ತನಗೆ ಕುಡಿಯಲು ಹಣ ಕೊಡಲಿಲ್ಲ ಎಂದು ತಮ್ಮ ಸ್ವಂತ ತಾತನನ್ನೇ ಮೊಮ್ಮಗನು ಕೊಂದು ಹಾಕಿರುವ ಅಮಾನವೀಯ ಘಟನೆ ಕಮ್ಮನಹಳ್ಳಿ ಕೊಳೆಗೇರಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಬೆಂಗಳೂರು (ಫೆ.14): ತನಗೆ ಕುಡಿಯಲು ಹಣ ಕೊಡಲಿಲ್ಲ ಎಂದು ತಮ್ಮ ಸ್ವಂತ ತಾತನನ್ನೇ ಮೊಮ್ಮಗನು ಕೊಂದು ಹಾಕಿರುವ ಅಮಾನವೀಯ ಘಟನೆ ಕಮ್ಮನಹಳ್ಳಿ ಕೊಳೆಗೇರಿಯಲ್ಲಿ ನಿನ್ನೆ ರಾತ್ರಿ ನಡೆದಿದೆ.
ಕುಡಿತದ ಚಟವೇ ಅಂತಹದ್ದು. ತನ್ನವರು, ಸ್ವಂತದವರು, ಬಂಧುಗಳು, ಹೆಂಡತಿ- ಮಕ್ಕಳು ಹಾಗೂ ತನ್ನ ಕುಟುಂಬದ ಆಸ್ತಿ ಎಂದು ಯಾವುದನ್ನೂ ಲೆಕ್ಕಿಸದೇ ಕುಡಿತದ ಅಮಲಿನಲ್ಲಿಯೇ ತೇಲಾಡಬೇಕು ಎಂದು ಹಾತೊರೆಯುತ್ತಾರೆ. ಇದಕ್ಕಾಗಿ ಹಣವನ್ನು ಹೊಂದಿಸಲು ತನ್ನ ಕುಟುಂಬದವರ ಮೇಲೆ ಹಲ್ಲೆಯನ್ನೂ ಮಾಡುವ ಅನೇಕ ಘಟನೆಗಳು ವರದಿ ಆಗುತ್ತಿವೆ. ಆದರೆ, ಇಲ್ಲೊಬ್ಬ ಪರಮ ಪಾಪಿ ಮೊಮ್ಮಗ ತನ್ನ ಕುಡಿತದ ಚಟಕ್ಕೆ ಮನೆಯಲ್ಲಿ ತಾತನು ಹಣವನ್ನು ಕೊಡಲಿಲ್ಲವೆಂದು, ತಾತನ ಕತ್ತು ಹಿಸಿಕಿ ಕೊಲೆ ಮಾಡುವ ಮೂಲಕ ಅಮಾನವೀಯ ಕ್ರೌರ್ಯ ಮೆರೆದಿದ್ದಾನೆ.
ಹೆದ್ದಾರಿಯಲ್ಲಿ ಬೈಕ್‌ಗೆ ಗುದ್ದಿದ ಅಪರಿಚಿತ ವಾಹನ: ದಿಕ್ಕಾಪಾಲಾಗಿ ಬಿದ್ದ ಯುವಕರ ಮೃತದೇಹಗಳು
ಚಿಕ್ಕವನಿಂದಲೂ ಸಾಕಿಕೊಂಡಿದ್ದ ತಾತ: ಮನೆಯಲ್ಲಿ ಆಶ್ರಯ ಕೊಟ್ಟು ಮೂರೊತ್ತಿನ ಊಟ ಕೊಟ್ಟವನ ಕತ್ತು ಹಿಸುಕಿದ ಯುವಕನ ಕ್ರೌರ್ಯ ಘಟನೆ ನೆರೆಹೊರೆಯವರನ್ನು ಬೆಚ್ಚಿ ಬೀಳಿಸುವಂತಿದೆ. ಇನ್ನು ಕೊಲೆಯಾದ ಮೃತ ದುರ್ದೈವಿಯನ್ನು ಜೋಸೆಫ್ (54) ಎಂದು ಗುರುತಿಸಲಾಗಿದೆ. ಆ್ಯಂಟೋನಿ ಎಂಬಾತನಿಂದ ಕೃತ್ಯ ನಡೆದಿದೆ. ಜೋಸೆಫ್ ಸಂಬಂಧದಲ್ಲಿ ಆ್ಯಂಟೊನಿಗೆ ತಾತ ಆಗಬೇಕು. ಆ್ಯಂಟೊನಿಯನ್ನು ಚಿಕ್ಕವನಿದ್ದಾಗಿಂದಲೂ ಜೋಸೆಫ್ ಸಾಕುತಿದ್ದನು. ಆದರೆ, ಕುಡಿತದ ದಾಸನಾಗಿದ್ದ ಆ್ಯಂಟೊನಿ ಕುಡಿಯಲು ದುಡ್ಡು ಕೇಳಿ ಜೋಸೆಫ್ ಜೊತೆ ಜಗಳವಾಡುತಿದ್ದನು. ನಿನ್ನೆ ರಾತ್ರಿ ಕೂಡ ಇದೇ ವಿಚಾರವಾಗಿ ಜಗಳ ನಡೆದಿತ್ತು. ಗಲಾಟೆ ವೇಳೆ ಕತ್ತು ಹಿಸುಕಿ, ದೊಣ್ಣೆಯಿಂದ ತಲೆಗೆ ಹೊಡೆದು ಕೊಲೆ ಮಾಡಿದ್ದಾನೆ ಎಂದು ತಿಳಿದುಬಂದಿದೆ.
