Udupi: ಕರಾವಳಿಯಲ್ಲಿ ಮತ್ತೆ ಚಿಗುರಿದ ಅಂಡರ್ ವರ್ಲ್ಡ್: ಶರತ್ ಶೆಟ್ಟಿ ಹಂತಕರು ಸೆರೆ

ಫೆ.5 ರಂದು ಪಾಂಗಾಳದಲ್ಲಿ ಕೊಲೆಯಾಗಿದ್ದ ಶರತ್ ಶೆಟ್ಟಿ ಪ್ರಕರಣಕ್ಕೆ ಸಂಭಂದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿಗಳನ್ನು 7 ದಿನಗಳ ಕಾಲ ಪೋಲಿಸ್ ಕಸ್ಟಡಿಗೆ ಪಡೆಯಲಾಗಿದೆ.

Udupi Underworld again on the coastal area Sharath Shetty killers arrested sat

ಉಡುಪಿ (ಫೆ.15):  ಕಳೆದ ಹತ್ತು ದಿನಗಳ ಹಿಂದೆ ಅಂದರೆ ಫೆ.5 ರಂದು ಪಾಂಗಾಳದಲ್ಲಿ ಕೊಲೆಯಾಗಿದ್ದ ಶರತ್ ಶೆಟ್ಟಿ ಪ್ರಕರಣಕ್ಕೆ ಸಂಭಂದಿಸಿ ಇಬ್ಬರು ಆರೋಪಿಗಳನ್ನು ಬಂಧಿಸಿ ನ್ಯಾಯಾಲಯಕ್ಕೆ ಹಾಜರು ಪಡಿಸಿದ್ದು, ಆರೋಪಿಗಳನ್ನು 7 ದಿನಗಳ ಕಾಲ ಪೋಲಿಸ್ ಕಸ್ಟಡಿಗೆ ಪಡೆದಿದ್ದೇವೆ ಎಂದು ಉಡುಪಿ ಜಿಲ್ಲಾ ಪೋಲಿಸ್ ವರಿಷ್ಠಾಧಿಕಾರಿ ಅಕ್ಷಯ್ ಹಾಕೆ ಮಚ್ಚೀಂದ್ರ ಹೇಳಿದರು.

ಜಿಲ್ಲಾ ಪೋಲಿಸ್ ಕಚೇರಿಯಲ್ಲಿ ಪತ್ರಿಕಾಗೋಷ್ಠಿಯಲ್ಲಿ ಮಾತನಾಡಿದ ಅವರು, ಕಳೆದ ಒಂದೂವರೆ ತಿಂಗಳ ಹಿಂದೆ ಶರತ್ ಶೆಟ್ಟಿ ಹತ್ಯೆಗೆ ಸಂಚು ರೂಪಿಸಿದ್ದ ತಂಡ ಸ್ಥಳೀಯರ ಸಹಕಾರದೊಂದಿಗೆ ಕೊಲೆ ಮಾಡಿದ್ದಾರೆ. ಫೆ. 5 ರಂದು ಹತ್ಯೆಯಾಗುವ ಮುನ್ನ ಎರಡು ಬಾರಿ ಆರೋಪಿಗಳು ಹತ್ಯೆಗೆ ಯತ್ನಿಸಿದ್ದು, ವಿಫಲರಾಗಿದ್ದರು ಎಂದು ತನಿಖೆಯ ವೇಳೆ ಬಹಿರಂಗವಾಗಿದೆ. ಪಾಂಗಾಳ ರಾಷ್ಟ್ರೀಯ ಹೆದ್ದಾರಿಯಲ್ಲಿ ಹತ್ಯೆಯಾದ ನಂತರ ಆರೋಪಿಗಳು ಪರಾರಿಯಾಗುತ್ತಿರುವ ಸಿಸಿಟಿವಿ ವಿಡಿಯೋ ತುಣುಕಿನ ಆಧಾರದಲ್ಲಿ ತನಿಖೆ ಆರಂಭಿಸಿ, ಪಾಂಗಳದ ಸುತ್ತಮುತ್ತಲಿನ ಸಿಸಿಟಿವಿ ವಿಡಿಯೋಗಳನ್ನು ಪರಿಶೀಲಿಸಿದ್ದೇವೆ. ಹತ್ಯೆಯಾದ ಸ್ಥಳದಲ್ಲಿ ಕೃತ್ಯಕ್ಕೆ ಬಳಸಿದ ಸ್ಕೂಟಿ, ಮೊಬೈಲ್ ಪತ್ತೆಯಾಗಿದ್ದು ವಶಕ್ಕೆ ಪಡೆದಿದ್ದೇವೆ ಎಂದರು.

