Asianet Suvarna News Asianet Suvarna News

Crime| Uber Cab ಡ್ರೈವರ್‌ ಆತ್ಮಹತ್ಯೆ: ಆದಾಯ ಕುಸಿತ ಕಾರಣ?

*  ನಷ್ಟದಿಂದ ಸಾವಿಗೆ ಶರಣು ಶಂಕೆ
*  ಪತ್ನಿಯನ್ನು ಅಂಗಡಿಗೆ ಕಳುಹಿಸಿ ಕಿಟಕಿಗೆ ವೇಲ್‌ ಕಟ್ಟಿ ಆತ್ಮಹತ್ಯೆ
*  ಹಟ್ಟಿ ಕಂಪನಿ ನೌಕರ ಆತ್ಮಹತ್ಯೆ
 

Uber Cab Driver Committed Suicide Due to Decline in Income in Bengaluru grg
Author
Bengaluru, First Published Nov 16, 2021, 8:06 AM IST

ಬೆಂಗಳೂರು(ನ.16): ಉಬರ್‌ ಕ್ಯಾಬ್‌(Uber Cab) ಚಾಲಕನೊಬ್ಬ ಮನೆಯಲ್ಲೇ ನೇಣು ಬಿಗಿದುಕೊಂಡು ಆತ್ಮಹತ್ಯೆ ಮಾಡಿಕೊಂಡಿರುವ ಘಟನೆ ಸೋಮವಾರ ಚಂದ್ರಾ ಲೇಔಟ್‌ ಪೊಲೀಸ್‌ ಠಾಣೆ ವ್ಯಾಪ್ತಿಯಲ್ಲಿ ನಡೆದಿದೆ.

ಚಂದ್ರಲೇಔಟ್‌ 1ನೇ ಹಂತದ ನಿವಾಸಿ ಮಂಜುನಾಥ (36) ಆತ್ಮಹತ್ಯೆಗೆ ಶರಣಾದವರು. ಬೆಳಗ್ಗೆ 9ರ ಸುಮಾರಿಗೆ ಪತ್ನಿಯನ್ನು ಅಂಗಡಿಗೆ ಕಳುಹಿಸಿ, ಬಳಿಕ ಮನೆಯ ಕಿಟಕಿಗೆ ವೇಲ್‌ ಕಟ್ಟಿ ಆತ್ಮಹತ್ಯೆ ಮಾಡಿಕೊಂಡಿದ್ದಾರೆ. ಪತ್ನಿ ಅಂಗಡಿಯಿಂದ ಮನೆಗೆ ವಾಪಾಸಾದಾಗ ಘಟನೆ ಬೆಳಕಿಗೆ ಬಂದಿದೆ. ಆತ್ಮಹತ್ಯೆಗೆ ನಿಖರ ಕಾರಣ ತಿಳಿದು ಬಂದಿಲ್ಲ. ತನಿಖೆ(Investigation) ಬಳಿಕ ಹೆಚ್ಚಿನ ಮಾಹಿತಿ ಲಭ್ಯವಾಗಲಿದೆ ಎಂದು ಪೊಲೀಸರು(Police) ತಿಳಿಸಿದ್ದಾರೆ.

