ಉಡುಪಿ(ಅ.28): ಉಡುಪಿ ಜಿಲ್ಲೆಯಲ್ಲಿ ಮಾಧಕ ವಸ್ತುಗಳ ಸಾಗಾಟ - ಮಾರಾಟ ಪ್ರಕರಣಗಳ  ಆರೋಪಿಗಳನ್ನು ಬುಧವಾರ ಜಿಲ್ಲಾ ಪೊಲೀಸ್ ಕವಾಯತು ಚಂದು ಮೈದಾನದಲ್ಲಿ ಪರೇಡ್ ನಡೆಸಲಾಯಿತು.

ಇತ್ತೀಚೆಗೆ ಮಣಿಪಾಲದಲ್ಲಿ ರು.ಗಳ ಡ್ರಗ್ಸ್ ಮಾರಾಟಕ್ಕೆ ಯತ್ನಿಸುತಿದ್ದ ಇಬ್ಬರವ್ವು ಬಂಧಿಸಿ ಲಕ್ಷಾಂತರ ರುಗಳ ಮಾದಕ ವಸ್ತುಗಳನ್ನು ವಶಪಡಿಸಿಕೊಳ್ಳಲಾಗಿತ್ತು. ಜಿಲ್ಲೆಯಲ್ಲಿ ಡ್ರಗ್ಸ್ ಮಾಫಿಯಾವನ್ನು ಬಗ್ಗುಬಡುಿಯುವ ಹಿನ್ನೆಲೆಯಲ್ಲಿ ಈ ಪರೇಡ್ ನಡೆಸಲಾಗಿದೆ.

ಡ್ರಗ್ಸ್ ಘಾಟು: ದೀಪಿಕಾ ಮ್ಯಾನೇಜರ್ ಮನೆಯಲ್ಲಿ ಸಿಕ್ತು ಗಾಂಜಾ ಎಣ್ಣೆ

ಪರೇಡ್ ನಲ್ಲಿ ಬೈಂದೂರು ಠಾಣಾ ವ್ಯಾಪ್ತಿಯ 2, ಕುಂದಾಪುರ ಠಾಣಾ ವ್ಯಾಪ್ತಿಯ  18, ಕುಂದಾಪುರ ಗ್ರಾಮಾಂತರ ಠಾಣಾ ವ್ಯಾಪ್ತಿಯ 4, ಕೋಟಾ ಠಾಣಾ ವ್ಯಾಪ್ತಿಯ 2, ಉಡುಪಿ ನಗರ ಠಾಣಾ ವ್ಯಾಪ್ತಿಯ 12, ಮಲ್ಪೆ ಠಾಣಾ ವ್ಯಾಪ್ತಿಯ 5, ಮಣಿಪಾಲ ಠಾಣಾ ವ್ಯಾಪ್ತಿಯ 16, ಸೆನ್ ಠಾಣೆಯ ಇಬ್ಬರು, ಕಾರ್ಕಳ ನಗರ ಠಾಣಾ ವ್ಯಾಪ್ತಿಯ 2, ಪಡುಬಿದ್ರಿ ಠಾಣಾ ವ್ಯಾಪ್ತಿಯ ೫, ಕಾಪು ಠಾಣಾ ವ್ಯಾಪ್ತಿಯ 3, ಹಿರಿಯಡ್ಕ ಠಾಣಾ ವ್ಯಾಪ್ತಿಯ 1 ಸೇರಿ ಒಟ್ಟು 57 ಮಂದಿ  ಆರೋಪಿತರು ಹಾಜರಿದ್ದರು.

ಆರೋಪಿಗಳನ್ನುದ್ದೇಶಿಸಿ ಮಾತನಾಡಿದ ಎಸ್ಪಿ ವಿಷ್ಣುವರ್ಧನ್ ಅವರು, ಸಮಾಜದ ಸ್ವಾಸ್ತ್ಯ ಕಾಪಾಡುವ ನಿಟ್ಟಿನಲ್ಲಿ ಇನ್ನು ಮುಂದೆ ಇಂತಹ  ಮಾಜದ್ರೋಹಿ ಚಟುವಟಿಕೆಗಳಲ್ಲಿ ಭಾಗವಹಿಸದೇ ಉತ್ತಮ ರೀತಿಯಲ್ಲಿ ಜೀವನ ನಡೆಸಲು ಕರೆ ನೀಡಿದರು. ಅಲ್ಲದೇ ಇದೇ ವೇಳೆ ಇನ್ನು ಮುಂದಕ್ಕೆ ಇಂತಹ ಪ್ರವೃತ್ತಿ ಮುಂದುವರೆಸಿದ್ದು ಕಂಡು  ದಲ್ಲಿ ಕಠಿಣ ಕಾನೂನು ಕ್ರಮದ ಎಚ್ಚರಿಕೆಯನ್ನೂ ಸಹ ನೀಡಿದರು 

ಮದುವೆ, ಮತಾಂತರಕ್ಕೆ ಒತ್ತಾಯ: ಹಿಂದು ಯುವತಿಯನ್ನು ಗುಂಡಿಕ್ಕಿ ಕೊಂದ ಮುಸ್ಲಿಂ ಯುವಕ

ಮಾದಕ ದ್ರವ್ಯ ಸಾಗಾಟ / ಮಾರಾಟಗಾರರ ಮಾಹಿತಿಯನ್ನು ನೀಡಿದಲ್ಲಿ ಮಾಹಿತಿ ನೀಡಿದವರ ವಿವರವನ್ನು ಗುಪ್ತವಾಗಿ ಇಡಲಾಗುವುದೆಂದು ತಿಳಿಸಿದರು.    ಎಎಸ್ಪಿ ಕುಮಾರಚಂದ್ರ, ಸಹಾಯಕಎಸ್ಪಿ ಟಿ.ಆರ್.ಜೈಶಂಕರ್, ಸಶಸ್ತ್ರ ಮೀಸಲು ಪಡೆಯ ಡಿವೈಎಸ್ಪಿ ರಾಘವೇಂದ್ರ, ಉಡುಪಿ ವೃತ್ತ ನಿರೀಕ್ಷಕರಾದ ಮಂಜುನಾಥ ಹಾಗೂ ಜಿಲ್ಲೆಯ ಇತರ ಠಾಣೆಗ  ಪೊಲೀಸ್ ಉಪನಿರೀಕ್ಷಕರು ಭಾಗವಹಿಸಿದ್ದರು.