ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಭಯಾನಕ ಸ್ಕೆಚ್ ಹಾಕಲಾಗಿದೆ. ರೌಡಿಗಳ ಗ್ಯಾಂಗ್‌ವೊಂದು ಸತೀಶ್ ರೆಡ್ಡಿ ಹತ್ಯೆಗೆ ಬರೋಬ್ಬರಿ 2 ಕೋಟಿ ರೂ. ಸುಪಾರಿ ಪಡೆದಿದೆ.

ಬೆಂಗಳೂರು (ಫೆ.15): ರಾಜ್ಯ ರಾಜಧಾನಿ ಬೆಂಗಳೂರಿನ ಬೊಮ್ಮನಹಳ್ಳಿ ವಿಧಾನಸಭಾ ಕ್ಷೇತ್ರದ ಶಾಸಕ ಸತೀಶ್ ರೆಡ್ಡಿ ಹತ್ಯೆಗೆ ಭಯಾನಕ ಸ್ಕೆಚ್ ಹಾಕಲಾಗಿದೆ. ರೌಡಿಗಳ ಗ್ಯಾಂಗ್‌ವೊಂದು ಸತೀಶ್ ರೆಡ್ಡಿ ಹತ್ಯೆಗೆ ಬರೋಬ್ಬರಿ 2 ಕೋಟಿ ರೂ. ಸುಪಾರಿ ಪಡೆದಿದೆ. ಕುಖ್ಯಾತ ರೌಡಿಶೀರ್ ವಿಲ್ಸನ್ ಗಾರ್ಡನ್ ನಾಗನಿಂದ ರೆಡ್ಡಿ ಹತ್ಯೆಗೆ ಪ್ಲಾನ್ ಕೂಡ ಮಾಡಲಾಗಿತ್ತು. 

ಹೌದು, 2 ಕೋಟಿ ರೂ.ಗೆ ಸುಪಾರಿ ಪಡೆದುಕೊಂಡಿದ್ದ ವಿಲ್ಸನ್‌ ಗಾರ್ಡರನ್‌ ನಾಗನ ತಂಡವು ಸದ್ಯದಲ್ಲೇ ಸತೀಶ್​ ರೆಡ್ಡಿ ಮೇಲೆ ದಾಳಿಗೆ ಸಂಚು ರೂಪಿಸಿತ್ತು. ಈ ಹಿನ್ನೆಲಯಲ್ಲಿ ಶಾಸಕ ಸತೀಶ್ ರೆಡ್ಡಿ ಎಲ್ಲ ಚಲನವಲನಗಳನ್ನು ಹಾಗೂ ದಿನನಿತ್ತ ಕಾರ್ಯ ವೈಖರಿಗಳನ್ನು ಫಾಲೋ ಮಾಡಲಾಗುತ್ತಿತ್ತು. ಆದರೆ, ಸ್ವಲ್ಪದರಲ್ಲೇ ಎಚ್ಚೆತ್ತುಕೊಂಡ ಶಾಸಕ ಸತೀಶ್ ರೆಡ್ಡಿ ಮರ್ಡರ್‌ ಸ್ಕೆಚ್‌ನಿಂದ ಪಾರಾಗಿದ್ದಾರೆ. ಅವರಿಗೆ ಕೊಲೆ ಮಾಡುವ ಬಗ್ಗೆ ಮಾಡಲಾದ ಸಂಚು ತಿಳಿದಿದ್ದು, ಕೂಡಲೆ ಎಚ್ಚೆತ್ತುಕೊಂಡು ಪೊಲೀಸರಿಗೆ ಈ ಬಗ್ಗೆ ದೂರು ನೀಡಿ ರಕ್ಷಣೆ ನೀಡುವಂತೆ ತಿಳಿಸಿದ್ದಾರೆ. 