Bengaluru Crime: ಕುಡಿಯಲು ಹಣ ಕೊಡದ ತಾತನ ಕತ್ತು ಹಿಸುಕಿ ಕೊಂದ ಮೊಮ್ಮಗ

ಮಂಗಳೂರಿನ ಯುವಕರನ್ನು ಕರೆಸಿಕೊಂಡು ಕೊಲೆ: ಶರತ್ ಶೆಟ್ಟಿ ಮತ್ತು ಹತ್ಯೆಯ ಪ್ರಮುಖ ಆರೋಪಿ ಸ್ನೇಹಿತರಾಗಿದ್ದು, ಕಾಪು ಠಾಣಾ ವ್ಯಾಪ್ತಿಯಲ್ಲಿ ಜಾಗದ ವಿಚಾರವೊಂದರಲ್ಲಿ ವೈಮನಸ್ಸು ಮೂಡಿ, ಆರೋಪಿಯೂ ಶರತ್ ಶೆಟ್ಟಿಯನ್ನು ಹತ್ಯೆ ಮಾಡಲು ಸಂಚು ರೂಪಿಸಿ, ಮಂಗಳೂರಿನ ಯುವಕರನ್ನು ಕರೆಸಿಕೊಂಡು ಕೊಲೆ ಮಾಡಿದ್ದಾರೆ. ಆರೋಪಿಗಳ ಪತ್ತೆಗೆ ಹೆಚ್ಚುವರಿ ಎಸ್ಪಿ, ಕಾರ್ಕಳ ಡಿವೈಎಸ್ಪಿ, ಕಾಪು ವೃತ್ತನಿರೀಕ್ಷಕ ಸೇರಿದಂತೆ ಕಾಪು, ಶಿರ್ವ ಠಾಣಾಧಿಕಾರಿಯವರ ತಂಡವನ್ನು ರಚಿಸಿ, ಆರೋಪಿಗಳನ್ನು ಪತ್ತೆ ಹಚ್ಚಿದ್ದೇವೆ ಎಂದರು.

ಆರೋಪಿಗಳು ಕಲಿ ಯೋಗಿಶ್ ಸಹಚರರು: ಮಂಗಳವಾರ ನ್ಯಾಯಾಲಯಕ್ಕೆ ಸುರತ್ಕಲ್ ನ ಕುಳಾಯಿ ಮೂಲದ ದಿವೇಶ್ ಶೆಟ್ಟಿ (20) ಹಾಗು ಲಿಖಿತ್ ಕುಲಾಲ್ (21) ಹಾಜರು ಪಡಿಸಲಾಗಿದೆ. ಜೊತೆಗೆ ಕೃತ್ಯದಲ್ಲಿ ಭಾಗಿಯಾದ ಆಕಾಶ್ ಕರ್ಕೇರಾ ಸೇರಿದಂತೆ ಇನ್ನು ಮೂವರು ಆರೋಪಿಗಳನ್ನು ವಶಕ್ಕೆ ಪಡೆದು ತನಿಖೆ ನಡೆಸಲಾಗುತ್ತಿದ್ದು, ಇವರೆಲ್ಲರೂ ಕಲಿ ಯೋಗಿಶ್ ಸಹಚರರಾಗಿದ್ದು, ಆತನ ಸೂಚನೆಯ ಮೇರೆಗೆ ಕೊಲೆ ಮಾಡಿದ್ದಾರೆ ಎಂದು ಉನ್ನತ ಮೂಲಗಳು ತಿಳಿಸಿವೆ. 

ಬೊಮ್ಮನಹಳ್ಳಿ ಶಾಸಕ ಸತೀಶ್‌ರೆಡ್ಡಿ ಕೊಲೆಗೆ ಸ್ಕೆಚ್‌: 2 ಕೋಟಿ ರೂ.ಗೆ ಸುಪಾರಿ

ಪ್ರಮುಖ ಆರೋಪಿ ಪತ್ತೆಯಾಗಿಲ್ಲ: ಕೃತ್ಯದಲ್ಲಿ ವೇಳೆ ನಾಲ್ಕು ಜನ ಭಾಗಿಯಾಗಿದ್ದು, ಅದರಲ್ಲಿ ಪ್ರಮುಖ ಆರೋಪಿ ಯೋಗಿಶ್ ಆಚಾರಿ ತಲೆಮರೆಸಿಕೊಂಡಿದ್ದು, ಆರೋಪಿಯ ಪತ್ತೆಗಾಗಿ ತಂಡಗಳು ಸಕ್ರಿಯವಾಗಿದೆ. ಹೊರಜಿಲ್ಲೆಯಲ್ಲಿ ವಾರದಿಂದ ಪೋಲಿಸ್ ತಂಡ ತನಿಖೆ ನಡೆಸುತ್ತಿದೆ. ಕೃತ್ಯವೆಸಗಿ ಪರಾರಿಯಾಗುತ್ತಿರುವ ವೇಳೆ ಆರೋಪಿಗಳ ಸ್ಕೂಟಿ ಪಂಚರ್ ಆಗಿದೆ. ಹೀಗಾಗಿ ನಾಲ್ವರು ಆರೋಪಿಗಳಲ್ಲಿ ಮೂವರು ಒಂದು ಬೈಕ್ ನಲ್ಲಿ ಪರಾರಿಯಾಗಿದ್ದು, ಮತ್ತೋರ್ವ ಅವರ ಹಿಂದೆ ಓಡಿ ಹೋಗುತ್ತಿರುವ ದೃಶ್ಯವು ಸಮೀಪದ ಮನೆಯ ಸಿಸಿಟಿವಿಯಲ್ಲಿ ಪತ್ತೆಯಾಗಿದೆ.

Latest Videos
Follow Us:
Download App:
  • android
  • ios