ಆಸ್ಪತ್ರೆಯಿಂದ ಕೊಲೆಯ ಮಾಹಿತಿ: ದೊಣ್ಣೆಯಿಂದ ಹಲ್ಲೆ ಮಾಡಿದ ನಂತರ ರಕ್ತಸ್ರಾವದ ಮಡುವಿನಲ್ಲಿ ಬಿದ್ದಿದ್ದ ತಾತನನ್ನು ನೆರೆ ಹೊರೆಯವರು ಗಮನಿಸಿ ಕೂಡಲೇ ಆಸ್ಪತ್ರೆಗೆ ರವಾನಿಸಿದ್ದಾರೆ. ಆದರೆ, ಆಸ್ಪತ್ರೆಗೆ ಹೋಗುವ ಮಾರ್ಗದ ಮಧ್ಯದಲ್ಲಿಯೇ ತಾತ ಜೋಸೆಫ್ ಮೃತ ಪಟ್ಟಿದ್ದಾನೆ. ತನ್ನ ವೃದ್ಯಾಪ್ಯ ಕಾಲದಲ್ಲಿ ನನ್ನನ್ನು ದುಡಿದು ಸಾಕುತ್ತಾ ಚೆನ್ನಾಗಿ ನೋಡಿಕೊಳ್ಳಬಹುದು ಎಂದು ನಿರೀಕ್ಷೆಯಿಂದ ಚಿಕ್ಕವನಿಂದಲೇ ಸಾಕಿಕೊಂಡಿದ್ದ ಮೊಮ್ಮಗ ಕ್ರೂರಿಯಾಗಿದ್ದಾನೆ. ಆಶ್ರಯ ಕೊಟ್ಟು, ಊಟ ನೀಡಿ ಎದೆಯೆತ್ತರಕ್ಕೆ ಬೆಳೆಸಿದ ತಾತನನ್ನು ಅಮಾನವೀಯವಾಗಿ ಕೊಲೆ ಮಾಡಿದ್ದಾನೆ.
Bengaluru Crime: ಡಿವೋರ್ಸ್ ಹೆಂಡತಿಯನ್ನ ಕೊಲೆಗೈದು ಮಗುವಿನೊಂದಿಗೆ ಪರಾರಿಯಾದ ಗಂಡ
ಎಸ್ಕೇಪ್ ಆಗುತ್ತಿದ್ದ ಕೊಲೆ ಆರೋಪಿ ಬಂಧನ: ದೊಣ್ಣೆಯಿಮದ ಹಲ್ಲೆ ಮಾಡಿದ ಗುರುತುಗಳಿದ್ದ ತಾತನ ಮೃತದೇಹವನ್ನು ಕಂಡ ಆಸ್ಪತ್ರೆ ಸಿಬ್ಬಂದಿ ಕೂಡಲೇ ಪೊಲೀಸರಿಗೆ ಮಾಹಿತಿ ನೀಡಿದ್ದಾರೆ. ಈ ಮಾಹಿತಿ ಆಧರಿಸಿ ಪೊಲೀಸರು ತನಿಖೆ ಕೈಗೊಂಡಿದ್ದಾರೆ. ಆಗ ಇದು ಮೊಮ್ಮಗನಿಂದಲೇ ಆಘಿರುವ ಕೃತ್ಯ ಎಂಬುದು ಸ್ಥಳೀಯರಿಂದ ಲಭ್ಯವಾಗಿದೆ. ಈ ವೇಳೆ ಕೊಲೆಯ ಆರೋಪಿ ಆಂಟೋನಿಯನ್ನು ಪೊಲೀಸರು ಬಂಧಿಸಲು ಮುಂದಾಗಿದ್ದಾರೆ. ಈ ವಿಷಯ ತಿಳಿದ ಆರೋಪಿ ಆಂಟೋನಿ ಆರ್.ಟಿ.ನಗರದಿಂದ ಎಸ್ಕೇಪ್ ಆಗುತಿದ್ದನು. ಇದನ್ನು ಗಮನಿಸಿದ ಪೊಲೀಸರು ಆರೋಪಿಯನ್ನು ಬಂಧಿಸಿದ್ದಾರೆ. ಕೊಲೆ ಘಟನೆಗೆ ಸಂಬಂಧಿಸಿದಂತೆ ಬಾಣಸವಾಡಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