ಮಂಡ್ಯದ ಮೂವರು ರೌಡಿಶೀಟರ್‌ಗಳು ಜೆಡಿಎಸ್‌ ಸೇರ್ಪಡೆ: ಶಾಲು ಹಾಕಿ ಸ್ವಾಗತಿಸಿದ ಶಾಸಕ ಡಿ.ಸಿ. ತಮ್ಮಣ್ಣ

ಕೊಲೆಯ ಗ್ಯಾಂಗ್‌ನಿಂದಲೇ ಸ್ಕೆಚ್‌ ಲೀಕ್‌: ವಿಲ್ಸನ್‌ ಗಾರ್ಡನ್‌ ನಾಗನ ಗ್ಯಾಂಗ್ ನಿಂದಲೇ ಸತೀಶ್‌ ರೆಡ್ಡಿ ಮರ್ಡರ್ ಪ್ಲಾನ್​ ಬಯಲಾಗಿದೆ. ರೌಡಿಗಳ ಪ್ಲಾನ್ ಬಗ್ಗೆ ಸುಳಿವು ಚಿತ್ರದುರ್ಗದಲ್ಲಿ ಲೀಕ್ ಆಗಿತ್ತು. ನಾಗನ ಗ್ಯಾಂಗ್ ನಲ್ಲಿದ್ದ ಹೊಳಲ್ಕೆರೆ ತಾಲೂಕಿನ ಆಕಾಶ್​ನಿಂದ ಲೀಕ್​​ ಆಗಿದೆ. ಸತೀಶ್​​ರೆಡ್ಡಿ ಬೆಂಬಲಿಗನಿಗೆ ಮಾಹಿತಿ ನೀಡಿದ್ದು ಚಂದ್ರು ಎಂಬಾತ. ಬೊಮ್ಮನಹಳ್ಳಿ ನಿವಾಸಿ ಚಂದ್ರು ಕರೆ ಮಾಡಿದಾಗ ಹೇಳಿದ್ದ ಆಕಾಶ್. ಆಕಾಶ್ ಹೇಳಿದ್ದ ಆಡಿಯೋ, ರೌಡಿ ಪೋಟೋ ಸಹಿತ ದೂರು ನೀಡಲಾಗಿದೆ. ಇನ್ನು ದೂರು ದಾಖಲಾಗುತ್ತಿದ್ದಂತೆ ಆರೋಪಿಗಳಿಗಾಗಿ ಪೊಲೀಸರು ಹುಡುಕಾಟ ನಡೆಸುತ್ತಿದ್ದಾರೆ. ಎಫ್ಐಆರ್ ಆಗ್ತಿದ್ದಂತೆ ನಾಗನ ಗ್ಯಾಂಗ್ ಕೂಡ ಬೆಂಗಳೂರಿನಿಂದ ಎಸ್ಕೇಪ್​ ಆಗಿದೆ. ಬೊಮ್ಮನಹಳ್ಳಿ ಪೊಲೀಸ್​​ ಸ್ಪೇಷಲ್ ಟೀಂ ನಿಂದ ಹುಡುಕಾಟ ಮಾಡಲಾಗುತ್ತಿದೆ. 

ವಿಧಾನಸೌಧದಲ್ಲಿ ಕೊಲೆ ಸ್ಕೆಚ್‌ ಬಗ್ಗೆ ಶಾಸಕರ ಆಕ್ರೋಶ: ತನ್ನನ್ನು ಕೊಲೆ ಮಾಡುವ ಬಗ್ಗೆ ಸ್ವತಃ ಶಾಸಕ ಸತೀಶ್‌ ರೆಡ್ಡಿ ಅವರು ವಿಧಾನಸೌಧದಲ್ಲಿ ಹೇಳಿಕೆ ನೀಡಿದ್ದಾರೆ. ರಾಜಕೀಯ ಕಾರಣಕ್ಕೆ ನನ್ನ ಹತ್ಯೆಗೆ ಸುಪಾರಿ ಮಾಡಲಾಗಿದೆ. ಇಂತಹ ಹತ್ಯೆ ಸ್ಕೆಚ್​ಗಳಿಗೆ ನಾನು ಭಯಪಡಲ್ಲ. ಯಾವುದೇ ರಾಜಕೀಯ ಪಕ್ಷದ ಮೇಲೂ ಆರೋಪ ಮಾಡಲ್ಲ. ನಾನು ಯಾರಿಗೂ ದ್ರೋಹ ಮಾಡಿಲ್ಲ. ನನಗೆ ಯಾವುದೇ ಬೆದರಿಕೆ ಕರೆ ಬಂದಿಲ್ಲ. ಆದರೆ, ಸುಪಾರಿ ಬಗ್ಗೆ ಮಾತಾಡಿರುವ ಆಡಿಯೋ ನನಗೆ ಲಭ್ಯವಾಗಿದೆ. ರಾಜಕಾರಣ ಬಿಟ್ಟು ಯಾವುದೇ ಉದ್ಯಮದಲ್ಲಿ ನಾನಿಲ್ಲ. ಪೊಲೀಸರು ತನಿಖೆ ಮಾಡಿ ಅಪರಾಧಿಗಳನ್ನು ಜೈಲಿಗೆ ಕಳಿಸಲಿ ಎಂದು ಆಗ್ರಹಿಸಿದರು.

