ ಮಹಿಳೆಯೊಂದಿಗೆ ಇರಲು ಬಯಸಿದ್ದರು. ಅವರು ಮತ್ತು ಅವರ ಪತ್ನಿ ಆಗಾಗ್ಗೆ ಈ ವಿಷಯಕ್ಕಾಗಿ ಜಗಳವಾಡುತ್ತಿದ್ದರು ಎಂದು ಪೊಲೀಸರಿಗೆ ತಿಳಿಸಿದ್ದಾರೆ. ಅವನು ಇದ್ದಕ್ಕಿದ್ದಂತೆ ಬ್ಲೇಡ್ ಅನ್ನು ಹೊರತೆಗೆದು ತನ್ನ ಮಣಿಕಟ್ಟನ್ನು ಕತ್ತರಿಸಿಕೊಂಡಿದ್ದಾನೆ. ತನಗೆ ತಾನೇ ಗಾಯ ಮಾಡಿಕೊಳ್ಳುವುದನ್ನು ತಡೆಯಲು ಪೊಲೀಸರು ಪ್ರಯತ್ನಿಸಿದಾಗ, ಅವನು ಬ್ಲೇಡ್‌ನಿಂದ ತನ್ನ ಕತ್ತು ಸೀಳಿದ್ದಾನೆ ಎನ್ನಲಾಗಿದೆ.

ಅವನು ತನ್ನ ಮಣಿಕಟ್ಟನ್ನು ಕತ್ತರಿಸುತ್ತಿರುವಾಗ ಇನ್ನು ಮುಂದೆ ತನ್ನ ಹೆಂಡತಿಯೊಂದಿಗೆ ವಾಸಿಸಲು ಬಯಸುವುದಿಲ್ಲ ಎಂದು ಹೇಳುತ್ತಿದ್ದನು ಎಂದು ಅಧಿಕಾರಿಯೊಬ್ಬರು ಹೇಳಿದ್ದಾರೆ ಎನ್ನಲಾಗಿದೆ. ಗಾಯಾಳುವನ್ನು ಸಮೀಪದ ವೈದ್ಯಕೀಯ ಆಸ್ಪತ್ರೆಗೆ ರವಾನಿಸಲಾಗಿದೆ. ಅವರ ಸ್ಥಿತಿ ಸ್ಥಿರವಾಗಿದೆ ಎಂದು ಹೇಳಲಾಗಿದೆ.

Follow Us:
Download App:
  • android
  • ios