ತುರುವೆಕೆರೆ ಮೂಲದ ಮಂಜುನಾಥ್‌ ಕ್ಯಾಬ್‌ ಚಾಲಕರಾಗಿದ್ದು(Cab Driver), ಪತ್ನಿ ಮತ್ತು ಮಗುವಿನೊಂದಿಗೆ ನಗರದಲ್ಲಿ ನೆಲೆಸಿದ್ದರು. ಚೀಟಿ ವ್ಯವಹಾರದಲ್ಲಿ ತೊಡಗಿದ್ದ ಮಂಜುನಾಥ್‌, ಕೋವಿಡ್‌ಗೂ(Covid19) ಮುನ್ನ ಚೀಟಿಗಳಿಂದ ಹಣ ತೆಗೆದು ಸ್ನೇಹಿತರಿಗೆ ನೀಡಿದ್ದರು. ಬಳಿಕ ಕೋವಿಡ್‌-ಲಾಕ್‌ಡೌನ್‌ನಿಂದಾಗಿ(Lockdown) ಸ್ನೇಹಿತರು ಸಕಾಲಕ್ಕೆ ಚೀಟಿ ಹಣ ನೀಡಿರಲಿಲ್ಲ. ಮತ್ತೊಂದೆಡೆ ಕೋವಿಡ್‌ನಿಂದ ಕ್ಯಾಬ್‌ ಆದಾಯವೂ(Income) ಕಡಿಮೆಯಾಗಿತ್ತು. ಈ ನಡುವೆ ಚೀಟಿ ನಡೆಸುವವರು ಹಣ ಕಟ್ಟುವಂತೆ ಮಂಜುನಾಥ್‌ಗೆ ಒತ್ತಡ ಹಾಕುತ್ತಿದ್ದರು ಎಂದು ತಿಳಿದು ಬಂದಿದೆ. ಹೀಗಾಗಿ ಹಣ ಹಿಂದಿರುಗಿಸಲು ಅನ್ಯ ಮಾರ್ಗವಿಲ್ಲದೆ ಮಂಜುನಾಥ್‌ ಆತ್ಮಹತ್ಯೆಗೆ ಶರಣಾಗಿರುವ ಸಾಧ್ಯತೆಯಿದೆ ಎಂದು ಪೊಲೀಸರು ಶಂಕಿಸಿದ್ದಾರೆ. ಈ ಸಂಬಂಧ ಚಂದ್ರಾ ಲೇಔಟ್‌ ಪೊಲೀಸ್‌ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ಆತ್ಮಹತ್ಯೆಗೆ ಯತ್ನಿಸಿದ ಒಂದೇ ಕುಟುಂಬದ ಐವರಲ್ಲಿ ನಾಲ್ವರು ಸಾವು

ಮಹಿಳೆ ಆತ್ಮಹತ್ಯೆ

Mangaluru(ಅಜೆಕಾರು): ಇಲ್ಲಿನ ಮರ್ಣೆ ಗ್ರಾಮದ ಎಣ್ಣೆಹೊಳೆ ಎಂಬಲ್ಲಿ ಮಹಿಳೆಯೋರ್ವರು ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಸುಭಾಷಿಣಿ (40) ಮೃತರು. ಅವರು ಪೂನಾದಲ್ಲಿ(Pune) ಗಂಡನೊಂದಿಗೆ ವಾಸವಿದ್ದು, 10 ವರ್ಷಗಳಿಂದ ಮಾನಸಿಕ ಕಾಯಿಲೆಯಿಂದ(Mental Illness) ಬಳಲುತ್ತಿದ್ದರು. ಚಿಕಿತ್ಸೆ(Treatment) ಕೊಡಿಸುತ್ತಿದ್ದರೂ ಗುಣವಾಗದೇ ಅವರ ಗಂಡ ಅವರನ್ನು ಎಣ್ಣೆಹೊಳೆಯಲ್ಲಿರುವ ಅಕ್ಕನ ಮನೆಗೆ ತಂದು ಬಿಟ್ಟಿದ್ದರು. ಅವರು ಶನಿವಾರ ಅಪರಾಹ್ನ ಮಾಳಿಗೆಯ ಮರದ ಪಕ್ಕಾಸಿಗೆ ನೇಣು ಬಿಗಿದು ಮೃತಪಟ್ಟಿದ್ದಾರೆ. ಅಜೆಕಾರು ಠಾಣೆಯಲ್ಲಿ ಪ್ರಕರಣ(Case) ದಾಖಲಾಗಿದೆ.

ಹಗ್ಗದಿಂದ ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

Udpi(ಕಾರ್ಕಳ): ಇಲ್ಲಿನ ನಲ್ಲೂರು ಗ್ರಾಮದ ಗಣಪತಿಕಟ್ಟೆ ಎಂಬಲ್ಲಿನ ಜಗದೀಶ್‌ ರಾವ್‌ (48) ನೇಣು ಬಿಗಿದು ಆತ್ಮಹತ್ಯೆ ಮಾಡಿಕೊಂಡ ಘಟನೆ ನಡೆದಿದೆ. ಅವರು, ಒಂದು ವರ್ಷದಿಂದ ಸಕ್ಕರೆ ಕಾಯಿಲೆಯಿಂದ(Diabetes) ಬಳಲುತ್ತಿದ್ದರು, ಚಿಕಿತ್ಸೆ ಮಾಡಿದರೂ ಗುಣವಾಗದೆ ಜಿಗುಪ್ಸೆಗೊಂಡು ಬುಧವಾರ ಮನೆ ಸಮೀಪದ ಮಾವಿನಮರಕ್ಕೆ ನೈಲಾನ್‌ ಹಗ್ಗದಿಂದ ನೇಣು ಬಿಗಿದು ಮೃತಪಟ್ಟಿದ್ದಾರೆ. ಗ್ರಾಮಾಂತರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