Shivamogga: ರೌಡಿಶೀಟರ್‌ಗಳಿಂದ ಮಹಿಳೆ ಮೇಲೆ ಹಲ್ಲೆ, ಕಾರಿಗೆ ಬೆಂಕಿ

ಫಾಲೋ ಮಾಡುತ್ತಿರುವ ಆರೋಪಿಗಳು: ಕೊಲೆ ಮಾಡಲು ಸ್ಕೆಚ್‌ ಹಾಕಿರುವ ಆರೋಪಿಗಳು ನನ್ನ ಫಾಲೋ ಮಾಡುತ್ತಿದ್ದರಂತೆ. ಆರೋಪಿಗಳ ಬಗ್ಗೆ ಪೊಲೀಸರು ಮಾಹಿತಿ ಪಡ್ಕೊಂಡಿದಾರೆ. ಮುಖ್ಯಮಂತ್ರಿ ಭದ್ರತೆ ತೆಗೆದುಕೊಳ್ಳಲು ಹೇಳಿದ್ದರು. ಆದರೆ, ನನಗೆ ಭಯವಿಲ್ಲ, ಹೀಗಾಗಿ ನನಗೆ ಪ್ರತ್ಯೇಕ ಭದ್ರತೆ ಬೇಡವೆಂದು ಹೇಳಿದ್ದೇನೆ ಎಂದು ವಿಧಾನಸೌಧದಲ್ಲಿ ಮಾಧ್ಯಮಗಳ ಮುಂದೆ ಶಾಸಕ ಸತೀಶ್ ರೆಡ್ಡಿ ಮಾತನಾಡಿದ್ದಾರೆ. 

ಇಬ್ಬರು ಸುಪಾರಿ ಹಂತಕರ ಬಂಧನ: ಬೊಮ್ಮನಹಳ್ಳಿ ಶಾಸಕ ಸತೀಶ್ ರೆಡ್ಡಿ ಸುಫಾರಿ ಹಿನ್ನಲೆಯಲ್ಲಿ ಬೊಮ್ಮನಹಳ್ಳಿ ಪೊಲೀಸರಿಂದ ಇಬ್ಬರು ಆರೋಪಿಗಳನ್ನು ವಶಕ್ಕೆ ಪಡೆಯಲಾಗಿದೆ. ವಿಕಾಸ್ ಹಾಗೂ ಮತ್ತೊಬ್ಬ ವ್ಯಕ್ತಿಯನ್ನು ವಶಕ್ಕೆ ಪಡೆದು ವಿಚಾರಣೆ ಮಾಡಲಾಗುತ್ತಿದೆ. ಬೊಮ್ಮನಹಳ್ಳಿ ಠಾಣೆಯಲ್ಲಿ ಶಂಕಿತ ಆರೋಪಿಗಳ ವಿಚಾರಣೆ ಮಾಡಲಾಗುತ್ತಿದೆ. ಸತೀಶ್ ರೆಡ್ಡಿ ಬೆಳಗ್ಗೆ ಕ್ರಿಕೆಟ್ ಆಡುವ ಗ್ರೌಂಡ್‌ಗೂ ಈ ಗ್ಯಾಂಗ್ ಬಂದಿತ್ತು. ಸತೀಶ್ ರೆಡ್ಡಿ ಫಾಲೋ ಮಾಡಿದ್ದ ಬಗ್ಗೆ ಮಾಹಿತಿ ಯನ್ನು ಬಿಚ್ಚಿಟ್ಟಿದ್ದಾರೆ. ಮತ್ತೊಂದೆಡೆ ಹೆಚ್‌ಎಸ್ಆರ್ ಲೇಔಟ್ ನಲ್ಲಿರುವ ಸತೀಶ್‌ರೆಡ್ಡಿ ಮನೆಯ ಬಳಿಯೂ ವಿಲ್ಸನ್ ಗಾರ್ಡನ್ ನಾಗನ ಗ್ಯಾಂಗ್ ವಾಚ್ ಮಾಡುತ್ತಿತ್ತು ಎಂಬುದು ತಿಳಿದುಬಂದಿದೆ.