ನೇಣು ಬಿಗಿದು ವ್ಯಕ್ತಿ ಆತ್ಮಹತ್ಯೆ

ಉಡಪಿ(ಬ್ರಹ್ಮಾವರ): ಇಲ್ಲಿನ ಹೆಗ್ಗುಂಜೆ ಗ್ರಾಮದ ಮೂಡುಮಕ್ಕಿ ಎಂಬಲ್ಲಿ ಉಮೇಶ್‌ ಪೂಜಾರಿ (52) ಅನಾರೋಗ್ಯದಿಂದ ನೇಣು ಬಿಗಿದುಕೊಂಡು ಮೃತಪಟ್ಟಿದ್ದಾರೆ. ಅವರು ಮಂದಾರ್ತಿ ಹೈಸ್ಕೂಲ್‌ ಬಳಿ ಪಂಚಾಯಿತಿ ಕಟ್ಟಡದಲ್ಲಿ ಸ್ವರ್ಣ ಆಟ್ಸ್‌ರ್‍ ಎಂಬ ಯಕ್ಷಗಾನ ವೇಷ ಭೂಷಣ ತಯಾರಿಸುತಿದ್ದರು. ಅವರಿಗೆ ಲಿವರ್‌ ಸಮಸ್ಯೆ, ಎಡಕೈಗೆ ಸೆಳೆತದ ಸಮಸ್ಯೆ, ಬಿ.ಪಿ, ಶುಗರ್‌, ನಿದ್ರಾಹೀನತೆ ಸಮಸ್ಯೆ ಇತ್ತು. ಇದೇ ಕಾರಣದಿಂದ ಮನನೊಂದು ಸೋಮವಾರ ಬೆಳಗ್ಗೆ ತಮ್ಮ ಅಂಗಡಿಯ ಮಾಡಿಗೆ ನೇಣು ಬಿಗಿದು ಮೃತಪಟ್ಟಿದ್ದಾರೆ. ಬ್ರಹ್ಮಾವರ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Crime News; ಪೊಲೀಸ್ ವಿಚಾರಣೆ, ಮರ್ಯಾದೆಗೆ ಅಂಜಿ ಕೋಲಾರದ ಕುಟುಂಬ ಸುಸೈಡ್ ಯತ್ನ

ಹಟ್ಟಿ ಕಂಪನಿ ನೌಕರ ಆತ್ಮಹತ್ಯೆ

ರಾಯಚೂರು(Raichur) ಜಿಲ್ಲೆಯ ಲಿಂಗಸುಗೂರು ತಾಲೂಕಿನ ತಾಲೂಕಿನ ಹಟ್ಟಿ ಚಿನ್ನದ ಗಣಿ ಕಂಪನಿ(Hatti Gold Mine Company) ನೌಕರರ ಬಾಬು ರಾಠೋಡ್‌ (46) ಜೀವನದಲ್ಲಿ ಜಿಗುಪ್ಸೆಗೊಂಡು ನೇಣು ಹಾಕಿಕೊಂಡು ಆತ್ಮಹತ್ಯೆಗೆ ಶರಣಾಗಿದ್ದಾನೆ.

ಸಂತ ಸೇವಾಲಾಲ್‌ ಬಂಬಾರ ನೌಕರರ ಸಂಘದ ಅಧ್ಯಕ್ಷರಾಗಿದ್ದ ಬಾಬು ರಾಠೋಡ್‌ ಸಂಘದ ಕಚೇರಿಯಲ್ಲಿಯೇ ಆತ್ಮಹತ್ಯೆ ಮಾಡಿಕೊಂಡಿದ್ದಾನೆ. ಈ ಕುರಿತು ಹಟ್ಟಿ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
 

Follow Us:
Download App:
  • android
  • ios